ಸರ್ಕಾರಿ, ಖಾಸಗಿ ಸ್ಥಳಗಳಲ್ಲಿ ಕಟ್ಟಡ ತ್ಯಾಜ ! ಪಟ್ಟಣದ ಸೌಂದರ್ಯ ಹಾಳು
Team Udayavani, Nov 5, 2020, 2:24 PM IST
ಬಂಗಾರಪೇಟೆ: ದಿನನಿತ್ಯದ ಕಸ ವಿಲೇವಾರಿ ಮಾಡಲಾಗದೆ ಪುರಸಭೆ ಹೈರಾಣಾಗಿರುವ ವೇಳೆ ಕಟ್ಟಡ ತ್ಯಾಜ್ಯ ಎಲ್ಲೆಂದರಲ್ಲಿ ಸುರಿಯುತ್ತಿರುವುದರಿಂದ ನಾನಾ ರೀತಿಯ ಸಮಸ್ಯೆಗಳು ಆರಂಭವಾಗಿವೆ.
ಪಟ್ಟಣದಲ್ಲಿರುವ ದೇವಾಲಯಗಳ ಜಮೀನು, ಕೆರೆ, ಕಾಲುವೆ, ಪಾರ್ಕ್, ರಸ್ತೆ ಬದಿ ಕಟ್ಟಡ ತ್ಯಾಜ್ಯ ಸುರಿಯುತ್ತಿರುವುದರಿಂದ ಪರಿಸರ ಹಾಳಾಗುತ್ತಿದೆ.
ಪಟ್ಟಣದ ಸೌಂದರ್ಯ ಹಾಳು: ತ್ಯಾಜ್ಯವನ್ನು ಖಾಸಗಿ ನಿವೇಶನಗಳಲ್ಲಿ ಬೆಳಗಾಗುವುದರಲ್ಲಿ ಸುರಿದು ಹೋಗಿರುತ್ತಾರೆ. ಪಟ್ಟಣದ ಗಡಿಭಾಗದಲ್ಲಿರುವ ವಾರ್ಡ್‌ಗಳ ಪಕ್ಕದಲ್ಲಿರುವ ಖಾಲಿ ಜಾಗಳಲ್ಲಿ ಹೆಚ್ಚಾಗಿ ಸುರಿದಿದ್ದಾರೆ. ರಾತ್ರಿ ವೇಳೆಯಲ್ಲಿ ಪಟ್ಟಣದ ಕೆಲವು ಕಡೆ ಹಳೆಯ ಕಟ್ಟಡಗಳನ್ನು ಕೆಡವಿ ಕಟ್ಟಡ ತ್ಯಾಜ್ಯವನ್ನು ಅಕ್ರಮವಾಗಿ ಸುರಿಯಲಾಗುತ್ತಿದೆ.
ದೇವಸ್ಥಾನ ಮತ್ತು ಸರ್ಕಾರಿ ಜಾಗದಲ್ಲಿ ಹಾಗೂ ರಸ್ತೆ ಬದಿಯಲ್ಲಿ ಯತೇತ್ಛವಾಗಿ ಕಟ್ಟಡ ತ್ಯಾಜ್ಯ ಸುರಿಯುವುದರಿಂದ ಪಟ್ಟಣದ ಸೌಂದರ್ಯ ಹಾಳಾಗುವ ಜೊತೆಗೆ ಮಣ್ಣಿನ ಫಲವತ್ತತೆ ಮತ್ತು ಪರಿಸರ ಹಾಳಾಗಿ ಜನರ ಆರೋಗ್ಯ ಕೆಡುತ್ತಿದೆ.
ಇದನ್ನೂ ಓದಿ:ಪ್ರವಾಸಿಗರ ಸೋಗಿನಲ್ಲಿ ಖೋಟಾ ನೋಟು ಚಲಾವಣೆ! ಪೊಲೀಸರಿಂದ ತಂದೆ, ತಾಯಿ, ಮಗನ ಬಂಧನ
ತೊಂದರೆ ತಪ್ಪಿಸಲಿ: ಯಾರೆಲ್ಲ ಹಳೆಯ ಕಟ್ಟಡ ಕೆಡವುತ್ತಾರೊ ಅವರಿಂದ ಪುರಸಭೆಯವರೇ ತ್ಯಾಜ್ಯವನ್ನು ಒಂದು ಸ್ಥಳ ನಿಗದಿ ಮಾಡಿ ಸಂಗ್ರಹಿಸಿ ಮರುಬಳಕೆಗೆ ಯೋಜನೆ ರೂಪಿಸಿದರೆ ಒಳ್ಳೆಯದಾಗಲಿದೆ. ದೊಡ್ಡ ಕಟ್ಟಡಗಳನ್ನು ಕೆಡವಿದಾಗ ಸಾವಿರಾರು ಟನ್ ತ್ಯಾಜ್ಯದಿಂದ ಜನರಿಗೆ ತೊಂದರೆ ಉಂಟಾಗುವುದನ್ನು ತಪ್ಪಿಸಬಹುದಾಗಿದೆ.
ಎಲ್ಲೆಂದರಲ್ಲಿ ತ್ಯಾಜ್ಯ: ಪುರಸಭೆ ಬಸ್ ನಿಲ್ದಾಣದ ಪಕ್ಕದ ಚಂದ್ರಮೌಳೇಶ್ವರ ದೇವಾಲಯಕ್ಕೆ ಸೇರಿದ ಮುಜರಾಯಿ ಇಲಾಖೆಯ ಖಾಲಿ ಸ್ಥಳದಲ್ಲಿ ಹೆಚ್ಚಾಗಿ ಕಟ್ಟಡ ತ್ಯಾಜ್ಯ ಸುರಿಯಲಾಗಿದೆ. ಇದನ್ನು ತೆರವುಗೊಳಿ ಸಲು ಸರ್ಕಾರಕ್ಕೆ ಲಕ್ಷಗಟ್ಟಲೇ ಖರ್ಚು ಬರಲಿದೆ. ಪಟ್ಟಣದ ದೊಡ್ಡಕೆರೆ ಹಾಗೂ ಅತ್ತಿಗಿರಿಕೊಪ್ಪ ಕೆರೆಗಳ ಅಂಗಳದಲ್ಲಿ ಸಹ ತ್ಯಾಜ್ಯ ಸುರಿಯಲಾಗುತ್ತಿದೆ. ನೂತನವಾಗಿ ನಿರ್ಮಿಸಿರುವ ವಾಲ್ಮೀಕಿ ಭವನದ ಪಕ್ಕದಲ್ಲಿಯೂ ಕಸ ಸುರಿಯಲಾಗುತ್ತಿದೆ. ಕಟ್ಟಡ ತ್ಯಾಜ್ಯ ಸುರಿಯುವವರ ಮೇಲೆ ಕ್ರಮ ಜರುಗಿಸಲು ಪುರಸಭೆಗೆ ಅವಕಾಶವಿದೆ. ತ್ಯಾಜ್ಯ ಸುರಿಯುವವರಿಗೆ ತಿಳಿವಳಿಕೆ ಹೇಳಿ ಸರಿಪಡಿಸಬೇಕಿದೆ. ಪುರಸಭೆ ಮನಸ್ಸು ಮಾಡಿದರೆ ಕಟ್ಟಡ ನಿರ್ಮಾಣದ ಗುತ್ತಿಗೆದಾರರ ಸಭೆ ಮಾಡಿ ಹಳೆ ಕಟ್ಟಡ ತ್ಯಾಜ್ಯದ ಮರುಬಳಕೆಗೆ ಯೋಜನೆ ರೂಪಿಸಬಹುದಾಗಿದೆ.
– ಎಂ.ಸಿ.ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.