ಸ್ಕೋಲಿಯೋಸಿಸ್‌ ಎಂದರೇನು?


Team Udayavani, Nov 8, 2020, 2:05 PM IST

arogyavani-tdy-3

ಸ್ಕೋಲಿಯೋಸಿಸ್‌ ಅಥವಾ ಗೂನುಬೆನ್ನು ಅಂದರೆ ಬೆನ್ನೆಲುಬು ಅಸಹಜವಾಗಿ ಒಂದು ಪಕ್ಕಕ್ಕೆ ಬಾಗುವುದು. ಈ ರೀತಿ ಬೆನ್ನೆಲುಬು ಪಕ್ಕಕ್ಕೆ ಬಾಗಿದಾಗ ಬೆನ್ನಿನ ಹಿಂಭಾಗದ ಆ ಭಾಗವು ಕಾಣಿಸುತ್ತದೆ. ಸುಮಾರು 2-3% ನಷ್ಟು ಹದಿಹರೆಯದವರನ್ನು ಅವರ ಬೆಳವಣಿಗೆಯ ಅಂತಿಮ ಹಂತದಲ್ಲಿ ಸ್ಕೋಲಿಯೋಸಿಸ್‌ ಬಾಧಿಸುತ್ತದೆ. ಬೆನ್ನು ಸಾಧಾರಣ ರೀತಿಯಲ್ಲಿ ವಕ್ರವಾದರೆ ಅಥವಾ ತಿರುಚಿಕೊಂಡರೆ ಸಾಮಾನ್ಯವಾಗಿ ಅದರಿಂದ ಯಾವ ತೊಂದರೆಯೂ ಆಗದು. ಪ್ರತಿ 1,000 ಹದಿಹರೆಯದವರಲ್ಲಿ 3-5 ಜನರ ವಕ್ರತೆಯ ತೊಂದರೆಗೆ ಚಿಕಿತ್ಸೆಯ ಅಗತ್ಯವಿರುತ್ತದೆ. ಸ್ಕೋಲಿಯೋಸಿಸ್‌ಗೆ ಚಿಕಿತ್ಸೆ ನೀಡದೆ ಹಾಗೆಯೇ ಬಿಟ್ಟರೆ, ಸಮಸ್ಯೆ ಗಂಭೀರವಾಗಬಹುದು. ವ್ಯಕ್ತಿಯ ಚಲನವಲನಕ್ಕೆ ತೊಂದರೆಯಾಗಬಹುದು, ಬೆನ್ನು ನೋವು ಬರಬಹುದು, ಬೆನ್ನಿನ ವಕ್ರತೆಯ ಕಾರಣದಿಂದಾಗಿ ಸಂಧಿವಾತ ಹಾಗೂ ಕಶೇರುಖಂಡದ ಕಾಯಿಲೆಗಳು ಉಂಟಾಗಬಹುದು. ಕೆಲವು ರೀತಿಯ ಗಂಭೀರ ಸಂದರ್ಭಗಳಲ್ಲಿ ಶ್ವಾಸಕೋಶ ಹಾಗೂ ಹೃದಯದ ಚಟುವಟಿಕೆಗಳಿಗೂ ಸಹ ತೊಂದರೆಯಾಗಬಹುದು.
ಸ್ಕೋಲಿಯೋಸಿಸ್‌ ಅನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದೇ ಈ ಕಾಯಿಲೆಯು ಬೆಳೆಯದಂತೆ ತಡೆಗಟ್ಟಬಹುದಾದ ಉಪಾಯವಾಗಿದೆ. ರೂಢಿಯ ದೈಹಿಕ ಪರೀಕ್ಷೆಯ ಭಾಗವಾಗಿಯೂ ಸಹ ಸ್ಕೋಲಿಯೋಸಿಸ್‌ ಅನ್ನು ಪತ್ತೆ ಮಾಡಬಹುದು. ಮಕ್ಕಳ ನಿಯಮಿತ ಆರೋಗ್ಯ ತಪಾಸಣಾ ಸಂದರ್ಭದಲ್ಲಿ ಅವರ ಪ್ರಾಥಮಿಕ ಆರೋಗ್ಯ ಆರೈಕೆದಾರರ ಮೂಲಕ ಅವರಿಗೆ ಸ್ಕೋಲಿಯೋಸಿಸ್‌ ಅಪಾಯವಿದೆಯೇ ಎಂದು ತಪಾಸಣೆ ಮಾಡಲು ಸೂಚನೆಯನ್ನು ನೀಡಲಾಗುತ್ತದೆ.

ಕಾರಣಗಳೇನು? :

  • 80-85% ಪ್ರಕರಣಗಳಲ್ಲಿ, ಸ್ಕೋಲಿಯೋಸಿಸ್‌ಗೆ ನಿಖರ ಕಾರಣಗಳು ಏನೆಂಬುದು ಪತ್ತೆಯಾಗುವುದಿಲ್ಲ. ಈ ಸ್ಥಿತಿಗೆ ಈಡಿಯೋಪ್ಯಾಥಿಕ್‌ ಸ್ಕೋಲಿಯೋಸಿಸ್‌ ಎಂದು ಹೆಸರು.
  • ಜನ್ಮಜಾತ ಊನಗಳ ಕಾರಣದಿಂದಲೂ, ಹೆಳವತನದ ಕಾರಣದಿಂದಲೂ ಅಥವಾ ಆಘಾತಗಳ ಕಾರಣದಿಂದಲೂ ಸ್ಕೋಲಿಯೋಸಿಸ್‌ ಉಂಟಾಗಬಹುದು. ವಂಶಪಾರಂಪರ್ಯವಾಗಿಯೂ ಕಾಣಿಸಿಕೊಳ್ಳುವ ಈ ಕಾಯಿಲೆಯು, ಹೆಣ್ಣು ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತದೆ.
  • ಹದಿಹರೆಯದವರಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಈ ಕಾಯಿಲೆಯು ಅವರ ಬೆಳವಣಿಗೆಯಲ್ಲಿ ಪ್ರಧಾನವಾಗಿರುವ ಕೊನೆಯ ಹಂತದಲ್ಲಿಯೇ ಕಾಣಿಸಿಕೊಳ್ಳುವುದು ಹೆಚ್ಚು.

ತಪಾಸಣೆ ಹೇಗೆ?:

  • ಸ್ಕೋಲಿಯೋಸಿಸ್‌ ಲಕ್ಷಣಗಳು ಗೋಚರಿಸಿದರೆ, ದೈಹಿಕ ಪರೀಕ್ಷೆಯ ಸಂದರ್ಭದಲ್ಲಿ ವೀಕ್ಷಣೆ (ಗಮನಿಸುವಿಕೆ) ಅಥವಾ ಸ್ಕೋಲಿಯೋಮೀಟರ್‌ನ ಉಪಯೋಗದಿಂದ ಈ ಕಾಯಿಲೆಯ ಸಂದೇಹಾಸ್ಪದ ಇರುವಿಕೆ ಪತ್ತೆಯಾಗಬಹುದು. ಸ್ಕೋಲಿಯೋಮೀಟರ್‌ ಎಂಬುದು ಎಷ್ಟರ ಮಟ್ಟಿಗೆ ಬೆನ್ನೆಲುಬು ವಕ್ರವಾಗಿದೆ ಎಂದು ಅಂದಾಜು ಮಾಡುವ ಒಂದು ಸಾಧನ.
  • ಬೆನ್ನೆಲುಬು ಪಕ್ಕಕ್ಕೆ ಬಾಗಿರುವ ಪ್ರಮಾಣವನ್ನು ಆಧರಿಸಿಕೊಂಡು, ವೈದ್ಯರು ಬೆನ್ನಿನ ಎಕ್ಸ್‌-ರೇ ತೆಗೆಯಲು ಸೂಚಿಸಬಹುದು. ಸ್ಕೋಲಿಯೋಸಿಸ್‌ ರಿಸರ್ಚ್‌ ಸೊಸೈಟಿಯ ವಿವರಣೆಯ ಪ್ರಕಾರ ಸ್ಕೋಲಿಯೋಸಿಸ್‌ ಅಂದರೆ ಬೆನ್ನೆಲುಬು 10 ಡಿಗ್ರಿ ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಾಗಿರುವಂತೆ  ಎಕ್ಸ್‌-ರೇಯಲ್ಲಿ ಗೋಚರಿಸುವುದು.

ಲಕ್ಷಣಗಳೇನು? :

  • ಒಂದು ಭುಜವು ಇನ್ನೊಂದು ಭುಜಕ್ಕಿಂತ ತುಸು ಎತ್ತರಕ್ಕಿರುವುದು.
  • ಒಂದು ಭುಜದ ಪಾರ್ಶ್ವವು ಮತ್ತೂಂದಕ್ಕಿಂತ ಎತ್ತರದಲ್ಲಿರುವುದು ಅಥವಾ ಎದ್ದು ಕಾಣಬಹುದು.
  • ಕೈಗಳು ಬದಿಗಳಲ್ಲಿ ಸಡಿಲವಾಗಿ ಜೋತುಬೀಳಬಹುದು, ದೇಹದ ಒಂದು ಬದಿಯ ಕೈ ಹಾಗೂ ದೇಹದ ನಡುವೆ ಬಹಳ ಅಂತರವಿರಬಹುದು.
  • ಒಂದು ಬದಿಯ ಸೊಂಟವು ಇನ್ನೊಂದು ಬದಿಯ ಸೊಂಟಕ್ಕಿಂತ ಎತ್ತರಕ್ಕಿರಬಹುದು ಅಥವಾ ಎದ್ದು ಕಾಣಬಹುದು.
  • ತಲೆಯು ಪೆಲ್ವಿಸ್‌ ಕೇಂದ್ರದಲ್ಲಿರದಿರುವುದು
  • ರೋಗಿಯನ್ನು ಹಿಂಭಾಗದಿಂದ ಪರೀಕ್ಷೆ ಮಾಡುವಾಗ ಮುಂದಕ್ಕೆ ಬಾಗಲು ಹೇಳಿದರೆ, ಬೆನ್ನು ಮೂಳೆಯು ನೇರವಾಗಿರುವಷ್ಟು ಹೊತ್ತು ಬೆನ್ನಿನ ಒಂದು ಬದಿಯು ಇನ್ನೊಂದಕ್ಕಿಂತ ಎತ್ತರವಿರುವಂತೆ ಕಾಣುತ್ತದೆ.

ಚಿಕಿತ್ಸೆ ಹೇಗೆ ? :

  • ಸ್ಕೋಲಿಯೋಸಿಸ್‌ಗೆ ಕೊಡಬಹುದಾದ ಚಿಕಿತ್ಸೆಗಳು ಅಂದರೆ ಗಮನಿಸುವುದು ಮತ್ತು ಬೆನ್ನಿನ ವಕ್ರತೆ ಹೆಚ್ಚುತ್ತಿಲ್ಲ ಅನ್ನುವುದನ್ನು ಖಚಿತಪಡಿಸಿಕೊಳ್ಳಲು, ಪ್ರತಿ 4-6 ತಿಂಗಳಿಗೆ ಮತ್ತೆ ಪರೀಕ್ಷೆ ಹಾಗೂ ಗಮನಿಸುವಿಕೆಯನ್ನು ಪುನರಾವರ್ತಿಸುವುದು.
  • 25-40 ಡಿಗ್ರಿಗಳಷ್ಟು ಬಾಗಿರುವ ಬೆನ್ನಿನ ವಕ್ರತೆಯನ್ನು ಸರಿಪಡಿಸಲು ಅಥವಾ ಆಧಾರ ನೀಡಲು ಬ್ರೇಸಿಂಗ್‌ ಅನ್ನು ಉಪಯೋಗಿಸಬಹುದು. ಬೆನ್ನು 40 ಡಿಗ್ರಿಗಿಂತಲೂ ಹೆಚ್ಚು ಬಾಗಿದ್ದರೆ ಹಾಗೂ ಬ್ರೇಸಿಂಗ್‌ನಿಂದ ಬೆನ್ನಿನ ವಕ್ರತೆಯು ಹೆಚ್ಚುವುದನ್ನು ನಿಧಾನಗೊಳಿಸುವಲ್ಲಿ ಬ್ರೇಸಿಂಗ್‌ ವಿಫ‌ಲವಾದರೆ, ಆಗ ಬೆನ್ನಿನ ವಕ್ರತೆಯನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ಅಗತ್ಯ ಎನಿಸಬಹುದು.
  • ನಿಮ್ಮ ಮಗು ಹಾಗೂ ಸ್ಕೋಲಿಯೋಸಿಸ್‌ ಬಗ್ಗೆ ನಿಮಗೇನಾದರೂ ಕಳವಳ ಹಾಗೂ ಸಂದೇಹಗಳು ಇದ್ದರೆ, ಅಥವಾ ಕಳೆದ ವರ್ಷಗಳಲ್ಲಿ ನಿಮ್ಮ ಮಗುವಿನ ದೈಹಿಕ ಪರೀಕ್ಷೆಯನ್ನು ಮಾಡಿಸಿಲ್ಲವಾಗಿದ್ದರೆ, ತ್ವರಿತವಾಗಿ ಈ ಬಗ್ಗೆ ನಿಮ್ಮ ವೈದ್ಯರ ಬಳಿ ಒಂದು ದೈಹಿಕ ಪರೀಕ್ಷೆಯನ್ನು ಮಾಡಿಸಿಕೊಳ್ಳಿ ಎಂಬುದು ನಮ್ಮ ಸಲಹೆ.

ಡಾ| ಈಶ್ವರ ಕೀರ್ತಿ
ಬೆನ್ನುಹುರಿ ತಜ್ಞರು, ಕೆ.ಎಂ.ಸಿ. ಆಸ್ಪತ್ರೆ,
ಡಾ| ಅಂಬೇಡ್ಕರ್‌ವೃತ್ತ, ಮಂಗಳೂರು.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.