ವಿದ್ಯುತ್ ದರ ಏರಿಕೆ ಖಂಡಿಸಿ ಪ್ರತಿಭಟನೆ
Team Udayavani, Nov 7, 2020, 4:36 PM IST
ತುಮಕೂರು: ಇಡೀ ವಿಶ್ವವೇ ಸಂಕಷ್ಟ ಪಡುವ ರೀತಿಯಲ್ಲಿ ಕೋವಿಡ್ ಮಹಾಮಾರಿ ಜನರನ್ನು ಕಾಡುತ್ತಿದ್ದು ರಾಜ್ಯದ ಜನರ ಬದುಕಿಗೆ ಕೋವಿಡ್ ತೀವ್ರ ಸಂಕಷ್ಟ ತಂದಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿದ್ಯುತ್ ಬಿಲ್ ಏರಿಕೆ ಮಾಡುವ ಮೂಲಕ ಜನರ ಸಂಕಷ್ಟವನ್ನೂ ಹೆಚ್ಚಿಸಿದೆ ಎಂದು ಸಿಪಿಐಎಂ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರದ ವಿರುದ್ಧ ಕಿಡಿ:ನಗರದ ಜೆ.ಸಿ. ರಸೆಯಲ್ಲಿ ಸಮಾವೇಶಗೊಂಡ ಸಿಪಿಐಎಂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿವಿದ್ಯುತ್ ದರ ಏರಿಕೆ ಖಂಡಿಸಿ ಧಿಕ್ಕಾರಕೂಗಿದರು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಕೋವಿಡ್ ದಿಂದ ತಮ್ಮ ಉದ್ಯೋಗ, ಗಳಿಕೆ ಕಳೆದುಕೊಂಡುಜನತೆ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ, ಉಪಚುನಾವಣೆ ಬೆನ್ನಲ್ಲೇ ವಿದ್ಯುತ್ ದರ ಹೆಚ್ಚಳ ಮಾಡಿರುವುದುಜನವಿರೋಧಿಕ್ರಮ.ರಾಜ್ಯದಬಿಜೆಪಿ ಸರ್ಕಾರ ಜನತೆ ಸಂಕಷ್ಟಗಳನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದು ಅಪಾದಿಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎನ್. ಕೆ.ಸುಬ್ರಹ್ಮಣ್ಯ ಮಾತನಾಡಿ, ಜನತೆ ಸಂಕಟ ಕಡಿಮೆ ಮಾಡಲು ಕೆಲಸ ಮಾಡಬೇಕಾದ ಸರ್ಕಾರ ಶ್ರೀಮಂತರ ಪರವಾದ ಕೆಲಸದಲ್ಲಿ ತೊಡಗಿದೆ. ಈ ಕೂಡಲೇ ಸರ್ಕಾರ ವಿದ್ಯುತ್ ದರ ಹೆಚ್ಚಳ ಹಿಂದಕ್ಕೆ ಪಡೆಯಬೇಕೆಂದರು. ಸಿಪಿಐಎಂ ರಾಜ್ಯ ಸಮಿತಿ ಸದಸ್ಯರಾದ ಸೈಯದ್ ಮುಜೀಬ್ ಮಾತನಾಡಿ, ಬಡವರಿಗೆ ವಿದ್ಯುತ್ ಸಿಗದಂತೆ ವಿದ್ಯುತ್‌ಕಾಯಿದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು ಜನತೆ ದುಡ್ಡಿನಲ್ಲಿ ಕಟ್ಟಲಾದ ಸರ್ಕಾರದ ಒಡೆತನದ ವಿದ್ಯುತ್ ವ್ಯವಸ್ಥೆಯನ್ನು ಖಾಸಗಿ ಬಂಡವಾಳಗಾರರು ಲಾಭಗಳಿಸಲು ಖಾಸಗೀಕರಣಕ್ಕೆ ಮುಂದಾಗಿದೆ. ಇದು ಖಾಸಗೀಕರಣವಾದರೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ರೈತರಿಗೆ ಉಚಿತ ವಿದ್ಯುತ್ ಇಲ್ಲದಂತೆ ಆಗಲಿದೆ ಎಂದು ಹೇಳಿದರು.
ಕಟ್ಟಡ ಕಾರ್ಮಿಕ ಸಂಘದ ಕಲೀಲ್, ಪುಟ್ಪಾತ್ ವ್ಯಾಪಾರಿಗಳ ಸಂಘದ ಜಗದಿಶ್, ರಾಜಶೇಖರ್, ವಾಸಿಮ್, ಟೀ ಮೇಕ್ ಇಂಡಿಯಾ ಪೈ.ಲಿ ಕಾರ್ಮಿಕರ ಸಂಘದ ಉಪಾಧ್ಯಕ್ಷರಾದ ನರಸಿಂಹಮೂರ್ತಿ, ಸಿಪಿಐ ಎಂ ನಗರ ಸಮಿತಿ ಮುಖಂಡರಾದ ಶಂಕರಪ್ಪ, ರವಿನಾಯಕ್, ಟಿ.ಈ. ಮೇಕ್ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.