ಕೋವಿಡ್ : ಸರ್ಕಾರಿ ಶಾಲೆಗೆ ದಾಖಲಾತಿ ಹೆಚ್ಚಳ
ಖಾಸಗಿ ಶಾಲೆಗಳ ದಾಖಲಾತಿ ಕುಸಿತ ,ಮುಚ್ಚಿದ್ದ 11 ಕನ್ನಡ ಮಾಧ್ಯಮ ಶಾಲೆಗಳು ಪ್ರಾರಂಭ
Team Udayavani, Nov 9, 2020, 5:02 PM IST
ಮಂಡ್ಯ: ಕೋವಿಡ್ ಸೋಂಕಿನಿಂದ ಆರ್ಥಿಕ ಹಿಂಜರಿತ ಉಂಟಾದ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲೂ ಸರ್ಕಾರಿ ಶಾಲೆಗಳಿಗೆ ಬೇಡಿಕೆ ಹೆಚ್ಚಿದ್ದು, ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ದಾಖಲಾತಿ ಹೆಚ್ಚಿದೆ.
ಹಿಂದೆ ಸರ್ಕಾರಿ ಶಾಲೆಗಳಿಗೆ ಬೇಡಿಕೆ ಹೆಚ್ಚಿತ್ತು. ನಂತರ ದಿನಗಳಲ್ಲಿಕಾನ್ವೆಂಟ್ ಹಾಗೂ ಖಾಸಗಿ ಶಾಲೆಗಳ ಹಾವಳಿ ಯಿಂದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಿ ಎಷ್ಟೋ ಶಾಲೆಗಳು ಮುಚ್ಚಿದ್ದವು. ಕೆಲವು ಮುಚ್ಚುವ ಹಂತ ತಲುಪಿದ್ದವು. ಆದರೆ, ಕೋವಿಡ್ ದಿಂದ ಈ ವರ್ಷ ಮತ್ತೆ ಸರ್ಕಾರಿ ಶಾಲೆಗಳು ತಮ್ಮ ಹಿಂದಿನ ದಿನಗಳಿಗೆ ಮರಳುವಂತೆ ಮಾಡಿದ್ದು, ದಾಖಲಾತಿಯೂ ಹೆಚ್ಚಾಗಿದೆ.
ಜನರಿಗೆ ಆರ್ಥಿಕ ಸಂಕಷ್ಟ: ಕೋವಿಡ್ ದಿಂದ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಿಂದ ಸಾಕಷ್ಟು ಮಂದಿ ಉದ್ಯೋಗಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಅಲ್ಲದೆ, ವ್ಯಾಪಾರ-ವಹಿವಾಟು ನಡೆಯದ ಪರಿಣಾಮಹಣದ ಓಡಾಟ ನಿಂತಿದ್ದರಿಂದ ಜನರು ಜೀವನ ನಡೆಸುವುದೇ ಕಷ್ಟಕರವಾಗಿತ್ತು. ಪ್ರಸ್ತುತ ದಿನಗಳಲ್ಲಿ ಲಾಕ್‌ಡೌನ್ ಇಲ್ಲದಿದ್ದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಆರ್ಥಿಕ ವ್ಯವಸ್ಥೆ ಸರಿಯಾಗಿಲ್ಲದ ಪರಿಣಾಮ ಪೋಷಕರು ಸಾವಿರಾರು ರೂ. ಶುಲ್ಕ ಪಾವತಿಸಿ, ಖಾಸಗಿ ಶಾಲೆಗಳಿಗೆ ಸೇರಿಸಲು ಸಾಧ್ಯವಾಗಿಲ್ಲ. ಇದರಿಂದ ಪೋಷಕರು ಖಾಸಗಿ ಶಾಲೆಗಳಿಂದ ಬಿಡಿಸಿ ಸರ್ಕಾರಿ ಶಾಲೆಗಳಿಗೆ ಸೇರಿಸಿದ್ದರಿಂದ ದಾಖಲಾತಿ ಹೆಚ್ಚಳವಾಗಿದೆ.
1268 ಹೆಚ್ಚು ಮಕ್ಕಳು ದಾಖಲು: ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಪ್ರಸ್ತುತ ವರ್ಷ ಸರ್ಕಾರಿ ಶಾಲೆಗಳಲ್ಲಿ 1268 ಹೆಚ್ಚುವರಿ ಮಕ್ಕಳು ದಾಖಲಾಗಿದ್ದಾರೆ. 2019-20ನೇ ಸಾಲಿನಲ್ಲಿ 7906 ಮಕ್ಕಳು ದಾಖಲಾಗಿದ್ದರು. ಆದರೆ ಈ ವರ್ಷ 2020-21ನೇ ಸಾಲಿನಲ್ಲಿ 9174 ಮಕ್ಕಳು ದಾಖಲಾಗಿದ್ದಾರೆ. ಖಾಸಗಿ ಶಾಲೆಗಳಲ್ಲಿ 2019-20ರಲ್ಲಿ 12618 ಮಕ್ಕಳು ದಾಖಲಾಗಿದ್ದರು.ಈ ವರ್ಷ 2020-21ನೇ ಸಾಲಿನಲ್ಲಿ 6076ಕ್ಕೆ ಇಳಿದಿದೆ. 5542 ಮಕ್ಕಳ ಸಂಖ್ಯೆಕಡಿಮೆಯಾಗಿದೆ.
ಅದರಂತೆ ಸಮಾಜ ಕಲ್ಯಾಣ ಇಲಾಖೆಯ ಶಾಲೆಗಳಿಗೆಹಿಂದಿನವರ್ಷ 8 ಮಕ್ಕಳು ದಾಖಲಾಗಿದ್ದು, ಈಗ ಆ ಸಂಖ್ಯೆ 5ಕ್ಕೆ ಕುಸಿದಿದೆ. ಅನುದಾನ ರಹಿತ ಖಾಸಗಿ ಶಾಲೆಗಳಿಗೆ 2019-20ರಲ್ಲಿ 10848 ಮಕ್ಕಳು ದಾಖಲಾಗಿದ್ದರು. 2020-21ನೇ ಶೈಕ್ಷಣಿಕ ವರ್ಷದಲ್ಲಿ 5728ಕ್ಕೆ ಕುಸಿದಿದೆ. ಅನುದಾನಿತ ಶಾಲೆಗಳಿಗೆ 2019-20ರಲ್ಲಿ 1770 ಮಕ್ಕಳು ಸೇರಿಕೊಂಡಿದ್ದರೆ,ಪ್ರಸ್ತುತ ವರ್ಷ 1348ಕ್ಕೆ ಇಳಿಕೆಕಂಡಿದ್ದು,422 ಮಕ್ಕಳು ಕಡಿಮೆ ದಾಖಲಾತಿಯಾಗಿದೆ.
ದಾಖಲಾತಿಗೆ ಪೋಷಕರ ಹಿಂದೇಟು: ಕೋವಿಡ್ ಭಯದಿಂದ ಇನ್ನೂ ಎಷ್ಟೋ ಮಕ್ಕಳು ಶಾಲೆಗೆ ದಾಖಲಾತಿಯಾಗಿಲ್ಲ. ಪೋಷಕರು ಸಹ ಈ ವರ್ಷ ಮುಗಿದರೂ ಪರವಾಗಿಲ್ಲ. ಮಕ್ಕಳ ಆರೋಗ್ಯ ಮುಖ್ಯ ಎಂಬ ನಿಟ್ಟಿನಲ್ಲಿ ದಾಖಲಾತಿಗೆ ಮುಂದಾಗಿಲ್ಲ. ಆದ್ದರಿಂದ ಕಳೆದ ವರ್ಷಕ್ಕಿಂತ ಈ ವರ್ಷ ದಾಖಲಾತಿ ಕಡಿಮೆಯಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ 20585 ಮಕ್ಕಳು ದಾಖಲಾಗಿದ್ದರು. ಆದರೆ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 16311 ಮಕ್ಕಳು ಮಾತ್ರ ದಾಖಲಾಗಿದ್ದು, 4274 ಮಕ್ಕಳು ಇನ್ನೂ ದಾಖಲಾಗಿಲ್ಲ.
ಪುನರಾಂಭಗೊಂಡ 11 ಶಾಲೆಗಳು :ಸಂಕಷ್ಟದಲ್ಲಿ ಖಾಸಗಿ ಶಾಲೆಗಳು : ದಾಖಲಾತಿ ಕುಸಿತದಿಂದ ಖಾಸಗಿ ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಈಗಿರುವ ದಾಖಲಾತಿ ಮಾಡಿಕೊಳ್ಳಲು ಪೋಷಕರು ಮುಂದಾಗದ ಹಿನ್ನೆಲೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ. ಕೋವಿಡ್ ದಿಂದ ಉಂಟಾದ ಆರ್ಥಿಕ ಸಂಕಷ್ಟವೇ ದಾಖಲಾತಿ ಕುಸಿತಕ್ಕೆ ಕಾರಣ. ಖಾಸಗಿ ಶಾಲೆ ಶಿಕ್ಷಕರು ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಶಾಲೆ ಆಡಳಿತ ಮಂಡಳಿಯವರು ಶಾಲೆಗಳನ್ನು ನಡೆಸಲು ಕಟ್ಟಡ, ವಾಹನ ಸೇರಿದಂತೆ ವಿವಿಧ ರೀತಿಯ ಸಾಲದ ಸುಳಿಗೆ ಸಿಲುಕಿದ್ದಾರೆ. ಮಕ್ಕಳದಾಖಲಾತಿ ಕೊರತೆಯಿಂದ ಮುಚ್ಚಿದ್ದ 11 ಶಾಲೆಗಳುಮತ್ತೆಪ್ರಾರಂಭಗೊಂಡಿರುವುದು ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೂ ಅನುಕೂಲವಾಗಿದೆ. 11 ಶಾಲೆಗಳಿಗೆ ಒಟ್ಟು 171 ಮಕ್ಕಳು ದಾಖಲಾಗಿದ್ದಾರೆ. ಮಂಡ್ಯ ಉತ್ತರ ವಲಯದ ನಲ್ಲಹಳ್ಳಿ, ನಾಗಮಂಗಲ ತಾಲೂಕಿನ ಕಬ್ಬಿನಕೆರೆ, ಚೊಟ್ಟನ ಹಳ್ಳಿ, ಗೂಡೇಹೊಸಹಳ್ಳಿ, ಮಳವಳ್ಳಿ ತಾಲೂಕಿನ ಲಿಂಗಾಪುರ, ವಳಗೆರೆದೊಡ್ಡಿ, ಮೇಗಳಾಪುರ, ಐನೋರದೊಡ್ಡಿ, ಹುಚ್ಚನದೊಡ್ಡಿ, ಬುಳ್ಳಿಕೆಂಪನದೊಡ್ಡಿ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ವಡೆಯಾಂಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ನಡೆದಿದೆ.ಆದರೆ,ಕೊರೊನಾದಿಂದ ಸರ್ಕಾರಇನ್ನೂ ಶಾಲೆಪ್ರಾರಂಭಿಸಲು ಮುಂದಾಗಿಲ್ಲ.
ವಿದ್ಯಾಗಮ ಯೋಜನೆಯಡಿ ಶಿಕ್ಷಕರೇ ಮಕ್ಕಳ ಮನೆಗಳಿಗೆ ತೆರಳಿ ಪಾಠ ಮಾಡಿದ ಪರಿಣಾಮ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಕಾರಣವಾಗಿದೆ. ಖಾಸಗಿ ಶಾಲೆಗಳು ಆನ್‌ಲೈನ್‌ಗೆ ಒತ್ತು ನೀಡಿದರು.ಆನ್‌ಲೈನ್‌ಗೂ ಹಾಗೂ ಮಕ್ಕಳ ಬಳಿಗೆ ಹೋಗಿ ಪಾಠ ಮಾಡುವುದಕ್ಕೂ ವ್ಯತ್ಯಾಸವಿದೆ. ಇದಕ್ಕೆ ಮಕ್ಕಳು ಹಾಗೂ ಪೋಷಕರು ಆಕರ್ಷಣೆಗೊಂಡು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ.ಈಗ ನಮ್ಮ ಮುಂದೆ ಸವಾಲಿದ್ದು, ಉತ್ತಮ ಗುಣಮಟ್ಟದ ಶಿಕ್ಷಣನೀಡಿ ಅವರನ್ನು ಸರ್ಕಾರಿ ಶಾಲೆಯಲ್ಲಿಯೇ ಉಳಿಸಿಕೊಳ್ಳುತ್ತೇವೆ. –ಆರ್.ರಘುನಂದನ್, ಡಿಡಿಪಿಐ, ಮಂಡ್ಯ
ಕೋವಿಡ್ ದಿಂದ ಪೋಷಕರು ದಾಖಲಾತಿಗೆ ಮುಂದಾಗಿಲ್ಲ.ಇರುವ ವಿದ್ಯಾರ್ಥಿಗಳ ಮರು ದಾಖಲಾತಿಗೂ ಪೋಷಕರು ಹಿಂದೇಟು ಹಾಕುತ್ತಿದ್ದಾರೆ.ಆನ್‌ಲೈನ್ ಪಾಠಅರ್ಥಆಗಲ್ಲ ಎಂದುಕೆಲವು ಪೋಷಕರಿದ್ದರೆ,ಕೆಲವರುಈ ವರ್ಷ ಶಿಕ್ಷಣವೇ ಬೇಡ ಎಂದು ನಿರ್ಧರಿಸಿದ್ದಾರೆ. ಇದರಿಂದ ಖಾಸಗಿ ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರಕೈಗೊಳ್ಳುವ ಗೊಂದಲದ ನಿರ್ಧಾರಪೋಷಕರನ್ನು ಗೊಂದಲಕ್ಕೊಳಗಾಗುವಂತೆ ಮಾಡಿದೆ. ಶಾಲೆ ನಡೆಸಲು ಸಾಕಷ್ಟು ಸಾಲಮಾಡಿದ್ದೇವೆ. ಅದನ್ನು ಮನಗಂಡು ಸರ್ಕಾರ ಕೂಡಲೇ ಖಾಸಗಿ ಶಾಲೆಗಳಿಗೂ ಅನುಕೂಲ ಮಾಡಿ ಕೊಡಬೇಕು. – ಸುಜಾತ ಕೃಷ್ಣ, ಕಾರ್ಯದರ್ಶಿ, ಡ್ಯಾಪೋಡಿಲ್ಸ್ ಶಾಲೆ, ಮಂಡ್ಯ
ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು
Fraud: ಸೈಟ್ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ
Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು
Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.