ಚೇತರಿಕೆಯತ್ತ ಉದ್ದಿಮೆಗಳು! ವೇತನ ಪುನಃಸ್ಥಾಪನೆ, ಬೋನಸ್ ಜತೆಗೆ ಭಡ್ತಿ
Team Udayavani, Nov 4, 2020, 7:10 AM IST
ಮುಂಬಯಿ: ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಸಂತೋಷದ ಸುದ್ದಿ. ಸೋಂಕಿನಿಂದಾಗಿ ವೇತನ ಕಡಿತ ಮಾಡಿದ್ದ ಸಂಸ್ಥೆಗಳು ಈಗ ಪೂರ್ಣ ಪ್ರಮಾಣದ ವೇತನ ನೀಡಲು ಆರಂಭಿಸಿವೆ. ಜತೆಗೆ ಉದ್ಯೋಗಿಯ ವಾರ್ಷಿಕ ಸಾಧನೆಯ ಮೌಲ್ಯಮಾಪನ ನಡೆಸಿ ಪದೋನ್ನತಿ, ವೇತನ ಹೆಚ್ಚಳ ಪ್ರಕ್ರಿಯೆಯೂ ಆರಂಭ ವಾಗಿದೆ. ಇಷ್ಟು ಮಾತ್ರವಲ್ಲ ದೀಪಾವಳಿಗಾಗಿ ಬೋನಸ್ ನೀಡಲೂ ಕೆಲವು ಕಂಪೆನಿಗಳು ಮುಂದಾಗಿವೆ.
ವಿವಿಧ ಕಂಪೆನಿಗಳು ಸೋಂಕು ವ್ಯಾಪಿಸುವುದಕ್ಕೆ ಮೊದಲು ಇದ್ದ ವೇತನ ಪುನಃಸ್ಥಾಪಿಸಿವೆ. ಟಾಟಾ ಗ್ರೂಪ್ನ ವೋಲ್ಟಾಸ್, ವಿಜಯ ಸೇಲ್ಸ್ ದೀಪಾವಳಿಗೆ ಬೋನಸ್ ನೀಡಲೂ ನಿರ್ಧರಿಸಿವೆ. ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಉದ್ಯೋಗಿಗಳಿಗೆ ವೇರಿಯೇಬಲ್ ಪೇ (ಸಾಧನೆ ಆಧಾರಿತ ನಗದು ಪುರಸ್ಕಾರ) ನೀಡಿದೆ. ಅದರಲ್ಲಿ ಶೇ. 30ರಷ್ಟನ್ನು ಮುಂಚಿತವಾಗಿಯೇ ನೀಡುವು ದಾಗಿ ಪ್ರಕಟಿಸಿದೆ.
ಅ. 1ರಿಂದ ಅನ್ವಯವಾಗುವಂತೆ ಕೊಟಕ್ ಮಹೀಂದ್ರಾ ಬ್ಯಾಂಕ್ ಉದ್ಯೋಗಿಗಳ ವೇತನ ಕಡಿತವನ್ನು ವಾಪಸ್ ಪಡೆದುಕೊಂಡಿವೆ. ಬ್ಯಾಂಕ್ನಲ್ಲಿ ವಾರ್ಷಿಕವಾಗಿ 25 ಲಕ್ಷ ರೂ. ವೇತನ ಪಡೆಯುತ್ತಿರುವ ಹಿರಿಯ ದರ್ಜೆ ಅಧಿಕಾರಿಗಳಿಗೆ ಮಾತ್ರ ವೇತನ ಕಡಿತದ ಅನುಭವವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ಯಾಂಕ್ನ ಅಧ್ಯಕ್ಷ ಮತ್ತು ಮುಖ್ಯ ಮಾನವ ಸಂಪದ ಅಧಿಕಾರಿ ಸುಖ್ಜಿತ್ ಪಸ್ರಿಚಾ “ದೇಶದಲ್ಲಿ ನಿಧಾನಕ್ಕೆ ಅನ್ಲಾಕ್ ಪ್ರಕ್ರಿಯೆಗಳು ಆರಂಭವಾಗುತ್ತಿವೆ. ಅದೇ ರೀತಿ ಕೊಟಕ್ ಮಹೀಂದ್ರಾ ಬ್ಯಾಂಕ್ ಕೂಡ ಉದ್ಯೋಗಿಗಳಿಗೆ ವೇತನ ಪುನಃಸ್ಥಾಪಿಸುವ ಪ್ರಕ್ರಿಯೆ ನಡೆಸಿದೆ. ವಾರ್ಷಿಕ 25 ಲಕ್ಷ ರೂ.ಗಿಂತ ಕಡಿಮೆ ಇರುವ ಉದ್ಯೋಗಿಗಳಿಗೆ ವೇತನ ಕಡಿತವಾಗಿಲ್ಲ’ ಎಂದರು.
ಕೆಲವು ಕಂಪೆನಿಗಳು ಮಾತ್ರ ಇಂಥ ನಿರ್ಧಾರ ಕೈಗೊಂಡಿವೆ ಎನ್ನುವುದು ಗಮನಾರ್ಹ. ಸೋಂಕಿನ ಹೊಡೆತಕ್ಕೆ ತತ್ತರಿಸಿರುವ ಹೊಟೇಲ್, ಪ್ರವಾಸೋದ್ಯಮ, ಮೂಲಸೌಕರ್ಯ ಕ್ಷೇತ್ರದ ಉದ್ದಿಮೆಗಳಲ್ಲಿ ಇನ್ನೂ ವೇತನ ಪುನಃಸ್ಥಾಪನೆ ಪ್ರಕ್ರಿಯೆ ನಡೆದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.