ನಾಯಕ ಇಲ್ಲೇ ನಿರ್ಣಾಯಕ; ಫ‌ಲಿತಾಂಶದ ದಿಕ್ಕು ಬದಲಿಸುವ ಆರು ಪ್ರಾಂತ್ಯಗಳು

ವೈಟ್‌ಹೌಸ್‌ಗೆ ಯಾರು ಬಾಸ್‌? ಕಾದು ನೋಡಿ...

Team Udayavani, Nov 5, 2020, 6:00 AM IST

ನಾಯಕ ಇಲ್ಲೇ ನಿರ್ಣಾಯಕ; ಫ‌ಲಿತಾಂಶದ ದಿಕ್ಕು ಬದಲಿಸುವ ಆರು ಪ್ರಾಂತ್ಯಗಳು

ವಾಷಿಂಗ್ಟನ್‌: ಅಮೆರಿಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಧ್ಯಕ್ಷೀಯ ಚುನಾವಣೆಯು ಅತ್ಯಂತ ಕುತೂಹಲಕ್ಕೆ ಕಾರಣವಾಗಿದ್ದು, ಡೆಮಾಕ್ರಾಟ್‌ ಹಾಗೂ ರಿಪಬ್ಲಿಕನ್‌ ಅಭ್ಯರ್ಥಿಗಳ ನಡುವೆ ಹೆಗಲೆಣೆಯ ಪೈಪೋಟಿ ಏರ್ಪಟ್ಟಿದೆ. ಬುಧವಾರ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದರೂ, ಒಂದೊಂದು ಪ್ರಾಂತ್ಯದ ಫ‌ಲಿತಾಂಶವೂ ಹಾವು-ಏಣಿ ಆಟದಂತೆ ಕೌತುಕ ಮೂಡಿಸುತ್ತಾ ಸಾಗಿದೆ. ಚುನಾವಣಾ ಸಮೀಕ್ಷೆಗಳನ್ನು ಬುಡಮೇಲು ಮಾಡುವಂತೆ ಕೆಲವು ಪ್ರಾಂತ್ಯಗಳಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಜಯ ಸಾಧಿಸಿದ್ದರೆ, ಮತ್ತೆ ಕೆಲವೆಡೆ ಡೆಮಾಕ್ರಾಟ್‌ ಅಭ್ಯರ್ಥಿ ಜೋ ಬೈಡೆನ್‌ ಅಭೂತಪೂರ್ವ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬೈಡೆನ್‌ ಅವರು ಬುಧವಾರ ಬೆಳಗ್ಗೆ ಅರಿಜೋನಾ ಪ್ರಾಂತ್ಯದಲ್ಲಿ ಭರ್ಜರಿ ಜಯ ಗಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇನ್ನು, ಬೈಡೆನ್‌ ತೆಕ್ಕೆಗೆ ಜಾರಲಿದೆ ಎಂದೇ ಬಿಂಬಿತವಾಗಿದ್ದ ಫ್ಲೋರಿಡಾದಲ್ಲಿ ಟ್ರಂಪ್‌ ಜಯ ಸಾಧಿಸುವ ಮೂಲಕ ಡೆಮಾಕ್ರಾಟ್‌ ಅಭ್ಯರ್ಥಿಗೆ ನೆಕ್‌ ಟು ನೆಕ್‌ ಫೈಟ್‌ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ, ಟ್ರಂಪ್‌ ಹಾಗೂ ಬೈಡೆನ್‌ ಅವರ ಭವಿಷ್ಯವನ್ನು ನಿರ್ಧರಿಸಲಿರುವುದು ಇನ್ನೂ ಎಣಿಕೆ ಮುಗಿಯದ 6 ಪ್ರಾಂತ್ಯಗಳು. ಒಟ್ಟಾರೆ 8 ಪ್ರಾಂತ್ಯಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಹಾಗೂ ಮೇಲ್‌ ಮೂಲಕ ಚಲಾವಣೆಯಾದ ಮತಗಳ ಎಣಿಕೆ ವಿಳಂಬ ವಾಗು ತ್ತಿರುವ ಕಾರಣ, ಪೂರ್ಣಪ್ರಮಾಣದ ಫ‌ಲಿ ತಾಂಶ ಹೊರಬೀಳಲು ಇನ್ನೂ ಕೆಲ ದಿನ ಕಾಯ ಬೇಕಾಗಬಹುದು. ಆದರೆ, ಈ 8 ಪ್ರಾಂತ್ಯಗಳ ಪೈಕಿ ಹೆಚ್ಚಿನ ಎಲೆಕ್ಟೋರಲ್‌ ಮತಗಳಿರುವ 6 ಪ್ರಾಂತ್ಯಗಳೇ ಈಗ ಇಬ್ಬರು ಅಭ್ಯರ್ಥಿಗಳಿಗೂ ನಿರ್ಣಾಯಕವಾಗಿವೆ. ಆ ಪ್ರಾಂತ್ಯಗಳೆಂದರೆ, ಪೆನ್ಸಿಲ್ವೇನಿಯಾ, ವಿಸ್ಕನ್ಸಿನ್‌, ಮಿಚಿಗನ್‌, ಜಾರ್ಜಿಯಾ, ನಾರ್ತ್‌ ಕೆರೋಲಿನಾ ಮತ್ತು ನೆವಾಡಾ.

ಪೆನ್ಸಿಲ್ವೇನಿಯಾ: ಇಲ್ಲಿ ಮತ ಎಣಿಕೆ ಆರಂಭವಾಗಿದ್ದು, ಬುಧವಾರ ಸಂಜೆಯವರೆಗಿನ ಚಿತ್ರಣದ ಪ್ರಕಾರ, ಅರ್ಧಕ್ಕಿಂತ ಹೆಚ್ಚು ಮೇಲ್‌(ಇಮೇಲ್‌ ಮೂಲಕ ಚಲಾ ವಣೆ  ಯಾದದ್ದು) ಮತಗಳನ್ನು ಎಣಿಕೆ ಮಾಡಲಾಗಿದೆ. ಆ ಪೈಕಿ ಶೇ.67 ಬೈಡೆನ್‌ ಪರ, ಶೇ.32 ಟ್ರಂಪ್‌ ಪರ ಚಲಾವಣೆಯಾಗಿವೆ. ಇನ್ನು ಮತಪತ್ರಗಳ ಎಣಿಕೆಯಲ್ಲಿ ಟ್ರಂಪ್‌ಗೆ ಶೇ.67, ಬೈಡೆನ್‌ಗೆ ಶೇ.32 ಮತಗಳು ಬಿದ್ದಿವೆ. ಇನ್ನೂ 10 ಲಕ್ಷ ಮತಗಳ ಎಣಿಕೆ ನಡೆಯಬೇಕಿದೆ.

ವಿಸ್ಕನ್ಸಿನ್‌: 10 ಎಲೆಕ್ಟೋರಲ್‌ ಮತಗಳನ್ನು ಹೊಂದಿರುವ ವಿಸ್ಕನ್ಸಿನ್‌ನ ಫ‌ಲಿತಾಂಶವೂ ಇನ್ನೂ ಹೊರಬಂದಿಲ್ಲ. ಭಾರೀ ಸಂಖ್ಯೆಯ ಮೇಲ್‌ ಮತಗಳು ಬಂದಿರುವ ಕಾರಣ ಎಣಿಕೆ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅತಿ ದೊಡ್ಡ ನಗರ ಮಿಲ್ವಾಕೀಯಲ್ಲಿ 1.69 ಲಕ್ಷ ಮತಗಳಿದ್ದು, ಇದು ಇಲ್ಲಿನ ಫ‌ಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

ಮಿಚಿಗನ್‌: 2016ರ ಚುನಾವಣೆಯಲ್ಲಿ ಕೂದಲೆಳೆ ಅಂತರ ದಿಂದ ಟ್ರಂಪ್‌ ಜಯಗಳಿಸಿದ್ದ ಪ್ರಾಂತ್ಯವಿದು. ಗುರುವಾರ ದವರೆಗೂ ಇಲ್ಲಿನ ಮತ ಎಣಿಕೆ ಪೂರ್ಣಗೊಳ್ಳಲಿಕ್ಕಿಲ್ಲ. ಇಲ್ಲಿ ಶೇ.55ರಷ್ಟು ಮತದಾನ ದಾಖಲಾಗಿದ್ದು, 2.50 ಲಕ್ಷ ಮತಗಳ ಎಣಿಕೆ ನಡೆಯಬೇಕಿದೆ.

ಜಾರ್ಜಿಯಾ: ಹಿಂದಿನ ಚುನಾವಣೆಯಲ್ಲಿ ಇಲ್ಲಿ ಟ್ರಂಪ್‌ ಗೆಲುವು ಸಾಧಿಸಿದ್ದರು. ಇಲ್ಲಿ 16 ಎಲೆಕ್ಟೋರಲ್‌ ಮತಗಳಿದ್ದು, ಇಲ್ಲಿ ರಿಪಬ್ಲಿಕನ್‌ ಮತದಾರರು ಹೆಚ್ಚಿರುವ ಕಾರಣ ಈ ಬಾರಿಯೂ ಟ್ರಂಪ್‌ ಜಯ ಗಳಿಸುವ ನಿರೀಕ್ಷೆಯಿದೆ.

ನಾರ್ತ್‌ ಕೆರೊಲಿನಾ: ಇಲ್ಲೂ ಪೈಪೋಟಿ ಅಧಿಕವಾಗಿದ್ದು, ಬುಧವಾರ ಸಂಜೆಯವರೆಗೆ ಟ್ರಂಪ್‌ 77 ಸಾವಿರ ಮತ ಗಳ ಅಂತರದಿಂದ ಮುಂದಿದ್ದರು. ಮೇಲ್‌ ಮೂಲಕ ಚಲಾವಣೆಯಾದ ಮತಗಳ ಎಣಿಕೆಗೆ 9 ದಿನಗಳ ಕಾಲಾವ ಕಾಶ ವಿದ್ದು, ಯಾರ ಪರ ಮತದಾರರು ಒಲವು ತೋರಿಸಿದ್ದಾರೆ ಎಂಬುದನ್ನು ಕಾದು ನೋಡಬೇಕು.

ನೆವಾಡಾ: ಮತಪತ್ರಗಳ ಪೈಕಿ ಶೇ.80ರಷ್ಟರ ಎಣಿಕೆ ಮುಗಿದಿದ್ದು, ಶೇ.3ರಷ್ಟು ಹೆಚ್ಚು ಮತಗಳಿಂದ ಬೈಡೆನ್‌ ಮುನ್ನಡೆ ಸಾಧಿಸಿದ್ದಾರೆ. ಆದರೆ, ಇಲ್ಲೂ ಮೇಲ್‌ ಮತಗಳ ಎಣಿಕೆ ಮುಗಿಯದ ಕಾರಣ ಫ‌ಲಿತಾಂಶ ವಿಳಂಬವಾಗಲಿದೆ.

ಫೋರ್ಡ್‌ಗೆ 90 ನಿಮಿಷ, ಬರ್ಗರ್‌ಗೆ 60 ಸೆಕೆಂಡ್‌ ಕಾಯದ ಅಮೆರಿಕ ಈಗ ಸಂಯಮ ನೆಲ
ಫೋರ್ಡ್‌ ಮಾಡೆಲ್‌- ಟಿ ಕಾರುಗಳನ್ನು 90 ನಿಮಿಷಗಳಲ್ಲಿ, ಬರ್ಗರ್‌ಗಳನ್ನು 60 ಸೆಕೆಂಡ್‌ಗಳಲ್ಲಿ ಪಡೆಯುವ ವೇಗದ ನೆಲ ಅಮೆರಿಕ ಈಗ ಫ‌ಲಿತಾಂಶದ ಕಾರಣಕ್ಕಾಗಿ ತಾನಲ್ಲದೆ ಇಡೀ ಜಗತ್ತನ್ನೇ ತಾಳ್ಮೆಯಿಂದ ಕಾಯುವಂತೆ ಮಾಡಿದೆ. ಬುಧವಾರ ಆರಂಭಗೊಂಡ ಮತಎಣಿಕೆ ಪ್ರಕ್ರಿಯೆ ಫ‌ಲಿತಾಂಶ ರಾಜಕೀಯ ಪಂಡಿತರನ್ನೂ ಕೆಲವು ದಿನ, ವಾರಗಳವರೆಗೆ ಎದುರು ನೋಡುವಂತೆ ಮಾಡಿದೆ. ಫ‌ಲಿತಾಂಶದ ಕಾಯುವಿಕೆ ಕುರಿತು ಹಲವರು ತಮ್ಮದೇ ಆದ ಭಾವಗಳಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ. “ನಾವು ಸ್ವಲ್ವ ತಾಳ್ಮೆ ಹೊಂದಿರಬೇಕು ನಿಜ, ಈಗ ಅಪಾರ ತಾಳ್ಮೆ ವಹಿಸಬೇಕಿದೆ. ಕೊನೆಯ ಮತಕ್ಕೂ ಫ‌ಲಿತಾಂಶ ಬದಲಿಸುವ ಶಕ್ತಿಯಿದೆ’ ಎಂದು ಯುರೋಪಿಯನ್‌ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥ ಜೋಸೆಫ್ ಬಾರೆಲ್‌ ಹೇಳಿದ್ದಾರೆ. ನಿಧಾನಗತಿಯ ಫ‌ಲಿತಾಂಶ ಕುರಿತು ನೈಜೀರಿಯಾ ಲೇಖಕ ಶೆಹು ಸಾನಿ, “ಆಫ್ರಿಕಾ ಖಂಡಕ್ಕೆ ಅಮೆರಿಕದ ಪ್ರಜಾಪ್ರಭುತ್ವ ಪಾಠವಾಗಿತ್ತು. ಈಗ ಆಫ್ರಿಕನ್‌ ಪ್ರಜಾಪ್ರಭುತ್ವ ನೋಡಿ ಅಮೆರಿಕ ಕಲಿಯುತ್ತಿದೆ’ ಎಂದು ಟೀಟಿಸಿದ್ದಾರೆ.”ಇದು ಅತ್ಯಂತ ಸ್ಫೋಟಕ ಸಮಯ. ಅಮೆರಿಕದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಬಹುದು ಎಂದು ತಜ್ಞರು ವಿಶ್ಲೇಷಿಸಬೇಕಾದ ಸಮಯ’ ಎಂದು ಜರ್ಮನಿಯ ರಕ್ಷಣಾ ಮಂತ್ರಿ ಆ್ಯನ್ನೆಗ್ರೆಟ್‌ ಕ್ರ್ಯಾಂಪ್‌ ಕಾರ್ರೆನ್‌ಬಾರ್‌ ಅರ್ಥೈಸಿದ್ದಾರೆ.

ಕೊನೇ ಮತದವರೆಗೂ ಎಣಿಕೆ ನಡೆಯಲಿ
ಮತ ಎಣಿಕೆ ನಿಲ್ಲಿಸಬೇಕು ಎಂದು ಆಗ್ರಹಿಸಿ ಸುಪ್ರೀಂ ಮೆಟ್ಟಿಲೇರುವುದಾಗಿ ಟ್ರಂಪ್‌ ಘೋಷಿಸಿದ ಬೆನ್ನಲ್ಲೇ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಡೆಮಾಕ್ರಾಟ್‌ ಅಭ್ಯರ್ಥಿ ಜೋ ಬೈಡೆನ್‌, “ಟ್ರಂಪ್‌ ಹೇಳಿಕೆಯು ಅಸಮರ್ಥನೀಯ ಹಾಗೂ ಆಕ್ಷೇಪಾರ್ಹ. ಕಟ್ಟ ಕಡೆಯ ಮತ ಪತ್ರದ ಎಣಿಕೆ ಮುಗಿಯುವವರೆಗೂ ಮತಎಣಿಕೆ ಪ್ರಕ್ರಿಯೆ ಮುಂದುವರಿಯಬೇಕು. ಇದಕ್ಕೆ ಅಡ್ಡಿಪಡಿಸಲು ಟ್ರಂಪ್‌ ಅವರು ಸುಪ್ರೀಂ ಮೆಟ್ಟಿಲೇರುವುದಾದರೆ, ಅವರ ಪ್ರಯತ್ನವನ್ನು ತಡೆಯಲು ನಮ್ಮ ಕಾನೂನು ತಂಡವೂ ಸನ್ನದ್ಧವಾಗಿದೆ. ಅಮೆರಿಕದ ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿಯಲು ನಾನು ಬಿಡುವುದಿಲ್ಲ’ ಎಂದರು.

ನಾನೇ ಗೆದ್ದಿರುವೆ; ಎಣಿಕೆ ನಿಲ್ಲಿಸಿ
ಬುಧವಾರ ಮತ ಎಣಿಕೆ ಪ್ರಕ್ರಿಯೆ ಚಾಲ್ತಿಯಲ್ಲಿರುವಂತೆಯೇ, ಏಕಾಏಕಿ ಸುದ್ದಿಗೋಷ್ಠಿ ಕರೆದ ಟ್ರಂಪ್‌, “ಈ ಚುನಾವಣೆಯು ಅಮೆರಿಕದ ಜನತೆಗೆ ಮಾಡಿರುವ ವಂಚನೆ. ಇದು ಇಡೀ ದೇಶಕ್ಕೆ ಮುಜುಗರ ತಂದಿದೆ. ನಮ್ಮ ಗೆಲುವು ಶತಃಸಿದ್ಧ. ನಿಜ ಹೇಳಬೇಕೆಂದರೆ, ಈ ಚುನಾವಣೆಯಲ್ಲಿ ನಾನೇ ಗೆದ್ದಿರುವೆ. ಕೂಡಲೇ ಮತ ಎಣಿಕೆಯನ್ನು ನಿಲ್ಲಿಸಬೇಕು. ಬೆಳ್ಳಂಬೆಳಗ್ಗೆ ಇನ್ನಷ್ಟು ಮತಗಳನ್ನು ಸೇರಿಸಿ, ಲಿಸ್ಟ್‌ಗೆ ಸೇರಿಸಲು ನಾನು ಬಿಡುವುದಿಲ್ಲ. ನಾನು ಸುಪ್ರೀಂ ಕೋರ್ಟ್‌ ಮೆಟ್ಟಿಲೇರುತ್ತೇನೆ’ ಎಂದು ಘೋಷಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೆ ನೂಕಿದರು.

ಜ್ಯೋತಿಷಿ ಹೇಳಿದ “ಅಮೆರಿಕ ಭವಿಷ್ಯ’: ಆನಂದ್‌ ಮಹೀಂದ್ರ ಟ್ವೀಟ್‌!
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವವರು ಯಾರೆಂಬುದರ ಬಗ್ಗೆ ವಿವಿಧ ರೀತಿಗಳಲ್ಲಿ ಚರ್ಚೆಗಳು ನಡೆದಿವೆ. ಕುತೂಹಲಕಾರಿ ಅಂಶವೊಂದರಲ್ಲಿ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಅಧ್ಯಕ್ಷ ಆನಂದ ಮಹೀಂದ್ರಾ “ಜ್ಯೋತಿಷಿಯೊಬ್ಬರು ಟ್ರಂಪ್‌ ಅಧಿಕಾರದಲ್ಲಿ ಮುಂದುವರಿಯುತ್ತಾರೆ ಮತ್ತು ಬೈಡೆನ್‌ ಕಠಿಣ ಸವಾಲು ಒಡ್ಡಲಿದ್ದಾರೆ’ ಎಂದು ಇಬ್ಬರು ಮುಖಂಡರ ಜಾತಕಗಳನ್ನು ಪರಿಶೀಲಿಸಿ ಮಾಡಿದ ಹೋಲಿಕೆಯನ್ನು ಟ್ವೀಟ್‌ ಮಾಡಿದ್ದಾರೆ. “ಟ್ರಂಪ್‌ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂದು ಜ್ಯೋತಿಷಿಯೊಬ್ಬರು ನುಡಿದ ಭವಿಷ್ಯ ಕಳೆದ ವಾರವೇ ವೈರಲ್‌ ಆಗಿತ್ತು. ಖಾಸಗಿತನ ರಕ್ಷಿಸಲೋಸುಗ ಅವರ ವಿವರಗಳನ್ನು ನಾನೀಗ ಬಹಿರಂಗಪಡಿಸುವುದಿಲ್ಲ. ಒಂದು ವೇಳೆ ಅವರು ನುಡಿದಂತೆ ಟ್ರಂಪ್‌ ಅಧಿಕಾರದಲ್ಲಿ ಮುಂದುವರಿದದ್ದೇ ಆದರೆ, ಅವರಿಗೆ ಜನಪ್ರಿಯತೆ ಬರಲಿದೆ’ ಎಂದು ಆನಂದ್‌ ಮಹೀಂದ್ರಾ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಜ್ಯೋತಿಷಿ ಹೇಳಿದ್ದೇನು?: “ಶ್ರೀ ಡೊನಾಲ್ಡ್‌ ಟ್ರಂಪ್‌ ಸಿಂಹವನ್ನೇರಿದ್ದಾರೆ ಮತ್ತು ಹತ್ತನೇ ಮನೆಯಲ್ಲಿ ಸೂರ್ಯನಿದ್ದಾನೆ. ಅವರಿಗೆ ರಾಹುವಿನ ಬಲ ಇರುವ ಕಾರಣ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ…’ ಎಂದು ಬರೆದಿದ್ದಾರೆ. ಡೆಮಾಕ್ರಾಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡೆನ್‌ ಜಾತಕ ಪರಿಶೀಲಿಸಿದ ಜ್ಯೋತಿಷಿ “ಬೈಡೆನ್‌ ಟ್ರಂಪ್‌ ಅವರಿಗೆ ಕಠಿಣ ಸ್ಪರ್ಧೆ ನೀಡುವುದು ನಿಶ್ಚಿತ’ ಎಂದೂ ಹೇಳಿದ್ದಾರೆ.ಅದಕ್ಕೆ ಪೂರಕವಾಗಿ ಚುನಾವಣೆಯಲ್ಲಿ ಟ್ರಂಪ್‌ಗೆ ಕಠಿಣಾತಿಕಠಿಣ ಸ್ಪರ್ಧೆಯನ್ನು ನೀಡಿದ್ದಂತೂ ಸತ್ಯ. ಜ್ಯೋತಿಷಿ ಭವಿಷ್ಯ ನುಡಿದದ್ದಕ್ಕೂ, ಅಮೆರಿಕದಲ್ಲಿ ಉಂಟಾಗಿರುವ ಬೆಳವಣಿಗೆಗೆ ನೇರ ಸಂಬಂಧ ಇದೆಯೋ ಗೊತ್ತಿಲ್ಲ. ಆದರೆ ಮಹೀಂದ್ರಾರ ಟ್ವೀಟ್‌ ವೈರಲ್‌ ಆಗಿದೆ.

ನ್ಯೂಯಾರ್ಕ್‌ ಅಸೆಂಬ್ಲಿಗೆ ಜೆನಿಫ‌ರ್‌ ರಾಜ್‌ಕುಮಾರ್‌
ಭಾರತೀಯ ಅಮೆರಿಕನ್‌ ಮಹಿಳೆ ಜೆನಿಫ‌ರ್‌ ರಾಜಕುಮಾರ್‌ ಅವರು ನ್ಯೂಯಾರ್ಕ್‌ ಪ್ರಾಂತೀಯ ಅಸೆಂಬ್ಲಿಯ ಕೆಳಮನೆಗೆ ಆಯ್ಕೆಯಾಗಿದ್ದಾರೆ. ಡೆಮಾಕ್ರಾಟಿಕ್‌ ಪಕ್ಷದ ಅಭ್ಯರ್ಥಿಯಾಗಿರುವ ಅವರು ರಿಪಬ್ಲಿಕನ್‌ ಪಕ್ಷದ ಜಿಯೋವನ್ನಿ ಪೆರ್ನಾರನ್ನು ಸೋಲಿಸಿದ್ದಾರೆ. ಈ ಮೂಲಕ ನ್ಯೂಯಾರ್ಕ್‌ ಪ್ರಾಂತೀಯ ಅಸೆಂಬ್ಲಿಗೆ ಆಯ್ಕೆಯಾದ ಮೊದಲ ದಕ್ಷಿಣ ಏಷ್ಯಾದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಯದ ಬಗ್ಗೆ ಇಂಡಿಯನ್‌ ಅಮೆರಿಕನ್‌ ಇಂಪ್ಯಾಕ್ಟ್ ಫ‌ಂಡ್‌ ಟ್ವೀಟ್‌ ಮಾಡಿ “ನ್ಯೂಯಾರ್ಕ್‌ ಪ್ರಾಂತೀಯ ಅಸೆಂಬ್ಲಿಗೆ ಆಯ್ಕೆಯಾದ ಮೊದಲ ದಕ್ಷಿಣ ಏಷ್ಯಾ ಮಹಿಳೆ ಜಿನಿಫ‌ರ್‌ಗೆ ಅಭಿನಂದನೆಗಳು. ಅವರು ಅಲಬೇನಿಯಾದಲ್ಲಿ ದಕ್ಷಿಣ ಏಷ್ಯಾದವರ ಪರವಾಗಿ ಹೋರಾಟ ನಡೆಸುತ್ತಿದ್ದಾರೆ’ ಎಂದು ಬರೆದುಕೊಂಡಿದೆ. ಸ್ಟಾನ್‌ಫೋರ್ಡ್‌ ವಿವಿಯಲ್ಲಿ ಕಾನೂನು ಪದವಿ ಪಡೆದಿರುವ ಜೆನಿಫ‌ರ್‌ ವಲಸೆಗಾರರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ನ್ಯೂಯಾರ್ಕ್‌ ಪ್ರಾಂತೀಯ ಅಸೆಂಬ್ಲಿಯಲ್ಲಿ ಅವರು ನ್ಯೂಯಾರ್ಕ್‌ ಸಿಟಿ ಕ್ಷೇತ್ರವನ್ನು ಪ್ರತಿನಿಧಿಸಲಿದ್ದಾರೆ.

ರಿಕಿ ಮೆಹ್ತಾಗೆ ಸೋಲು
ಭಾರತೀಯ ಅಮೆರಿಕನ್‌ ರಿಕಿ ಮೆಹ್ತಾ ಚುನಾವಣೆ ಯಲ್ಲಿ ಸೋಲು ಅನುಭವಿಸಿದ್ದಾರೆ. ಅವರು ರಿಪ ಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿ ನ್ಯೂಜರ್ಸಿಯ ಸೆನೆಟರ್‌ ಆಗಲು ಕಣದಲ್ಲಿದ್ದರು. ಪ್ರತಿಸ್ಪರ್ಧಿ ಡೆಮಾಕ್ರಾಟ್‌ ಪಕ್ಷದ ಹಾಲಿ ಸೆನೆಟರ್‌ ಕಾರಿ ಬೂಕರ್‌ ವಿರುದ್ಧ ಶೇ.37.9 ಮತಗಳನ್ನು ಪಡೆದು ಸೋಲನುಭ ವಿಸಿದ್ದಾರೆ. ಮೆಹ್ತಾಗೆ 10,71,716 ಮತಗಳು ಬಂದಿ ದ್ದರೆ ಬೂಕರ್‌ಗೆ 17,14,375 ಮತಗಳು ಅಂದರೆ ಶೇಕಡಾವಾರು ಶೇ.60.6 ಮತಗಳು ಪ್ರಾಪ್ತವಾಗಿವೆ.

ಟ್ರಂಪ್‌ ಟ್ವೀಟ್‌ಗೆ ತಡೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಮೈಕ್ರೋಬ್ಲಾಗಿಂಗ್‌ ಜಾಲತಾಣ ಟ್ವಿಟರ್‌ ನಡುವೆ ಫ‌ಲಿತಾಂಶ ಪ್ರಕಟವಾಗುವ ಸಂದರ್ಭದಲ್ಲಿಯೇ ತಿಕ್ಕಾಟ ನಡೆದಿದೆ. ಡೆಮಾಕ್ರಾಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡೆನ್‌ “ಮತಗಳನ್ನು ಕದಿಯುತ್ತಿದ್ದಾರೆ’ ಎಂದು ಆರೋಪಿಸಿ ಟ್ರಂಪ್‌ ಮಾಡಿರುವ ಟ್ವೀಟ್‌ ಅನ್ನು ಟ್ವಿಟರ್‌ ತಡೆಹಿಡಿದಿದೆ. ಅತ್ಯಂತ ತುರುಸಿನ ಫ‌ಲಿತಾಂಶ ಪ್ರಕಟವಾಗುತ್ತಲೇ ಮೊದಲ ಬಾರಿಗೆ ಟ್ವೀಟ್‌ ಮಾಡಿದ್ದ ಟ್ರಂಪ್‌ “ನಾವು ಮುನ್ನಡೆ ಕಾಯ್ದುಕೊಂಡಿದ್ದೇವೆ. ಆದರೆ ಅವರು ಮತಗಳನ್ನು ಕದಿಯುತ್ತಿದ್ದಾರೆ. ಅಂಥ ಪ್ರಯತ್ನಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಹಕ್ಕು ಚಲಾವಣೆಯ ಸಮಯ ಮುಕ್ತಾಯವಾದ ಬಳಿಕ ಅದಕ್ಕೆ ಅವಕಾಶವಿಲ್ಲ’ ಎಂದು ಬರೆದುಕೊಂಡಿದ್ದರು. ಅದನ್ನು ಟ್ವೀಟ್‌ ಮಾಡುತ್ತಿದ್ದಂತೆಯೇ ಜಾಲತಾಣದ ವತಿಯಿಂದ “ಇದೊಂದು ವಿವಾದಾತ್ಮಕ ಮತ್ತು ತಪ್ಪು ಸಂದೇಶ ಕೊಡುವ ಸಾಧ್ಯತೆ ಇದೆ’ ಎಚ್ಚರಿಕೆಯ ಶೀರ್ಷಿಕೆ ಪ್ರಕಟವಾಯಿತು. ಫೇಸ್‌ಬುಕ್‌ ಕೂಡ ಟ್ರಂಪ್‌ ಅವರು, ಅಪ್‌ಲೋಡ್‌ ಮಾಡಿದ ಸಂದೇಶವನ್ನು ತಡೆಹಿಡಿದಿದೆ. ಆರಂಭಿಕ ಫ‌ಲಿತಾಂಶಗಳು ಕೊನೆಯ ಹಂತದಲ್ಲಿ ಬದಲಾವಣೆಯಾಗಬಹುದು. ಮತ ಎಣಿಕೆ ದಿನಗಳು ಅಥವಾ ವಾರದ ವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಫೇಸ್‌ಬುಕ್‌ ಪ್ರತಿಕ್ರಿಯೆ ನೀಡಿದೆ. ಎರಡೂ ಜಾಲತಾಣಗಳು ಟ್ರಂಪ್‌ ಅವರ ವಿವಾದಾತ್ಮಕ ಟ್ವೀಟ್‌ ಮತ್ತು ಪೋಸ್ಟ್‌ಗಳನ್ನು ಈ ಹಿಂದೆ ತಡೆಹಿಡಿದಿದ್ದವು.

ಡೆಲಾವರ್‌ ಅಸೆಂಬ್ಲಿಗೆ ತೃತೀಯ ಲಿಂಗಿ
ಪ್ರಸಕ್ತ ಸಾಲಿನ ಅಮೆರಿಕ ಚುನಾವಣೆ ಇತಿಹಾಸ ಬರೆದಿದೆ. ಮೊದಲ ಬಾರಿಗೆ ತೃತೀಯ ಲಿಂಗಿ ಅಭ್ಯರ್ಥಿ ಜಯ ಸಾಧಿಸಿದ್ದಾರೆ. ಡೆಮಾಕ್ರಾಟಿಕ್‌ ಪಕ್ಷದಿಂದ ಸ್ಪರ್ಧಿಸಿದ್ದ ಸಾರಾ ಮ್ಯಾಕ್‌ಬ್ರೈಡ್‌ ಡೆಲಾವರ್‌ನಿಂದ ಪ್ರಾಂತೀಯ ಅಸೆಂಬ್ಲಿಗೆ ಆಯ್ಕೆಯಾಗಿದ್ದಾರೆ. ಅವರು ರಿಪಬ್ಲಿಕನ್‌ ಪಕ್ಷದ ಸ್ಟೀವ್‌ ವಾಷಿಂಗ್ಟನ್‌ ಅವರನ್ನು ಸೋಲಿಸಿದ್ದಾರೆ. ಡೆಮಾಕ್ರಾಟಿಕ್‌ ಪಕ್ಷವೇ ಪ್ರಾಬಲ್ಯ ಹೊಂದಿರುವ ವಿಲಿ¾ಂಗ್ಟನ್‌ನಿಂದ ಪೆನ್ಸಿಲ್ವೇನಿಯಾ ಗಡಿವರೆಗಿನ ಪ್ರದೇಶದ ವರೆಗೆ ಇರುವ ಕ್ಷೇತ್ರ ವ್ಯಾಪ್ತಿಯನ್ನು ಗೆದ್ದುಕೊಂಡಿದ್ದಾರೆ. ಅಮೆರಿಕದ ಇತರ ಪ್ರಾಂತ್ಯಗಳಲ್ಲಿ ತೃತೀಯ ಲಿಂಗಿ ಸೆನೆಟರ್‌ (ಸಂಸದ)ಗಳು ಇದ್ದರೂ, ಡೆಲಾವರ್‌ ಪ್ರಾಂತ್ಯದಲ್ಲಿ ತೃತೀಯ ಲಿಂಗಿ ಸಂಸದರು ಆಯ್ಕೆ ಯಾಗಿರುವುದು ಇದೇ ಮೊದಲ ಬಾರಿ ಎನ್ನುವುದು ಗಮನಾರ್ಹ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು “ಪ್ರಕಟವಾಗಿರುವ ಫ‌ಲಿತಾಂಶ ನನ್ನ ಜೀವನದ ಸಾಧನೆಯನ್ನು ಚಿತ್ರಿಸಿದಂತಾಗಿದೆ. ನನ್ನನ್ನು ಆಯ್ಕೆ ಮಾಡುವ ಮೂಲಕ ಜಿಲ್ಲೆಯ ಜನರು ಪಾರದರ್ಶಕ ಮನೋಭಾವ ಹೊಂದಿದ್ದಾರೆ ಎಂಬ ಭಾವನೆ ವ್ಯಕ್ತವಾಗಿದೆ’ ಎಂದು ಪ್ರತಿಕ್ರಿಯೆ ನೀಡಿªರೆ. ಮ್ಯಾಕ್‌ ಬೈಡ್‌ ಅಮೆರಿ ವಿವಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರೂ ಆಗಿದ್ದರು. ಅವರು ಬರಾಕ್‌ ಒಬಾಮ ಅಧ್ಯಕ್ಷರಾಗಿದ್ದ ವೇಳೆ ಶ್ವೇತ ಭವನದಲ್ಲಿ ಆಯೋಜಿಸಲಾಗಿದ್ದ ಡೆಮಾಕ್ರಾಟಿಕ್‌ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಭಾಷಣ ಮಾಡುವ ಮೂಲಕ ಸುದ್ದಿಯಾಗಿದ್ದರು.

ನ್ಯೂಯಾರ್ಕ್‌ ಅಸೆಂಬ್ಲಿಗೆ ಜೆನಿಫ‌ರ್‌ ರಾಜ್‌ಕುಮಾರ್‌
ಭಾರತೀಯ ಅಮೆರಿಕನ್‌ ಮಹಿಳೆ ಜೆನಿಫ‌ರ್‌ ರಾಜಕುಮಾರ್‌ ಅವರು ನ್ಯೂಯಾರ್ಕ್‌ ಪ್ರಾಂತೀಯ ಅಸೆಂಬ್ಲಿಯ ಕೆಳಮನೆಗೆ ಆಯ್ಕೆಯಾಗಿದ್ದಾರೆ. ಡೆಮಾಕ್ರಾಟಿಕ್‌ ಪಕ್ಷದ ಅಭ್ಯರ್ಥಿಯಾಗಿರುವ ಅವರು ರಿಪಬ್ಲಿಕನ್‌ ಪಕ್ಷದ ಜಿಯೋವನ್ನಿ ಪೆರ್ನಾರನ್ನು ಸೋಲಿಸಿದ್ದಾರೆ. ಈ ಮೂಲಕ ನ್ಯೂಯಾರ್ಕ್‌ ಪ್ರಾಂತೀಯ ಅಸೆಂಬ್ಲಿಗೆ ಆಯ್ಕೆಯಾದ ಮೊದಲ ದಕ್ಷಿಣ ಏಷ್ಯಾದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಯದ ಬಗ್ಗೆ ಇಂಡಿಯನ್‌ ಅಮೆರಿಕನ್‌ ಇಂಪ್ಯಾಕ್ಟ್ ಫ‌ಂಡ್‌ ಟ್ವೀಟ್‌ ಮಾಡಿ “ನ್ಯೂಯಾರ್ಕ್‌ ಪ್ರಾಂತೀಯ ಅಸೆಂಬ್ಲಿಗೆ ಆಯ್ಕೆಯಾದ ಮೊದಲ ದಕ್ಷಿಣ ಏಷ್ಯಾ ಮಹಿಳೆ ಜಿನಿಫ‌ರ್‌ಗೆ ಅಭಿನಂದನೆಗಳು. ಅವರು ಅಲಬೇನಿಯಾದಲ್ಲಿ ದಕ್ಷಿಣ ಏಷ್ಯಾದವರ ಪರವಾಗಿ ಹೋರಾಟ ನಡೆಸುತ್ತಿದ್ದಾರೆ’ ಎಂದು ಬರೆದುಕೊಂಡಿದೆ. ಸ್ಟಾನ್‌ಫೋರ್ಡ್‌ ವಿವಿಯಲ್ಲಿ ಕಾನೂನು ಪದವಿ ಪಡೆದಿರುವ ಜೆನಿಫ‌ರ್‌ ವಲಸೆಗಾರರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ನ್ಯೂಯಾರ್ಕ್‌ ಪ್ರಾಂತೀಯ ಅಸೆಂಬ್ಲಿಯಲ್ಲಿ ಅವರು ನ್ಯೂಯಾರ್ಕ್‌ ಸಿಟಿ ಕ್ಷೇತ್ರವನ್ನು ಪ್ರತಿನಿಧಿಸಲಿದ್ದಾರೆ.

ರಿಕಿ ಮೆಹ್ತಾಗೆ ಸೋಲು
ಭಾರತೀಯ ಅಮೆರಿಕನ್‌ ರಿಕಿ ಮೆಹ್ತಾ ಚುನಾವಣೆ ಯಲ್ಲಿ ಸೋಲು ಅನುಭವಿಸಿದ್ದಾರೆ. ಅವರು ರಿಪ ಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿ ನ್ಯೂಜರ್ಸಿಯ ಸೆನೆಟರ್‌ ಆಗಲು ಕಣದಲ್ಲಿದ್ದರು. ಪ್ರತಿಸ್ಪರ್ಧಿ ಡೆಮಾಕ್ರಾಟ್‌ ಪಕ್ಷದ ಹಾಲಿ ಸೆನೆಟರ್‌ ಕಾರಿ ಬೂಕರ್‌ ವಿರುದ್ಧ ಶೇ.37.9 ಮತಗಳನ್ನು ಪಡೆದು ಸೋಲನುಭ ವಿಸಿದ್ದಾರೆ. ಮೆಹ್ತಾಗೆ 10,71,716 ಮತಗಳು ಬಂದಿ ದ್ದರೆ ಬೂಕರ್‌ಗೆ 17,14,375 ಮತಗಳು ಅಂದರೆ ಶೇಕಡಾವಾರು ಶೇ.60.6 ಮತಗಳು ಪ್ರಾಪ್ತವಾಗಿವೆ.

4 ವರ್ಷದ ಹಿಂದಿನ ಪೋಸ್ಟನ್ನು ಮರುಟ್ವೀಟಿಸಿದ ಹಿಲರಿ!
4 ವರ್ಷಗಳ ಹಿಂದೆ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಸೋಲನ್ನಪ್ಪಿದ್ದ ಡೆಮಾಕ್ರಾಟಿಕ್‌ ಪಕ್ಷದ ನಾಯಕಿ ಹಿಲರಿ ಕ್ಲಿಂಟನ್‌ 2016ರ ತಮ್ಮ ಟ್ವೀಟನ್ನು ಮರು ಟ್ವೀಟಿಸಿ, ವಿಶಿಷ್ಟ ಸಂದೇಶ ರವಾನಿಸಿದ್ದಾರೆ. “ಧರ್ಮಗ್ರಂಥಗಳು ನಮಗೆ ಹೀಗೆ ಹೇಳಿವೆ: ಒಳ್ಳೆಯದನ್ನು ಮಾಡುವಾಗ ಆಯಾಸಗೊಳ್ಳಬಾರದು. ಯೋಗ್ಯ ಸಮಯದಲ್ಲಿ ನಾವು ಕೊಯ್ಲು ಮಾಡಲೇಬೇಕು… ನಾವು ಧೈರ್ಯ ಕಳೆದುಕೊಳ್ಳಬಾರದು’ ಎಂದು ಬರೆದುಕೊಂಡಿದ್ದಾರೆ. ಈ ಸಾಲುಗಳನ್ನು ಅವರು 2016, ನ.9ರಂದು ಟ್ರಂಪ್‌ ವಿರುದ್ಧ ಸೋತ ದಿನ ಟ್ವೀಟಿಸಿದ್ದರು. ಇದರೊಂದಿಗೆ ಇನ್ನೊಂದು ಟ್ವೀಟನ್ನೂ ಮರು ಟ್ವೀಟಿಸಿದ್ದಾರೆ. “ಅಮೆರಿಕ ವಿದ್ಯಮಾನ ವೀಕ್ಷಿಸುತ್ತಿರುವ ಎಲ್ಲ ತರುಣಿಯರೇ… ಈ ಜಗತ್ತಿನ ಪ್ರತಿಯೊಂದು ಅವಕಾಶಗಳಿಗೂ ನೀವು ಮೌಲ್ಯಯುತವಾಗಿ ಅರ್ಹರಿದ್ದೀರಿ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದೂ ಹೇಳಿದ್ದಾರೆ.

ಕಪ್ಪು ಜನಾಂಗದ ಸಲಿಂಗಿ ಟೋರೆಸ್‌ ಇತಿಹಾಸ ಸೃಷ್ಟಿ
ಇದೇ ಮೊದಲ ಬಾರಿಗೆ ಅಮೆರಿಕ ಸಂಸತ್‌ಗೆ ಕಪ್ಪು ಜನಾಂಗದ ಸಲಿಂಗ ಅಭ್ಯರ್ಥಿ ಆಯ್ಕೆಯಾಗಿದ್ದಾರೆ! ಡೆಮಾಕ್ರಾಟ್‌ನ 32 ವರ್ಷದ ರಿಚಿ ಟೋರೆಸ್‌ ಈ ಚರಿತ್ರೆ ನಿರ್ಮಿಸಿದ್ದಾರೆ. ನ್ಯೂಯಾರ್ಕ್‌ನ 15ನೇ ಜಿಲ್ಲೆಯಿಂದ ಸ್ಪರ್ಧಿಸಿದ್ದ ಟೋರೆಸ್‌, ರಿಪಬ್ಲಿಕನ್‌ ಪಕ್ಷದ ಪ್ಯಾಟ್ರಿಕ್‌ ಡೆಲಿಸೆಸ್‌ರನ್ನು ಮಣಿಸಿ ಈ ಸಾಧನೆಗೈದಿದ್ದಾರೆ. “ಫ‌ಲಿತಾಂಶ ಬಂದ ಇಂದಿನಿಂದಲೇ ದಕ್ಷಿಣ ಬ್ರೋಂಕ್ಸ್‌ ನಗರದಲ್ಲಿ ಹೊಸ ಯುಗ ಶುರುವಾಗಿದೆ. ನ್ಯೂಯಾರ್ಕ್‌ ಸಿಟಿಯನ್ನು ಬದುಕಿಸಲು ಪ್ರಾಣವನ್ನೇ ಅಪಾಯಕ್ಕೆ ತಳ್ಳಿಕೊಂಡಿರುವ ಬ್ರೋಂಕ್ಸ್‌ ನಗರವನ್ನು ಪ್ರತಿನಿಧಿಸುತ್ತಿರುವುದು ಅತ್ಯಂತ ಗೌರವದ ಸಂಗತಿ’ ಎಂದು ಟೋರೆಸ್‌ ಹರ್ಷ ವ್ಯಕ್ತಪಡಿಸಿದ್ದಾರೆ.

ಶ್ವೇತಭವನದ ಮುಂದೆ ರಣರಂಗ
ಫ‌ಲಿತಾಂಶ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೊಮ್ಮುತ್ತಿದ್ದಾಗಲೇ, ಅಮೆರಿಕದ ಹಲವೆಡೆ ಪ್ರತಿಭಟನೆ ಕಿಚ್ಚು ಹೊತ್ತಿಕೊಂಡಿದೆ. ಶ್ವೇತಭವನ ಮುಂಭಾಗದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಟ್ರಂಪ್‌- ಬೈಡೆನ್‌ ಬೆಂಬಲಿಗರು ಮುಖಾಮುಖೀಯಾಗಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. 16 ರಾಜ್ಯಗಳಲ್ಲಿ ಸಂಘರ್ಷ ನಡೆಯುವ ಮುನ್ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ “ನ್ಯಾಷನಲ್‌ ಗಾರ್ಡ್‌’ ಭಾರೀ ಬಂದೋಬಸ್ತ್ ನೀಡಿದ್ದಾರೆ. ಬೀದಿಗಳಲ್ಲಿ ಕಾನೂನುಬಾಹಿರವಾಗಿ ಗುಂಪುಗೂಡುವುದು, ಪಟಾಕಿ ಸಿಡಿಸಿ ಸಂಭ್ರಮಿಸುವುದನ್ನು ನಿರ್ಬಂಧಿಸಲಾಗಿದ್ದರೂ, ಹಲವೆಡೆ ಪರಿಸ್ಥಿತಿ ಉದ್ವಿಗತ್ನೆಗೆ ತಿರುಗಿದೆ.

ವೈಟ್‌ಹೌಸ್‌ ಮುಂದೆ ಸಂಘರ್ಷ: ಅಮೆರಿಕ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಾಸವಿರುವ ಶ್ವೇತಭವನದ ಸುತ್ತ ತಾತ್ಕಾಲಿಕ ರಕ್ಷಣಾ ಗೋಡೆ ನಿರ್ಮಿಸಲಾಗಿದೆ. ವೈಟ್‌ಹೌಸ್‌ ಹೊರ ಭಾಗದಲ್ಲಿ ಫ‌ಲಿತಾಂಶ ವೀಕ್ಷಣೆಗೆ ದೊಡ್ಡ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ. ವೀಕ್ಷಣಾನಿರತ ಟ್ರಂಪ್‌ ಬೆಂಬಲಿಗರು ಮತ್ತು ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌ (ಬಿಎಲ್‌ಎಂ) ಸಂಘಟನೆ ಸದಸ್ಯರ ನಡುವೆ ಮುಖಾಮುಖೀ ಸಂಘರ್ಷ ಏರ್ಪಟ್ಟಿದ್ದು, ಮೂವರನ್ನು ಬಂಧಿಸಲಾಗಿದೆ.

ಎಲ್ಲ ಜೀವಗಳೂ ಮುಖ್ಯ: ಬಿಎಲ್‌ಎಂ ಸದಸ್ಯರ ಮುಂದೆ ಟ್ರಂಪ್‌ ಸದಸ್ಯನೊಬ್ಬ, “ಎಲ್ಲ ಜೀವಗಳೂ ಮುಖ್ಯ. ಬಿಳಿ ಜೀವಿಗಳೂ ಮುಖ್ಯ’ ಎಂದು ಜೋರಾಗಿ ಕೂಗಿದ್ದರಿಂದ ಅಲ್ಲಿದ್ದ ಕಪ್ಪು ಜನಾಂಗೀಯರು ಕೆರಳಿದ್ದರು. ಪ್ರತಿಭಟನಾನಿರತನೊಬ್ಬ ಬ್ಯಾರಿಕೇಡ್‌ ತಳ್ಳಿ ಒಳನುಗ್ಗಲು ಯತ್ನಿಸಿದ್ದಾಗ, ಗುಂಪೊಂದು ಆತನಿಗೆ ಥಳಿಸಿ, ನೆಲಕ್ಕುರುಳಿಸಿದೆ. “ಮೇಕ್‌ ಅಮೆರಿಕ ಗ್ರೇಟ್‌ ಎಗೇನ್‌’ ಎಂಬ ಸ್ಲೋಗನ್‌ನ ಟಿಷರ್ಟ್‌ ಧರಿಸಿದ ವ್ಯಕ್ತಿ, ಎದುರಾಳಿ ಬಣದ ಬೆಂಬಲಿಗರನ್ನು ಕುಸ್ತಿಗೆ ಆಹ್ವಾನಿಸುತ್ತಿದ್ದ ವಿಡಿಯೊ ವೈರಲ್‌ ಆಗಿದೆ. ಪ್ರತಿಭಟನಾಸ್ತೋಮ ಮತ್ತು ಪೊಲೀಸರ ನಡುವಿನ ಸಂಘರ್ಷ ಮಧ್ಯರಾತ್ರಿವರೆಗೂ ಮುಂದುವರಿದಿದೆ. ಫ‌ಲಿತಾಂಶ ಸ್ಪಷ್ಟವಾಗಿ ಹೊರಬೀಳುವ ತನಕ ವೈಟ್‌ಹೌಸ್‌ಗೆ ಭದ್ರತೆ ಮುಂದುವರಿಯಲಿದೆ.

ಎಲ್ಲೆಲ್ಲಿ? ಹೇಗಿದೆ ಪರಿಸ್ಥಿತಿ?: ಮಿನ್ನೀಪೊಲೀಸ್‌, ಪೋರ್ಟ್‌ಲ್ಯಾಂಡ್‌ಗಳಲ್ಲಿ ಪಟಾಕಿ ಸಿಡಿಸಿದ, ಪ್ರತಿಭಟನೆ ನಡೆಸಿದ ಕೆಲವರನ್ನು ಬಂಧಿಸಲಾಗಿದೆ. ಸಿಯಾಟೆಲ್‌ನಲ್ಲಿ ರಸ್ತೆಗೆ ಮಾರಕಾಸ್ತ್ರ ಎಸೆದ ದುಷ್ಕರ್ಮಿ ಸೇರಿದಂತೆ 8 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಲಾಸ್‌ಏಂಜಲೀಸ್‌ನಲ್ಲಿ ರಸ್ತೆತಡೆಗೆ ಯತ್ನಿಸಿದ ಗುಂಪನ್ನು ಪೊಲೀಸರು ಚದುರಿಸಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫ‌ಲಿತಾಂಶ ಏನೇ ಆಗಲಿ ಅದು ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯದ ಮೇಲೆ ಪರಿಣಾಮ ಬೀರದು.
ಹರ್ಷವರ್ಧನ ಶೃಂಗ್ಲಾ , ವಿದೇಶಾಂಗ ಕಾರ್ಯದರ್ಶಿ

 

ಟಾಪ್ ನ್ಯೂಸ್

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

1-tume

Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Kiccha Sudeep supports Sanju Weds Geetha 2 movie

Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್‌‌

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ

Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.