ಪಟಾಕಿ ನಿಷೇಧ ಮೊದಲೇ ನಿರ್ಧರಿಸಬೇಕಿತ್ತು

Team Udayavani, Nov 7, 2020, 6:10 AM IST

ಪಟಾಕಿ ನಿಷೇಧ ಮೊದಲೇ ನಿರ್ಧರಿಸಬೇಕಿತ್ತು

ಸಾಂದರ್ಭಿಕ ಚಿತ್ರ

ಈ ದೀಪಾವಳಿಯಲ್ಲಿ ಪಟಾಕಿ ಬಳಸದಂತೆ ಸೂಚಿಸಿದ ರಾಜ್ಯಗಳ ಸಾಲಿಗೆ ಕರ್ನಾಟಕವೂ ಸೇರಿದೆ. ರಾಜಸ್ಥಾನ, ದಿಲ್ಲಿ, ಸಿಕ್ಕಿಂ, ಒಡಿಶಾ, ಚಂಡೀಗಢ, ಪಶ್ಚಿಮ ಬಂಗಾಲದಲ್ಲಿ ಈಗಾಗಲೇ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಮುಂಬಯಿ ನಗರ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಬಳಕೆಯನ್ನು ನಿಷೇಧಿಸಿದೆ. ಕರ್ನಾಟಕ, ತಮಿಳುನಾಡು, ಪಂಜಾಬ್‌, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಪಟಾಕಿ ಯಾಕೆ ನಿಷೇಧಿಸಬಾರದು ಎಂದು ಪ್ರಶ್ನಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ವಿವರಣೆ ಕೋರಿ ನೋಟಿಸ್‌ ಜಾರಿಗೊಳಿಸಿದೆ. ದಿಲ್ಲಿ ಮತ್ತು ಸುತ್ತಲಿನ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಯು ಮಾಲಿನ್ಯ ತಡೆಯುವಲ್ಲಿ ಪಟಾಕಿ ನಿಷೇಧ ಸಹಕಾರಿ ಯಾದೀತೆಂಬುದು ಪೀಠದ ಲೆಕ್ಕಾಚಾರ. ನ. 9 ರಂದು ತನ್ನ ತೀರ್ಮಾನವನ್ನು ಪ್ರಕಟಿಸುವ ಸಾಧ್ಯತೆ ಇದೆ.

ರಾಜ್ಯ ಸರಕಾರದ ನಿರ್ಧಾರಕ್ಕೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಪಟಾಕಿಯನ್ನು ನಿಷೇಧಿಸುವುದಾದರೆ ಸಂಪೂರ್ಣ ನಿಷೇಧಿಸಿ. ದೀಪಾವಳಿಗೆ ಮಾತ್ರ ನಿಷೇಧಿಸುವುದರಿಂದ ದೀಪಾವಳಿಯನ್ನು ಆಚರಿಸುವ ಹಿಂದೂ ಸಮುದಾಯಕ್ಕೆ ಬೇಸರವಾಗುತ್ತದೆ ಎಂದೂ ಹೇಳಿವೆ. ಆದರೆ ರಾಜ್ಯ ಸರಕಾರ ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವ ಸಲುವಾಗಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ಮಾಲಿನ್ಯ ಹಾಗೂ ಕೊರೊನಾ ಸೋಂಕು ತಡೆಯುವಲ್ಲಿ ಸರಕಾರದ ನಿರ್ಧಾರ ಸಮರ್ಥನೀಯವಾಗಿದ್ದರೂ ಪಟಾಕಿ ಆಶ್ರಯಿತ ಪರೋಕ್ಷ ಉದ್ಯಮವನ್ನು ಗೊಂದಲಕ್ಕೆ ಸಿಲುಕಿಸಿರುವುದು ಸ್ಪಷ್ಟ.

ಪಟಾಕಿ ನಿಷೇಧ ಸರಿಯೇ ಅಥವಾ ತಪ್ಪೇ ಎನ್ನುವುದರ ಕುರಿತು ಸದ್ಯ ಚರ್ಚೆ ಆರಂಭವಾಗಿದೆ. ನಿಜವಾದ ಚರ್ಚೆ ನಡೆಯಬೇಕಾದದ್ದು ಸರಕಾರದ ದಿಢೀರ್‌ ನಿರ್ಧಾರದ ಬಗ್ಗೆ. ಹಬ್ಬಕ್ಕೆ ಕೇವಲ ಹತ್ತು ದಿನಗಳಿರುವಾಗ ಇಂಥದೊಂದು ತೀರ್ಮಾನ ಪ್ರಕಟಿಸಿದರೆ ಇದನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಶ್ರಯಿಸಿರು ವವರಿಗೆ ಬೀಳುವ ಹೊಡೆತ ಸಣ್ಣದಲ್ಲ.

ವಿಶ್ವದಲ್ಲೇ ಅತೀ ಹೆಚ್ಚು ಪಟಾಕಿಯನ್ನು ತಯಾರಿಸುವ ಎರಡನೇ ದೇಶ ಭಾರತ. ತಮಿಳುನಾಡಿನ ಶಿವಕಾಶಿ ಹಾಗೂ ವಿರುಧ್‌ ನಗರದಲ್ಲಿ ದೇಶಕ್ಕೆ ಬೇಕಾದ ಶೇ. 80 ರಷ್ಟು ಪಟಾಕಿಗಳನ್ನು ತಯಾರಿಸಲಾಗುತ್ತಿದೆ. ವಾರ್ಷಿಕ 3 ರಿಂದ 6 ಸಾವಿರ ಕೋಟಿ ರೂ. ಗಳ ವಹಿವಾಟು ನಡೆಯುತ್ತದೆ. ಸುಮಾರು ಐದು ಲಕ್ಷ ಕುಟುಂಬಗಳು ಈ ಉದ್ದಿಮೆಯನ್ನು ನೇರವಾಗಿ ಹಾಗೂ ಪರೋಕ್ಷವಾಗಿ ನಂಬಿ ಕುಳಿತಿವೆ. ಕೆಲವು ವರ್ಷಗಳಿಂದೀಚೆಗೆ ಪಟಾಕಿ ಉದ್ದಿಮೆ ಸಾಕಷ್ಟು ನಷ್ಟ ಅನುಭವಿಸಿತ್ತು. ಚೀನದಿಂದ ಆಮದಾಗುತ್ತಿದ್ದ ಪಟಾಕಿಗಳೂ ಇದಕ್ಕೆ ಕಾರಣವಾಗಿದ್ದವು. ಈ ವರ್ಷ ಚೀನ ಪಟಾಕಿ ಆಮದು ಮಾಡಿಸಿಕೊಳ್ಳುವಂತಿಲ್ಲ. ಹಾಗಾಗಿ ದೇಶಿ ಪಟಾಕಿ ಉದ್ಯಮದಲ್ಲಿ ಹೊಸ ನಿರೀಕ್ಷೆ ಹುಟ್ಟಿತ್ತು. ಕೈಗಾರಿಕೆಯ ಕಷ್ಟ ಇದಾದರೆ, ಹಬ್ಬಕ್ಕೆಂದು ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಸಾವಿರಾರು ಮಂದಿ ವ್ಯಾಪಾರಸ್ಥರು ಈಗಾಗಲೇ ಮುಂಗಡ ಹಣ ನೀಡಿ ಪಟಾಕಿ ಕಾದಿರಿಸಿದ್ದಾರೆ. ಒಂದೆರಡು ದಿನಗಳಲ್ಲಿ ಪಟಾಕಿಯನ್ನು ಸ್ವೀಕರಿಸಬೇಕು ಎನ್ನುತ್ತಿರುವಾಗ ರಾಜ್ಯ ಸರಕಾರ ದಿಢೀರ್‌ ನಿಷೇಧಿಸಿರುವುದು ಈ ವ್ಯಾಪಾರಸ್ಥರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹಲವು ಉದ್ಯಮಗಳು ನೇರವಾಗಿ ನಮ್ಮ ರಾಜ್ಯಕ್ಕೆ ಸಂಬಂಧಿಸಿ ರುವುದಿಲ್ಲ, ಆದರೆ ಅವುಗಳ ಗ್ರಾಹಕರು ಇರುತ್ತಾರೆ. ಪರೋಕ್ಷ ಉದ್ಯಮಗಳು (ವ್ಯಾಪಾ ರಸ್ಥರು ಇತ್ಯಾದಿ) ಇವರನ್ನು ಆಶ್ರಯಿಸಿರುತ್ತಾರೆ. ಇವರೆಲ್ಲರೂ ಸ್ಥಳೀಯ ಆರ್ಥಿ ಕತೆಯ ಕೊಂಡಿಗಳು. ಇವುಗಳ ಮೇಲಾಗುವ ಪರಿಣಾಮವನ್ನೂ ಗಮನ ದಲ್ಲಿಟ್ಟು ಕೊಂಡು ಸಾಕಷ್ಟು ಮೊದಲೇ ಸರಕಾರ ಇಂಥ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕಾದುದು ಅಗತ್ಯ. ಆಗ ಸ್ಥಳೀಯ ಉದ್ಯಮ, ಉದ್ಯಮಿಗಳಿಗೆ ಆಗುವ ನಷ್ಟವನ್ನು ತಡೆಯಬಹುದು. ಅದೂ ಆಡಳಿತ ನಡೆಸುವವರ ಆದ್ಯ ಕರ್ತವ್ಯ.

ಈ ದೀಪಾವಳಿಯಲ್ಲಿ ಪಟಾಕಿ ಬಳಸದಂತೆ ಸೂಚಿಸಿದ ರಾಜ್ಯಗಳ ಸಾಲಿಗೆ ಕರ್ನಾಟಕವೂ ಸೇರಿದೆ. ರಾಜಸ್ಥಾನ, ದಿಲ್ಲಿ, ಸಿಕ್ಕಿಂ, ಒಡಿಶಾ, ಚಂಡೀಗಢ, ಪಶ್ಚಿಮ ಬಂಗಾಲದಲ್ಲಿ ಈಗಾಗಲೇ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಮುಂಬಯಿ ನಗರ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಬಳಕೆ ಯನ್ನು ನಿಷೇಧಿಸಿದೆ. ಕರ್ನಾಟಕ, ತಮಿಳುನಾಡು, ಪಂಜಾಬ್‌, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಪಟಾಕಿ ಯಾಕೆ ನಿಷೇಧಿಸಬಾರದು ಎಂದು ಪ್ರಶ್ನಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ವಿವರಣೆ ಕೋರಿ ನೋಟಿಸ್‌ ಜಾರಿಗೊಳಿಸಿದೆ. ದಿಲ್ಲಿ ಮತ್ತು ಸುತ್ತಲಿನ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಯು ಮಾಲಿನ್ಯ ತಡೆಯುವಲ್ಲಿ ಪಟಾಕಿ ನಿಷೇಧ ಸಹಕಾರಿ ಯಾದೀತೆಂಬುದು ಪೀಠದ ಲೆಕ್ಕಾಚಾರ. ನ. 9 ರಂದು ತನ್ನ ತೀರ್ಮಾನವನ್ನು ಪ್ರಕಟಿಸುವ ಸಾಧ್ಯತೆ ಇದೆ.

ರಾಜ್ಯ ಸರಕಾರದ ನಿರ್ಧಾರಕ್ಕೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಪಟಾಕಿಯನ್ನು ನಿಷೇಧಿಸುವುದಾದರೆ ಸಂಪೂರ್ಣ ನಿಷೇಧಿಸಿ. ದೀಪಾವಳಿಗೆ ಮಾತ್ರ ನಿಷೇಧಿಸುವುದರಿಂದ ದೀಪಾವಳಿಯನ್ನು ಆಚರಿಸುವ ಹಿಂದೂ ಸಮುದಾಯಕ್ಕೆ ಬೇಸರವಾಗುತ್ತದೆ ಎಂದೂ ಹೇಳಿವೆ. ಆದರೆ ರಾಜ್ಯ ಸರಕಾರ ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವ ಸಲುವಾಗಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ಮಾಲಿನ್ಯ ಹಾಗೂ ಕೊರೊನಾ ಸೋಂಕು ತಡೆಯುವಲ್ಲಿ ಸರಕಾರದ ನಿರ್ಧಾರ ಸಮರ್ಥನೀಯವಾಗಿದ್ದರೂ ಪಟಾಕಿ ಆಶ್ರಯಿತ ಪರೋಕ್ಷ ಉದ್ಯಮವನ್ನು ಗೊಂದಲಕ್ಕೆ ಸಿಲುಕಿಸಿರುವುದು ಸ್ಪಷ್ಟ.

ಪಟಾಕಿ ನಿಷೇಧ ಸರಿಯೇ ಅಥವಾ ತಪ್ಪೇ ಎನ್ನುವುದರ ಕುರಿತು ಸದ್ಯ ಚರ್ಚೆ ಆರಂಭವಾಗಿದೆ. ನಿಜವಾದ ಚರ್ಚೆ ನಡೆಯಬೇಕಾದದ್ದು ಸರಕಾರದ ದಿಢೀರ್‌ ನಿರ್ಧಾರದ ಬಗ್ಗೆ. ಹಬ್ಬಕ್ಕೆ ಕೇವಲ ಹತ್ತು ದಿನಗಳಿರುವಾಗ ಇಂಥದೊಂದು ತೀರ್ಮಾನ ಪ್ರಕಟಿಸಿದರೆ ಇದನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಶ್ರಯಿಸಿರು ವವರಿಗೆ ಬೀಳುವ ಹೊಡೆತ ಸಣ್ಣದಲ್ಲ.

ವಿಶ್ವದಲ್ಲೇ ಅತೀ ಹೆಚ್ಚು ಪಟಾಕಿಯನ್ನು ತಯಾರಿಸುವ ಎರಡನೇ ದೇಶ ಭಾರತ. ತಮಿಳುನಾಡಿನ ಶಿವಕಾಶಿ ಹಾಗೂ ವಿರುಧ್‌ ನಗರದಲ್ಲಿ ದೇಶಕ್ಕೆ ಬೇಕಾದ ಶೇ. 80 ರಷ್ಟು ಪಟಾಕಿಗಳನ್ನು ತಯಾರಿಸಲಾಗುತ್ತಿದೆ. ವಾರ್ಷಿಕ 3 ರಿಂದ 6 ಸಾವಿರ ಕೋಟಿ ರೂ. ಗಳ ವಹಿವಾಟು ನಡೆಯುತ್ತದೆ. ಸುಮಾರು ಐದು ಲಕ್ಷ ಕುಟುಂಬಗಳು ಈ ಉದ್ದಿಮೆಯನ್ನು ನೇರವಾಗಿ ಹಾಗೂ ಪರೋಕ್ಷವಾಗಿ ನಂಬಿ ಕುಳಿತಿವೆ. ಕೆಲವು ವರ್ಷಗಳಿಂದೀಚೆಗೆ ಪಟಾಕಿ ಉದ್ದಿಮೆ ಸಾಕಷ್ಟು ನಷ್ಟ ಅನುಭವಿಸಿತ್ತು. ಚೀನದಿಂದ ಆಮದಾಗುತ್ತಿದ್ದ ಪಟಾಕಿಗಳೂ ಇದಕ್ಕೆ ಕಾರಣವಾಗಿದ್ದವು. ಈ ವರ್ಷ ಚೀನ ಪಟಾಕಿ ಆಮದು ಮಾಡಿಸಿಕೊಳ್ಳುವಂತಿಲ್ಲ. ಹಾಗಾಗಿ ದೇಶಿ ಪಟಾಕಿ ಉದ್ಯಮದಲ್ಲಿ ಹೊಸ ನಿರೀಕ್ಷೆ ಹುಟ್ಟಿತ್ತು. ಕೈಗಾರಿಕೆಯ ಕಷ್ಟ ಇದಾದರೆ, ಹಬ್ಬಕ್ಕೆಂದು ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಸಾವಿರಾರು ಮಂದಿ ವ್ಯಾಪಾರಸ್ಥರು ಈಗಾಗಲೇ ಮುಂಗಡ ಹಣ ನೀಡಿ ಪಟಾಕಿ ಕಾದಿರಿಸಿದ್ದಾರೆ. ಒಂದೆರಡು ದಿನಗಳಲ್ಲಿ ಪಟಾಕಿಯನ್ನು ಸ್ವೀಕರಿಸಬೇಕು ಎನ್ನುತ್ತಿರುವಾಗ ರಾಜ್ಯ ಸರಕಾರ ದಿಢೀರ್‌ ನಿಷೇಧಿಸಿರುವುದು ಈ ವ್ಯಾಪಾರಸ್ಥರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹಲವು ಉದ್ಯಮಗಳು ನೇರವಾಗಿ ನಮ್ಮ ರಾಜ್ಯಕ್ಕೆ ಸಂಬಂಧಿಸಿ ರುವುದಿಲ್ಲ, ಆದರೆ ಅವುಗಳ ಗ್ರಾಹಕರು ಇರುತ್ತಾರೆ. ಪರೋಕ್ಷ ಉದ್ಯಮಗಳು (ವ್ಯಾಪಾ ರಸ್ಥರು ಇತ್ಯಾದಿ) ಇವರನ್ನು ಆಶ್ರಯಿಸಿರುತ್ತಾರೆ. ಇವರೆಲ್ಲರೂ ಸ್ಥಳೀಯ ಆರ್ಥಿ ಕತೆಯ ಕೊಂಡಿಗಳು. ಇವುಗಳ ಮೇಲಾಗುವ ಪರಿಣಾಮವನ್ನೂ ಗಮನ ದಲ್ಲಿಟ್ಟು ಕೊಂಡು ಸಾಕಷ್ಟು ಮೊದಲೇ ಸರಕಾರ ಇಂಥ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕಾದುದು ಅಗತ್ಯ. ಆಗ ಸ್ಥಳೀಯ ಉದ್ಯಮ, ಉದ್ಯಮಿಗಳಿಗೆ ಆಗುವ ನಷ್ಟವನ್ನು ತಡೆಯಬಹುದು. ಅದೂ ಆಡಳಿತ ನಡೆಸುವವರ ಆದ್ಯ ಕರ್ತವ್ಯ.

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ವಿದ್ಯಾರ್ಹತೆಗೆ ದೇಶವ್ಯಾಪಿ ಮಾನ್ಯತೆ, ಹೈಕೋರ್ಟ್‌ ತೀರ್ಪು ನ್ಯಾಯೋಚಿತ

13-editorial

Temperature: ಸಂಪಾದಕೀಯ-ತಾಪಮಾನ ಹೆಚ್ಚಳದ ಆತಂಕ: ಮುಂಜಾಗ್ರತೆಯೇ ಮದ್ದು

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

vidhana-Soudha

Editorial: ಪ್ರಾಥಮಿಕ ಶಾಲಾ ಶಿಕ್ಷಕರ ಪಠ್ಯೇತರ ಹೊರೆ ಇಳಿಸಿ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.