ಗಣನೀಯ ಮಳೆ; ಪುಟಿದೆದ್ದ ಅಂತರ್ಜಲ
Team Udayavani, Nov 7, 2020, 7:23 PM IST
ದಾವಣಗೆರೆ: ಸಮರ್ಪಕ ಮಳೆ ಬೀಳದೆ ಕೆಲವು ವರ್ಷ ಪಾತಾಳ ಕಂಡಿದ್ದ ಜಿಲ್ಲೆಯ ಅಂತರ್ಜಲ ಮಟ್ಟ, ಈ ವರ್ಷ ಉತ್ತಮ ಮಳೆಯಿಂದಾಗಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.ಹಾಗಾಗಿ ಜಿಲ್ಲೆಯಲ್ಲೀಗ ಜಲ ಸಮೃದ್ಧಿಯಾಗಿದೆ.
ಅಸಮರ್ಪಕ ಮಳೆ ಕಾರಣದಿಂದಾಗಿ ಮೂರು ವರ್ಷಗಳ ಹಿಂದೆ ಅಂದರೆ 2017ರಲ್ಲಿ ಭೂಮಿಯ ಮೇಲಿನ ಬಹುತೇಕ ಜಲಮೂಲಗಳೆಲ್ಲ ಬತ್ತಿ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಹಾಹಾಕಾರ ಏಳುವಂತಾಗಿತ್ತು. ಕುಡಿಯುವ ನೀರು, ಕೃಷಿಗಾಗಿ ಕೆಲವು ಕಡೆಗಳಲ್ಲಿ ಕೊಳವೆಬಾವಿಗಳನ್ನು ಸಾವಿರ ಅಡಿವರೆಗೂ ಕೊರೆಯುವ ಸ್ಥಿತಿ ನಿರ್ಮಾಣವಾಗಿತ್ತು. ಕಳೆದ ಎರಡು ವರ್ಷ ಉತ್ತಮ ಮಳೆಯಾಗುವ ಜತೆಗೆ ಪ್ರಸಕ್ತ ವರ್ಷ ಸಮೃದ್ಧ ಮಳೆಯಾಗಿದ್ದರಿಂದ ಜಲಮೂಲಗಳೆಲ್ಲ ಭರ್ತಿಯಾಗಿ ಅಂತರ್ಜಲ ಮಟ್ಟವೂ ಏರಿಕೆಯಾಗಿದೆ. ಸಂಪೂರ್ಣ ಬತ್ತಿ ಬೆಂಕಿಯಾಗಿದ್ದ ಭೂಮಿ ತಾಯಿಯ ಒಡಲು ತಂಪಾಗಿದ್ದು, ಭೂಮಿತಾಯಿ ಮಕ್ಕಳಾದ ಅನ್ನದಾತರ ಮುಖದಲ್ಲೂ ಮಂದಹಾಸ ಮೂಡಿಸಿದೆ.
ಜಗಳೂರು ತಾಲೂಕಿನಲ್ಲಿ ಈ ಬಾರಿ ಸ್ಥಿರ ಅಂತರ್ಜಲ ಮಟ್ಟ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ.2017ರಲ್ಲಿ ಜಗಳೂರು ತಾಲೂಕಿನಲ್ಲಿಸ್ಥಿರ ಅಂತರ್ಜಲ ಮಟ್ಟ 27.44 ಮೀ ಇತ್ತು. ಪ್ರಸಕ್ತ ವರ್ಷ ಸ್ಥಿರ ಅಂತರ್ಜಲ ಮಟ್ಟ 20.5 ಮೀಗೆ ಏರಿದ್ದು ಅಂತರ್ಜಲ ಮಟ್ಟ ಸರಾಸರಿ ಏಳು ಮೀನಷ್ಟು ಮೇಲಕ್ಕೆ ಬಂದಿದೆ. ದಾವಣಗೆರೆ ತಾಲೂಕಿನಲ್ಲಿ 2017ರಲ್ಲಿ ಸ್ಥಿರ ಅಂತರ್ಜಲ ಮಟ್ಟ 16.59ಇತ್ತು. ಈ ವರ್ಷ ಅದು 13.59 ಮೀ ಗೆ ಏರಿಕೆಯಾಗಿದ್ದು, ಅಂತರ್ಜಲಮಟ್ಟ ಸರಾಸರಿ ಮೂರು ಮೀನಷ್ಟು ಏರಿಕೆಯಾಗಿದೆ.
ಅದೇ ರೀತಿ ಹರಿಹರ ತಾಲೂಕಿನಲ್ಲಿ 2017ರಲ್ಲಿ ಸ್ಥಿರ ಅಂತರ್ಜಲ ಮಟ್ಟ 7.02 ಮೀ ಇತ್ತು. ಪ್ರಸಕ್ತ ವರ್ಷ 2020ರಲ್ಲಿ ಇದು 5.84 ಮೀಗೆ ಏರಿಕೆಯಾಗಿದ್ದು ಅಂತರ್ಜಲ ಮಟ್ಟ ಸರಾಸರಿ 2.5 ಮೀನಷ್ಟು ಮೇಲಕ್ಕೇರಿದೆ. ಚನ್ನಗಿರಿ ತಾಲೂಕಿನಲ್ಲಿ 2017ರಲ್ಲಿ ಸ್ಥಿರ ಅಂತರ್ಜಲ ಮಟ್ಟ 9.70 ಮೀ ಇತ್ತು. ಪ್ರಸಕ್ತ ವರ್ಷ 7.15 ಮೀನಷ್ಟು ಅಂತರ್ಜಲ ಮಟ್ಟ ತಲುಪಿದ್ದು, ಅಂತರ್ಜಲ ಮಟ್ಟ ಸರಾಸರಿ 2.5 ಮೀ ಹೆಚ್ಚಾಗಿದೆ. ಹೊನ್ನಾಳಿ ತಾಲೂಕಿನಲ್ಲಿ 2017ರಲ್ಲಿ ಸ್ಥಿರ ಅಂತರ್ಜಲ ಮಟ್ಟ 8.47 ಮೀ ಇತ್ತು. ಈ ವರ್ಷ 4.33 ಮೀ ತಲುಪಿದ್ದು ಅಂತರ್ಜಲ ಮಟ್ಟ ಸರಾಸರಿ 4.50 ಏರಿಕೆಯಾಗಿದೆ.
ಕಳೆದ ಏಳು ವರ್ಷಗಳಲ್ಲಿ ಜಿಲ್ಲೆಯಲ್ಲಿದ್ದ ಸ್ಥಿರ ಅಂತರ್ಜಲ ಮಟ್ಟವನ್ನು ಗಮನಿಸಿದರೆ 2013ರಲ್ಲಿ ಅಂತರ್ಜಲ ಮಟ್ಟ ಸಾಕಷ್ಟುಮೇಲೆಯೇ ಇತ್ತು. ನಂತರದ ವರ್ಷಗಳಲ್ಲಿ ಮಳೆ ಸರಿಯಾಗಿ ಬೀಳದೆ ಕಡಿಮೆಯಾಗುತ್ತ ಬಂದಿತ್ತು. 2017ರಲ್ಲಂತೂ ತೀರಾ ಕೆಳಗೆ ಇಳಿದಿತ್ತು. ಆಗ ಇಳಿದಿದ್ದ ಅಂತರ್ಜಲ ಮಟ್ಟ ಈ ವರ್ಷ ಏರಿಕೆ ಕಂಡಿದೆ.
ವರ್ಷವಾರು ಸ್ಥಿರ ಅಂತರ್ಜಲ ಮಟ್ಟ: ದಾವಣಗೆರೆ ತಾಲೂಕಿನಲ್ಲಿ ಸ್ಥಿರ ಅಂತರ್ಜಲ ಮಟ್ಟ 2013ರಲ್ಲಿ 11.99 ಮೀ, 2014ರಲ್ಲಿ 11.53 ಮೀ,2015ರಲ್ಲಿ 11.32 ಮೀ, 2016 ರಲ್ಲಿ 13.02 ಮೀ, 2017ರಲ್ಲಿ 16.59 ಮೀ, 2018ರಲ್ಲಿ 15.60 ಮೀ, 2019ರಲ್ಲಿ 17.13 ಮೀ ಇತ್ತು. 2020ರಲ್ಲಿ 13.59 ಮೀ ಆಗಿದೆ. ಹರಿಹರ ತಾಲೂಕಿನಲ್ಲಿ ಸ್ಥಿರ ಅಂತರ್ಜಲ ಮಟ್ಟ 2013 ರಲ್ಲಿ6.59 ಮೀ, 2014 ರಲ್ಲಿ 4.15 ಮೀ, 2015 ರಲ್ಲಿ 3.11 ಮೀ, 2016ರಲ್ಲಿ 4.59 ಮೀ, 2017ರಲ್ಲಿ 7.02 ಮೀ, 2018ರಲ್ಲಿ 5.17 ಮೀ, 2019ರಲ್ಲಿ
5.60 ಮೀ ಇತ್ತು. ಈ ಬಾರಿ 5.84
ಮೀಗೆ ಅಂತರ್ಜಲ ಮಟ್ಟ ಏರಿದೆ. ಚನ್ನಗಿರಿ ತಾಲೂಕಿನಲ್ಲಿ ಸ್ಥಿರ ಅಂತರ್ಜಲ ಮಟ್ಟ 2013ರಲ್ಲಿ 9.23 ಮೀ, 2014ರಲ್ಲಿ 7.56 ಮೀ, 2015ರಲ್ಲಿ 6.65 ಮೀ, 2016ರಲ್ಲಿ 7.74 ಮೀ, 2018ರಲ್ಲಿ 8.87 ಮೀ, 2019ರಲ್ಲಿ 8.87ಮೀ ಇತ್ತು. ಪ್ರಸಕ್ತ ವರ್ಷ ಅಂತರ್ಜಲ ಮಟ್ಟ 7.15 ಮೀ ಆಗಿದೆ. ಹೊನ್ನಾಳಿ ತಾಲೂಕಿನಲ್ಲಿ ಸ್ಥಿರ ಅಂತರ್ಜಲ ಮಟ್ಟ 2013ರಲ್ಲಿ9.46 ಮೀ, 2014ರಲ್ಲಿ 8.70 ಮೀ, 2015 ರಲ್ಲಿ 6.56 ಮೀ, 2016 ರಲ್ಲಿ 8.37 ಮೀ, 2017ರಲ್ಲಿ 8.47 ಮೀ, 2018ರಲ್ಲಿ 4.91 ಮೀ, 2019 ರಲ್ಲಿ 5.02 ಮೀ ಆಗಿತ್ತು. ಈ ಸಲಅಂತರ್ಜಲ ಮಟ್ಟ 4.33 ಮೀಮೇಲೇರಿದೆ. ಜಗಳೂರು ತಾಲೂಕಿನಲ್ಲಿ ಸ್ಥಿರ ಅಂತರ್ಜಲ ಮಟ್ಟ 2013ರಲ್ಲಿ 21.89 ಮೀ, 2014 ರಲ್ಲಿ 21.65 ಮೀ, 2015ರಲ್ಲಿ 22.44 ಮೀ, 2016 ರಲ್ಲಿ 25.09 ಮೀ, 2017ರಲ್ಲಿ 27.44 ಮೀ, 2018 ರಲ್ಲಿ 21.99ಮೀ, 2019ರಲ್ಲಿ 25.23 ಮೀ ಇತ್ತು. ಈ ವರ್ಷ 20.05 ಮೀ ಬಂದಿದ್ದು ಅಪಾರ ಏರಿಕೆ ಕಂಡಿದೆ. ಒಟ್ಟಾರೆ ಈ ಬಾರಿಯ ಉತ್ತಮ ಮಳೆಯಿಂದಾಗಿ ಜಿಲ್ಲೆಯ ಸ್ಥಿರ ಅಂತರ್ಜಲಮಟ್ಟ ಹೆಚ್ಚಾಗಿದೆ. ಹಾಗಾಗಿ ಜಲ ಸಂಚಕಾರದಿಂದ ಮುಕ್ತಿ ಸಿಕ್ಕಂತಾಗಿದೆ.
ಸರಾಸರಿ 211ಮಿಮೀ ಅಧಿಕ ಮಳೆ : ಜಿಲ್ಲೆಯಲ್ಲಿ 2013ರಲ್ಲಿ ಸರಾಸರಿ 651ಮಿಮೀ, 2014 ರಲ್ಲಿ 921 ಮಿಮೀ, 2015ರಲ್ಲಿ 688 ಮಿಮೀ, 2016ರಲ್ಲಿ 466 ಮಿಮೀ, 2017ರಲ್ಲಿ 746 ಮಿಮೀ, 2018ರಲ್ಲಿ 633 ಮಿಮೀ, 2019ರಲ್ಲಿ 681ಮಿಮೀ ಮಳೆಯಾಗಿತ್ತು. ಪ್ರಸಕ್ತ ವರ್ಷ ಜನವರಿಯಿಂದ ಇಲ್ಲಿಯವರೆಗೆ 813 ಮಿಮೀ ಮಳೆಯಾಗಿದೆ. ಈವರೆಗಿನ ವಾಡಿಕೆ ಮಳೆ ಪ್ರಮಾಣ 602 ಮಿಮೀ ಆಗಿದ್ದು, ಸರಾಸರಿ 211ಮಿಮೀ ಹೆಚ್ಚಿನ ಮಳೆಯಾಗಿದೆ.
ಪ್ರಸಕ್ತ ವರ್ಷ ಹೆಚ್ಚುಮಳೆಯಾಗಿದ್ದರಿಂದಜಿಲ್ಲೆಯ ಸ್ಥಿರ ಅಂತರ್ಜಲ ಮಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. 2017ರಲ್ಲಿ ಜಲಮೂಲಗಳೆಲ್ಲ ಬತ್ತಿ ಅಂತರ್ಜಲ ಮಟ್ಟ ಹೆಚ್ಚು ಕೆಳಗೆ ಹೋಗಿತ್ತು. ಜಿಲ್ಲೆಯಲ್ಲಿ 46ಅಧ್ಯಯನ ಬಾವಿಗಳಿದ್ದು ಪ್ರತಿ ತಿಂಗಳು ಸ್ಥಿರ ಅಂತರ್ಜಲಮಟ್ಟವನ್ನು ಪರೀಕ್ಷಿಸಲಾಗುತ್ತದೆ. ಈ ಅಧ್ಯಯನದ ಆಧಾರದಲ್ಲಿ ಜಿಲ್ಲೆಯ ಸ್ಥಿರ ಅಂತರ್ಜಲ ಮಟ್ಟ ಈ ವರ್ಷ ಸುಧಾರಿಸಿದೆ.-ಬಸವರಾಜ್ ಆರ್., ಹಿರಿಯ ಭೂ ವಿಜ್ಞಾನಿ.
-ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.