ಅಮೆರಿಕವನ್ನು ಒಗ್ಗೂಡಿಸಲು ಪ್ರಯತ್ನಿಸುತ್ತೇನೆ, ವಿಭಜನೆಯನ್ನಲ್ಲ: ನೂತನ ಅಧ್ಯಕ್ಷ ಜೋ ಬಿಡೆನ್
Team Udayavani, Nov 8, 2020, 9:51 AM IST
ವಾಷಿಂಗ್ಟನ್ ಡಿಸಿ: ಇನ್ನು ಮುಂದೆ ಅಮೆರಿಕದಲ್ಲಿ ದೇಶವನ್ನು ವಿಭಜಿಸುವ ಅಧ್ಯಕ್ಷರಿರುವುದಿಲ್ಲ, ದೇಶವನ್ನು ಒಗ್ಗೂಡಿಸುವ ಅಧ್ಯಕ್ಷರಿರುತ್ತಾರೆ ಎಂದು ಅಮೆರಿಕ ನೂತನ ನಿಯೋಜಿತ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಬಳಿಕ ದೇಶವನ್ನು ಉದ್ದೇಶಿಸಿ ಜೋ ಬೈಡನ್ ಮೊದಲ ಭಾಷಣ ಮಾಡಿದ್ದು, “ದೇಶದ ಜನರು ಮಾತನಾಡಿದ್ದಾರೆ, ಅವರು ನಮಗೆ ಪರಿಪೂರ್ಣ ಗೆಲುವನ್ನು ನೀಡಿದ್ದಾರೆ. ಹಿಂದಿನ ಎಲ್ಲಾ ಚುನಾವಣೆಗಿಂತ ಅತ್ಯಧಿಕ ಮತಗಳನ್ನು ನಾವು ಪಡೆದಿದ್ದೇವೆ ಎಂದರು.
“ನಾನು ಅಧ್ಯಕ್ಷನಾಗಿ ಪ್ರಮಾಣ ಮಾಡುತ್ತೇನೆ. ನಮಗೆ ಒಗ್ಗಟ್ಟು ಮತ್ತು ಒಕ್ಕೂಟ ವ್ಯವಸ್ಥೆ ಬೇಕು. ಅಧ್ಯಕ್ಷರು ಕೆಂಪು ರಾಜ್ಯಗಳು, ನೀಲಿ ರಾಜ್ಯಗಳು ಎಂದು ನೋಡುವುದಿಲ್ಲ. ಅಮೆರಿಕವಾಗಿ ನೋಡುತ್ತೇವೆ” ಎಂದು ಜೋ ಬಿಡೆನ್ ಹೇಳಿದರು.
ಟ್ರಂಪ್ ಬೆಂಬಲಿಗರು ನಮ್ಮ ಶತ್ರುಗಳಲ್ಲ. ಅವರು ಕೂಡಾ ಅಮೆರಿಕನ್ನರೇ. ಅಮೆರಿಕದಲ್ಲಿ ರಾಕ್ಷಸೀಕರಣದ ಯುಗಾಂತ್ಯದ ಆರಂಭ ಈಗಿನಿಂದಲೇ ಆರಂಭವಾಗಲಿ’ ಎಂದು ಬಿಡೆನ್ ಹೇಳಿದರು. ‘ನಾನು ಅಮೆರಿಕ ಅಧ್ಯಕ್ಷನಾಗಿ ಈ ದೇಶದ ಆತ್ಮಕ್ಕೆ ಮರುಜೀವ ತುಂಬಲು, ಈ ದೇಶದ ಬೆನ್ನೆಲುಬಾದ ಮಧ್ಯಮ ವರ್ಗದವರಿಗೆ ಪುಷ್ಟಿ ತುಂಬಲು ಮತ್ತು ಅಮೆರಿಕಕ್ಕೆ ಮತ್ತೆ ಜಾಗತಿಕ ಗೌರವ ಸಿಗಲು ನಾನು ಈ ಕಚೇರಿಯನ್ನು ಬಳಸಿಕೊಳ್ಳುತ್ತೇನೆ ಎಂದು ಜೋ ಬಿಡೆನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.