ಮೂಲಸೌಕರ್ಯ ಗಳಿಲ್ಲದೆ ಪರದಾಡುತ್ತಿರುವ ವಲಸಿಗರು
ಜೋಪಡಿಗೆ ಬಾಡಿಗೆ 500-2,000 ರೂ.: ಬಯಲು ಶೌಚಾಲಯದಲ್ಲಿ ನಿತ್ಯಕರ್ಮ!
Team Udayavani, Nov 8, 2020, 1:07 PM IST
ಪಣಂಬೂರು, ನ. 7: ಇಂದಿಗೂ ಶೌಚಾಲಯವಿಲ್ಲದ ನೂರಾರು ವಲಸಿಗ ಕುಟುಂಬಗಳು, ಮನೆ, ಜೋಪಡಿಗಳು ಆಧುನಿಕ ತಂತ್ರ ಜ್ಞಾನದ ದಿನ ಗಳಲ್ಲಿಯೂ ಅದೂ ಮಂಗಳೂರು ಸುತ್ತಮುತ್ತ ಕಾಣಸಿಗುತ್ತಿವೆ.
ಬೈಕಂಪಾಡಿಯ ಮೀನಕಳಿಯ ಬಳಿ ಸಮುದ್ರ ದಂಡೆ, ರೈಲ್ವೇ ಯಾರ್ಡ್ ಭಾಗಗಳಲ್ಲಿ ಒಂದು ಬಾರಿ ಸುತ್ತಾಡಿ ಬಂದರೆ ನಿಜ ಸ್ವರೂಪ ದರ್ಶನವಾಗುತ್ತದೆ. ರಾಜ್ಯದ ಉತ್ತರ ಕರ್ನಾಟಕದಿಂದ ಬಂದ ಕೂಲಿ ಕಾರ್ಮಿಕರಿಗೆ ತಮ್ಮ ಜಾಗದಲ್ಲಿ ಜೋಪಡಿ ನಿರ್ಮಿಸಲು ಅವಕಾಶ ಕೊಟ್ಟು 500ರಿಂದ 2,000 ರೂ.ಗಳ ವರೆಗೆ ಜಾಗದ ಮಾಲಕರು ಬಾಡಿಗೆ ವಸೂಲು ಮಾಡುತ್ತಾರೆ. ಆದರೆ ಅವರಿಗೆ ಸ್ನಾನ, ಶೌಚಾಲಯಕ್ಕೆ ಬೇಕಾದ ವ್ಯವಸ್ಥೆ ಮಾಡುವಲ್ಲಿ ಹಿಂದುಳಿದಿದ್ದಾರೆ. ನಿತ್ಯ ಕರ್ಮಕ್ಕಾಗಿ ರಸ್ತೆ ಬದಿ, ರೈಲ್ವೇ ಯಾರ್ಡ್ ಮತ್ತಿತರ ಪ್ರದೇಶ ಹುಡುಕಿಕೊಳ್ಳುತ್ತಾರೆ. ಇನ್ನು ಕೆಲವರಂತೂ ರಸ್ತೆ ಬದಿ ನಾಲ್ಕು ಪ್ಲಾಸ್ಟಿಕ್ ಹೊದಿಕೆ ಕಟ್ಟಿ ಸ್ನಾನಗೃಹ ನಿರ್ಮಿಸಿದ್ದಾರೆ. ಆದರೆ ರಸ್ತೆ ಮೇಲೆಯೇ ಈ ನೀರು ಹರಿದು ಪಾದಚಾರಿಗಳು ಸಂಕಷ್ಟ ಎದುರಿ ಸುವಂತಾಗಿದೆ. ಈ ಭಾಗದಲ್ಲಿ ಐವತ್ತಕ್ಕೂ ಮಿಕ್ಕಿ ಜೋಪಡಿಗಳಿದ್ದು ಇನ್ನೂರಕ್ಕೂ ಮಿಕ್ಕಿ ಕಾರ್ಮಿಕರು ನಿತ್ಯ ಜೀವನ ಸಾಗಿಸುತ್ತಿದ್ದಾರೆ.
ಶುಚಿತ್ವದ ಕೊರತೆ;ಆರೋಗ್ಯ ಸಮಸ್ಯೆ :
ಮಂಗಳೂರು ಹೊರವಲಯದ ಪ್ರವಾಸಿ ಸಮುದ್ರ ತೀರ ಪ್ರದೇಶಗಳಲ್ಲಿ ಹಣ ಕೊಟ್ಟು ಬಳಸುವ ಶೌಚಾಲಯವಿಲ್ಲ. ಇದರ ಜತೆಗೆ ಈ ಭಾಗದಲ್ಲಿ ಕೆಲವೊಂದು ಬಾಡಿಗೆದಾರರು ಶೌಚಾಲಯ ನಿರ್ಮಿಸಿ ಕೊಟ್ಟಿದ್ದಾರೆ. ಇನ್ನುಳಿದವರು ಬಾಡಿಗೆ ಮಾತ್ರ ಪಡೆಯುತ್ತಾರೆ. ಮೂಲಸೌಕರ್ಯ ನೀಡಿಲ್ಲ. ಜೋಪಡಿಯಲ್ಲಿರುವ ಪುಟ್ಟ ಮಕ್ಕಳು ಕೂಡ ಈ ಬಯಲು ಶೌಚಾಲಯದ ದುಷ್ಪರಿಣಾಮ ಎದುರಿಸುತ್ತಿದ್ದಾರೆ. ಶುಚಿತ್ವದ ಕೊರತೆಯಿಂದ ನೆಗಡಿ, ಕೆಮ್ಮು, ಹೊಟ್ಟೆ ನೋವು ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿರುವುದು ಕಂಡು ಬರುತ್ತಿದೆ. ಪಣಂಬೂರು, ಬೈಕಂಪಾಡಿ, ಮುಕ್ಕ ಸಹಿತ ಈ ಭಾಗದಲ್ಲಿ ಸಮುದ್ರ ತೀರದುದ್ದಕ್ಕೂ ವಲಸೆ ಕಾರ್ಮಿಕರು ಜೋಪಡಿ ನಿರ್ಮಿಸಿ ಕೊಂಡಿದ್ದಾರೆ. ಇನ್ನೊಂದೆಡೆ ಜಾಗವಿದ್ದ ಕಡೆಯಲ್ಲೆಲ್ಲ ತಗಡು ಶೀಟು ಹಾಕಿ ಕಾರ್ಮಿಕರಿಗೆ ಬಾಡಿಗೆ ನೀಡಲಾಗಿದೆ.
ಎಚ್ಚರಿಕೆ ನೀಡಿದ್ದೇವೆ :
ಇಲ್ಲಿನ ಜಾಗ ಬಾಡಿಗೆ ನೀಡಿದ ಸ್ಥಳಕ್ಕೆ ಭೇಟಿ ನೀಡಿ ಮಾಲಕರಿಗೆ ಎಚ್ಚರಿಕೆ ನೀಡಿದ್ದೇವೆ. ಸೂಕ್ತ ಶೌಚಾಲಯ ಕಟ್ಟಿಕೊಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದಲ್ಲಿ ಪಾಲಿಕೆಯ ಆರೋಗ್ಯ ಮತ್ತು ಪರಿಸರ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಸುರತ್ಕಲ್ ವಲಯ ಆರೋಗ್ಯಾಧಿಕಾರಿ ಸುಶಾಂತ್, ಸುರತ್ಕಲ್ ವಲಯ ಪರಿಸರ ಅಧಿಕಾರಿ ದಯಾನಂದ್ ಅವರು ತಿಳಿಸಿದ್ದಾರೆ.
ರೋಗ ಹರಡುವ ಭೀತಿ : ನಾವು ಇಲ್ಲಿಯೇ ಅನೇಕ ವರ್ಷಗಳಿಂದ ವಾಸಿಸುತ್ತಿದ್ದೇವೆ. ಈ ಭಾಗದಲ್ಲಿ ಬಾಡಿಗೆಗೆ ಕುಳಿತುಕೊಳ್ಳಲು ಜಾಗ ನೀಡಿದರೂ ಬೇಕಾದ ಮೂಲಸೌಕರ್ಯ ನಿರ್ಮಿಸಿಕೊಡದೆ ಪರಿಸರ ಮಾಲಿನ್ಯವಾಗುತ್ತಿದೆ. ಬಯಲು ಶೌಚದಿಂದ ನಮ್ಮ ಸುತ್ತಮುತ್ತ ರೋಗ ಹರಡುವ ಭೀತಿ ವ್ಯಕ್ತವಾಗಿದೆ. -ಅನಂತ ಐತಾಳ್, ಮಾಜಿ ಅಧ್ಯಕ್ಷರು, ಪಣಂಬೂರು ಶ್ರೀ ನಂದನೇಶ್ವರ ವ್ಯವಸ್ಥಾಪನ ಸಮಿತಿ
-ಲಕ್ಷ್ಮೀನಾರಾಯಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.