ರಾಮಮಂದಿರ ಸಂಕೀರ್ಣ ವಿನ್ಯಾಸ ಸಲಹೆಗೆ ಆಹ್ವಾನ
Team Udayavani, Nov 4, 2020, 11:54 PM IST
ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆ ರಾಮಮಂದಿರ ಸುತ್ತಲಿನ 70 ಎಕರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ “ಮಂದಿರ ಸಂಕೀರ್ಣ’ಕ್ಕೆ ಸಾರ್ವಜನಿಕರಿಂದ ವಿನ್ಯಾಸ ಸಲಹೆ- ಪರಿಕಲ್ಪನೆಗಳನ್ನು ಆಹ್ವಾನಿಸಿದೆ. ಮಂದಿರವನ್ನು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲು ಈಗಾಗಲೇ ವಿನ್ಯಾಸ ಸಿದ್ಧಗೊಂಡಿದೆ. ಮಂದಿರ ಸುತ್ತಮುತ್ತಲಿನ ಪುಷ್ಕರಣಿ, ಯಜ್ಞ ಮಂಟಪ, ಅನುಷ್ಠಾನ ಮಂಟಪ, ಕಲ್ಯಾಣ ಮಂಟಪ ಸೇರಿದಂತೆ ರಾಮಜನ್ಮೋತ್ಸವ, ಹನುಮಾನ್ ಜಯಂತಿ, ರಾಮಚರ್ಚಾ, ಸೀತಾ ವಿವಾಹ ಆಚರಣೆಗೆ ಸೂಕ್ತ ವಿನ್ಯಾಸ ಗಳು ಬಾಕಿಯಿದ್ದು, ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ.
ಕಳಿಸೋದ್ಹೇಗೆ?: ಟ್ರಸ್ಟ್‌ನ ವೆಬ್‌ಸೈಟ್‌ನಲ್ಲಿ ಈ ಕುರಿತು ಮಾಹಿತಿಗಳಿವೆ. ವಿನ್ಯಾಸ ಪರಿಕಲ್ಪನೆಯು ಭಾರತೀಯ ವಾಸ್ತುವಿಜ್ಞಾನ ಆಧಾರಿತವಾಗಿರಬೇಕು. ಮಂದಿರ ಸನಿಹದಲ್ಲಿ 51 ವಿದ್ಯಾರ್ಥಿಗಳಿಗೆ ಗುರುಕುಲ, ಆಚಾರ್ಯರಿಗೆ ಗುರುಶಾಲಾ, ಮ್ಯೂಸಿಯಂ, ನಳನೀಲ ತಿಲ, ಸೀತಾ ಕಿ ರಸೋಯಿ, ಕುಬರ್ ಟಿಲಾ ಅಂಗದ್ ತಿಲಾಗಳ ನಿರ್ಮಾಣ ದೃಷ್ಟಿಯಲ್ಲಿಟ್ಟುಕೊಂಡು ವಿನ್ಯಾಸ ಸಿದ್ಧಪಡಿಸಬೇಕು. ಪ್ರತಿನಿತ್ಯ 1 ಲಕ್ಷ, ವಿಶೇಷ ದಿನಗಳಲ್ಲಿ 5 ಲಕ್ಷ ಭಕ್ತರ ದಟ್ಟಣೆ ಗಮನದಲ್ಲಿಟ್ಟುಕೊಂಡು ಸಲಹೆ ನೀಡಬಹುದು ಎಂದು ಟ್ರಸ್ಟ್ ಈ ಕುರಿತಾಗಿ ನೀಡಿರುವ ಜಾಹೀರಾತಿನಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ
Madarsa Act: ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ
Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
MUST WATCH
ಹೊಸ ಸೇರ್ಪಡೆ
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Olympics; 2036ರ ಒಲಿಂಪಿಕ್ಸ್‌ಗೆ ಬಿಡ್: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ
LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.