ತ್ಯಾಜ್ಯ ನಿರ್ವಹಣೆಯಲ್ಲಿ ರ್‍ಯಾಂಕಿಂಗ್‌ ಪವಾಡ

ನಗರವಾಸಿಗಳ ಸಕಾರಾತ್ಮಕ ಬದಲಾವಣೆಗಿದು ಸಕಾಲ ,ಎಚ್‌ಎಸ್‌ಆರ್‌ ಲೇಔಟ್‌ ಎಲ್ಲ ವಾರ್ಡ್‌ಗಳಿಗೂ ಮಾದರಿ

Team Udayavani, Nov 9, 2020, 1:04 PM IST

bng-tdy-1

 

ಪಾಲಿಕೆ ಕಳೆದ ಮೂರು (ಜುಲೈನಿಂದ ಸೆಪ್ಟೆಂಬರ್‌) ತಿಂಗಳಿನಿಂದ ವಾರ್ಡ್‌ಗಳಲ್ಲಿ ಕಸ ವಿಂಗಡಣೆ ಪ್ರಮಾಣ ಹಾಗೂ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ ಮಾನದಂಡಗಳ ಆಧಾರದ ಮೇಲೆ ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ ಮಾಡುತ್ತಿದೆ. ಈ ರೀತಿ ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ ಮಾಡಲು ಪ್ರಾರಂಭಿಸಿದ ಮೇಲೆ ನಗರದಲ್ಲಿ ಕಸ ನಿರ್ವಹಣೆ ವಿಚಾರದಲ್ಲಿ ಹಲವು ಸಕಾರಾತ್ಮಕ ಬದಲಾವಣೆಗಳಾಗಿವೆ.

ನಗರದಲ್ಲೇ ಎಚ್ಎಸ್ಆರ್ನಂ.1: ಪಾಲಿಕೆಯ ಪೌರಕಾರ್ಮಿಕರೇ ಆಟೋ ಟಿಪ್ಪರ್‌ ಗೆ ಹಸಿಕಸ ಹಾಕಿಕೊಳ್ಳುವುದು, ಬ್ಲಾಕ್‌ಸ್ಪಾಟ್‌ ನಿರ್ಮಾಣವಾಗದಂತೆ ಎಚ್ಚರ ವಹಿಸಲು ಆರೋಗ್ಯಾಧಿಕಾರಿಗಳು ಕಣ್ಗಾವಲು ಇರಿಸುವುದು ಸೇರಿದಂತೆಹಲವು ಮಾದರಿ ಯೋಜನೆಗಳು ಬೊಮ್ಮನಹಳ್ಳಿ ವಲಯದ ಹೊಸೂರು- ಸರ್ಜಾಪುರ ಲೇಔಟ್‌(ಎಚ್‌ಎಸ್‌ಆರ್‌) ವಾರ್ಡ್‌ ಉಳಿದ ವಾರ್ಡ್‌ಗಳಿಗೆ ಮಾದರಿಯಾಗಿದೆ.

ಕಸ ಸಂಗ್ರಹ ಹಾಗೂ ವಿಲೇವಾರಿ ವಿಚಾರದಲ್ಲಿ ಅಳವಡಿಸಿಕೊಂಡ ಪ್ರಯೋಗಗಳಿಂದ ಮಾದರಿ ವಾರ್ಡ್‌ ಆಗಿ ಬದಲಾಗಿದೆ. ಕಸವಿಂಗಡಣೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಲ್ಲಿನ ಜನ ಹಸಿಕಸದ ಬುಟ್ಟಿಯನ್ನು ಮನೆಯ ಮುಂದೆ ಇರಿಸಿರುತ್ತಾರೆ. ಪಾಲಿಕೆಯ ಸಿಬ್ಬಂದಿಯೇ ಹಸಿಕಸವನ್ನು ಕಾಂಪ್ಯಾಕ್ಟರ್‌ಗೆ ಸುರಿದುಕೊಂಡು ಅಷ್ಟೇ ಅಚ್ಚುಕಟ್ಟಾಗಿ ಮನೆಯ ಬಾಗಿಲಿನಲ್ಲಿಕಸದ ಬುಟ್ಟಿ ಇರಿಸಿ ಹಿಂದಿರುಗುತ್ತಾರೆ.

ಗುಪ್ತ ಕಾರ್ಯಾಚರಣೆ: ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಕಸ ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಯಲು ಗುಪ್ತ ಕಾರ್ಯಾಚರಣೆ ನಡೆಯುತ್ತದೆ. ಮಾರ್ಷಲ್‌, ಕಸ ನಿರ್ವಹಣೆ ಕಾರ್ಯಕರ್ತರು ಹಾಗೂ ಆರೋಗ್ಯಾಧಿಕಾರಿಗಳು ಈ ಭಾಗದಲ್ಲಿ ಮೂರು ದಿನಗಳ ಕಾಲ ಯಾರು ಕಸ ನೀಡುವುದಿಲ್ಲವೋ ಅವರು ಎಲ್ಲಿ ಕಸ ಎಸೆಯುತ್ತಾರೆ ಎಂದು ಕಣ್ಣಿಟ್ಟು ದಂಡ ವಿಧಿಸುತ್ತಾರೆ. ಹೀಗಾಗಿ,ಇಲ್ಲಿನ ಪ್ರಮುಖ ರಸ್ತೆಗಳಲ್ಲಿ ಬ್ಲಾಕ್‌ಸ್ಪಾಟ್‌ ಕಾಣಸಿಗುವುದಿಲ್ಲ. ಹೊಂಗಸಂದ್ರ ವಾರ್ಡ್‌ನಲ್ಲಿ ಒಂದು ದಿನ ಕಸ ಸಂಗ್ರಹ ಮಾಡುವ ವಾಹನ ಬರಲಿಲ್ಲ ಎಂದರೂ, ಜನ ಜಗಳ ಮಾಡುತ್ತಾರೆ.

ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸುತ್ತಾರೆ. ಕಸ ನಾವು ಪ್ರತ್ಯೇಕಿಸಿ ನೀಡಿದರೂ ಮಿಶ್ರ ಮಾಡುತ್ತಿದ್ದಾರೆ ಎಂಬ ದೂರುಗಳೂ ಅಧಿಕಾರಿಗಳಿಗೆ ಮುಟ್ಟುವುದಿದೆ. ಹೊಂಗಸಂದ್ರ ವಾರ್ಡ್‌ನಲ್ಲಿ ಕೂಲಿ ಕಾರ್ಮಿಕರು ಹಾಗೂ ಕಾರ್ಖಾನೆಗಳಲ್ಲಿಕೆಲಸಮಾಡುವ ಶ್ರಮಿಕ ವರ್ಗವೇ ಹೆಚ್ಚಾಗಿದ್ದರೂ, ಕಸವಿಂಗಡಿಸಿ ನೀಡುತ್ತಿದ್ದಾರೆ.ಇದೇಮಾರ್ಗದಲ್ಲಿಕಾಡುಮಲ್ಲೇಶ್ವರ ವಾರ್ಡ್‌ ಹಾಗೂ ನಾಗಪುರ ವಾರ್ಡ್‌ಗಳೂ ಮುಂದಿವೆ. ಈ ವಾರ್ಡ್ ಗಳಲ್ಲಿನ ರಸ್ತೆಗಳಲ್ಲಿನ ಸ್ವತ್ಛತೆ ಹಾಗೂ ಬ್ಲಾಕ್‌ಸ್ಪಾಟ್‌ ಮುಕ್ತವಾಗುತ್ತಿರುವುದೇ ಇದಕ್ಕೆ ಸಾಕ್ಷಿ.

ಅಧಿಕಾರಿಗಳಲ್ಲಿ ಪೈಪೋಟಿ: ಪಾಲಿಕೆ ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ ಮಾಡುವುದಕ್ಕೆ ಪ್ರಾರಂಭಿಸಿದ ಮೇಲೆ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಗಳು ಹಾಗೂ ತಳಮಟ್ಟದ (ಪ್ರಥಮ ಹಂತದ) ಸಿಬ್ಬಂದಿಯಲ್ಲಿ ಪೈಪೋಟಿ ಪ್ರಾರಂಭವಾಗಿದೆ. ಹಸಿಕಸ ವಿಂಗಡಣೆ ಪ್ರಮಾಣವೂ ನಗರದಲ್ಲಿ ಏರಿಕೆಯಾಗುತ್ತಿದೆ. ಜುಲೈನಲ್ಲಿ ಹಸಿಕಸ ವಿಂಗಡಣೆ ಪ್ರಮಾಣ ಒಟ್ಟು (ಪ್ರತಿ ಕಾಂಪ್ಯಾಕ್ಟರ್‌ನಿಂದ) 4.9 ಪ್ರತಿಶತ ಇತ್ತು. ಇದೇ ಪ್ರಮಾಣಸೆಪ್ಟೆಂಬರ್‌ ವೇಳೆಗೆ5.2ಗೆ ಏರಿಕೆಯಾಗಿದೆ.

ಸ್ವಚ್ಛ ಸರ್ವೇಕ್ಷಣ್ ದೂರ ದೃಷ್ಟಿಯಿಂದ ರ್‍ಯಾಂಕಿಂಗ್‌ : ನಗರದಲ್ಲಿ ಕೆಲವು ನಿರ್ದಿಷ್ಟ ಭಾಗದಲ್ಲಿನ ಕಳಪೆ ಸಾಧನೆಯಿಂದಾಗಿ ಇಡೀ ಬೆಂಗಳೂರು ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಹಿಂದುಳಿಯುತ್ತಿದೆ. ಅಲ್ಲದೆ, ಸಂಪೂರ್ಣ ಬೆಂಗಳೂರಿನಲ್ಲಿ ಕಸ ನಿರ್ವಹಣೆ ಸರಿ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹೀಗಾಗಿ, ರ್‍ಯಾಂಕಿಂಗ್‌ ಪದ್ಧತಿ ಯೋಜನೆ ರೂಪಿಸಿದ್ದೇವೆ. ರ್‍ಯಾಂಕಿಂಗ್‌ನಿಂದ ಸಾರ್ವಜನಿಕರಿಗೆ ಜಾಗೃತಿ ಮೂಡುತ್ತಿದೆ. ಎಲ್ಲಿ ಸಮಸ್ಯೆ ಇದೆ ಎನ್ನುವ ಬಗ್ಗೆ,ಯಾವ ಅಧಿಕಾರಿ ಕೆಲಸಮಾಡುತ್ತಿದ್ದಾರೆಹಾಗೂಯಾರು ನಿರ್ಲಕ್ಷ್ಯಧೋರಣೆಅನುಸರಿಸುತ್ತಿದ್ದಾರೆ ಎನ್ನುವುದು ತಿಳಿಯಲಿದೆ. ನಗರದಲ್ಲಿನ ಕಸ ನಿರ್ವಹಣೆ ಹಾಗೂ ಕಸದ ಸಮಸ್ಯೆಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಅಧಿಕಾರಿಗಳ ಕಾರ್ಯಕ್ಷಮತೆ ಬಯಲಾಗುತ್ತಿದೆ. ಇದು ಆಡಳಿತಾತ್ಮಕ ಸುಧಾರಣೆಗೂ ಸಹಕಾರಿಯಾಗಿದೆ ಎಂದು ಘನತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತ ಡಿ. ರಂದೀಪ್‌ ತಿಳಿಸಿದರು.

ರ್ಯಾಂಕಿಂಗ್ಪಟ್ಟಿಯಲ್ಲಿ ವಾರ್ಡ್ಏರುಪೇರು : ಪಾಲಿಕೆ ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ ಮಾಡಲು ಪ್ರಾರಂಭಿಸಿದೆ. ಜುಲೈನಿಂದ ಸೆಪ್ಟೆಂಬರ್‌ನ ವರೆಗೆ ಸತತವಾಗಿ ಎಚ್‌ಎಸ್‌ಆರ್‌ ಲೇಔಟ್‌ ಪ್ರಥಮ ಹಾಗೂ ಮಾದರಿ ವಾರ್ಡ್‌ ಆಗಿ ಮುಂದುವರಿದಿದೆ. ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದ ವಾರ್ಡ್ ಗಳು ಬದಲಾಗಿವೆ.

ಪ್ರತ್ಯೇಕ ತ್ಯಾಜ್ಯ ವಿಂಗಡಣೆಯಲ್ಲಿ ಏರಿಕೆ : ನಗರದಲ್ಲಿ ಪ್ರತ್ಯೇಕ ಹಸಿಕಸ ಸಂಗ್ರಹ ಯೋಜನೆ ಜಾರಿ ಹಾಗೂ ರ್‍ಯಾಂಕಿಂಗ್‌ ಪದ್ಧತಿಯಿಂದಾಗಿ ಹಸಿಕಸ ಸಂಸ್ಕರಣಾ ಘಟಕಗಳಿಗೆ ನಿತ್ಯ ಅಂದಾಜು1,150 ಮೆಟ್ರಿಕ್‌ ಟನ್‌ ಹಸಿಕಸ ಸಾಗಾಣಿಕೆಯಾಗುತ್ತಿದ್ದು, ಇದು ಹೊಸ ದಾಖಲೆಯಾಗಿದೆ ಎಂದು ಘನತ್ಯಾಜ್ಯ ನಿರ್ವಹಣೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾದರಿ ವಾರ್ಡ್ಗಳಲ್ಲಿ ಎಲ್ಲವೂ ಸರಿ ಇದೆ ಎಂದಲ್ಲ! : ಪಾಲಿಕೆ ಬೆಸ್ಟ್‌ ಎಂದು ರ್‍ಯಾಂಕಿಂಗ್‌ ನೀಡಿರುವ ವಾರ್ಡ್‌ಗಳಲ್ಲಿ ಎಲ್ಲವೂ ಸರಿ ಇದೆ ಎಂದು ಅರ್ಥವಲ್ಲ. ಈ ವಾರ್ಡ್‌ಗಳಲ್ಲಿ ವ್ಯವಸ್ಥೆ ಉಳಿದ ವಾರ್ಡ್‌ಗಳಿಗಿಂತ ಉತ್ತಮವಾಗಿದೆ ನಿಜ. ಆದರೆ, ಪರಿಸ್ಥಿತಿ ಇನ್ನೂ ಸುಧಾರಿಸಬೇಕಿದೆ. ಬೆಸ್ಟ್‌ ಎಂದು ಪರಿಗಣಿಸಲ್ಪಟ್ಟ ವಾರ್ಡ್‌ಗಳಲ್ಲಿ ಆಟೋ ಟಿಪ್ಪರ್‌ಗಳಿಂದ ಕಾಂಪ್ಯಾಕ್ಟರ್‌ಗೆ ಕಸ ಸಾಗಣಿಕೆ ಮಾಡುವ ಎರಡನೇ ಹಂತದಕಸ ಸಂಗ್ರಹ ಪ್ರದೇಶಗಳಲ್ಲಿ ಸ್ವಚ್ಛತೆ

ಕಾಪಾಡಿಕೊಂಡಿಲ್ಲ. ರಸ್ತೆ ಬದಿ ಹಾಗೂ ಪಾರ್ಕ್‌ ಗಳಲ್ಲಿ ಮತ್ತಷ್ಟು ಸ್ವತ್ಛತೆ,ಕಸದ ಡಬ್ಬಿ ಇರಿಸಬೇಕು. ಒಟ್ಟಾರೆ ಹಸಿ ಮತ್ತು ಒಣಕಸ ವಿಂಗಡಣೆ ಪ್ರಮಾಣವೂ ಸುಧಾರಿಸಬೇಕಿದೆ.

ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಸಾರ್ವಜನಿಕರ ಸಹಭಾಗಿತ್ವ ಹಾಗೂ ನಿರಂತರ ಜಾಗೃತಿಯ ಫ‌ಲವಾಗಿ ರ್‍ಯಾಂಕಿಂಗ್‌ ನಲ್ಲಿ ಪ್ರಥಮ ಸ್ಥಾನದಲ್ಲಿದೆ. -ಡಾ. ಶಾಂತಿ, ಎಚ್ಎಸ್ಆರ್ಸಿಟಿಜನ್ಫೋರಂನ ಸಂಸ್ಥಾಪಕ ಸದಸ್ಯೆ.

ನಿತ್ಯ ಸಮಯಕ್ಕೆ ಸರಿಯಾಗಿ ಕಸ ಸಂಗ್ರಹಿಸುತ್ತಾರೆ. ಆದರೆ,ರಸ್ತೆ ಬದಿಯಲ್ಲಿನಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ.-ಅನೂಪ್ಎಚ್ಬಿಆರ್ಲೇಔಟ್ನಿವಾಸಿ

ಒಂದು ದಿನಕಸ ಸಂಗ್ರಹಮಾಡುವುದಕ್ಕೆ ಪಾಲಿಕೆಯಿಂದ ವಾಹನ ಬರಲಿಲ್ಲ ಎಂದರೂ ನಾವು ಅಧಿಕಾರಿಗಳಿಗೆಕರೆ ಮಾಡುತ್ತೇವೆ. ಪಾಲಿಕೆ ಸಿಬ್ಬಂದಿ ಸಹ ಇಲ್ಲಿ ಉತ್ತಮಕೆಲಸ ಮಾಡುತ್ತಿದ್ದಾರೆ. -ಮೀನಾ, ಹೊಂಗಸಂದ್ರ ನಿವಾಸಿ.

ನಾಗಪುರ ವಾರ್ಡ್‌ ನಲ್ಲಿ ಜನಕಸ ವಿಂಗಡಣೆ ಮಾಡಿಕೊಡುತ್ತಾರೆ. ನಮ್ಮ ಮೇಲ್ವಿಚಾರಕರು, ಮೇಸ್ತ್ರಿಗಳು ಗೌರವದಿಂದನ ಹಾಗೂ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಹೀಗಾಗಿ, ಕೆಲಸ ಮಾಡುವುದುಖುಷಿ ನೀಡಿದೆ. -ಲಕ್ಷ್ಮೀ ಪೌರಕಾರ್ಮಿಕರು, ನಾಗಪುರ

ಕಳೆದ ಮೂರು ನಾಲ್ಕು ತಿಂಗಳಿನಿಂದ ಸಾಕಷ್ಟು ಬದಲಾವಣೆ ಆಗಿದೆ. ಈ ಹಿಂದೆ ರಸ್ತೆಗ ಳಲ್ಲಿ ಸೃಷ್ಟಿಯಾಗುತ್ತಿದ್ದ ಬ್ಲಾಕ್‌ ಸ್ಪಾಟ್‌ಗಳು ಈಗ ಇಲ್ಲ. –ಸುಶೀಲ, ಕಾಡು ಮಲ್ಲೇಶ್ವರ ನಿವಾಸಿ.

 

-ಹಿತೇಶ್ವೈ

 

ಟಾಪ್ ನ್ಯೂಸ್

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.