ನಾಡು, ಭಾಷೆಯನ್ನು ತಾಯಿಯಂತೆ ಗೌರವಿಸಿ: ಯಡಿಯೂರಪ್ಪ


Team Udayavani, Nov 8, 2020, 6:00 AM IST

ನಾಡು, ಭಾಷೆಯನ್ನು ತಾಯಿಯಂತೆ ಗೌರವಿಸಿ: ಯಡಿಯೂರಪ್ಪ

ಬೆಂಗಳೂರು: ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿ ನಮ್ಮ ಅಸ್ಮಿತೆಯ ಭಾಗವಾಗಿದ್ದು, ಭಾಷೆ ಮತ್ತು ಜನ್ಮಭೂಮಿ ಹೆತ್ತ ತಾಯಿಗೆ ಸಮಾನವಾಗಿದೆ. ಹೀಗಾಗಿ ಹೆತ್ತ ತಾಯಿಗೆ ಸಲ್ಲುವಂತಹ ಗೌರವ, ಆದರಗಳು ನಮ್ಮ ಭಾಷೆ ಮತ್ತು ತಾಯ್ನಾಡಿಗೂ ಸಲ್ಲಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ 65 ಮಂದಿ ಸಾಧಕರಿಗೆ ಈ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಿಸಿ ಮಾತನಾಡಿದ ಅವರು, ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಅಗ್ರಸ್ಥಾನ. ಕನ್ನಡವನ್ನು ನಾವು ಇಲ್ಲಿ ಬೆಳಸದಿದ್ದರೆ ಬೇರೆಲ್ಲೂ ಬೆಳಸಲು ಸಾಧ್ಯವಿಲ್ಲ ಎಂದರು.

ಕನ್ನಡವು ನಮ್ಮ ಹೃದಯ ಭಾಷೆಯಾಗಿದ್ದು, ಇದು ವ್ಯವಹಾರದ ಭಾಷೆಯಾಗಬೇಕು. ಕನ್ನಡವನ್ನು ದೈನಂದಿನ ವ್ಯವಹಾರದಲ್ಲಿ ಹೆಚ್ಚೆಚ್ಚು ಬಳಸಬೇಕು. ಭಾಷೆಯನ್ನು ಬಳಸಿದಂತೆ ಅದು ಬೆಳೆಯುತ್ತದೆ ಎಂದ ಅವರು, ಈ ಬಾರಿ 65 ಮಂದಿ ಸಾಧಕರನ್ನು ನಾಡಿನ ವಿವಿಧ ಮೂಲೆಗಳನ್ನು ಶೋಧಿಸಿ ಪಾರದರ್ಶಕವಾಗಿ ಪ್ರಶಸ್ತಿಗೆ ಆರಿಸಲಾಗಿದೆ ಎಂದು ಹೇಳಿದರು.

ಸಾಧಕ ಮುತ್ತುಗಳನ್ನು ಹೆಕ್ಕಿದ್ದೇವೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ. ಟಿ. ರವಿ ಮಾತನಾಡಿ, ರಾಜ್ಯೋತ್ಸವ ಪ್ರಶಸ್ತಿಗಾಗಿ ಸುಮಾರು 1,872 ಅರ್ಜಿಗಳು ಬಂದಿದ್ದವು. ಸಾಧಕರನ್ನು ಮುತ್ತುಗಳನ್ನು ಹೆಕ್ಕಿ ತೆಗೆದ ರೀತಿಯಲ್ಲಿ ಆಯ್ಕೆ ಮಾಡಲಾಗಿದೆ. ಇನ್ನಷ್ಟು ಮಂದಿ ಅರ್ಹರಾಗಿದ್ದರೂ, ಪ್ರಶಸ್ತಿ ಸಂಖ್ಯೆ ಕಡಿಮೆ ಇದ್ದ ಕಾರಣ ಆಯ್ಕೆ ಮಾಡಲಾಗಿಲ್ಲ ಎಂದರು.

“ಕಲಾತಂಡ’ ಆ್ಯಪ್‌ ಬಿಡುಗಡೆ
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಲಾವಿದರ ಆನುಕೂಲಕ್ಕಾಗಿ “ಕಲಾತಂಡ’ ಆ್ಯಪ್‌ ಅನ್ನು ಬಿಡುಗಡೆ ಮಾಡಿದರು.

ಪ್ರಶಸ್ತಿ ಮೊತ್ತ ಸಿಎಂ ಪರಿಹಾರ ನಿಧಿಗೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪರವಾಗಿ ಹಿರಿಯ ಪತ್ರಕರ್ತ ಟಿ. ವೆಂಕಟೇಶ್‌ ಹಾಗೂ ಚಿಕ್ಕಬಳ್ಳಾಪುರ ಮೂಲದ ಪರಿಸರವಾದಿ, ನಿವೃತ್ತ ಐಎಎಸ್‌ ಅಧಿಕಾರಿ ಕೆಂಪರೆಡ್ಡಿ ಅಮರನಾರಾಯಣ ಅವರು ತಮಗೆ ದೊರೆತ 1 ಲ. ರೂ. ಪ್ರಶಸ್ತಿ ಮೊತ್ತವನ್ನು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದರು. ಕಲಬುರಗಿ ಮೂಲದ ಕೃಷಿ ಸಾಧಕ ಡಾ| ಸಿದ್ರಾಮಪ್ಪ ಬಸವಂತರಾವ್‌ ಪಾಟೀಲ್‌ ಧಂಗಾಪೂರ ಅವರು 50 ಸಾ. ರೂ. ಅನ್ನು ರೈತರ ನೆರವಿಗಾಗಿ ಸಿಎಂ ಪರಿಹಾರ ನಿಧಿಗೆ ಮತ್ತು ಉಳಿದ 50 ಸಾ. ರೂ.ಅನ್ನು ಹುಟ್ಟೂರು ಧಂಗಾಪುರದ ದೇವಸ್ಥಾನಕ್ಕೆ ನೀಡುವುದಾಗಿ ಘೋಷಿಸಿದರು.

ತಪ್ಪು ಮಾಹಿತಿ ನೀಡಿದ್ದ ಕೇಶಪ್ಪ
ಕೇಶಪ್ಪ ಶಿಳ್ಳೇಕ್ಯಾತರ್‌ ಅವರು ಸುಳ್ಳು ಮಾಹಿತಿಯನ್ನು ನೀಡಿದ್ದರು. ವಿಶೇಷ ಪ್ರಕರಣ ಹೊರತುಪಡಿಸಿದರೆ ಸಾಮಾನ್ಯವಾಗಿ ಈ ಪ್ರಶಸ್ತಿ ಪಡೆಯಲು 60 ವಯಸ್ಸಾಗಬೇಕು. ಆದರೆ ಕೇಶಪ್ಪ ಅವರಿಗೆ 46 ವರ್ಷವಾಗಿತ್ತು. ಇದು ಅವರ ಆಧಾರ್‌ ಕಾರ್ಡ್‌ ಸಹಿತ ಇನ್ನಿತರ ಪೂರಕ ದಾಖಲೆಗಳ ಪರಿಶೀಲನೆ ಸಂದರ್ಭ ಗಮನಕ್ಕೆ ಬಂದಿದೆ. ಆ ಹಿನ್ನೆಲೆಯಲ್ಲಿ ಆ ಪ್ರಶಸ್ತಿಯನ್ನು ಹಿರಿಯ ರಂಗಭೂಮಿ ಕಲಾವಿದೆ ವಂದನಾ ಅವರಿಗೆ ನೀಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್‌.ರಂಗಪ್ಪ ಸ್ಪಷ್ಟಪಡಿಸಿದ್ದಾರೆ.

ಮೋಡ ಬಿತ್ತನೆ ಮಾಡಿ
ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಚಿತ್ರದುರ್ಗ ಜಿಲ್ಲೆಯ ಬೀದಿಗೆರೆ ಹಳ್ಳಿಯ ಕೃಷಿ ಸಾಧಕಿ ಎಸ್‌.ವಿ. ಸುಮಂಗಲಮ್ಮ ಅವರು, ಬರಗಾಲದಿಂದ ತತ್ತರಿಸಿರುವ ಚಿತ್ರದುರ್ಗ ಸಹಿತ ಇನ್ನಿತರ ಪ್ರದೇಶಗಳಲ್ಲಿ ಮೋಡ ಬಿತ್ತನೆ ಮಾಡುವಂತೆ ಸರಕಾರಕ್ಕೆ ಮನವಿ ಮಾಡಿದರು.

ಟಾಪ್ ನ್ಯೂಸ್

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

car-parkala

ಕಾಸರಗೋಡು: ಬೈಕ್‌ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.