ಫಲಿತಾಂಶದ ಬಳಿಕ ಹಿಂಸಾಚಾರ ಸಾಧ್ಯತೆ: ಟ್ರಂಪ್ ಎಚ್ಚರಿಕೆ
Team Udayavani, Nov 4, 2020, 7:00 AM IST
ವಾಷಿಂಗ್ಟನ್/ಹೊಸದಿಲ್ಲಿ: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಬಳಿಕ ಭಾರೀ ಹಿಂಸಾಚಾರ ಉಂಟಾಗಬಹುದು. ಹೀಗೆಂದು ಖುದ್ದು ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಮತದಾನ ಪ್ರಗತಿಯಲ್ಲಿರುವಂತೆಯೇ ಈ ಎಚ್ಚರಿಕೆಯ ಮಾತುಗಳು ಬಂದಿರುವುದರಿಂದ ಶ್ವೇತ ಭವನ, ಪೆಂಟಗಾನ್ ಮತ್ತು ಇತರ ಉದ್ಯಮ ಸಂಸ್ಥೆಯ ಕಚೇರಿಗಳಿಗೆ ಗರಿಷ್ಠ ಭದ್ರತೆ ಕಲ್ಪಿಸಲಾಗಿದೆ.
ಕಾನೂನು ಮತ್ತು ನ್ಯಾಯಖಾತೆಯ ಸೂಚನೆಯಂತೆ 18 ಪ್ರಾಂತ್ಯಗಳಿಗೆ ಹೆಚ್ಚುವರಿಯಾಗಿ ಭದ್ರತಾ ಪಡೆಗಳನ್ನು ಕಳುಹಿಸಿಕೊಟ್ಟಿರುವುದು ಗಮನಾರ್ಹ. ವಾಷಿಂಗ್ಟನ್, ನ್ಯೂಯಾರ್ಕ್ ಸೇರಿದಂತೆ ಪ್ರಮುಖ ನಗರಗಳಲ್ಲಿರುವ ಸರಕಾರಿ ಸಂಸ್ಥೆಗಳ ಮುಂಭಾಗದಲ್ಲಿ ಆಳೆತ್ತರದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.
ನ್ಯೂಯಾರ್ಕ್, ಬಾಸ್ಟನ್, ಶಿಕಾಗೋ, ಸ್ಯಾನ್‌ಫ್ರಾನ್ಸಿಸ್ಕೋಗಳಲ್ಲಿ ಉದ್ದಿಮೆಗಳು ಮತ್ತು ವಾಣಿಜ್ಯ ಮಳಿಗೆಗಳ ಮಾಲಕರು ಮತ್ತು ಸಿಬಂದಿ ಪ್ರತಿಭಟನಕಾರರು ನುಗ್ಗಿ ದಾಂಧಲೆ ನಡೆಸದಂತೆ ಇರಲು ಪ್ಲೆ„ವುಡ್‌ನ ತಡೆಗಳನ್ನು ನಿರ್ಮಿಸಿಕೊಂಡಿದ್ದಾರೆ.
ನ್ಯೂಯಾರ್ಕ್ ಸಿಟಿಯ ಮೇಯರ್ ಬಿಲ್ ಡೆ ಬ್ಲಾಸಿಯೋ ಮಾತನಾಡಿ, ಪೊಲೀಸ್ ಆಯುಕ್ತರ ಜತೆಗೆ ಮಾತನಾಡಿದಾಗ ಫಲಿತಾಂಶದ ಅನಂತರ ಹಿಂಸಾತ್ಮಕ ಘಟನೆಗಳ ಬಗ್ಗೆ ಮಾಹಿತಿ ಇಲ್ಲ. ಆದರೂ ಪರಿಸ್ಥಿತಿ ಕೈಮೀರದಂತೆ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದರು.
ತೆರೆದ ಮತಗಟ್ಟೆಗಳು
ಮತದಾನದ ಹಿನ್ನೆಲೆಯಲ್ಲಿ ಅಮೆರಿಕದಾದ್ಯಂತ ಮತಗಟ್ಟೆಗಳು ತೆರೆದುಕೊಂಡಿವೆ. ಸಾವಿರಾರು ಮಂದಿ ಹಕ್ಕು ಚಲಾವಣೆ ನಡೆಸುತ್ತಿದ್ದಾರೆ. ಇದೇ ವೇಳೆ ಮಾತನಾಡಿದ ಟ್ರಂಪ್ “ವಿಜಯ ಪ್ರಾಪ್ತವಾದ ತತ್‌ಕ್ಷಣ ನಾನು ಜಯ ಗಳಿಸಿದ್ದೇನೆ ಎಂದು ಘೋಷಿಸುವೆ’ ಎಂದರು.
ಟ್ರಂಪ್ ಗೆಲುವಿಗೆ ದಿಲ್ಲಿಯಲ್ಲಿ ಹೋಮ
ಅಮೆರಿಕ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲುವಿಗಾಗಿ ಹಲವು ಸಂಘಟನೆಗಳು ಹೊಸದಿಲ್ಲಿಯಲ್ಲಿ ಪೂಜೆ-ಹವನಗಳನ್ನು ನಡೆಸಿವೆ. ಹಿಂದೂ ಸೇನಾ ವತಿಯಿಂದ ಪೂರ್ವ ದಿಲ್ಲಿಯ ದೇಗುಲದಲ್ಲಿ ವಿಶೇಷ ಪೂಜೆ ಮತ್ತು ಹೋಮ ನಡೆದಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಸದ್ಯದ ಬೆಳವಣಿಗೆ ಹಿನ್ನೆಲೆಯಲ್ಲಿ ಟ್ರಂಪ್ ಜಯ ಅಗತ್ಯವಾಗಿದೆ ಎಂದು ಹಿಂದೂ ಸೇನಾ ನಾಯಕ ವೇದ ಶಾಸ್ತ್ರೀ ತಿಳಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಸಂಘಟನೆ ಟ್ರಂಪ್ ಹುಟ್ಟಿದ ಹಬ್ಬವನ್ನು ಕೇಕ್ ಕತ್ತರಿಸಿ ಆಚರಿಸಿತ್ತು.
ಹ್ಯಾರಿಸ್ ಗೆಲುವಿಗೆ ತ.ನಾಡಲ್ಲಿ ಪ್ರಾರ್ಥನೆ
ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಗೆಲುವಿಗಾಗಿ ತಮಿಳುನಾಡಿನ ತಿರುವರೂರ್ ಜಿಲ್ಲೆಯ ತುಳಸೆಂತಿರಾಪುರದಲ್ಲಿ ಸ್ಥಳೀಯರು ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಸ್ಥಳ ಕಮಲಾ ಹ್ಯಾರಿಸ್ ತಾಯಿಯ ಹುಟ್ಟೂರು. ಜತೆಗೆ ಜಿಲ್ಲೆಯ ಹಲವು ಭಾಗಗಳಲ್ಲಿ ಕಮಲಾಗೆ ಶುಭ ಕೋರುವ ಪೋಸ್ಟರ್‌ಗಳನ್ನು ಹಾಕಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.