ಚಾಮುಂಡೇಶ್ವರಿ ಷುಗರ್ ಕಾರ್ಯಾರಂಭ
5 ವರ್ಷ ಬಳಿಕಕಬ್ಬು ಅರೆಯಲು ಮುಂದಾದಕಾರ್ಖಾನೆ ,ಶಾಸಕ ಬಾಲಕೃಷ್ಣರಿಂದ ಚಾಲನೆ
Team Udayavani, Nov 7, 2020, 4:16 PM IST
ಚನ್ನರಾಯಪಟ್ಟಣ ತಾಲೂಕು ಶ್ರೀನಿವಾಸಪುರ ಬಳಿಯ ಚಾಮುಂಡೇಶ್ವರಿ ಷುಗರ್ಕಾರ್ಖಾನೆಗೆ ರೈತರು ಎತ್ತಿನಗಾಡಿಯಲ್ಲಿಕಬ್ಬು ತಂದಿದ್ದರು.
ಚನ್ನರಾಯಪಟ್ಟಣ: ಜಿಲ್ಲೆಯ ಕಬ್ಬು ಬೆಳೆಗಾರರ ಜೀವನಾಡಿಯಾಗಿರುವ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ (ಚಾಮುಂಡೇಶ್ವರಿ ಷುಗರ್) ಐದು ವರ್ಷದ ಬಳಿಕ ಕಬ್ಬು ಅರೆಯುವಿಕೆಗೆ ಮುಂದಾಗಿದ್ದು, ಬೆಳೆಗಾರರ ಪಾಲಿಗೆ ಸಹಿ ಸುದ್ದಿ ಆಗಿದೆ.
ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಕರಾರಿಗೆ ಪಡೆದ ಚಾಮುಂಡೇಶ್ವರಿ ಶುಗರ್ ಮೂರು ವರ್ಷದಲ್ಲಿ ಕಾರ್ಖಾನೆ ಮೇಲ್ದರ್ಜೆಗೆ ಏರಿಸಿ ಕಬ್ಬು ಬಳೆಗಾರಿಗೆ ಅನುಕೂಲ ಮಾಡಿಕೊಡುವುದಾಗಿ 2007ರ ಕಾರಾರು ಪತ್ರದಲ್ಲಿ ತಿಳಿಸಿತ್ತು. ಆದರೆ, ಕಾರಾರಿನ ಪ್ರಕಾರ ನಡೆದ ಚಾಮುಂಡೇಶ್ವರಿ ಸಂಸ್ಥೆ, ಕಾರ್ಖಾನೆಯನ್ನು ಒಂದು ದಶಕದ ಬಳಿಕೆ ಮೇಲ್ದರ್ಜೆಗೆ ಏರಿಸಿ ಕಬ್ಬು ಅರೆಯುವಿಕೆ ಪ್ರಾರಂಭಿಸಿದ್ದು,ಕಬ್ಬು ಬೆಳೆಗಾರರ ಸಂತಸ ಮುಗಿಲು ಮುಟ್ಟುತ್ತಿದೆ.
ಕಾರ್ಖಾನೆ ವ್ಯಾಪ್ತಿ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ, ಅರಸೀಕರೆ, ಆಲೂರು, ಹೊಳೆನರಸೀಪುರ, ಅರಸೀಕೆರೆ, ಬೇಲೂರು, ಹಾಸನ ತಾಲೂಕು ವ್ಯಾಪ್ತಿಯ ರೈತ ರಲ್ಲದೆ, ತುಮಕೂರು ಜಿಲ್ಲೆಯ ತುರುವೇಕೆರೆ, ತಿಪಟೂರು ತಾಲೂಕು, ಮಂಡ್ಯ ಜಿಲ್ಲೆಯ ನಾಗಮಂಗಲ, ಕೆ.ಆರ್.ಪೇಟೆ ಕೆಲ ಹೋಬಳಿ ವ್ಯಾಪ್ತಿಯ ರೈತರಲ್ಲದೆ,ಕೊಡುಗು ಜಿಲ್ಲೆಯಕುಶಾಲ ನಗರ, ಶನಿವಾರಸಂತೆ, ಕೊಡ್ಲಿಪೇಟೆ ವ್ಯಾಪ್ತಿ ಕಬ್ಬು ಬೆಳೆಗಾರರು ತಾಲೂಕಿನ ಶ್ರೀನಿವಾಸಪುರದಲ್ಲಿನ ಚಾಮುಂ ಡೇಶ್ವರಿ ಶುಗರ್ ಕಾರ್ಖಾನೆಗೆಕಬ್ಬು ಸರಬರಾಜು ಮಾಡಬಹುದಾಗಿದೆ.
ಅಗತ್ಯವಿರುವಷ್ಟು ಕಬ್ಬಿಲ್ಲ: ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಲೀಜಿಗೆ ಪಡೆದ ಚಾಮುಂಡೇಶ್ವರಿ ಸಂಸ್ಥೆಯ ಎಂಡಿ ಶ್ರೀನಿವಾಸ್ 200 ಕೋಟಿ ರೂ. ವೆಚ್ಚ ಮಾಡಿಕಾರ್ಖಾನೆ ಉನ್ನತೀಕರಣ ಮಾಡಿದ್ದಾರೆ, ಪ್ರತಿ ನಿತ್ಯ 3500ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದ್ದು, ವಾರ್ಷಿಕಎಂಟು ಲಕ್ಷ ಟನ್ ಕಬ್ಬು ಅರೆಯುವಷ್ಟು ಉನ್ನತೀಕರಣಮಾಡಲಾಗಿದೆ. ಆದರೆ, ಒಂದು ದಶಕದಿಂದ ಬೇಸತ್ತಿರುವ ಕಬ್ಬು ಬಳೆಗಾರರು ಬೆಳೆಯಿಂದ ಹೊರ ಬಂದು ಶುಂಠಿಹಾಗೂ ಮೆಕ್ಕಜೋಳ ಬೆಳೆಯುತ್ತಿದ್ದಾರೆ. ಅರೆಯುವಿಕೆಗೆ ಅಗತ್ಯ ಇರುವಷ್ಟು ಕಬ್ಬು ಕಾರ್ಖಾನೆ ವ್ಯಾಪ್ತಿಯಲ್ಲಿ ಇಲ್ಲದಂತಾಗಿದೆ.
ಮಂಡ್ಯಕ್ಕೆ ರವಾನೆ ಆಗುತ್ತಿದ್ದ ಕಬ್ಬು: 2015ರಲ್ಲಿ ಕಬ್ಬು ಅರೆಯುವಿಕೆ ಸ್ಥಗಿತ ಮಾಡಿದ್ದ ಚಾಮುಂಡೇಶ್ವರಿ ಸಂಸ್ಥೆ ಇಲ್ಲಿ ಕಟಾವಿಗೆ ಬಂದಿದ್ದ ಕಬ್ಬನ್ನು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಮಾಕವಳ್ಳಿಯ ಐಸಿಎಲ್, ಮದ್ದೂರು ತಾಲೂಕು ಕೊಪ್ಪ ಎನ್‌ಎಸ್‌ಎಲ್ ಕಾರ್ಖಾನೆ, ಕೆಎಂ.ದೊಡ್ಡಿ ಚಾಮುಂಡೇಶ್ವರಿ ಶುಗರ್ ಕಾರ್ಖಾನೆಗೆ ಕಬ್ಬು ರವಾನೆ ಮಾಡಿ, ಹಣವನ್ನು ರೈತರಿಗೆ ನೀಡಿತ್ತು. ಆದರೆ, ಎಲ್ಲಾ ರೈತರು ಇದರಲಾಭ ಪಡೆಯಲಾಗದೆ, ಹಲವು ಮಂದಿ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿದ್ದರು.
ಲೀಜ್ ಹಣ ಯಾವಾಗ?: ಸಹಕಾರ ಸೌಮ್ಯದಲ್ಲಿದ್ದ ಸಕ್ಕರೆ ಕಾರ್ಖಾನೆಯನ್ನು ಲೀಜ್‌ಗೆ ಪಡೆದ ಒಂದು ದಶಕದ ಬಳಿಕ ಕಾರ್ಖಾನೆ ಉನ್ನತೀಕರಣ ವಾಗಿದೆ. ಆದರೆ, ಈವರೆಗೆ 21 ಕೋಟಿರೂ. ಲೀಜ್ ಹಣ ಬಾಕಿ ಉಳಿಸಿಕೊಂಡಿದೆ. ಬಡ್ಡಿ ಸಮೇತಹಣವನ್ನು ಎಚ್‌ಎಸ್‌ಎಸ್‌ಕೆ ಆಡಳಿತ ಮಂಡಳಿಗೆನೀಡಬೇಕಾಗಿದೆ. ಈ ಹಣ ಯಾವಾಗ ನೀಡುತ್ತಾರೆ ಎನ್ನುವು ದನ್ನು ಷೇರುದಾರರು ಪ್ರಶ್ನಿಸುತ್ತಿದ್ದಾರೆ.
ಕೇಂದ್ರ ನಿಗದಿಪಡಿಸಿದ ದರ ಕೊಡಿಸುತ್ತೇನೆ: ಶಾಸಕಬಾಲಕೃಷ್ಣ ಕಬ್ಬು ಬೆಳೆಗಾರರು ಒಂದು ತಿಂಗಳುಕಾರ್ಖಾನೆಗೆಕಬ್ಬು ಸರಬರಾಜು ಮಾಡಿ ನಂತರಕೇಂದ್ರ ಸರ್ಕಾರ ನಿಗದಿ ಮಾಡಿರುವ ದರದಲ್ಲಿ ಹಣ ಕೊಡಿಸುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ,ಕಾರ್ಖಾನೆ ಉನ್ನತೀಕರಣದ ಮೊದಲು ವರ್ಷ ಕಳೆದರೂ ಕಬ್ಬುಕಾರ್ಖಾನೆಗೆ ರವಾನೆ ಆಗುತ್ತಿರಲಿಲ್ಲ. ಆದರೆ, ಈಗ12 ತಿಂಗಳಿಗೆ ಸರಿಯಾಗಿ ಕಬ್ಬು ಅರೆಯಲು ಪರವಾನಗಿ ನೀಡಲಾಗುವುದು ಎಂದು ಶಾಸಕ ಬಾಲಕೃಷ್ಣ ಭರವಸೆ ನೀಡಿದರು. ಕಾರ್ಖಾನೆ ಪ್ರಾರಂಭ ಆಗಿರುವುದರಿಂದ ಚಾಮುಂಡೇಶ್ವರಿ ಶುಗರ್ ಸಂಸ್ಥೆ ಸಿಬ್ಬಂದಿ ಕಬ್ಬುಕಟಾವು ಮಾಡುವಕೂಲಿ ಕಾರ್ಮಿಕರಕೊರತೆ ಆಗದಂತೆ ನೊಡಿಕೊಳ್ಳಬೇಕು, ರೈತರುಕಬ್ಬು ಸರಬರಾಜು ಮಾಡಲು ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು, ಪ್ರಸಕ್ತ ವರ್ಷ ಬಿತ್ತನೆಕಬ್ಬು ನೀಡಿ, ನಂತರಕಟಾವು ಮಾಡಿ ಕಾರ್ಖಾನೆಗೆ ನೀಡಿದಾಗ ಬಿತ್ತನೆಕಬ್ಬಿನ ಹಣ ಪಡೆದು ಉಳಿಕೆ ಹಣವನ್ನು ರೈತರ ಖಾತೆಗೆ ಜಮಾ ಮಾಡಿ ಎಂದು ಸಲಹೆ ನೀಡಿದರು.
21 ಮೆಗಾವ್ಯಾಟ್ ವಿದ್ಯುತ್ : ಸಕ್ಕರೆಕಾರ್ಖಾನೆಯು21 ಮೆಗಾವ್ಯಾಟ್ ವಿದ್ಯುತ್ ಅನ್ನು ಉತ್ಪತ್ತಿ ಮಾಡುತ್ತಿದೆ.3 ಮೆಗಾವ್ಯಾಟ್‌ಕಾರ್ಖಾನೆ ಬಳಕೆ ಮಾಡಿಕೊಂಡು, ಉಳಿದ18 ಮೆಗಾವ್ಯಾಟ್ ವಿದ್ಯುತ್‌ಕೆಪಿಟಿಸಿಎಲ್‌ಗೆ ನೀಡಲಾಗುತ್ತಿದೆ.ಕೆಲ ತಿಂಗಳ ಹಿಂದೆ ಡಸ್ಟ್‌ಕ್ಯಾಪcರ್ ಸ್ಫೋಟಗೊಂಡಿತ್ತು. ಮೂರುಕೋಟಿ ರೂ. ವೆಚ್ಚ ಮಾಡಿ ಎರಡುಡಸ್ಟ್‌ಕ್ಯಾಪcರ್ ಹೆಚ್ಚುವರಿಯಾಗಿ ಮಾಡುವ ಮೂಲಕ ಮುಂದೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಶಾಸಕ ಬಾಲಕೃಷ್ಣ ಹೇಳಿದರು
ಕಾರ್ಖಾನೆ ವ್ಯಾಪ್ತಿಯಲ್ಲಿ ರೈತರಿಗೆ ಬಿತ್ತನೆಕಬ್ಬು ನೀಡುವ ಮೂಲಕ ಹೆಚ್ಚು ಮಂದಿ ಕಬ್ಬು ಬೆಳೆಯುವಂತೆ ಮಾಡಬೇಕಾಗಿದೆ, ಮೊದಲು ನಾಲಾ ಪ್ರದೇಶದಲ್ಲಿ ರೈತರ ಮನವೊಲಿಸಿ ಕಬ್ಬು ಬೆಳೆಯುವಂತೆ ಮಾಡುವುದುಕಾರ್ಖಾನೆ ಸಿಬ್ಬಂದಿ ಜವಾಬ್ದಾರಿಯಾಗಿದೆ. –ಸಿ.ಎನ್.ಬಾಲಕೃಷ್ಣ, ಶಾಸಕ, ಶ್ರವಣಬೆಳಗೊಳ ಕ್ಷೇತ್ರ.
ಕಾರ್ಖಾನೆಕಬ್ಬು ಅರೆಯುವಿಕೆ ಸ್ವಲ್ಪ ವಿಳಂಬವಾಗಿದೆ, ಹಲವು ಮಂದಿ ಇದನ್ನು ರಾಜಕೀಯ ವೇದಿಕೆ ಮಾಡಿಕೊಂಡಿದ್ದರು. ಇಂದಿನಿಂದ ನಿರಂತರವಾಗಿ ಕಾರ್ಖಾನೆಕಬ್ಬು ಅರೆಯಲಾಗುತ್ತದೆ, ರೈತರು ಹೆಚ್ಚುಕಬ್ಬು ಬೆಳೆಯಲು ಮುಂದಾಗಬೇಕು. –ವೆಂಕಟೇಶ್, ಅಧ್ಯಕ್ಷರು, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ.
2007ರಂದು ಹೇಮಾವತಿ ಸಕ್ಕರೆಕಾರ್ಖಾನೆ ಖಾಸಗಿ ಪಾಲಾಯಿತು. ಅವರು ಮೂರು ವರ್ಷದಲ್ಲಿ ಉನ್ನತೀಕರಣ ಮಾಡುವುದಾಗಿ ಹೇಳಿ 13 ವರ್ಷ ತೆಗೆದುಕೊಂಡಿದ್ದಾರೆ. ಐದು ವರ್ಷದ ಬಳಿಕೆ ಕಾರ್ಖಾನೆ ಕಬ್ಬು ಅರೆಯುತ್ತಿರುವುದು ಸಂತಸ ತಂದಿದೆ. ಇತರ ಬೆಳೆಗೆ ಗುಡ್‌ಬೈಯ್ ಹೇಳಿ ಕಬ್ಬು ಬಳೆಯಲು ಮುಂದಾಗುತ್ತೇವೆ. –ಮಂಜು, ರೈತ, ನಲ್ಲೂರು ಗ್ರಾಮ.
-ಶಾಮಸುಂದರ್ ಕೆ.ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.