ನಮ್ಮ ನಮ್ಮ ಮಂದಿಯ ಕಲಾರಾಧನೆ

ಜಗದಗಲಕ್ಕೆ ಐತಿಹಾಸಿಕ ತಾಣಗಳ ಕುಂಚ ಕಲಾಕೃತಿ | ಆಸಕ್ತರಿಗೆ ಚಿತ್ರ ಕಲೆ ಉಚಿತ ತರಬೇತಿ

Team Udayavani, Nov 9, 2020, 6:16 PM IST

ನಮ್ಮ ನಮ್ಮ ಮಂದಿಯ ಕಲಾರಾಧನೆ

ಹುಬ್ಬಳ್ಳಿ: ಚಿತ್ರ ಬಿಡಿಸುವುದರಲ್ಲಿ ತಲ್ಲೀನರಾಗಿರುವ ನಮ್ಮ ನಮ್ಮ ಮಂದಿ ಕಲಾತಂಡ.

ಹುಬ್ಬಳ್ಳಿ: ಚಿತ್ರ ಕಲಾವಿದರ ತಂಡವೊಂದು ಚಿತ್ರಕಲೆಯ ಮೂಲಕ ಜಿಲ್ಲೆಯ ಐತಿಹಾಸಿಕ ಸ್ಥಳಗಳನ್ನು ಜಗತ್ತಿಗೆ ಪರಿಚಯಿಸುವ ಕಾರ್ಯದಲ್ಲಿ ತೊಡಗಿದ್ದು, ಇದರೊಂದಿಗೆ ಆಸಕ್ತ ಯುವಕ-ಯುವತಿಯರಿಗೆ ಉಚಿತವಾಗಿ ಚಿತ್ರಕಲೆ ತರಬೇತಿ ನೀಡುವ ಕಾಯಕವನ್ನು ಎಲೆಮರೆ ಕಾಯಿಯಂತೆ ಮಾಡುತ್ತಿದೆ.

“ನಮ್ಮ ನಮ್ಮ ಮಂದಿ’ ಎನ್ನುವ ಕಲಾತಂಡ ಕಟ್ಟಿಕೊಂಡಿರುವ ಇಲ್ಲಿನ ಚಿತ್ರ ಕಲಾವಿದರು, ಚಿತ್ರಕಲಾ ಶಿಕ್ಷಕರು, ಹವ್ಯಾಸಿ ಚಿತ್ರ ಕಲಾವಿದರು ಜಿಲ್ಲೆಯ ಪುರಾತನ, ಐತಿಹಾಸಿಕ, ಪ್ರೇಕ್ಷಣೀಯ ಸ್ಥಳಗಳನ್ನು ವಿಶ್ವಾದ್ಯಂತ ಪಸರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ 9 ಕಲಾವಿದರ ತಂಡ ಈ ಕಾರ್ಯದಲ್ಲಿ ಮಗ್ನವಾಗಿದೆ. ಪ್ರತಿ ರವಿವಾರ ಜಿಲ್ಲೆಯಲ್ಲಿ ಪುರಾತನ ದೇವಾಲಯ, ಸ್ಥಳ, ಕಟ್ಟಡಗಳನ್ನು ಗುರುತಿಸಿ ಕುಂಚದಲ್ಲಿ ಅರಳಿಸುವ ಕಾರ್ಯ ನಡೆಯುತ್ತಿದೆ.

ಸಮಾನ ಮನಸ್ಕರ ತಂಡ: ಕಲಾವಿದರಾದ ಮಂಜುನಾಥ ಭಂಡಾರೆ, ಗಣಪತಿ ಘಾಟಗೆ, ಸುರೇಶ ಅರ್ಕಸಾಲಿ ಹಾಗೂ ರಾಘವೇಂದ್ರ ಪತ್ತಾರ ಆರಂಭದಲ್ಲಿ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಇಷ್ಟೇ ಜನರಿಗೆ ಮೀಸಲಾದರೆ ಇದರಿಂದ ಯಾವ ಪರೋಪಕಾರಿ ಕಾರ್ಯ ಮಾಡಲು ಸಾಧ್ಯವಿಲ್ಲ ಎಂದು ಯೋಚಿಸಿ “ನಮ್ಮ ನಮ್ಮ ಮಂದಿ’ ಎನ್ನುವ ಕಲಾತಂಡ ಕಟ್ಟಿಸಮಾನ ಮನಸ್ಕರನ್ನು ಒಗ್ಗೂಡಿಸಿಕೊಂಡಿದ್ದಾರೆ. ಕಳೆದ ಎರಡು ವಾರದಿಂದ ಇಡೀ ತಂಡ ಪ್ರತಿ ರವಿವಾರ ಐತಿಹಾಸಿಕ ಸ್ಥಳಗಳಿಗೆ ತೆರಳಿ ಚಿತ್ರ ಬಿಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಚಿತ್ರಕಲೆಯಲ್ಲಿ ಹೊಸ ಸಂಚಲನ ಮೂಡಿಸಲು ಮುಂದಾಗಿದ್ದಾರೆ. ಮೊದಲ ಬಾರಿ ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠದ ಚಿತ್ರ ಸಾಕಷ್ಟು ಮೆಚ್ಚುಗೆಗಳಿಸಿದ್ದು, ಇವರ ಕಾರ್ಯ ನೋಡುಗರ ಗಮನ ಸೆಳೆಯುತ್ತಿದೆ.

ಪ್ರತಿ ರವಿವಾರ ಬೆಳಗ್ಗೆ 7 ಗಂಟೆಗೆ ಗುರುತಿಸಿದ ಸ್ಥಳದಲ್ಲಿ ಹಾಜರಿದ್ದು, ಕೇವಲ ಎರಡೂವರೆ ತಾಸಿನಲ್ಲಿ ಆ ಸ್ಥಳದಲ್ಲಿ ಚಿತ್ರ ಬರೆಯುವ ಕೆಲಸ ಆಗುತ್ತಿದೆ.10ರಿಂದ 15 ನಿಮಿಷದಲ್ಲಿ ಸ್ಕೆಚ್‌ ಹಾಕಿಕೊಂಡು ಕುಂಚದ ಕಾರ್ಯ ಆರಂಭಿಸುತ್ತಾರೆ. ಎರಡನೇ ರವಿವಾರ ಇಲ್ಲಿನ ಸಾಯಿ ನಗರದಲ್ಲಿರುವ ಜಕಣಾಚಾರಿಶಿಲ್ಪಕಲೆಯ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನವನ್ನುಕುಂಚದ ಮೂಲಕ ಅರಳಿಸಿರುವುದು ನೋಡುಗರನ್ನುಮಂತ್ರಮುಗ್ಧರನ್ನಾಗಿಸಿದೆ. ಬೆಳಗಿನ ಉಪಹಾರವನ್ನುತಂಡದಲ್ಲಿರುವವರೇ ವ್ಯವಸ್ಥೆ ಮಾಡಿಕೊಂಡು ಸಾಮೂಹಿಕವಾಗಿ ಸೇವಿಸಿ ಅಲ್ಲಿಂದ ನಿರ್ಗಮಿಸುತ್ತಾರೆ.ರವಿವಾರದ ರಜೆಯನ್ನು ಈ ಸತ್ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಆಸಕ್ತರಿಗೆ ಕಲಿಕೆ: ಚಿತ್ರಕಲೆ ಅರಸಿ ಬರುವವರ ಸಂಖ್ಯೆಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಐತಿಹಾಸಿಕ ಸ್ಥಳಗಳ ಚಿತ್ರಗಳನ್ನು ವಿವಿಧೆಡೆ ಪಸರಿಸುವ ಮೂಲಕ ಆಸಕ್ತರ ಯುವಕ-ಯವತಿಯರಿಗೆ ಚಿತ್ರಕಲೆಯನ್ನುಉಚಿತವಾಗಿ ಕಲಿಸುವ ಮಹತ್ತರ ಕಾರ್ಯಕ್ಕೆ ಮುಂದಾಗಿದ್ದಾರೆ. ಸ್ಕೆಚ್‌ ಸೇರಿದಂತೆ ಹ್ಯಾಂಡ್‌ಮೇಡ್‌ಪೇಪರ್‌, ವಾಟರ್‌ ಪೇಂಟ್‌ ಬಳಸುತ್ತಿರುವುದರಿಂದ ಹೊಸದಾಗಿ ಬರುವವರುಸುಲಭವಾಗಿ ಕುಂಚ ಕಲೆಯತಂತ್ರಗಳನ್ನು ಕರಗತ ಮಾಡಿಕೊಳ್ಳಬಹುದಾಗಿದೆ. ಹೋಗುವಾಗ ಕನಿಷ್ಠ ಚಿತ್ರ ಬಿಡಿಸಲು ಬೇಕಾದ ಒಂದಿಷ್ಟು ಪರಿಕರ ಕೊಂಡೊಯ್ದರೆ ಸಾಕು, ಉಚಿತವಾಗಿ ಎಲ್ಲಾ ಮಾರ್ಗದರ್ಶನ ದೊರೆಯಲಿದೆ.

ಕಲಾವಿದರೊಂದಿಗೆ ಚಿತ್ರಕಲಾ ಶಿಕ್ಷಕರು ಇರುವುದರಿಂದ ಅನುಭವದ ಜೊತೆಗೆ ಕೆಲ ಅತ್ಯುಪಯುಕ್ತ ಮಾಹಿತಿ ಪಡೆಯಬಹುದಾಗಿದೆ. ಕಲಾವಿದರು ಬಿಡಿಸಿದ ಚಿತ್ರಗಳ ಬಗ್ಗೆ ವಿಮರ್ಶೆಯೂ ನಡೆಯುತ್ತಿದೆ. ಹಿರಿಯ ಕಲಾವಿದರಿಂದ ಸಲಹೆ-ಸೂಚನೆಗಳನ್ನೂ ಇಲ್ಲಿಂದ ಪಡೆಯಬಹುದಾಗಿದೆ.

ಮಾರಾಟಕ್ಕೆ ಆನ್‌ಲೈನ್‌ ವೇದಿಕೆ : ಇಲ್ಲಿ ಬಿಡಿಸಿರುವ ಚಿತ್ರಗಳನ್ನು ಚಿತ್ರಕಲಾ ಪ್ರದರ್ಶನ-ಮಾರಾಟ, ಚಿತ್ರ ಸಂತೆ ಹಾಗೂ ಆನ್‌ಲೈನ್‌ ಮೂಲಕ ಮಾರಾಟ ಮಾಡಲಾಗುತ್ತಿದೆ. ಇದಕ್ಕೂ ಮೊದಲು ಪ್ರತಿ ರವಿವಾರ ನಡೆಯುವ ಕಾಯಕದ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧೆಡೆ ಪಸರಿಸುವ ಕೆಲಸ ಆಗುತ್ತಿದೆ. ಕುಂಚದ ಕಲೆಗೆ ಮನ ಸೋತವರು ಕಲಾವಿದರನ್ನು ಸಂಪರ್ಕಿಸಿ ಅವುಗಳನ್ನು ಖರೀದಿ ಮಾಡುತ್ತಾರೆ.

ತಂಡದಲ್ಲಿ ಯಾರ್ಯಾರು? : ಮಂಜುನಾಥ ಭಂಡಾರೆ, ವಿಜಯಕುಮಾರ ಗಾಯ್ಕವಾಡ, ಎಂ.ಎಚ್‌.ಪಾಟೀಲ, ದೇವೇಂದ್ರ ಬಡಿಗೇರ, ಗಣಪತಿ ಘಾಟಗೆ, ರಾಮಪ್ಪ ಒಣರೊಟ್ಟಿ, ರಾಘವೇಂದ್ರ ಪತ್ತಾರ,ಲಿಂಗರಾಜ ಬಾರಕೇರ, ಸುರೇಶ ಅರ್ಕಸಾಲಿ ಹಾಗೂ ಇನ್ನಿತರರು ತಂಡ ಕಟ್ಟಿಕೊಂಡುಚಿತ್ರಕಲೆ ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಕಾಲೇಜಿಗೆ ಹೋದರೆ ಸಾಕು ಚಿತ್ರಕಲೆ ಕರಗತವಾಗುತ್ತದೆ ಎನ್ನುವ ಭಾವನೆ ಹೆಚ್ಚಿನವರಲ್ಲಿದೆ. ನಾವು ಅನುಭವಿಸಿದ ಸಮಸ್ಯೆ ಚಿತ್ರಕಲೆ ಆಸಕ್ತರು ಅನುಭವಿಸಬಾರದುಎನ್ನುವ ಕಾರಣದಿಂದ ಕಲಾತಂಡ ಕಟ್ಟಿಕೊಂಡು ಪ್ರತಿ ರವಿವಾರ ಒಂದೊಂದು ಸ್ಥಳಗಳಿಗೆ ಹೋಗುತ್ತಿದ್ದೇವೆ. ಎರಡೇ ವಾರಕ್ಕೆ ಮೂರ್‍ನಾಲ್ಕುಯುವಕರು ನಮ್ಮೊಟ್ಟಿಗೆ ಸೇರಿಕೊಂಡಿದ್ದಾರೆ. ಆಸಕ್ತಿಯಿದ್ದವರು ಯಾವುದೇ ಸಂಕೋಚವಿಲ್ಲದೆ ಪಾಲ್ಗೊಳ್ಳಬಹುದು. ಮಂಜುನಾಥ ಭಂಡಾರೆ, ಚಿತ್ರ ಕಲಾವಿದ

ಈ ಕಾರ್ಯವನ್ನು ಖುಷಿಗಾಗಿ ಮಾಡುತ್ತಿದ್ದೇವೆ. ಇಲ್ಲಿನ ಐತಿಹಾಸಿಕ ಸ್ಥಳಗಳನ್ನು ಕುಂಚದಲ್ಲಿ ಸೆರೆ ಹಿಡಿಯುವುದರೊಂದಿಗೆ ಪರಿಸರ ಕಾಳಜಿ ನಮ್ಮಲ್ಲಿದೆ. ಚಿತ್ರಕಲಾ ಶಿಕ್ಷಕರ ನೇಮಕಾತಿ ನಿಲ್ಲಿಸಿರುವುದರಿಂದ ಚಿತ್ರಕಲೆ ನಶಿಸಿ ಹೋಗುತ್ತಿದೆ. ಮುಂದಿನ ಪೀಳಿಗೆಗೆ ಚಿತ್ರಕಲೆ ತೆಗೆದುಕೊಂಡು ಹೋಗಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದೇವೆ.  –ಗಣಪತಿ ಘಾಟಗೆ, ಚಿತ್ರ ಕಲಾವಿದ

 

ಹೇಮರಡ್ಡಿ ಸೈದಾಪುರ

 

ಟಾಪ್ ನ್ಯೂಸ್

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Uddhav Thackeray’s bag inspection by election commission, controversy

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-

NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ

4-

ಸಿಎಂ ಆಗಿದ್ದವರು ಈ‌ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ

ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

CM-siddu

Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ

b s yediyurappa

By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್‌ ವೈ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.