![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Nov 8, 2020, 1:12 PM IST
ತೆಕ್ಕಟ್ಟೆ: ಇಲ್ಲಿನ ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳ್ತೂರು ಸಮೀಪದ ಹಲೂ¤ರು ಕೃಷಿಭೂಮಿಯಲ್ಲಿ ಭತ್ತದ ಕಟಾವಿಗೆ ತೆರಳುತ್ತಿದ್ದ ಕಟಾವು ಯಂತ್ರ ಚಾಲಕನ ನಿಯಂತ್ರಣ ತಪ್ಪಿ ಆವೆಮಣ್ಣಿನ ಹೊಂಡಕ್ಕೆ ಬಿದ್ದು ಚಾಲಕ ಅಪಾಯದಿಂದ ಪಾರಾದ ಘಟನೆ ಸಂಭವಿಸಿದೆ.
ತಮಿಳುನಾಡು ಮೂಲದ ರವಿ ಮಾಲಕತ್ವದ ಭತ್ತದ ಕಟಾವು ಯಂತ್ರವು ಉಳೂ¤ರು ಸುತ್ತಮುತ್ತಲ ಪರಿಸರದಲ್ಲಿನ ಕೃಷಿಭೂಮಿಯಲ್ಲಿ ಕಳೆದ ಹಲವು ದಿನಗಳಿಂದಲೂ ಕಾರ್ಯಚರಿಸುತ್ತಿದ್ದು, ಹಲೂ¤ರು ಭಾಗದ ಕೃಷಿಕ ಬಸವ ಮಡಿವಾಳ ಎನ್ನುವವರ ಕೃಷಿಭೂಮಿಯಲ್ಲಿನ ಕಟಾವು ಕಾರ್ಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕೃಷಿಭೂಮಿಯ ಸಮೀಪದಲ್ಲಿಯೇ ಇರುವ ಅಪಾಯಕಾರಿ ಆವೆಮಣ್ಣಿನ (ಕೊಜೆ ಮಣ್ಣು) ಹೊಂಡಕ್ಕೆ ಆಯಾತಪ್ಪಿ ಉರುಳಿದೆ . ಪರಿಣಾಮ ಸಂಪೂರ್ಣ ವಾಗಿ ಕಟಾವು ಯಂತ್ರ ನೀರಿನಲ್ಲಿ ಮುಳುಗಡೆಯಾಗಿದ್ದು ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಪರಿಸರದ ನೂರಾರು ರೈತರು ಸ್ಥಳಕ್ಕೆ ಧಾವಿಸಿ , ಕ್ರೇನ್ ಹಾಗೂ ಜೆಸಿಬಿ ಯಂತ್ರಗಳ ಸಹಾಯದಿಂದ ಪ್ರಯತ್ನಿಸಿದ್ದರೂ ಕಟಾವು ಯಂತ್ರ ವನ್ನು ಮೇಲೆತ್ತಲು ಕಷ್ಟಸಾಧ್ಯವಾಯಿತು. ತದನಂತರ ಎರಡು ಹಿತಾಚಿ ಯಂತ್ರಗಳ ಸಹಾಯ ಹಾಗೂ ಸ್ಥಳೀಯ ನಿರಂತರ ಪ್ರಯತ್ನದಿಂದಾಗಿ ಮುಳುಗಡೆಯಾಗಿದ್ದ ಯಂತ್ರವನ್ನು ಮೇಲಕ್ಕೆ ಎತ್ತಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಕೃಷಿಕರಾದ ವಿಜಯ ಕುಮಾರ್ ಶೆಟ್ಟಿ ಹಲೂ¤ರು, ಸೀತಾರಾಮ ದೇವಾಡಿಗ, ಪ್ರತಾಪ್‌ಶೆಟ್ಟಿ ಉಳೂ¤ರು, ನಾಗು ಕುಲಾಲ್, ಸಂಜೀವ ಶೆಟ್ಟಿ , ಕೋಟಿ ಪೂಜಾರಿ, ಸಂಜೀವ ಶೆಟ್ಟಿ, ಬಸವ ಮಡಿವಾಳ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ: ಟಿ.ಲೋಕೇಶ್‌ಆಚಾರ್ಯ ತೆಕ್ಕಟ್ಟೆ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.