ಸಚಿವ ಸಿ.ಟಿ. ರವಿ ಧರ್ಮಸ್ಥಳ ಭೇಟಿ: ಕಾಳಜಿ ಫ್ಲಡ್ ರಿಲೀಫ್ ಫಂಡ್ ಹಸ್ತಾಂತರಿಸಲಿರುವ ಸಚಿವರು
Team Udayavani, Nov 4, 2020, 1:13 PM IST
ಬೆಳ್ತಂಗಡಿ: ಬಿಜೆಪಿ ಪ್ರಧಾನ ಕಾರ್ಯದರ್ಶಿ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ ಅವರು ನ.4 ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಧರ್ಮಸ್ಥಳ ಸನ್ನಿಧಿಗೆ ಭೇಟಿ ನೀಡಿದ ಅವರು ಬಳಿಕ ಮಂಜುನಾಥ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಭೇಟಿ ಮಾಡಿ ಆಶೀರ್ವಾದ ಪಡೆದು ಮಾತು ಕತೆ ನಡೆಸಿದರು.
ಇಂದು ಮಧ್ಯಾಹ್ನ 2 ಗಂಟೆಗೆ ಬೆಳ್ತಂಗಡಿ ಶ್ರೀ ಧ.ಮಂ. ಕಲಾಭವನದಲ್ಲಿ ಬೆಳ್ತಂಗಡಿ ಕಾಳಜಿ ಫ್ಲಡ್ ರಿಲೀಫ್ ಫಂಡ್ ನಿಂದ ಕಳೆದ ಬಾರಿ ನೆರೆ ಬಂದು ಮನೆ ಕಳೆದುಕೊಂಡ 299 ಸಂತ್ರಸ್ತರಿಗೆ ಸಹಾಯಧನದ ಚೆಕ್ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 299 ಮಂದಿಗೆ 2.73 ಕೋಟಿ ರೂ. ವಿತರಣೆಯ ಬೃಹತ್ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ: ನಾಲ್ಕೈದು ದಿನದಲ್ಲಿ ಶಾಲಾರಂಭದ ಬಗ್ಗೆ ನಿರ್ಧಾರ : ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ
ಬಳಿಕ ಸಂಜೆ 4 ಗಂಟೆಗೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ನಡೆಯಲಿರುವ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಗ್ರಾ.ಪಂ. ಚುನಾವಣೆಯ ಪ್ರಯುಕ್ತ ಪದಾಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯಲ್ಲೂ ಪಾಲ್ಗೊಳ್ಳುವರು. ಬಳಿಕ ಮಂಗಳೂರಿಗೆ ತೆರಳಲಿರುವರು. ನ.5 ರಂದು ಪಕ್ಷದ ಕಾರ್ಯಕಾರಿ ಸಭೆ ಹಾಗೂ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸುವರು.
ಸಚಿವ ಸಿ.ಟಿ.ರವಿ ಅವರನ್ನು ಕ್ಷೇತ್ರದ ವತಿಯಿಂದ ಡಾ.ಹೆಗ್ಗಡೆ ಬರಮಾಡಿಕೊಂಡರು. ಈ ವೇಳೆ ಹೇಮಾವತಿ ವೀ.ಹೆಗ್ಗಡೆ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.