ಬೈಂದೂರು, ಶಿರೂರು ವ್ಯಾಪ್ತಿ; ಅನಧಿಕೃತವಾಗಿ ತಲೆ ಎತ್ತುತ್ತಿರುವ ಮೊಬೈಲ್ ಟವರ್‌ಗಳು
Team Udayavani, Nov 7, 2020, 2:06 AM IST
ಬೈಂದೂರು: ಬೈಂದೂರು ಶಿರೂರು ಮುಂತಾದ ಗ್ರಾಮೀಣ ಭಾಗದಲ್ಲಿ ಇಲಾಖೆ ಹಾಗೂ ಗ್ರಾಮ ಪಂಚಾಯತ್‌ನಿಂದ ಯಾವುದೇ ಸೂಕ್ತ ಪರವಾನಿಗೆ ಪಡೆಯದೆ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಾಗುತ್ತಿದೆ.
ಶಿರೂರು ಗ್ರಾಮದ ದೊಂಬೆ ಬಳಿ ಜನವಸತಿ ಸ್ಥಳದ ನಡುವೆ ಖಾಸಗಿ ಕಂಪೆನಿಯೊಂದು ಮೊಬೈಲ್ ಟವರ್ ನಿರ್ಮಿಸುತ್ತಿದ್ದು ಈಗಾಗಲೇ ಅಡಿಪಾಯದ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಇದಕ್ಕೆ ಗ್ರಾ.ಪಂ.ನಿಂದ ಯಾವುದೇ ಪರವಾನಿಗೆ ಪಡೆದಿಲ್ಲ. ಬಹುತೇಕ ಕಡೆ ನಿಯಮ ಪಾಲಿಸದೆ ಸ್ಥಳೀಯ ಗ್ರಾ.ಪಂ. ಸದಸ್ಯರು ಅಥವಾ ಅಧಿಕಾರಿಗಳಿಗೊಂದಿಗೆ ಮಾತುಕತೆ ನಡೆಸಿ ಕಾಮಗಾರಿ ನಡೆಸ ಲಾಗುತ್ತದೆ. ದೊಂಬೆ ಬಳಿ ಈ ರೀತಿ ಕಾಮಗಾರಿ ನಡೆಸಲು ಮುಂದಾಗಿದ್ದು ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಗ್ರಾ.ಪಂ.ಗೆ ದೂರು ನೀಡಿದ್ದು, ಕಾಮಗಾರಿ ಸ್ಥಗಿತಗೊಳಿಸಲಾಗಿದೆ.
ಕಾನೂನು ಏನು ಹೇಳುತ್ತದೆ?
1993 ಪಂಚಾಯತ್‌ರಾಜ್ ಆ್ಯಕ್ಟ್ 64ನೇ ಪ್ರಕರಣದ ಅಧಿನಿಯಮದ ಪ್ರಕಾರ ಟವರ್ ಸ್ಥಾಪನೆಗೆ ಸಂಬಂಧಪಟ್ಟ ಸಮಿತಿ ಮಂಜೂರಾತಿ ಬೇಕು. ಬಳಿಕ ಗ್ರಾ.ಪಂ.ಗೆ ಜಾಗದ ದಾಖಲೆ ನೀಡಬೇಕು. 2015ರ ತಿದ್ದುಪಡಿ ಪ್ರಕಾರ ಗ್ರಾಮ ಪಂಚಾಯತ್ ಮೊಬೈಲ್ ಟವರ್‌ಗಳನ್ನು ಕಟ್ಟಡ ವಿಭಾಗದಲ್ಲಿ ಪರಿಗಣಿಸಲಾಗಿದೆ. ವಾಣಿಜ್ಯ ಕಟ್ಟಡ ನಿರ್ಮಿಸಲು ಯಾವ ರೀತಿ ಪಹಣಿ, ನಕಾಶೆ, ಕನ್ವರ್ಷನ್ ಸೇರಿದಂತೆ ವಿವಿಧ ಮಾಹಿತಿ ನೀಡಿ ಪರವಾನಿಗೆ ಪಡೆಯುತ್ತಾರೋ ಅದೆ ರೀತಿ ಅನುಮತಿ ಪಡೆಯಬೇಕಿದೆ. ಮಾತ್ರವಲ್ಲದೆ ವರ್ಷಕ್ಕೆ 12 ಸಾವಿರ ರೂ. ತೆರಿಗೆ ಪಾವತಿಸಬೇಕು. ಆದರೆ ಖಾಸಗಿ ಕಂಪೆನಿಗಳು ಇವ್ಯಾವುದನ್ನೂ ಪಾಲಿಸದೆ ತೆರಿಗೆ ವಂಚಿಸುತ್ತಿವೆ.
ತಡೆಯೊಡ್ಡಲಾಗಿದೆ
ಶಿರೂರು ಗ್ರಾಮ ಪಂಚಾಯತ್ ಬಳಿ ನಿರ್ಮಾಣವಾಗುತ್ತಿರುವ ಮೊಬೈಲ್ ಟವರ್‌ಗೆ ಯಾವುದೇ ಅನುಮತಿ ಪಡೆದಿಲ್ಲ.ಸ್ಥಳೀಯರಿಂದ ಮಾಹಿತಿ ಬಂದ ತತ್‌ಕ್ಷಣ ಕಾಮಗಾರಿಗೆ ತಡೆಯೊಡ್ಡಲಾಗಿದೆ. ಸೂಕ್ತ ಅನುಮತಿ ಪಡೆದು ಕೆಲಸ ನಡೆಸಲು ಹೇಳಲಾಗಿದೆ. ದಾಖಲೆಗಳಿಲ್ಲದೆ ಮೊಬೈಲ್ ಟವರ್ ನಿರ್ಮಾಣವಾದರೆ ಟವರ್‌ಗೆ ಜಾಗ ನೀಡಿದವರು ಹೊಣೆಗಾರರಾಗುತ್ತಾರೆ.
-ಮಂಜುನಾಥ ಶೆಟ್ಟಿ, ಪಿಡಿಒ, ಶಿರೂರು ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.