ನಿವೃತ್ತಿಯ ಸಂದರ್ಭಕ್ಕೆ ಉಳಿತಾಯ ಯೋಜನೆ
Team Udayavani, Nov 8, 2020, 5:45 AM IST
ನಮಗೆ ಅರಿವಿಲ್ಲದಂತೆ ವರ್ಷಗಳು ಉರುಳಿ ನಿವೃತ್ತಿಯ ದಿನ ಬಂದು ಬಿಡುತ್ತದೆ. ಹೀಗಾಗಿ ನಿವೃತ್ತಿ ಹೊಂದುವ ವೇಳೆಗೆ ಗರಿಷ್ಠ ರಿಟರ್ನ್ಸ್ ಬರುವಂತೆ ಉದ್ಯೋಗಿಗಳು ಹೂಡಿಕೆ ಯೋಜನೆಗಳನ್ನು ರೂಪಿಸಬೇಕು. ಚಿನ್ನ, ರಿಯಲ್ ಎಸ್ಟೇಟ್‌ನಂತಹ ಸಾಂಪ್ರದಾಯಿಕ ಹೂಡಿಕೆಗಳು ಉತ್ತಮ ರಿಟರ್ನ್ಸ್ ನೀಡುತ್ತವೆ ಎನ್ನುವುದಕ್ಕೆ ಯಾವುದೇ ಖಾತ್ರಿ ಇಲ್ಲ. ಹಾಗಾದರೆ ನಾವು ಯಾವುದರಲ್ಲಿ ಹೂಡಿಕೆ ಮಾಡಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಇಪಿಎಫ್ ಮತ್ತು ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಎನ್‌ಪಿಎಸ್ – ಈ ಎರಡು ಹೂಡಿಕೆಗಳು ನಿವೃತ್ತಿಯ ಬಳಿಕ ನಮಗೆ ಆಸರೆಯಾಗುತ್ತವೆ. ನಮ್ಮ ಉಳಿತಾಯ ಯೋಜನೆಗಳು ವ್ಯವಸ್ಥಿತವಾಗಿರುವಂತೆ ಎಚ್ಚರ ವಹಿಸುವುದರೊಂದಿಗೆ ಹೆಚ್ಚಿನ ರಿಟರ್ನ್ಸ್ ಬರುವಂತಾಗಲು ಜಾಣತನದಿಂದ ಹೂಡಿಕೆಗಳನ್ನು ಮಾಡಬೇಕು. ಆ ಕುರಿತಾದ ಮಾಹಿತಿ ಇಲ್ಲಿದೆ.
ಅರ್ಧದಲ್ಲೇ ಹಣ ಹಿಂಪಡೆಯಬೇಡಿ
ವೇತನದಾರರು ಉದ್ಯೋಗಿಗಳ ಭವಿಷ್ಯನಿಧಿ(ಇಪಿಎಫ್) ಮೂಲಕ ಕಡ್ಡಾಯ ಉಳಿತಾಯವನ್ನು ಮಾಡುವಂಥ ವ್ಯವಸ್ಥೆ ಇದೆ. ಪ್ರತೀ ತಿಂಗಳೂ ಮೂಲ ವೇತನದಲ್ಲಿ ನಿರ್ದಿಷ್ಟ ಪ್ರಮಾಣದ ಮೊತ್ತವನ್ನು ಉದ್ಯೋಗಿಗಳು ಪಾವತಿಸಿದರೆ, ಉದ್ಯೋಗದಾತರೂ ಅದಕ್ಕೆ ತಕ್ಕನಾದ ಭಾಗವನ್ನು ಜಮೆ ಮಾಡುತ್ತಾರೆ. ವೇತನ ಏರಿಕೆಯಾದಂತೆ ಇಪಿಎಫ್ ಕಂತಿನ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಹೀಗಾಗಿ ನಿವೃತ್ತಿಯ ತನಕ ಇಪಿಎಫ್ ಖಾತೆಯನ್ನು ತಪ್ಪದೇ ಮುಂದುವರಿಸಿ. ಕೆಲವರು ತಮ್ಮ ಅಲ್ಪಾವಧಿ ಅಗತ್ಯಗಳಿಗಾಗಿ ಇಪಿಎಫ್ನ ಹಣವನ್ನು ಹಿಂಪಡೆದು ಬಿಡುತ್ತಾರೆ. ಅನಿವಾರ್ಯವಾದಲ್ಲಿ ಮಾತ್ರ ಈ ಕ್ರಮ ಅನುಸರಿಸಿ ಎಂಬುದು ಉದ್ಯೋಗಿಗಳಿಗೆ ತಜ್ಞರ ಕಿವಿಮಾತು.
ದೀರ್ಘಾವಧಿ ಲಾಭಕ್ಕೆ ವಿಪಿಎಫ್ಉತ್ತಮ ಆಯ್ಕೆ
ವಾಲಂಟರಿ ಪ್ರಾವಿಡೆಂಟ್ ಫಂಡ್(ವಿಪಿಎಫ್) ಅನ್ನುವುದು ಇಪಿಎಫ್ನ ವಿಸ್ತೃತ ಹೂಡಿಕೆ ಯೋಜನೆಯಾಗಿದ್ದು, ಇಪಿಎಫ್ಗೆ ಸಮನಾದ ಬಡ್ಡಿಯೇ ವಿಪಿಎಫ್ಗೂ ಇದೆ. ದೀರ್ಘಾವಧಿ ಲಾಭ ಪಡೆಯಬೇಕೆಂದು ಇಚ್ಛಿಸುವವರಿಗೆ ಇದು ಉತ್ತಮ ಆಯ್ಕೆಯಾಗಿದ್ದು, ಈಗ ನಿಮ್ಮ ವೆಚ್ಚಗಳನ್ನು ತಗ್ಗಿಸಿದರೆ ನಾಳೆಯ ದಿನಗಳಿಗೆ ಹಣಕಾಸಿನ ಭದ್ರತೆ ಸಾಧ್ಯವಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯ.
ವಿಪಿಎಫ್, ಇಪಿಎಫ್ ಮಾದರಿಯಲ್ಲಿಯೇ ಇರುವ ಇನ್ನೊಂದು ಹೂಡಿಕೆಯ ಅವಕಾಶ ಎಂದರೆ ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್). ಆದರೆ ಇದರಲ್ಲಿ ಅಷ್ಟು ಪ್ರಮಾಣದ ಬಡ್ಡಿ ಸಿಗುವುದಿಲ್ಲ. ಬದಲಾಗಿ 15 ವರ್ಷಗಳಲ್ಲಿ ಮೆಚೂರ್ ಆಗಿ ಹಣ ಕೈಗೆ ಸಿಗುತ್ತದೆ. ಆವಶ್ಯಕತೆಗೆ ತಕ್ಕಂತೆ ನಿರ್ದಿಷ್ಟ ಅವಧಿಯ ಬಳಿಕ ಸಾಲ ಅಥವಾ ಹಣ ಹಿಂಪಡೆಯುವ ಅವಕಾಶವೂ ಇರುತ್ತದೆ.
ಗರಿಷ್ಠ ಗಳಿಕೆಗೆ ನೆರವು
ಇಪಿಎಫ್ ಮತ್ತು ಎನ್‌ಪಿಎಸ್ ಈ ಎರಡರ ಹೂಡಿಕೆಯಲ್ಲಿ ಫ್ಲೆಕ್ಸಿಬಿಲಿಟಿಗೆ ಸಂಬಂಧಿಸಿದಂತೆ ಅನೇಕ ಆಯ್ಕೆಗಳನ್ನು ನೀಡಲಾಗಿದೆ. ಹಣ ಹಿಂಪಡೆಯಲು ಅನುಕೂಲ ವಾಗುವಂತೆ ಹೊಸ ನಿಯಮ ರೂಪಿಸಲಾಗಿದ್ದು, ಇಪಿಎಫ್ ಮತ್ತು ಎನ್‌ಪಿಎಸ್‌ಗಳ ನಡುವೆ ಪೋರ್ಟ ಬಿಲಿಟಿಗೂ ಈಗ ಅವಕಾಶವಿದೆ. ನಿವೃತ್ತಿ ಹೊತ್ತಿಗೆ ಇವುಗಳ ಮೂಲಕ ಗರಿಷ್ಠ ಗಳಿಕೆಯನ್ನು ಹೊಂದಲು ನೆರವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.