ಗೀಳು ಮನೋರೋಗ (ಒಸಿಡಿ) : ಶುಚಿತ್ವದ ವ್ಯಸನಕ್ಕಿಂತಲೂ ಮಿಗಿಲಾದ ಸಮಸ್ಯೆ


Team Udayavani, Nov 8, 2020, 1:55 PM IST

ಗೀಳು ಮನೋರೋಗ (ಒಸಿಡಿ) : ಶುಚಿತ್ವದ ವ್ಯಸನಕ್ಕಿಂತಲೂ ಮಿಗಿಲಾದ ಸಮಸ್ಯೆ

ಒಬ್ಬ ವ್ಯಕ್ತಿಯು ಪದೇಪದೆ ವಸ್ತುಗಳನ್ನು ಶುಚಿಯಾಗಿ, ಅಚ್ಚುಕಟ್ಟಾಗಿ ಇರಿಸುವ ಅಭ್ಯಾಸವನ್ನು ಹೊಂದಿದ್ದರೆ ಆತನಿಗೆ ಗೀಳು ಮನೋರೋಗ ಇದೆ ಎಂದು ತಮಾಷೆ ಮಾಡುವುದನ್ನು ನೀವು ಕೇಳಿರಬಹುದು. ಇದೇ ಕಾರಣದಿಂದಾಗಿ ಗೀಳು ಮನೋರೋಗ (ಒಸಿಡಿ -ಒಬ್ಸೆಸಿವ್‌ ಕಂಪಲ್ಶನ್‌ ಡಿಸಾರ್ಡರ್‌)ಯನ್ನು ವ್ಯಾಪಕವಾಗಿ ತಪ್ಪಾಗಿ ಪರಿಭಾವಿಸಲಾಗುತ್ತದೆ. ಒಬ್ಬ ವ್ಯಕ್ತಿಗೆ ವಸ್ತುಗಳನ್ನು ಶುಚಿಯಾಗಿ, ಶುಭ್ರವಾಗಿ ಇರಿಸಿಕೊಳ್ಳುವ, ಅಚ್ಚುಕಟ್ಟಾಗಿ ಇರಿಸಿಕೊಳ್ಳುವ ಆದ್ಯತೆ ಇದ್ದರೆ ಅವರಿಗೆ ಗೀಳು ಮನೋರೋಗ ಇದೆ ಎಂದು ಭಾವಿಸಲಾಗುತ್ತದೆ. ಆದರೆ ಇದು ನಿಜವಲ್ಲ. ಗೀಳು ಮನೋರೋಗ ಹೊಂದಿರುವವರ ಬಗ್ಗೆ ಅತ್ಯಂತ ದೊಡ್ಡ ತಪ್ಪು ಕಲ್ಪನೆ ಎಂದರೆ, ಅವರು ಶುಚಿತ್ವದ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ ಎಂಬುದು. ಇದು ನಿಜವಲ್ಲ, ಬದಲಾಗಿ, ಅವರು ಶುಚಿಗೊಳಿಸುವುದಕ್ಕೆ ಕಟ್ಟು ಬಿದ್ದವರಂತೆ ತುಂಬಾ ಕಷ್ಟದಿಂದ ಆ ಕೆಲಸವನ್ನು ಪದೇ ಪದೆ ಮಾಡುತ್ತಿರುತ್ತಾರೆ.

ಆದ್ದರಿಂದ ಗೀಳು ಮನೋರೋಗ ಎಂಬುದು ಒಂದು ದೀರ್ಘ‌ಕಾಲೀನ ಮಾನಸಿಕ ಆರೋಗ್ಯ ಸಮಸ್ಯೆಯಾಗಿದೆ. ಇದು ಮನುಷ್ಯನ ಆಲೋಚನಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಿ ಆತ/ ಆಕೆಯಲ್ಲಿ ತೀವ್ರವಾದ ಋಣಾತ್ಮಕ ಭಾವನೆಗಳು ಉಂಟಾಗುವಂತೆ ಮಾಡುತ್ತದೆಯಲ್ಲದೆ, ಸಹಜವಾಗಿ ವರ್ತಿಸುವುದಕ್ಕೆ ತೊಡಕನ್ನು ಉಂಟು ಮಾಡುತ್ತದೆ. ಇದು ಯಾವುದೇ ವಯಸ್ಸಿನ, ಯಾವುದೇ ವರ್ಗದ, ಯಾವುದೇ ವಿಧದ ಜನರಲ್ಲಿ ಉಂಟಾಗಬಹುದಾಗಿದೆ. ಗೀಳು ಮನೋರೋಗದ ಗುಣಲಕ್ಷಣಗಳಲ್ಲಿ ಗೀಳು ಮತ್ತು ಒತ್ತಾಯಪೂರ್ವಕ ತೊಡಗುವಿಕೆ ಪ್ರಧಾನವಾಗಿವೆ. ಗೀಳು (ಒಬೆÕಶನ್‌) ಎಂದರೆ ಸದಾ ಕಾಡುವ ಅವೈಚಾರಿಕ ಆಲೋಚನೆಗಳು ಅಥವಾ ಆಗ್ರಹಗಳಾಗಿದ್ದು, ಇವುಗಳಿಂದ ಗಮನಾರ್ಹ ಒತ್ತಡ ಉಂಟಾಗುತ್ತದೆ. ರೋಗಿಯು ಈ ಒತ್ತಡವನ್ನು ನಿವಾರಿಸುವುದಕ್ಕಾಗಿ ಆಲೋಚನೆಗಳನ್ನು ಬದಲಿಸಲು ಪ್ರಯತ್ನಿಸುತ್ತಾನೆ ಅಥವಾ ಕ್ರಿಯೆಗಳಲ್ಲಿ ತೊಡಗಿಕೊಳ್ಳುತ್ತಾನೆ. “ಒತ್ತಾಯಪೂರ್ವಕ ತೊಡಗುವಿಕೆ’ (ಕಂಪಲ್ಶನ್‌) ಎಂದರೆ ಗೀಳಿನಿಂದ ಉಂಟಾದ ಒತ್ತಡ/ ಉದ್ವಿಗ್ನತೆಗಳಿಗೆ ಪ್ರತಿಕ್ರಿಯೆಯಾಗಿ ರೋಗಿಯು ತೊಡಗಲು ಒತ್ತಾಯಕ್ಕೆ ಒಳಗಾಗುವ ಕ್ರಿಯೆಗಳು ಅಥವಾ ಅವು ಉಂಟಾಗುವುದರಿಂದ ಸೃಷ್ಟಿಯಾಗುವ ಅಸಹಜ ಸ್ಥಿತಿಯನ್ನು ತಡೆಯುವುದಕ್ಕಾಗಿ ತೊಡಗಲು ಒತ್ತಾಯಪಡುವ ಕ್ರಿಯೆಗಳು. ಈ ಒತ್ತಾಯಗಳು ಅವೈಚಾರಿಕ, ಅತಾರ್ಕಿಕ ಅಥವಾ ಅತಿಯಾದ ಸ್ವರೂಪದಲ್ಲಿ ಇರಬಹುದು.

1895ರಲ್ಲಿ ಫಾಯ್ಡ ಈ ಸಮಸ್ಯೆಯನ್ನು “ಒಬ್ಸೆಸಿವ್‌ ನ್ಯೂರೋಸಿಸ್‌’ ಎಂಬುದಾಗಿ ಕರೆದ. ಗೀಳು ಮನೋರೋಗವು ಶತಮಾನಗಳ ಹಿಂದಿನಿಂದಲೂ ದಾಖಲಾಗಿರುವಂತಹ ತೊಂದರೆಯಾಗಿದೆ. ಗೀಳು ಮನೋರೋಗವು ವ್ಯಕ್ತಿಯ ಸಾಮಾಜಿಕ ಪ್ರೌಢತೆ ಮತ್ತು ಅಭಿವೃದ್ಧಿಗೆ ತೊಡಕು ಉಂಟು ಮಾಡುವ ಸಾಧ್ಯತೆಯಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ಗೀಳು ಮನೋರೋಗವನ್ನು ಆರ್ಥಿಕ ನಷ್ಟ ಮತ್ತು ಜೀವನ ಗುಣಮಟ್ಟ ಕುಂದಲು ಕಾರಣವಾಗುವ ಹತ್ತು ಅನಾರೋಗ್ಯ ಸ್ಥಿತಿಗಳಲ್ಲಿ ಒಂದು ಎಂಬುದಾಗಿ ಪರಿಗಣಿಸಿದೆ.
ಮನೋವಿಕಾಸ ವೈಜ್ಞಾನಿಕವಾಗಿ ಗೀಳು ಮನೋರೋಗವು ವಿಭಿನ್ನ ಲಕ್ಷಣಗಳ ಒಂದು ಸ್ಥಿತಿ. ಹಲವು ವಿಧದ ಗೀಳುಗಳು ಮತ್ತು ಒತ್ತಾಯಗಳನ್ನು ಹೊಂದಿರುತ್ತದೆ. ಅದು ಶುಚಿತ್ವ ಮತ್ತು ತೊಳೆಯುವುದಕ್ಕೆ ಮಾತ್ರವೇ ಸಂಬಂಧಿಸಿದ್ದು ಅಲ್ಲ. ಸ್ಥೂಲವಾಗಿ ಗೀಳು ಮತ್ತು ಒತ್ತಾಯಗಳೆರಡೂ ವಿವಿಧ ಸ್ವರೂಪ ಮತ್ತು ವಿಷಯಗಳನ್ನು ಹೊಂದಬಹುದಾಗಿದೆ. ಸ್ವರೂಪಗಳ ಆಧಾರದಲ್ಲಿ ಪ್ರಧಾನವಾದ ಐದು ವಿಧಗಳಿದ್ದು, ಅವು ಸಂಶಯ, ಅತಿಯಾದ ಆಲೋಚನೆ, ಭಯ, ಅತಾರ್ಕಿಕ ಚಿತ್ರಣ ಅಥವಾ ದೃಶ್ಯ ಕಲ್ಪನೆಗಳಾಗಿವೆ. ಒತ್ತಾಯಗಳಲ್ಲಿ ಒಳಪಡುವ ಮತ್ತು ನಿಯಂತ್ರಿಸಲ್ಪಡುವ ಎಂಬ ಎರಡು ವಿಧದ ಒತ್ತಾಯಗಳಿರುತ್ತವೆ. ವಿಷಯಗಳ ಆಧಾರದಲ್ಲಿ ಹಲವು ವಿಧಗಳನ್ನು ಗುರುತಿಸಬಹುದಾಗಿದ್ದು, ಕೊಳೆ ಮತ್ತು ಮಾಲಿನ್ಯ, ಸಮರೂಪತೆ, ಉದ್ವೇಗ, ಲೈಂಗಿಕ, ಆಂತರಿಕ, ವ್ಯಕ್ತಿತೆÌàತರ, ಅಂಕೆಸಂಖ್ಯೆಗಳು, ಅನಾರೋಗ್ಯ, ದೈವನಿಂದನೆ, ಧಾರ್ಮಿಕ… ಹೀಗೆ ಹಲವಾರಿರುತ್ತವೆ.

ಮನುಷ್ಯನ ಮೆದುಳು ಒಂದು ಸೂಪರ್‌ ಕಂಪ್ಯೂಟರ್‌ನಂತೆ. ಮಾಹಿತಿಯ ಸಂಸ್ಕರಣ, ವರ್ಗೀಕರಣ, ಸ್ವೀಕೃತವಾಗುವ ಮಾಹಿತಿ, ದತ್ತಾಂಶಗಳನ್ನು ಆದ್ಯತೆಗೊಳಪಡಿಸುವುದು, ಆಲೋಚನೆಗಳನ್ನು ಭಾವನಾತ್ಮಕ ಪ್ರತಿಕ್ರಿಯೆಗಳಾಗಿ ಪರಿವರ್ತಿಸುವ ಕೆಲಸ ಮಾಡುವ ವಿವಿಧ ಭಾಗಗಳು ಮೆದುಳಿನಲ್ಲಿವೆ. ಮೆದುಳಿನ ವಿವಿಧ ಭಾಗಗಳ ನಡುವೆ ಸಂವಹನ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾದಾಗ ಮಾಹಿತಿಯು ಸರಿಯಾಗಿ ಸಂಸ್ಕರಣಕ್ಕೆ ಒಳಪಡುವುದಿಲ್ಲ ಮತ್ತು ಇದರಿಂದಾಗಿ ಮೆದುಳು ತಪ್ಪುಗಳನ್ನು ಮಾಡಲು ಆರಂಭಿಸುತ್ತದೆ. ಗೀಳು ಮನೋರೋಗದ ವಿಚಾರದಲ್ಲಿಯೂ ಇದೇ ಆಗುತ್ತದೆ. ನಮ್ಮಲ್ಲಿ ಬಹುತೇಕರು ಯಾವುದೇ ಆಲೋಚನೆ ಅಥವಾ ನಂಬಿಕೆಯಿಂದ ಕಿರಿಕಿರಿ ಉಂಟಾದರೆ ಅದರಿಂದ ದೂರವಾಗುತ್ತೇವೆ. ಆದರೆ ಗೀಳು ಮನೋರೋಗವನ್ನು ಹೊಂದಿರುವ ವ್ಯಕ್ತಿಗೆ ಆ ಗೀಳನ್ನು ನಿಯಂತ್ರಿಸುವುದಕ್ಕೆ ಆಗುವುದಿಲ್ಲ.

 

ಸ್ವರೂಪಗಳು ಆಂತರಿಕ ಅಂಶಗಳಿಂದ ಪ್ರಭಾವಿತವಾದರೆ, ವಿಷಯಗಳು ಬಾಹ್ಯ ಅಂಶಗಳಿಂದ ಪ್ರಭಾವಿತವಾಗುತ್ತವೆ.
ಮೇಲ್ಕಂಡ ವಿವರಣೆಯನ್ನು ಕೆಲವು ಉದಾಹರಣೆಗಳ ಮೂಲಕ ತಿಳಿದುಕೊಳ್ಳಬಹುದು. ಕೆಲವು ಸಾಮಾನ್ಯವಾದ ಗೀಳುಗಳು ಹೀಗಿರುತ್ತವೆ:

  •  ಮಾಲಿನ್ಯ, ಕೊಳೆ ಅಥವಾ ಕೀಟಾಣುಗಳು ಅಂಟಿಕೊಳ್ಳುವ ಭಯ.
  •  ಯಾವುದನ್ನಾದರೂ ಮರೆತುಬಿಡುವ ಭಯ (ಉದಾ: ಗ್ಯಾಸ್‌ ಸ್ಟವ್‌ ಆರಿಸಲು ಮರೆಯುವುದು).
  • ಸ್ವಯಂ ಅಥವಾ ಇತರರನ್ನು ಗಾಯಗೊಳಿಸುವ ಭಯ.
  •  ಆಕ್ರಮಣಕಾರಿಯಾದ ಅಥವಾ ಲೈಂಗಿಕವಾದ ಬೇಡದ ಆಲೋಚನೆಗಳು.
  •  ಕೆಲಸವನ್ನು ಸರಿಪಡಿಸುವ ಅಥವಾ ಚೆನ್ನಾಗಿ ಮಾಡುವ ಅತಿಯಾದ ಆಲೋಚನೆಗಳು.
  • ನೈತಿಕತೆ ಅಥವಾ ಧರ್ಮದ ಬಗ್ಗೆ ಅತಿಯಾದ ನಂಬಿಕೆಗಳು.
  •  ಅತಿಯಾದ ಮೂಢನಂಬಿಕೆಗಳು (ಉದಾ: ಪಾದಚಾರಿ ಮಾರ್ಗದ ಬಿರುಕಿನ ಮೇಲೆ ಕಾಲಿಟ್ಟರೆ ಮಗುವಿಗೆ ಹಾನಿಯಾಗುತ್ತದೆ ಎಂಬ ಮೂಢನಂಬಿಕೆ).
    ಹೀಗೆಯೇ ಒತ್ತಾಯಗಳು ಕೂಡ ಆಂತರಿಕವಾದ ಗೀಳುಗಳನ್ನು ಆಧರಿಸಿ ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳಬಹುದು. ಉದಾಹರಣೆಗೆ, ಕೀಟಾಣುಗಳ ಬಗ್ಗೆ ರೋಗಿ ಹೊಂದಿರುವ ಗೀಳು ಆಗಾಗ ಕೈತೊಳೆಯುವ ಒತ್ತಾಯಪೂರ್ವಕ ಕ್ರಿಯೆಯಾಗಿ ಪ್ರಕಟಗೊಳ್ಳಬಹುದು. ತಲೆಯಲ್ಲಿ ಯಾವುದೋ ಒಂದು ಶಬ್ದವು ಹತ್ತಾರು ಬಾರಿ ಪುನರಾವರ್ತಿಸುವುದು, ಮೇಜನ್ನು ಹತ್ತು ಬಾರಿ ಕೈಯಿಂದ ಕುಟ್ಟುವಂತಹ ದೈಹಿಕ ಕ್ರಿಯೆಯಂತಹ ಸ್ವರೂಪದಲ್ಲಿಯೂ ಒತ್ತಾಯದ ಕ್ರಿಯೆಗಳು ಕಾಣಿಸಿಕೊಳ್ಳಬಹುದು.

ಕೆಲವು ಸಾಮಾನ್ಯವಾದ ಒತ್ತಾಯಗಳೆಂದರೆ,  :

  •  ಮತ್ತೆ ಮತ್ತೆ ಎಣಿಸುವುದು, ಪದಗಳ ಪುನರಾವರ್ತನೆ ಅಥವಾ ತಟ್ಟುವುದು, ಕುಟ್ಟುವುದು.
  •  ಗ್ಯಾಸ್‌ ಸ್ಟವ್‌ ಗುಂಡಿ, ಬಾಗಿಲಿನ ಬೀಗ, ದೀಪಗಳ ಸ್ವಿಚ್‌ ಇತ್ಯಾದಿಗಳನ್ನು ಪದೇ ಪದೆ ಪರಿಶೀಲಿಸುವುದು.
  •  ಅತಿಯಾಗಿ ತೊಳೆಯುವುದು ಅಥವಾ ಶುಚಿಗೊಳಿಸುವುದು.
  •  ವಸ್ತುಗಳನ್ನು ಒಂದು ನಿರ್ದಿಷ್ಟ ಸ್ವರೂಪದಲ್ಲಿ ಮತ್ತೆ ಮತ್ತೆ ಜೋಡಿಸುವುದು.
  •  ಯಾವುದೋ ಒಂದು ನಿರ್ದಿಷ್ಟ ರೂಢಿ ಅಥವಾ ವಿಧಾನವನ್ನು ಮತ್ತೆ ಮತ್ತೆ ಅನುಸರಿಸುವುದು.. ಹಳೆಯ ದಿನಪತ್ರಿಕೆಗಳು, ಹಾಲಿನ ಪ್ಯಾಕೆಟ್‌ಗಳಂತಹ ಎಸೆಯಬೇಕಾದ ವಸ್ತುಗಳನ್ನು ಶೇಖರಿಸಿಡುವುದು.
  • ಮೇಲೆ ಹೇಳಿರುವುದು ಗೀಳು ಮನೋರೋಗದ ಲಕ್ಷಣಗಳ ಸಂಪೂರ್ಣ ಪಟ್ಟಿ ಅಲ್ಲವೇ ಅಲ್ಲ. ಗೀಳು ಮನೋರೋಗವು ಮೇಲೆ ಹೇಳಿರದ ಹತ್ತು ಹಲವು ಲಕ್ಷಣಗಳನ್ನು ಹೊಂದಿರಬಹುದಾಗಿದೆ. ನಿಮ್ಮಲ್ಲಿ ಅಥವಾ ನಿಮ್ಮ ಪರಿಚಯದವರು ಇಲ್ಲಿ ಹೇಳದೆ ಇರುವ ಗೊಂದಲಕಾರಿಯಾದ ಮತ್ತು ಬೇಡದ ಒತ್ತಾಯ ಅಥವಾ ಗೀಳುಗಳನ್ನು ಹೊಂದಿದ್ದರೆ ಅದು ಗೀಳು ಮನೋರೋಗ ಅಲ್ಲ ಎಂದರ್ಥವಲ್ಲ. ಇವು ಅಂತಹ ವ್ಯಕ್ತಿಗಳ ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ಬಾಧಿಸುತ್ತಿದ್ದರೆ ಅಥವಾ ದಿನದಲ್ಲಿ ಹಲವು ತಾಸುಗಳನ್ನು ಅದಕ್ಕಾಗಿ ವಿನಿಯೋಗಿಸಬೇಕಾಗುತ್ತಿದ್ದರೆ, ಸಂಬಂಧಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದರೆ, ಕೆಲಸ ಅಥವಾ ಕಲಿಕೆಗೆ ತೊಂದರೆ ಉಂಟು ಮಾಡುತ್ತಿದ್ದರೆ ಅದು ಗೀಳು ಮನೋರೋಗದ ಅಂಶವಾಗಿರಬಹುದಾಗಿದೆ. ಆದ್ದರಿಂದ ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳಿತು.

 

ಡಾ| ಕೃತಿಶ್ರೀ ಸೋಮಣ್ಣ
ಕನ್ಸಲ್ಟಂಟ್‌ ಸೈಕಿಯಾಟ್ರಿಸ್ಟ್‌
ಕೆಎಂಸಿ, ಮಂಗಳೂರು

ಟಾಪ್ ನ್ಯೂಸ್

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

24-pavagada

Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

8

Kaup town: ಟ್ರಾಫಿಕ್‌ ಒತ್ತಡ, ಪಾರ್ಕಿಂಗ್‌ ಕಿರಿಕಿರಿ

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.