ಭಾಷಣಕಾರನಿಗೆ ಆತ್ಮ ವಿಶ್ವಾಸ ಮುಖ್ಯ: ಅಂಡಗಿ
Team Udayavani, Nov 7, 2020, 9:09 PM IST
ಕೊಪ್ಪಳ: ಆತ್ಮವಿಶ್ವಾಸವಿಲ್ಲದ ಭಾಷಣಕಾರನಿಗೆ ಯಶಸ್ಸು ಸಿಗದು. ಆತನಿಗೆ ಆತ್ಮವಿಶ್ವಾಸ ಮುಖ್ಯ. ಅನೇಕ ದಿನಗಳ ಸಾಧನೆ, ನಿರಂತರ ಪ್ರಯತ್ನದಿಂದ ಭಾಷಣ ಕಲೆ ಕರಗತವಾಗಲಿದೆ. ಭಾಷಣಕಾರನಲ್ಲಿ ಕೇವಲ ಧ್ವನಿಶಕ್ತಿಯೊಂದಿದ್ದರೆ ಸಾಲದು, ಮಾತಿನಲ್ಲೊಂದು ಆಕರ್ಷಕ ಶೈಲಿ ಇರಬೇಕು ಎಂದು ಚುಸಾಪ ಅಧ್ಯಕ್ಷ ಹನುಮಂತಪ್ಪ ಅಂಡಗಿ ಹೇಳಿದರು.
ಕೊಪ್ಪಳದ ಪ್ರಧಾನ ಅಂಚೆ ಕಚೇರಿಯಲ್ಲಿ “ಜಾಗರೂಕತೆ ಜಾಗೃತಿ ವಾರ’ದ ಅಂಗ ವಾಗಿ ಹಮ್ಮಿಕೊಂಡ ಭಾಷಣ ಸ್ಪರ್ಧೆ ನಿರ್ಣಾಯಕರಾಗಿ ಭಾಗವಹಿಸಿ ಅವರು ಮಾತನಾಡಿದರು. ಭಾಷಣಕಾರ ತನ್ನ ಮಾತಿನ ಮೂಲಕ ಕೇಳುಗರನ್ನು ಆಕರ್ಷಿಸಿ, ಅವರಲ್ಲಿ ಮುಂದಿನ ಮಾತು ಕೇಳಬೇಕೆನ್ನುವ ಕುತೂಹಲ ಹುಟ್ಟಿಸುತ್ತಾ, ಆಸಕ್ತಿ ಕೆರಳಿಸುತ್ತಾ ತನ್ನ ವಿಚಾರಗಳತ್ತ ಗಮನಸೆಳೆಯುವ ಪ್ರಯತ್ನ ಮಾಡಬೇಕು. ಭಾಷಣಕಾರ ಹೆದರದೇ, ಬೆದರದೇ, ಕಂಪಿಸದೇ, ಕಂಠಪಾಠಮಾಡದೇ ಮಾತಾಡುವ ಹವ್ಯಾಸ ರೂಢಿಸಿಕೊಳ್ಳಬೇಕು. ಮಾತೃಭಾಷೆಯಿಂದ ಮಾತ್ರ ತಮ್ಮ ಭಾವನೆಗಳನ್ನು ನಿರ್ಭಯದಿಂದ, ನಿರರ್ಗಳ, ನಿರ್ಭೀತಿಯಿಂದ ವ್ಯಕ್ತಪಡಿಸಲು ಸಾಧ್ಯ ಎಂದರು.
ಭಾಷಣಕಾರನು ನಿತ್ಯ ಅಧ್ಯಯನ, ನಿರಂತರ ಓದು, ಬರಹ ಮಾಡುತ್ತಿರಬೇಕು. ಈ ಮೂರು ಕಾರ್ಯ ನಿಂತರೆ ಮಾತಿಗೆ ಹೊಸತನಬರದು. ಭಾಷಣಕಾರನ ವೇಷಭೂಷಣವೂ ಆಕರ್ಷಕವಾಗಿರಬೇಕು. ಭಾಷಣ ಸಂಕ್ಷಿಪ್ತ ಮತ್ತು ಹೃದಯಸ್ಪರ್ಶಿಯಾಗಿರಬೇಕು ಎಂದರು. ಮತ್ತೋರ್ವ ನಿರ್ಣಾಯಕ ರವಿ ಕಾಂತನವರ ಮಾತನಾಡಿ, ವಿದ್ಯಾರ್ಥಿಗಳು ಈಗಾಗಲೇ ಪ್ರಸಿದ್ಧರಾಗಿರುವ ಭಾಷಣಕಾರರ ಭಾಷಣಗಳನ್ನು ಕೇಳಿ ಅವುಗಳ ಅಧ್ಯಯನ ಮಾಡಬೇಕು. ಭಾಷಣಕಾರನಿಗೆ ಪ್ರಚಲಿತ ವಿದ್ಯಮಾನಗಳ ಜ್ಞಾನ, ವಿಷಯಜ್ಞಾನವಿರಬೇಕು ಎಂದರು.
ಅಂಚೆ ಪಾಲಕ ಬಿ.ವಿ. ಅಂಗಡಿ ಮಾತನಾಡಿದರು. ವಿವಿಧ ಅಂಚೆ ಪಾಲಕರಾದ ವೈ.ವೈ. ಕೋಳೂರು, ಹನುಮಂತರಾವ್ ಕುಲಕರ್ಣಿ, ಎಂ.ಡಿ. ಸುಭಾನ ಅಂಚೆ ಇಲಾಖೆಯ ವೀಣಾ ಅಬ್ಬಿಗೇರಿ, ಎಸ್.ಸಿ. ಚುಳಕಿ ಸೇರಿ ಇತರರು ಇದ್ದರು. ಭಾಷಣ ಸ್ಪರ್ಧೆಯಲ್ಲಿ ಶ್ರೀರûಾ ಹನುಮಂತರಾವ್ ಕುಲಕರ್ಣಿ ಪ್ರಥಮ, ಮಂಥನ ಕಿರಣ ಹೆಬ್ಬಳ್ಳಿ ದ್ವಿತೀಯ, ಶರಣ್ಯ ಸರ್ವೋತ್ತಮ ಉಪಾಧ್ಯಾಯ ತೃತೀಯ ಸ್ಥಾನ ಪಡೆದರು. ದಿವ್ಯಾ ವೀರಣ್ಣ ಪತ್ತಾರ, ಅನೀಷ ಕಿರಣ ಆಶ್ರಿತ, ಧರಣಿ ಉಷಾ ಆರ್., ಇಕಾಮಹಮ್ಮದ್ ಹುಸೇನ್ ಫಾತೀಮಾ, ಶ್ರೀನಿವಾಸಶಂಕರ ನಾಯಕ, ಉಮಾ ಬಸವರಾಜ ತಲೆಕಾನ, ಆಫìತಾ ಮಹಮ್ಮದಗೌಸ್ ತಾಡಪತ್ರಿ ಸಮಾಧಾನಕರ ಬಹುಮಾನ ಪಡೆದರು.
ಕೊಪ್ಪಳ ಬಜಾರ ಉಪ ಅಂಚೆಪಾಲಕ ಜಿ.ಎನ್. ಹಳ್ಳಿ ನಿರೂಪಿಸಿದರು. ಶಂಕರ ನಾಯಕ ಸ್ವಾಗತಿಸಿದರು. ಅಂಚೆ ಇಲಾಖೆ ಖಜಾಂಚಿ ಲಕ್ಷ್ಮೀ ನಾರಾಯಣ ಜಹಗೀರದಾರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.