ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ
Team Udayavani, Nov 8, 2020, 3:51 PM IST
ಸತ್ಯಮೇವ ಜಯತೆ ಸಂಘಟನೆ ವತಿಯಿಂದ ನಗರದ ರಾಮವಿಲಾಸ್ ರಸ್ತೆಯಲ್ಲಿರುವ ಸರ್ ಸಿ.ವಿ. ರಾಮನ್ ವೃತ್ತದಲ್ಲಿ ರಾಮನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಅವರ 132ನೇ ಜಯಂತಿ ಆಚರಿಸಲಾಯಿತು
ಮೈಸೂರು: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಮೈಗೂಡಿಸಿಕೊಂಡು ಚಿಂತನಾಶಕ್ತಿ, ಆಲೋಚನಾಶಕ್ತಿ ಬೆಳೆಸಿಕೊಂಡಾಗ ವಿಜ್ಞಾನ ಕ್ಷೇತ್ರದಲ್ಲಿ ಏನಾದರೂ ಸಾಧಿಸಬಹುದು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಂಚಾಲಕ ಪ್ರೊ.ಅನಂತರಾಮು ಹೇಳಿದರು.
ಸತ್ಯಮೇವ ಜಯತೆ ಸಂಘಟನೆ ವತಿಯಿಂದ ನಗರದ ರಾಮವಿಲಾಸ್ ರಸ್ತೆಯಲ್ಲಿರುವ ಸರ್ ಸಿ.ವಿ. ರಾಮನ್ ವೃತ್ತದಲ್ಲಿ ರಾಮನ್ ಅವರ 132ನೇ ಜಯಂತಿ ಅಂಗವಾಗಿ ವಿಜ್ಞಾನಕ್ಕೆ ಸಿ.ವಿ.ರಾಮನ್ ಕೊಡುಗೆ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಜ್ಞಾನ ಕ್ಷೇತ್ರದಲ್ಲಿ ನೊಬೆಲ್ ಪಾರಿತೋಷಕಗಳಿಸಿದ ಸಿ.ವಿ. ರಾಮನ್ ಅವರಲ್ಲಿದ್ದ ಆತ್ಮಾಭಿಮಾನ, ದೇಶಭಕ್ತಿ ಮೈಗೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಯುವ ಮುಖಂಡ ಎನ್.ಎಂ. ನವೀನ್ ಕುಮಾರ್ ಮಾತನಾಡಿ, ಸರ್ಕಾರಿ ಶಾಲೆಯೆಂದರೆ ಕೆಲವರು ತಾತ್ಸಾರ ಮನೋಭಾವ ಹೊಂದಿದ್ದಾರೆ. ಸಾಧನೆಮಾಡಿದಅನೇಕರು ಸರ್ಕಾರಿ ಶಾಲೆಯಲ್ಲಿ ಓದಿದವರು. ಅದನ್ನು ವಿದ್ಯಾರ್ಥಿಗಳು ಸ್ಫೂರ್ತಿಯಾಗಿ ಸ್ವೀಕರಿಸಬೇಕು. ಸದ್ಯದ ಶಿಕ್ಷಣ ಪಠ್ಯಕ್ರಮಗಳಿಗೆ ಹೋಲಿಸಿದರೆ ಹಿಂದಿನ ಕಾಲದ ಪಠ್ಯಪುಸ್ತಕಗಳು ತುಂಬಾ ಕ್ಲಿಷ್ಟಕರವಾಗಿತ್ತು. ಅಂತಹ ಸಂದರ್ಭದಲ್ಲಿ ಯಾವುದೇ ಕಲಿಕಾ ಕೇಂದ್ರಗಳಿರಲಿಲ್ಲ. ಮಾರ್ಗದರ್ಶಕರು ವಿರಳವಾಗಿದ್ದರು. ಮಾಹಿತಿ ತಂತ್ರಜ್ಞಾನ ಸಂಪರ್ಕವಿರಲಿಲ್ಲ. ಸರ್ ಸಿ.ವಿ.ರಾಮನ್ ಅವರ ಕ್ರಿಯಾಶೀಲತೆ ವಿಜ್ಞಾನ ಕಾರ್ಯತಂತ್ರ ಇಂದಿನ ವಿದ್ಯಾರ್ಥಿಗಳ ಹೊಸ ಅನ್ವೇಷಣೆಗಳಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ಮಾಜಿ ನಗರ ಪಾಲಿಕೆ ಸದಸ್ಯ ಎಂ.ಕೆ. ಅಶೋಕ್, ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಉದ್ಯಮಿ ಅಪೂರ್ವ ಸುರೇಶ್ , ಸತ್ಯಮೇವ ಜಯತೆ ಸಂಘಟನೆ ಅಧ್ಯಕ್ಷ ರಾಕೇಶ್‌ಕುಂಚಿಟಿಗ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.