ಬೆಳಗಿನ ಪುನರ್ಜನ್ಮಕ್ಕೆ ಮಂಗಲನಾದದ ಸ್ವಾಗತ
Team Udayavani, Nov 7, 2020, 6:20 AM IST
ಸಾಂದರ್ಭಿಕ ಚಿತ್ರ
ನಿದ್ದೆ ಮಾಡುವುದು ಎಂಬುದು ಸರಿಯಾದ ಪ್ರಯೋಗವಲ್ಲ. ನಿದ್ದೆ ಹೋಗುವುದು ಎನ್ನುವುದೇ ಸರಿಯಾದುದು. ನಿದ್ದೆ ನಾವು ಬಯಸಿ ಬರುವುದಲ್ಲ. ದೇಹ ಮತ್ತು ಮನಸ್ಸು ದಣಿದಾಗ ಅವುಗಳು ವಿಶ್ರಾಂತಿ ಪಡೆಯುವ ಅವಕಾಶ ನಿದ್ದೆ. ನಿದ್ರಿಸುವ ಸಂದರ್ಭದಲ್ಲಿ ಜಗತ್ತನ್ನು ಗ್ರಹಿಸುವ ನಮ್ಮ ಪಂಚೇಂದ್ರಿಯ ಗಳು ಸುಷುಪ್ತಿಗೆ ತೆರಳುತ್ತವೆ. ಅಂದರೆ ತಮ್ಮ ಗ್ರಹಿಕೆಯನ್ನು ಸ್ಥಗಿತಗೊಳಿಸುತ್ತವೆ. ನಿದ್ದೆ ಯಲ್ಲಿರುವಷ್ಟು ಸಮಯ ಮನುಷ್ಯ ಹೊರ ಜಗತ್ತಿಗೆ ಸತ್ತಂತೆ, ಆತನ ಪಾಲಿಗೂ ಬಾಹ್ಯ ಲೋಕ ಇಲ್ಲವಾದಂತೆ. “ಸತ್ತು ಹೋದಂಥ ನಿದ್ದೆ ಬಂದಿತ್ತು’, “ಬಡಿದು ಹಾಕಿದಂತೆ ನಿದ್ದೆ ಹೋಗಿದ್ದೆ’ ಎಂಬ ಆಡು ಭಾಷೆಯ ಪ್ರಯೋಗಗಳು ಇದೇ ಅರ್ಥದಲ್ಲಿವೆ.
ನಿದ್ದೆ ಮಾಡಿದ ಮೇಲೆ ಏಳಲೇ ಬೇಕು ತಾನೇ? ನಿದ್ದೆಗೆ ಪ್ರಶಸ್ತವಾದ ಸಮಯ, ನಮಗೆಲ್ಲರಿಗೂ ರೂಢಿಯಾಗಿರುವ ಸಮಯ ರಾತ್ರಿ ನಿದ್ದೆ, ಹಗಲು ಎಚ್ಚರ. ಇದು ಭೂಮಿಯಲ್ಲಿ ಜೀವಸೃಷ್ಟಿ ಮತ್ತು ಬದುಕು ಅರಳಲು ಕಾರಣವಾದ ಸೂರ್ಯನ ಚಲನೆ ಯನ್ನು ಹೊಂದಿಕೊಂಡಿರು ವಂಥದ್ದು. ಇರುಳು ನಿದ್ದೆ ಮಾಡಿ ಬೆಳಗ್ಗೆ ಏಳುವುದು ಹೇಗೆ, ಯಾವ ರೀತಿಯಲ್ಲಿ ಎದ್ದರೆ ಪ್ರಶಸ್ತ ಎಂಬುದೇ ಪ್ರಶ್ನೆ.
ಸಾಮಾನ್ಯವಾಗಿ ಈಗ ಮೊಬೈಲ್‌ನಲ್ಲಿ ಅಥವಾ ಅಲಾರಂ ಇರಿಸಿ ಬೆಳಗ್ಗೆ ನಿದ್ದೆಯಿಂದ ಎದ್ದೇಳುವುದು ನಮಗೆಲ್ಲ ರೂಢಿಯಾಗಿದೆ. ಮೊಬೈಲ್‌ನ ತರಹೇವಾರಿ ಸದ್ದುಗಳು, ಅಲಾರಂ ಗಡಿಯಾರದ ಢಣಢಣ ಆಳವಾದ ನಿದ್ದೆಯಿಂದ ನಮ್ಮನ್ನು ಧಡಕ್ಕನೆ ಎಚ್ಚರಿಸಿದರೆ ನಮ್ಮೆದುರು ಆಯಾ ದಿನ ಹೇಗೆ ತೆರೆದುಕೊಳ್ಳಬಹುದು? ನಾವು ಅನುಸರಿಸುತ್ತಿರುವ ಈ ಕ್ರಮ ಸರಿಯಾದುದೇ ಎಂಬುದು ಪ್ರಶ್ನೆ.
ನಮ್ಮ ಹಿರಿಯರು ಬೆಳಗಾತ ಸುಪ್ರಭಾತ ಗಳನ್ನು ಆಲಿಸುತ್ತಿದ್ದರು. ಕೆಲವು ದಶಕಗಳ ಹಿಂದೆ ಹೊಟೇಲುಗಳು, ಬಸ್ಸುಗಳಲ್ಲಿ ಕೂಡ ಬೆಳಗಿನ ಜಾವ ಕೇಳಿ ಬರುತ್ತಿದ್ದದ್ದು ಸುಪ್ರ ಭಾತವೇ. ಇದು ಸು-ಪ್ರಭಾತ ಎಂಬೆರಡು ಪದಗಳಿಂದ ರೂಪುಗೊಂಡ ಪದ. “ಉತ್ತಮ ಬೆಳಗು’ ಎಂಬರ್ಥ. ಎದ್ದಕೂಡಲೇ ದೇವರ ಹೆಸರುಗಳನ್ನು ನಮ್ಮ ಹಿರಿಯರು ನೆನೆಯುತ್ತಿದ್ದರು. “ಕರಾಗ್ರೇ ವಸತೇ…’ ಹೇಳಿಕೊಳ್ಳುವವರೂ ಇದ್ದರು.
ಇದರ ಹಿಂದಿನ ತಣ್ತೀ ಒಳ್ಳೆಯ ಸದ್ದುಗಳೊಂದಿಗೆ ಎದ್ದೇಳುವುದು.
ಬೆಳಗ್ಗೆ ನಿದ್ದೆಯಿಂದ ಏಳುವುದು ಎನ್ನು ವುದು ಪುನರ್ಜನ್ಮದ ಹಾಗೆ. ಏಳುವ ಆ ಸಮಯದಲ್ಲಿ ಮಂಗಲಕರವಾದ ಸದ್ದುಗಳನ್ನು ಆಲಿಸಿದರೆ ಹೊಸ ದಿನ ಚೆನ್ನಾಗಿರುತ್ತದೆ, ಒಳ್ಳೆಯದು ಘಟಿಸುತ್ತದೆ, ಮುಟ್ಟಿದ್ದೆಲ್ಲವೂ ಚಿನ್ನವಾಗದೆ ಇದ್ದರೂ ಗಮನಾರ್ಹ ಯಶಸ್ಸು ಸಿಗುತ್ತದೆ ಎಂಬುದು ಇದರ ಹಿಂದಿರುವ ನಿಜಾಂಶ. ಬೆಳ್ಳಂಬೆಳಗ್ಗೆ ನೇತ್ಯಾತ್ಮಕ ವಿಚಾರಗಳು ಬೇಡ ಎನ್ನುವುದು ಇದೇ ಕಾರಣಕ್ಕಾಗಿ. ಚೆನ್ನಾಗಿ ಆರಂಭವಾದ ಪ್ರಯಾಣ ಸುಗಮವಾಗುವ ಹಾಗೆ ಆಯಾ ದಿನದ ಬದುಕು ಧನಾತ್ಮಕ ಮುನ್ನೋಟ ದೊಂದಿಗೆ ಆರಂಭ ವಾಗುವುದು ಉತ್ತಮ.
ಎಂಥ ಗಾಢ ನಿದ್ದೆ ಯಲ್ಲಿದ್ದರೂ ಎಚ್ಚರಿಸಬಲ್ಲ ಅತ್ಯಾಧುನಿಕ ಸವಲತ್ತುಗಳು ಇಂದು ನಮ್ಮ ಬಳಿ ಇವೆ. ಆದರೆ ದೇಹ ಮತ್ತು ಮನಸ್ಸು ಗಳು ನೈಸರ್ಗಿಕವಾಗಿ ತನಗೆ ಅಗತ್ಯವಿರುವಷ್ಟು ಹೊತ್ತಿನ ನಿದ್ದೆಯನ್ನು ಪೂರೈಸಿಕೊಂಡು ಜಾಗೃತ ಸ್ಥಿತಿಗೆ ಬರುವುದೇ ಸಾಧು ವಾದದ್ದು. ಅದಕ್ಕಾಗಿಯೇ ಹಿಂದಿನವರು ಬೇಗನೆ ಉಂಡು ಬೇಗನೆ ಮಲಗಿ ಬಿಡುತ್ತಿದ್ದರು. ಬೆಳಗ್ಗೆ ಸೂರ್ಯ ಉದಯಿಸುವುದಕ್ಕೆ ಮುನ್ನವೇ ಏಳುತ್ತಿದ್ದರು. ಹಾಗೆ ಏಳುವ ಹೊತ್ತಿನಲ್ಲಿ ಮಂಗಲಕರವಾದ ಸದ್ದುಗಳು ಕಿವಿಯನ್ನು ತಲುಪುತ್ತಿದ್ದವು.
ಹಳೆಯ ಜೀವನ ಕ್ರಮವನ್ನು ಅಕ್ಷರಶಃ ಈಗ ಪಾಲಿಸುವುದು ಸಾಧ್ಯವಿಲ್ಲವಾದರೂ ಬೆಳಗ್ಗೆ ಏಳುವಾಗ ಮಂಗಲಕರ ನಾದಗಳನ್ನು ಆಲಿಸುವುದು, ದೇಹ ಮತ್ತು ಮನಸ್ಸಿಗೆ ಅಗತ್ಯ ವಿಶ್ರಾಂತಿ ನೀಡುವುದು ನಮ್ಮಿಂದ ಸಾಧ್ಯವಿದೆ. ಆಗ ಆಯಾ ದಿನವೂ ಒಟ್ಟಂದ ದಲ್ಲಿ ಇಡಿಯ ಜೀವನವೂ ಮಂಗಲ ಮಯವಾಗಲು ಸಾಧ್ಯ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.