ಬದ್ಧತೆ, ಶ್ರದ್ಧಾಪೂರ್ವಕ ಕರ್ತವ್ಯವೇ ದೇಶ ಸೇವೆ: ಪ್ರಹ್ಲಾದ್ ಜೋಷಿ
Team Udayavani, Nov 5, 2020, 11:53 PM IST
ಮಂಗಳೂರು: ಕಾಯಕರ್ತರು ಬದ್ಧತೆ ಮತ್ತು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿದರೆ ಅದು ಕೂಡ ದೇಶ ಸೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.
ಮಂಗಳೂರಿನಲ್ಲಿ ಗುರುವಾರ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕೊರೊನಾ ಮಹಾಮಾರಿಯಂತಹ ವಿಷಮ ಪರಿಸ್ಥಿತಿಯಲ್ಲಿಯೂ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಶ್ರಮದಿಂದ ಸಭೆ ಯಶಸ್ವಿಯಾಗಿದೆ. ರಾಜ್ಯ ಕಾರ್ಯಕಾರಿಣಿ ಅಂದರೆ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಆದರೆ ಈ ಬಾರಿ ಸೀಮಿತ ಕಾರ್ಯಕರ್ತರು ಸೇರಿ ನಡೆಸಿದ್ದೇವೆ ಎಂದರು.
ಬಿಜೆಪಿಯು ಕ್ರಿಯಾಶೀಲ ಪಕ್ಷವಾಗಿದೆ. ಜಗತ್ತಿನಲ್ಲಿ ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮುತ್ತಿದೆ. ಬಿಜೆಪಿಯಲ್ಲಿ ಕೆಲಸ ಮಾಡುವ ನಾವು ಭಾಗ್ಯವಂತರು. ಲಾಕ್‌ಡೌನ್ ಅವಧಿಯಲ್ಲಿಯೂ ಪಕ್ಷ ಕ್ರಿಯಾಶೀಲವಾಗಿತ್ತು ಎಂದರು. ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ ವಂದಿಸಿದರು.
ಡಿ. 5ಕ್ಕೆ ಬೆಳಗಾವಿಯಲ್ಲಿ ಮುಂದಿನ ಕಾರ್ಯಕಾರಿಣಿ
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, 15 ದಿನಗಳಿಗೊಮ್ಮೆ ಪದಾಧಿಕಾರಿಗಳ ಸಭೆ ನಡೆಸಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ. ನವೆಂಬರ್ 20ರಂದು ರಾಯಚೂರಿನಲ್ಲಿ ಪದಾಧಿಕಾರಿಗಳ ಸಭೆ ನಡೆಯಲಿದ್ದು, ಡಿಸೆಂಬರ್ 5ರಂದು ಬೆಳಗಾವಿಯಲ್ಲಿ ರಾಜ್ಯ ಕಾರ್ಯಕಾರಿಣಿ ನಡೆಯಲಿದೆ. ನಿರಂತರ ಮೂರು ಸಭೆಗಳಿಗೆ ಪದಾಧಿಕಾರಿಗಳು ಗೈರು ಹಾಜರಾದರೆ ಅಂತಹ ಪ್ರತಿನಿಧಿಗಳ ಹೆಸರನ್ನು ಕೈಬಿಡಲಾಗುವುದು. ಮಂಗಳೂರಿನಲ್ಲಿ ನಡೆದ ಕಾರ್ಯಕಾರಿಣಿ ಸಭೆಯಿಂದ ಪಕ್ಷದ ಮುಂದಿನ ಕಾರ್ಯಕ್ಕೆ ದಿಕ್ಕು ಸಿಕ್ಕಂತಾಗಿದೆ. “ಸರ್ವ ವ್ಯಾಪಿ-ಸರ್ವ ಸ್ಪರ್ಶಿ’ ನಮ್ಮ ಮಾತು. ಮತಗಟ್ಟೆ ಸದೃಢಗೊಳಿಸಬೇಕು ಎಂಬ ವಿಚಾರದಿಂದ ಹಲವಾರು ಯೋಜನೆಗಳಿವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ
CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ
Congress Government 11 ಲಕ್ಷ ಕುಟುಂಬಗಳ ಅನ್ನವನ್ನು ಕಿತ್ತುಕೊಳ್ಳುತ್ತಿದೆ: ಎಚ್‌ಡಿಕೆ
Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ
Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.