![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Nov 7, 2020, 6:08 PM IST
ಬೆಂಗಳೂರು: ರಾಜ್ಯದ ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಎಕ್ಸಿಟ್ ಪೋಲ್ ಶನಿವಾರ(ನವೆಂಬರ್ 07, 2020) ಬಹಿರಂಗಗೊಂಡಿದ್ದು, ಶಿರಾ ಮತ್ತು ರಾಜರಾಜೇಶ್ವರಿ ನಗರದಲ್ಲಿ ಈ ಬಾರಿ ಮತದಾರರ ಯಾರ ಕೈಹಿಡಿಯಲಿದ್ದಾರೆ ಎಂಬುದನ್ನು ಸೀ ವೋಟರ್ ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ.
ರಾಜರಾಜೇಶ್ವರಿ ನಗರದಲ್ಲಿ ಮೂರನೇ ಬಾರಿಯೂ ಮುನಿರತ್ನ ಅವರು ಗೆಲುವು ಸಾಧಿಸುವ ಸಾಧ್ಯತೆ ಇದ್ದಿರುವುದಾಗಿ ಸಮೀಕ್ಷೆ ತಿಳಿಸಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಮುನಿರತ್ನಗೆ ಶೇ.37.8ರಷ್ಟು ಮತದ ನಿರೀಕ್ಷೆ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ (ದಿ.ಡಿಕೆ ರವಿ ಪತ್ನಿ)ಗೆ ಶೇ.31.1ರಷ್ಟು, ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿಗೆ ಶೇ.14ರಷ್ಟು ಮತ ಸಾಧ್ಯತೆ ಎಂದು ತಿಳಿಸಿದೆ.
ರಾಜರಾಜೇಶ್ವರಿ ನಗರದಲ್ಲಿ ಇತರರಿಗೆ ಶೇ.17.2ರಷ್ಟು ಮತ ಬೀಳುವ ಸಾಧ್ಯತೆ ಇದೆ ಎಂದು ಸೀ ವೋಟರ್ ಹೇಳಿದೆ.
ಶಿರಾದಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯುವ ನಿರೀಕ್ಷೆ
ಶಿರಾದಲ್ಲಿ ಬಿಜೆಪಿಯ ರಾಜೇಶ್ ಗೌಡ ಜಯ ಸಾಧ್ಯತೆ. ರಾಜೇಶ್ ಗೌಡ ಶೇ.36.6ರಷ್ಟು ಮತಗಳಿಕೆ ಸಾಧ್ಯತೆ. ಕಾಂಗ್ರೆಸ್ ಪಕ್ಷದ ಜಯಚಂದ್ರಗೆ ಶೇ.32ರಷ್ಟು ಮತ ಸಾಧ್ಯತೆ ಇದೆ ಎಂದು ಸೀ ವೋಟರ್ ಚುನಾವಣೋತ್ತರ ಸಮೀಕ್ಷೆಯಲ್ಲಿ ತಿಳಿಸಿದೆ.
ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಗೆ ಶೇ.17.4ರಷ್ಟು ಮತ ಸಿಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ. ಶಿರಾದಲ್ಲಿ ಈ ಬಾರಿ ಗೆಲುವು ನಮ್ಮದೇ ಎಂದು ಮೂರು ಪಕ್ಷಗಳು ಹೇಳಿಕೊಂಡಿದ್ದು, ಫಲಿತಾಂಶ ಕಾದು ನೋಡಬೇಕಾಗಿದೆ.
ತೆರವಾಗಿದ್ದ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 3ರಂದು ಉಪಚುನಾವಣೆ ನಡೆದಿತ್ತು. ನವೆಂಬರ್ 10ರಂದು ಮತಎಣಿಕೆ ನಡೆಯಲಿದ್ದು, ಮತದಾರ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬುದು ಬಹಿರಂಗವಾಗಲಿದೆ.
You seem to have an Ad Blocker on.
To continue reading, please turn it off or whitelist Udayavani.