ಮಹಾರಾಷ್ಟ್ರದಲ್ಲಿ ಶೇ. 60ರಷ್ಟು ಹೊಟೇಲ್‌ಗಳು ಪುನರಾರಂಭ: ಸಿಬ್ಬಂದಿ ಕೊರತೆ ಸವಾಲು
Team Udayavani, Nov 8, 2020, 4:17 PM IST
ಮುಂಬಯಿ: ರೆಸ್ಟೋರೆಂಟ್‌ಗಳು ಮತ್ತು ಹೊಟೇಲ್‌ಗಳನ್ನು ಮತ್ತೆ ತೆರೆಯಲು ಅನುಮತಿ ನೀಡಿದ ಒಂದು ತಿಂಗಳ ಅನಂತರ ಪ್ರಸ್ತುತ ಮಹಾರಾಷ್ಟ್ರ ರಾಜ್ಯಾದ್ಯಂತ ಸುಮಾರು 60 ಪ್ರತಿಶತದಷ್ಟು ಸಂಸ್ಥೆಗಳು ತಮ್ಮ ವ್ಯವಹಾರಗಳನ್ನು ಪುನರಾರಂಭಿಸಿವೆ.
ಮಹಾರಾಷ್ಟ್ರದಲ್ಲಿ ಅಂದಾಜು 4 ಲಕ್ಷ ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳಿದ್ದು, ಈ ಪೈಕಿ 2.40 ಲಕ್ಷ ಸಂಸ್ಥೆಗಳು ಮಾತ್ರ ತಮ್ಮ ಕಾರ್ಯಾಚರಣೆಯನ್ನು ಪುನರಾರಂಭಿಸಿವೆ. ಸೋಂಕು ಹರಡುವ ಭಯ, ಕಾರ್ಮಿಕರ ತೀವ್ರ ಕೊರತೆ, ಸಾರಿಗೆಯ ಕೊರತೆ, ಸಮಯದ ನಿರ್ಬಂಧಗಳು ಹಾಗೂ ಶೇ. 50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ನೀಡುವ ನಿರ್ಬಂಧವು ಹೊಟೇಲಿಗರಿಗೆ ತಮ್ಮ ಸಂಸ್ಥೆಗಳನ್ನು ಪುನಃ ತೆರೆಯದಂತೆ ತಡೆಯುತ್ತಿವೆ ಎಂದು ಇಂಡಿಯನ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ (ಆಹಾರ್) ಮತ್ತು ಫೆಡರೇಶನ್ ಆಫ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ಸ್ ಆಫ್ ಇಂಡಿಯಾ (ಎಫ್‌ಎಚ್‌ಆರ್‌ಎಐ) ವಾದಿಸಿವೆ.
ಕೋವಿಡ್-19 ಹರಡುವ ಭೀತಿಯಿಂದ ಜನರು ಇನ್ನೂ ಹೊಟೇಲ್‌ಗಳಿಗೆ ಬರಲು ಹೆದರುತ್ತಿದ್ದಾರೆ. ಇದು ವ್ಯವಹಾರದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಎಫ್‌ಎಚ್‌ಆರ್‌ಎಐ ಉಪಾಧ್ಯಕ್ಷ ಗುರ್ಬಾಕ್ಸಿಶ್ ಸಿಂಗ್ ಕೊಹ್ಲಿ ಹೇಳಿದ್ದಾರೆ.
ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯದಿರುವವರಲ್ಲಿ ಹೆಚ್ಚಿನವರು ಗುತ್ತಿಗೆ ಪಡೆದ ಜಾಗದಲ್ಲಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಅತಿಯಾದ ಬಾಡಿಗೆಯನ್ನು ಪಾವತಿಸುವ ಮೂಲಕ ಈ ರೆಸ್ಟೋರೆಂಟ್‌ಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಹೀಗಾಗಿ, ಅವರಲ್ಲಿ ಹಲವರು ತಮ್ಮ ವ್ಯವಹಾರವನ್ನು ಶಾಶ್ವತವಾಗಿ ಮುಚ್ಚಿದ್ದಾರೆ ಎಂದು ‘ಆಹಾರ್’ನ ಅಧ್ಯಕ್ಷ ಶಿವಾನಂದ್ ಶೆಟ್ಟಿ ಹೇಳಿದ್ದಾರೆ. ತಮ್ಮ ಸಂಸ್ಥೆಯನ್ನು ತೆರೆಯದ ಹೆಚ್ಚಿನ ಹೊಟೇಲಿಗರು, ಸಿಬ್ಬಂದಿ ಕೊರತೆ ಮತ್ತು ಸಾರಿಗೆ ಕೊರತೆಯು ತಾವು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.