ಹೊಸ ಚಿತ್ರಕ್ಕೆ ಪ್ರಜ್ವಲ್ ರೆಡಿ
Team Udayavani, Nov 6, 2020, 2:57 PM IST
ನಟ ಪ್ರಜ್ವಲ್ ದೇವರಾಜ್ ಅಭಿನಯದ “ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಇದರ ನಡುವೆಯೇ ಪ್ರಜ್ವಲ್ ದೇವರಾಜ್ ಸದ್ದಿಲ್ಲದೆ ಹೊಸದೊಂದು ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ.
ಹೌದು, ಪಿ.ಸಿ ಶೇಖರ್ ನಿರ್ದೇಶನದ ಹೊಸಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಕ್ಯಾಬ್ ಡ್ರೈವರ್ ಪಾತ್ರದಲ್ಲಿಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಪಿ.ಸಿ ಶೇಖರ್ ನಿರ್ದೇಶನದ “ಅರ್ಜುನ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಇದೀಗಎರಡನೇ ಬಾರಿ ಪಿ.ಸಿ ಶೇಖರ್ ಮತ್ತು ಪ್ರಜ್ವಲ್‌ಕಾಂಬಿನೇಷನ್‌ನಲ್ಲಿ ಈ ಹೊಸಚಿತ್ರ ಮೂಡಿಬರುತ್ತಿದ್ದು, ಚಿತ್ರದ ಟೈಟಲ್ ಇನ್ನಷ್ಟೇ ಘೋಷಣೆಯಾಗಬೇಕಿದೆ. ಈ ಮೊದಲು ರಾಗಿಣಿ ಅಭಿನಯದ “ದಿ ಟೆರರಿಸ್ಟ್’ ಚಿತ್ರವನ್ನು ನಿರ್ಮಿಸಿದ್ದ ಅಲಂಕಾರ್ ಸಂತಾನ್ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.
ತಮ್ಮ ಹೊಸಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಪಿ.ಸಿ ಶೇಖರ್, “ನಾಲ್ಕು ಗಂಟೆಯಲ್ಲಿ ನಡೆಯುವ ಘಟನೆಯೊಂದನ್ನು ಈ ಸಿನಿಮಾದ ಮೂಲಕ ಸ್ಕ್ರೀನ್ ಮೇಲೆ ತರುತ್ತಿದ್ದೇವೆ. ಇದೊಂದು ಸಸ್ಪೆನ್ಸ್ – ಥ್ರಿಲ್ಲರ್‌ಕಥಾಹಂದರದ ಸಿನಿಮಾ.ಕನ್ನಡದಲ್ಲಿ ನಾನುಕಂಡಂತೆ ಇಲ್ಲಿಯವರೆಗೆ ಈ ಥರದಕಥೆ ಇಟ್ಟುಕೊಂಡು ಯಾವುದೇ ಸಿನಿಮಾ ಬಂದಿಲ್ಲ.ಕನ್ನಡ ಆಡಿಯನ್ಸ್‌ಗೆ ಇದೊಂದು ಹೊಸ ಥರದ ಸಿನಿಮಾ ಆಗಲಿದೆ. ಇದರಲ್ಲಿ ಪ್ರಜ್ವಲ್‌ಕ್ಯಾಬ್ ಡ್ರೈವರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸಿನಿಮಾದಕಥೆಕೇಳಿದ ಪ್ರಜ್ವಲ್ ಖುಷಿಯಿಂದ ಈ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾದ ಸ್ಕ್ರಿಪ್ಟ್ ಮತ್ತಿತರಕೆಲಸಗಳು ಪೂರ್ಣಗೊಂಡಿದ್ದು, ಡಿಸೆಂಬರ್‌ಕೊನೆಗೆ ಅಥವಾ ಜನವರಿ ವೇಳೆಗೆ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ’ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್‌ಕೆಲಸಗಳು ಭರದಿಂದ ನಡೆಯುತ್ತಿದ್ದು, ಚಿತ್ರದ ಟೈಟಲ್, ನಾಯಕಿ, ಇತರಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ. ಒಟ್ಟಾರೆ ಇಲ್ಲಿಯವರೆಗೆ ಹಲವು ಪಾತ್ರಗಳನ್ನು ನಿರ್ವಹಿಸಿರುವ ಪ್ರಜ್ವಲ್ ಹೊಸ ಚಿತ್ರದಲ್ಲಿಕ್ಯಾಬ್ ಡ್ರೈವರ್ ಗೆಟಪ್‌ನಲ್ಲಿ ಹೇಗೆ ಕಾಣಲಿದ್ದಾರೆ ಅನ್ನೋದು ಈ ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.