![1-dee](https://www.udayavani.com/wp-content/uploads/2025/02/1-dee-1-415x221.jpg)
![1-dee](https://www.udayavani.com/wp-content/uploads/2025/02/1-dee-1-415x221.jpg)
Team Udayavani, Nov 5, 2020, 6:02 AM IST
ಕೋಡಿ ಬೀಚ್ ಸೀ ವಾಕ್.
ಕುಂದಾಪುರ: ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯ ಸರಕಾರವು ಕೇಂದ್ರದ ಅನುದಾನದಲ್ಲಿ ಬೀಚ್‌ಗಳನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಲು ಮುಂದಾಗಿದೆ. ಮೊದಲ ಹಂತದಲ್ಲಿ ದ.ಕ. ಜಿಲ್ಲೆಯಿಂದ ಸುರತ್ಕಲ್‌ನ ಇಡ್ಯಾ, ಉಡುಪಿ ಜಿಲ್ಲೆಯಿಂದ ಕುಂದಾಪುರದ ಕೋಡಿ, ಉತ್ತರ ಕನ್ನಡ ಜಿಲ್ಲೆಯಿಂದ ಗೋಕರ್ಣ ಬೀಚ್‌ಗಳು ಆಯ್ಕೆಯಾಗಿವೆ. ನ. 10ರಂದು ಈ ಯೋಜನೆಗೆ ಚಾಲನೆ ದೊರೆಯಲಿದೆ.
ರಾಜ್ಯ ಸರಕಾರದ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನೆ ಸಂಸ್ಥೆ (ಎಂಪ್ರಿ – ಎನ್ವಯರ್‌ವೆುಂಟಲ್ ಮ್ಯಾನೇಜ್‌ಮೆಂಟ್ ಆ್ಯಂಡ್ ಪಾಲಿಸಿ ರಿಸರ್ಚ್ ಇನ್‌ಸ್ಟಿಟ್ಯೂಟ್) ಮೂಲಕ ಪ್ರತೀ ಬೀಚ್ ಅನ್ನು ಕೇಂದ್ರದ ಅನುದಾನ ಮೂಲಕ ದತ್ತು ಪಡೆದು ಅಭಿವೃದ್ಧಿಪಡಿಸಲಾಗುವುದು. ಪ್ರತೀ ಬೀಚ್‌ಗೆ ಸುಮಾರು 8 ಕೋ.ರೂ. ದೊರೆಯಲಿದೆ ಎನ್ನಲಾಗಿದೆ.
ಬ್ಲೂ ಫ್ಲ್ಯಾಗ್‌ಗೆ ಪ್ರಸ್ತಾವನೆ
ಕಡಲತೀರದ ಸ್ವತ್ಛತೆ ಮತ್ತು ಸೌಂದರ್ಯ ಗಮನದಲ್ಲಿರಿಸಿಕೊಂಡು ವಿವಿಧ ರಾಜ್ಯಗಳಲ್ಲಿ ಬ್ಲೂéಫ್ಲ್ಯಾಗ್ ಕಡಲತೀರ ರೂಪಿಸಲು ಕೇಂದ್ರ ಯೋಜನೆ ಹಾಕಿಕೊಂಡಿದೆ. ದೇಶದಲ್ಲಿ ಮೊದಲ ಬಾರಿಗೆ ಪಡುಬಿದ್ರಿ, ಕಾಸರಕೋಡು ಸಹಿತ 8 ಬೀಚ್‌ಗಳಿಗೆ ಈಗಾಗಲೇ ಮಾನ್ಯತೆ ನೀಡಲಾಗಿದೆ. ಎರಡನೇ ಹಂತದಲ್ಲಿ ಇಡ್ಯಾ ಹಾಗೂ ಕೋಡಿ ಬೀಚ್‌ಗೆ ಮಾನ್ಯತೆ ನೀಡಲು ಪ್ರಸ್ತಾವನೆ ಹೋಗಲಿದ್ದು ಮಂಜೂರಾಗುವ ನಿರೀಕ್ಷೆಯಿದೆ. ಅನಂತರದ ಹಂತದಲ್ಲಿ ಗೋಕರ್ಣ ಬೀಚ್ ಪ್ರಸ್ತಾವನೆ ಹೋಗಲಿದೆ. ಕೋಡಿಗೆ ಮಾನ್ಯತೆ ದೊರೆತರೆ ಎರಡು ಬ್ಲೂಫ್ಲ್ಯಾಗ್ ಬೀಚ್ ಮಾನ್ಯತೆ ಪಡೆದ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆ ಉಡುಪಿಗೆ ದೊರೆಯಲಿದೆ.
ಇಕೊ ಪಾರ್ಕ್
ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌ನವರು ವಿವಿಧ ವೃತ್ತಿಯವರನ್ನು ಜತೆಗೂಡಿಸಿ 68 ವಾರಗಳಿಂದ ಕೋಡಿ ಸಮುದ್ರತೀರದಲ್ಲಿ ಸ್ವತ್ಛತಾ ಕಾರ್ಯ ನಡೆಸುತ್ತಿದ್ದು ಟನ್‌ಗಟ್ಟಲೆ ತ್ಯಾಜ್ಯ ಸಂಗ್ರಹಿಸಿ ಪುರಸಭೆ ಮೂಲಕ ವಿಲೇ ಮಾಡುತ್ತಿದ್ದಾರೆ. ತಂಡವು ಪ್ರವಾಸೋ ದ್ಯಮ ಉತ್ತೇಜನಕ್ಕೆ ಬೀಚ್ ಉತ್ಸವ ಕೂಡ ನಡೆಸಿದೆ. ಮೀನುಗಾರಿಕಾ ಇಲಾಖೆ ಬ್ರೇಕ್‌ವಾಟರ್ ಕಾಮಗಾರಿಯನ್ನು ಈ ಭಾಗದಲ್ಲಿ ಎಲ್ಲೂ ಇಲ್ಲದಷ್ಟು ವ್ಯಾಪ್ತಿಯಲ್ಲಿ ಸುಮಾರು 2 ಕಿ.ಮೀ.ನಷ್ಟು ದೂರ ಸೀವಾಕ್ ಮಾದರಿ ಯಲ್ಲಿ ಮಾಡಿದ ಕಾರಣ ಸಾವಿರಾರು ಪ್ರವಾಸಿಗರು ವಾರಾಂತ್ಯದಲ್ಲಿ ಆಗಮಿಸು ತ್ತಿದ್ದಾರೆ. 12 ಎಕರೆ ಅರಣ್ಯ ಇಲಾಖೆ ಜಾಗದಲ್ಲಿ “ಬೀಚ್ ಇಕೊ ಪಾರ್ಕ್’ ನಿರ್ಮಾಣಕ್ಕೆ ಅರಣ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.
ಪರಿಶೀಲನೆ
ನ. 4ರಂದು ಅರಣ್ಯ ಇಲಾಖೆಯ ಡಿಸಿಎಫ್, ಪರಿಸರ ವಿಭಾಗದ ಮಂಗಳೂರು ಹಾಗೂ ಉಡುಪಿ ಜಿಲ್ಲಾ ಪ್ರಾದೇಶಿಕ ನಿರ್ದೇಶಕ ಡಾ| ದಿನೇಶ್ ಅವರು ಕೋಡಿ ಬೀಚ್ ಪರಿಶೀಲನೆ ನಡೆಸಿ ದರು. ಎಸಿಎಫ್ ಲೋಹಿತ್, ಆರ್‌ಎಫ್ಒ ಪ್ರಭಾಕರ ಕುಲಾಲ್, ಫಾರೆಸ್ಟರ್ ಉದಯ ಉಪಸ್ಥಿತರಿದ್ದರು. ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌ನ ಭರತ್ ಬಂಗೇರ, ಗಣೇಶ್ ಪುತ್ರನ್, ಲೋಹಿತ್ ಬಂಗೇರ, ಅನು ದೀಪ್ ಹೆಗ್ಡೆ, ಮೀನುಗಾರ ಮುಖಂ ಡರಾದ ಪುಂಡಲೀಕ ಬಂಗೇರ, ತಿಮ್ಮಪ್ಪ ಖಾರ್ವಿ, ವಿನೋದ್ ಪೂಜಾರಿ, ಪುರಸಭೆ ಮಾಜಿ ಉಪಾಧ್ಯಕ್ಷ ನಾಗರಾಜ ಕಾಂಚನ್ ಅಭಿಪ್ರಾಯಗಳನ್ನು ಹೇಳಿದರು.
ಪಡುಬಿದ್ರಿ ಬೀಚ್ ಬ್ಲೂಫ್ಲ್ಯಾಗ್ ಆಗಿದೆ. ಕಾಪು, ಮಲ್ಪೆ ಅಭಿವೃದ್ಧಿಯಾಗುತ್ತಿವೆ. ಮರವಂತೆ, ಸೋಮೇಶ್ವರ ಆಗಲಿದೆ. ಕೋಡಿ ಬೀಚ್‌ನ ನೀರಿನ ಗುಣಮಟ್ಟದ ಪರಿಶೀಲನೆಗೆ ಸೂಚಿಸಿದ್ದು ಅನಂತರ ಬ್ಲೂಫ್ಲ್ಯಾಗ್‌ಗೆ ಪ್ರಸ್ತಾವನೆ ಕೇಳಿದಾಗ ಹೆಸರು ಕಳುಹಿಸಲಾಗುವುದು.
– ಜಿ. ಜಗದೀಶ್, ಉಡುಪಿ ಜಿಲ್ಲಾಧಿಕಾರಿ
ಮೂರು ಬೀಚ್‌ಗಳನ್ನು ದತ್ತು ಸ್ವೀರಿಸಲಾಗಿದ್ದು 5 ತಿಂಗಳ ಕಾಲ ಪ್ರತಿದಿನ ಸ್ವತ್ಛತೆ, ಹಸಿರು ವಾತಾವರಣ ಕಾಪಾಡುವಿಕೆ, ಜಾಗೃತಿ ಹಾಗೂ ಸೂಚನಾ ಫಲಕಗಳ ಅಳವಡಿಕೆ ನಡೆಯಲಿದೆ. ಅಪಾಯದ ಸಂದರ್ಭ ಪ್ರವಾಸಿಗರ ರಕ್ಷಣಾ ದಳ ಕೂಡ ಕಾರ್ಯನಿರ್ವಹಿಸಲಿದೆ.
– ಡಾ| ದಿನೇಶ್, ಡಿಸಿಎಫ್, ಜಿಲ್ಲಾ ಪ್ರಾದೇಶಿಕ ನಿರ್ದೇಶಕ (ಪರಿಸರ), ಮಂಗಳೂರು ಹಾಗೂ ಉಡುಪಿ, ಅರಣ್ಯ ಇಲಾಖೆ
ಲಕ್ಷ್ಮೀ ಮಚ್ಚಿನ
You seem to have an Ad Blocker on.
To continue reading, please turn it off or whitelist Udayavani.