ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಇಳಿಮುಖ

ಸಾಲು ಸಾಲು ಹಬ್ಬಗಳು-ಚಳಿಗಾಲದ ನಡುವೆ ಸಮಾಧಾನದ ಸಂಗತಿ

Team Udayavani, Nov 7, 2020, 9:04 PM IST

ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಇಳಿಮುಖ

ಹಾವೇರಿ: ಸಾಲು ಸಾಲು ಹಬ್ಬಗಳು ಹಾಗೂ ಚಳಿಗಾಲ ಆರಂಭಗೊಂಡಿದ್ದರಿಂದ ಮಹಾಮಾರಿ ಕೋವಿಡ್ ವ್ಯಾಪಕವಾಗಿ ಹರಡುವ ಭೀತಿಯ ನಡುವೆಯೂ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಇಳಿಮುಖ ಹಾದಿಯಲ್ಲಿ ಸಾಗಿರುವುದು ಸಮಾಧಾನದ ಸಂಗತಿಯಾಗಿದೆ.

ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಕಳೆದ ಒಂದು ತಿಂಗಳಿಂದ ನಿಯಂತ್ರಣಕ್ಕೆ ಬರುತ್ತಿದ್ದು, ಪಾಸಿಟಿವ್‌ ಪ್ರಮಾಣ ಶೇ. 0.2ಕ್ಕೆ ಇಳಿದಿದ್ದರೆ, ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.98ರಷ್ಟಾಗಿದೆ. ಇದರಿಂದಾಗಿ ಜಿಲ್ಲೆಯ ಜನರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಮುಂಬರುವ ದೀಪಾವಳಿ ಹಬ್ಬ ಸೇರಿದಂತೆ ಚಳಿಗಾಲದಲ್ಲಿ ಜನರು ಮೈ ಮರೆಯದೇ ಮುಂಜಾಗ್ರತೆ ವಹಿಸಿದರೆ ಜಿಲ್ಲೆ ಮತ್ತೆ ಕೊರೊನಾ ಮುಕ್ತವಾಗುವುದಲ್ಲಿ ಸಂದೇಹವೇ ಇಲ್ಲ. ಆದ್ದರಿಂದ ಜನರು ನಿರ್ಲಕ್ಷ್ಯ ತೋರದೇ ಮುಂಜಾಗ್ರತೆ ವಹಿಸುವುದು ಅಗತ್ಯವಿದೆ.

ಸೋಂಕಿನ ಪ್ರಮಾಣ ಇಳಿಮುಖ: ಜಿಲ್ಲೆಯಲ್ಲಿ ಮೇ 3ರಂದು ಮೊದಲ ಕೋವಿಡ್ ಪ್ರಕರಣ ಪತ್ತೆಯಾಗಿತ್ತು. ಮೇ ತಿಂಗಳಾಂತ್ಯಕ್ಕೆ ಸೋಂಕಿತರ ಸಂಖ್ಯೆ 14ರಷ್ಟಿತ್ತು. ಜೂನ್‌ ತಿಂಗಳಲ್ಲಿ ಅದು 118ಕ್ಕೇರಿತು. ಜುಲೈ ಅಂತ್ಯಕ್ಕೆ 991 ಪ್ರಕರಣಗಳಿದ್ದವು. ಆಗಸ್ಟ್‌ನಲ್ಲಿ ಸೋಂಕಿತರಸಂಖ್ಯೆ ಗಣನೀಯವಾಗಿ ಏರಿಕೆ ಕಂಡು ತಿಂಗಳಾಂತ್ಯಕ್ಕೆ 4,324 ಪ್ರಕರಣಗಳು ವರದಿಯಾಗಿದ್ದವು. ಸೆಪ್ಟೆಂಬರ್‌ ನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡು ತಿಂಗಳಾಂತ್ಯಕ್ಕೆ 8,748 ಪಾಸಿಟಿವ್‌ ಪ್ರಕರಣಗಳು ವರದಿಯಾಗಿದ್ದವು. ಅಕ್ಟೋಬರ್‌ ತಿಂಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿದೆ. ಈವರೆಗೆ 10,569(ನ.5ರವರೆಗೆ) ಜನರಿಗೆ ಸೋಂಕು ದೃಢಪಟ್ಟಿದೆ. ಅದರಲ್ಲೂ ಕಳೆದ 15 ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ವಾಗಿ ಇಳಿಮುಖ ಕಂಡಿದೆ.

ಕಳೆದ ಕೆಲವು ದಿನಗಳಿಂದ ಹತ್ತಿಪ್ಪತ್ತು ಪ್ರಕರಣ ವರದಿಯಾಗುತ್ತಿದೆ. ಎರಡಂಕಿ ದಾಟದ ದಿನಗಳೂ ಅನೇಕ ಇವೆ. ದಸರಾ ಹಬ್ಬ, ಅನ್‌ ಲಾಕ್‌ ಹೊರತಾಗಿಯೂ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿರುವುದು ಜನರಲ್ಲಿ ಸಮಾಧಾನ ತಂದಿದೆ. ಪಾಸಿಟಿವ್‌ ಪ್ರಮಾಣ ಶೇ.03ಕ್ಕೆ ಇಳಿದಿದ್ದು, ರಾಜ್ಯ ಮಟ್ಟದಲ್ಲಿ ಕೋವಿಡ್‌ ನಿಯಂತ್ರಣದಲ್ಲಿ ಜಿಲ್ಲೆ ಉತ್ತಮ ಸಾಧನೆ ತೋರಿದೆ.

 ಮರಣ ಪ್ರಮಾಣ ಶೇ.1.8ಕ್ಕೆ ಇಳಿಕೆ: ಈವರೆಗೆ ಕೋವಿಡ್ ಸೋಂಕಿನಿಂದ 191 ಜನರು ಮೃತ ಪಟ್ಟಿದ್ದು, ಅದರಲ್ಲಿ ಜೂನ್‌ ತಿಂಗಳಲ್ಲಿ 2, ಜುಲೈನಲ್ಲಿ 25, ಆಗಸ್ಟ್‌ನಲ್ಲಿ ಅತಿಹೆಚ್ಚು 82, ಸೆಪ್ಟೆಂಬರ್‌ನಲ್ಲಿ 56, ಅಕ್ಟೋಬರ್‌ನಲ್ಲಿ 22 ಜನರು ಮೃತಪಟ್ಟಿದ್ದಾರೆ. ಸೋಂಕಿ ನಿಂದ ಗುಣಮುಖರಾದವರ ಪ್ರಮಾಣ ಜುಲೈ ತಿಂಗಳಲ್ಲಿ ಶೇ.70, ಆಗಸ್ಟ್‌ನಲ್ಲಿ ಶೇ.61, ಸೆಪ್ಟೆಂಬರ್‌ ತಿಂಗಳಲ್ಲಿ ಶೇ.78, ಅಕ್ಟೋಬರ್‌ನಲ್ಲಿ ಶೇ. 93ಕ್ಕೆ ತಲುಪಿದೆ. ಈಗ ಅದು ಶೇ.98ರಷ್ಟಾಗಿದೆ. ಇನ್ನು ಮರಣ ಪ್ರಮಾಣದಲ್ಲೂ ಇಳಿಕೆಯಾಗಿದ್ದು, ಜುಲೈನಲ್ಲಿ ಶೇ.2.42ರಷ್ಟಿದ್ದ ಮರಣ ಪ್ರಮಾಣ, ಅಕ್ಟೋಬರ್‌ನಲ್ಲಿ ಶೇ.1.8ಕ್ಕೆ ಇಳಿದಿದೆ.

ನಿರಂತರ ಜಾಗೃತಿ: ಜಿಲ್ಲೆಯಲ್ಲಿ ಕೋವಿಡ್ ಸದ್ಯ ನಿಯಂತ್ರಣಕ್ಕೆ ಬಂದಿರುವುದು ಸ್ವಲ್ಪ ಮಟ್ಟಿಗೆ ಆತಂಕ ದೂರವಾಗಿಸಿದೆ. ವಾರಿಯರ್ಸ್‌ ಪರಿಶ್ರಮವೂ ಇದರ ಹಿಂದಿದೆ. ಸಾಕಷ್ಟು ವಾರಿಯರ್ಸ್‌ಗಳು ಸೋಂಕು ತಗು ಲಿದರೂ ಜಗ್ಗದೇ ಕೋವಿಡ್ ವಿರುದ್ಧ ಹೋರಾಟದಲ್ಲಿ ಸಕ್ರಿಯವಾಗಿದ್ದಾರೆ. ಜನರು ಸ್ವಯಂ ಜಾಗೃತಿ ಗೊಂಡಾಗ ಮಾತ್ರ ಇದರಿಂದ ದೂರವಿರಲು ಸಾಧ್ಯವಿದೆ. ಗುಂಪು ಸೇರದಂತೆ, ಮನೆಯೊಂದ ಹೊರ ಬಂದರೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಪೊಲೀಸ್‌ ಇಲಾಖೆ ದಂಡ ವಿಧಿಸುತ್ತಿದೆ. ಕೋವಿಡ್ ಜಾಗೃತಿಗಾಗಿ ಹಲವು ಕಾರ್ಯಕ್ರಮ ಕೈಗೊಳ್ಳಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್‌ ಟೆಸ್ಟ್‌ ಮಾಡುತ್ತಿರುವುದು, ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ತಕ್ಷ‌ಣ ಪತ್ತೆ ಹಚ್ಚಿ ಪ್ರತ್ಯೇಕಿಸುವಿಕೆ ಮುಂತಾದ ಕ್ರಮಗಳಿಂದ ಕೋವಿಡ್ ಇಳಿಮುಖವಾಗಿದೆ.

5.67ಲಕ್ಷ ರೂ. ದಂಡ ವಸೂಲಿ : ಕೋವಿಡ್ ನಿಯಂತ್ರಣದಲ್ಲಿ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ಕಂದಾಯ, ಆರೋಗ್ಯ ಇಲಾಖೆ ನಿರಂತರವಾಗಿ ಶ್ರಮಿಸಿವೆ. ಸುರಕ್ಷತಾ ಕ್ರಮ ಅಳವಡಿಸಿಕೊಳ್ಳುವಂತೆ ನಿರಂತರವಾಗಿ ಜಾಗೃತಿ ಮೂಡಿಸಿದ್ದರ ಪರಿಣಾಮವಾಗಿ

ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಮಾಸ್ಕ್ ಧರಿಸದವರಿಗೆ ಪೊಲೀಸ್‌ ಇಲಾಖೆ ದಂಡ ವಸೂಲಿ ಮಾಡುತ್ತಿದೆ. ಜನರಿಗೆ ಮಾಸ್ಕ್ ಧರಿಸುವ ಕುರಿತು ಜಾಗೃತಿ ಮೂಡಿಸಲು ಸ್ವತಃ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರ ಅವರೇ ಬೀದಿಗಳಿದಿದ್ದರು. ಜಿಲ್ಲೆಯಲ್ಲಿ ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದ 5,524 ಜನರನ್ನು ಪತ್ತೆ ಮಾಡಿ ಅವರಿಂದ 5,67,200 ರೂ. ದಂಡವನ್ನು ಪೊಲೀಸ್‌ ಇಲಾಖೆ ವಸೂಲಿ ಮಾಡಿದೆ.

160 ಸಕ್ರಿಯ ಪ್ರಕರಣ  : ಜಿಲ್ಲೆಯಲ್ಲಿ ಮೇ 3 ರಂದು ಕೋವಿಡ್ ಸೋಂಕಿನ ಮೊದಲ ಪ್ರಕರಣ ಪತ್ತೆಯಾಗಿತ್ತು. ನಂತರದ ದಿನಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಏರುಗತಿಯಲ್ಲಿಯೇ ಸಾಗಿ ಸದ್ಯ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಡಿದೆ. ಆದರೆ, ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಪೈಕಿ 10218 ಜನರು ಗುಣಮುಖರಾಗಿ ಬಿಡುಗಡೆ ಹೊಂದ್ದಿದ್ದು, ಇನ್ನು ಕೇವಲ 160 ಪಕರಣಗಳು(ನ.5ರವರೆಗೆ)ಮಾತ್ರ ಸಕ್ರಿಯವಾಗಿವೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಇದೇ ರೀತಿ ಇಳಿಮುಖಗೊಂಡಲ್ಲಿ ಇನ್ನು ಕೆಲವೇ ದಿನಗಳಲ್ಲಿ ಕೋವಿಡ್ ಮುಕ್ತ ಜಿಲ್ಲೆಯಾಗುವುದರಲ್ಲಿ ಸಂದೇಹವಿಲ್ಲ.

 

-ವೀರೇಶ ಮಡ್ಲೂರ

ಟಾಪ್ ನ್ಯೂಸ್

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

CM-ibrahim

HDK ವಿರುದ್ಧ ಜಮೀರ್‌ ಹೇಳಿಕೆ ತಪ್ಪು: ಸಿ.ಎಂ. ಇಬ್ರಾಹಿಂ

Sidda Speach

B.Z. Zameer Ahmed Khan ‘ಕರಿಯ’ ಎನ್ನಬಾರದಿತ್ತು: ಸಿಎಂ ಸಿದ್ದರಾಮಯ್ಯ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-bbb

Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ

ajjamper-Qadri

Adi Jambava Samavesha: ಅಂಬೇಡ್ಕರ್‌ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ

Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ

CM-Siddu–Hubballi

By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

accident

Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

CM-ibrahim

HDK ವಿರುದ್ಧ ಜಮೀರ್‌ ಹೇಳಿಕೆ ತಪ್ಪು: ಸಿ.ಎಂ. ಇಬ್ರಾಹಿಂ

Sidda Speach

B.Z. Zameer Ahmed Khan ‘ಕರಿಯ’ ಎನ್ನಬಾರದಿತ್ತು: ಸಿಎಂ ಸಿದ್ದರಾಮಯ್ಯ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.