ನೂರಾರು ಹೆಕ್ಟೇರ್‌ನಲ್ಲಿ ನಳನಳಿಸುತ್ತಿದೆ ಹುರಳಿ

ರೈತರ ತಾತ್ಸಾರದ ಮಧ್ಯೆಯೂ ಹಸುವಿನ ಆಹಾರವೆಂದೇ ಪರಿಗಣಿಸಲ್ಪಟ್ಟ ಅತ್ಯುತ್ತಮ ಬೆಳೆ

Team Udayavani, Nov 9, 2020, 6:58 PM IST

ನೂರಾರು ಹೆಕ್ಟೇರ್‌ನಲ್ಲಿ ನಳನಳಿಸುತ್ತಿದೆ ಹುರಳಿ

ಗಜೇಂದ್ರಗಡ: ರೈತರ ತಾತ್ಸಾರದ ಬೆಳೆ ಜೊತೆ ಹಸುವಿನ ಆಹಾರವೆಂದೇ ಪರಿಗಣಿಸಲ್ಪಟ್ಟ ಹುರಳಿ ಫಸಲು ತಾಲೂಕಿನಾದ್ಯಂತ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ನಳನಳಿಸುತ್ತಿದೆ.

ಸದಾ ಶೇಂಗಾ, ಸೂರ್ಯಕಾಂತಿ, ಗೋವಿನ ಜೋಳ ಹಾಗೂ ಹತ್ತಿಯಂತಹ ವಾಣಿಜ್ಯ ಬೆಳೆ ಬೆಳೆದು ನಷ್ಟ ಅನುಭವಿಸಿ ಸಾಲಕ್ಕೆ ತುತ್ತಾದ ರೈತರು ಇನ್ನೇನು ಭೂಮಿ ಬಂಜರು ಗೆಡುವಬಾರದು. ಕೊನೆಗೆ ಹಸುವಿಗೆ ಆಹಾರವಾದರೂ ಆಗಲಿ ಎಂದು ಬೇಕಾಬಿಟ್ಟಿಯಾಗಿ ಬೆಳೆಯುತ್ತಿದ್ದ ಹುರಳಿ ಬೆಳೆಗೆ ಈಗ ಬೇಡಿಕೆ ಬಂದಿದೆ. ಹಾಗಾಗಿ, ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎನ್ನುವ ಮಾತು ಅಕ್ಷರ ಸಹ ಸತ್ಯವಾಗಿದೆ ಎನ್ನುವುದಕ್ಕೆ ಹುರಳಿ ಬೆಳೆ ಸಾಕ್ಷಿಯಾಗಿದೆ.

ಅತ್ಯಂತ ಕಡಿಮೆ ಖರ್ಚಿನ ಜತೆ ಬಿತ್ತಿದ 90 ದಿನದಲ್ಲಿ ಕೇವಲ ತಂಪು ವಾತಾವರಣದಲ್ಲಿ ಬೆಳೆಯುವ ಹುರಳಿ ಎಕರೆ ಒಂದಕ್ಕೆ 2ರಿಂದ 3ಕ್ವಿಂಟಲ್‌ ಬೆಳೆ ಬರುತ್ತದೆ. ಮಾರುಕಟ್ಟೆಯಲ್ಲಿ ಕೇವಲ 1200 ಇದ್ದ ಹುರಳಿ ಬೆಲೆ ಪ್ರಸ್ತುತ ದಿನಗಳಲ್ಲಿ ಕ್ವಿಂಟಲ್‌ ಒಂದಕ್ಕೆ 1,800 ರಿಂದ 2,000ರೂ. ವರೆಗೆ ಬೆಲೆ ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 75 ರೂ. ಇದೆ. ಹೀಗಾಗಿ, ಹುರಳಿ ಬೆಳೆಗೆ ಉತ್ತಮ ಬೆಲೆ ದೊರೆಯುತ್ತಿದೆ.

ಕುಂಟೋಜಿ, ಕಾಲಕಾಲೇಶ್ವರ, ಬೆಣಚಮಟ್ಟಿ, ಗೊಗೇರಿ, ಬೈರಾಪೂರ, ಮುಶಿಗೇರಿ, ನೆಲ್ಲೂರ, ಮಾಟರಂಗಿ, ನಾಗರಸಕೊಪ್ಪ, ಮ್ಯಾಕಲಝರಿ, ರಾಜೂರು, ದಿಂಡೂರ, ರಾಮಾಪೂರ, ವೀರಾಪೂರ, ಲಕ್ಕಲಕಟ್ಟಿ, ಜಿಗೇರಿ ಸೇರಿದಂತೆ ತಾಲೂಕಿನ ಹಲವಾರು ಗ್ರಾಮದ ರೈತರು ಕೆಂಪು ಮಿಶ್ರಿತ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಹುರಳಿ ಬೆಳೆ ಕಂಗೊಳಿಸುತ್ತಿದೆ. ಪೌಷ್ಟಿಕಾಂಶವುಳ್ಳ ಹುರಳಿ: ಇಂದಿನ ತಾಂತ್ರಿಕ ಯುಗದಲ್ಲಿ ಆಧುನಿಕ ಆಹಾರ ಪದ್ಧತಿಗೆ ಮಾರು ಹೋಗಿ ಸದಾ ಆರೋಗ್ಯದ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ದುಷ್ಪರಿಣಾಮ ಬೀರಿ ಮನುಷ್ಯನನ್ನು ರೋಗ ಗ್ರಸ್ತನನ್ನಾಗಿಸುವ ಆಹಾರಕ್ಕೆ ತದ್ವಿರುದ್ಧವಾಗಿ ಜತೆಗೆ ಉತ್ತಮ ಆರೋಗ್ಯಕ್ಕೆ ಅತ್ಯಂತ ಅವಶ್ಯ ಹಾಗೂ ಪೌಷ್ಟಿಕಾಂಶ ಗುಣವುಳ್ಳ ರಾಗಿ, ನವಣಿ ಹೊರತುಪಡಿಸಿದರೆ ಹುರಳಿ ಕಾಳು ಆರೋಗ್ಯಕ್ಕೆ ಹೇಳಿ ಮಾಡಿಸಿದ ಆಹಾರವಾಗಿದೆ. ಹೀಗಾಗಿ, ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆಯುಳ್ಳ ಬೆಳೆ ಇದಾಗಿದೆ. ರೈತರ ಬದುಕಿಗೆ ಸಹಕಾರಿಯಾಗಿದೆ.

ಬೇಸಾಯವೇ ಮೂಲ ವೃತ್ತಿ: ಮೈ ಮುರಿದು ದುಡಿದರೆ ಭೂತಾಯಿ ಕೈ ಬಿಡುವದಿಲ್ಲ ಎನ್ನುವ ನಂಬಿಕೆ ಜತೆ ವ್ಯವಸಾಯ ನಮ್ಮ ಉಸಿರು ಎಂದು ಬದುಕು ಸಾಗಿಸುತ್ತ ಬಂದಿರುವ ರೈತರು, ಪೂರ್ವಜರ ಮೂಲ ವೃತ್ತಿ ಬೇಸಾಯವನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಆದರೆ, ಇತ್ತೀಚಿನ ವರ್ಷದಲ್ಲಿ ಹವಾಮಾನ ವೈಪರೀತ್ಯ ಹಾಗೂ ಸಕಾಲಕ್ಕೆ ಬಾರದ ಮಳೆಯಿಂದಾಗಿ ರೈತಾಪಿ ಬದುಕು ಸದಾ ನಷ್ಟದ ಗುಡ್ಡೆಯಾಗಿದೆ. ಬೇಸಾಯ ಮಾಡಬೇಕೋ ಬೇಡವೊ ಎನ್ನುವ ಸಂದಿಗ್ಧ ಪರಿಸ್ಥಿತಿ ಎದುರಾದ ಪರಿಣಾಮ ಹಿರಿಯರು ಉಳಿಸಿಕೊಂಡು ಬಂದ ಬೇಸಾಯ ಮೂಲ ವೃತ್ತಿ ಉಳಿಸುವುದು ಹೇಗೆ ಎನ್ನುವ ಪ್ರಶ್ನೆ ರೈತರನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಭೂತಾಯಿ ನಂಬಿದವರನ್ನು ಕೈಬಿಡುವುದಿಲ್ಲ. ವಾಣಿಜ್ಯ ಬೆಳೆಗಳು ಕೈಕೊಟ್ಟರೂ ನಿರ್ಲಕ್ಷಿತ ಬೆಳೆಗಳು ರೈತರನ್ನು ಕೈಹಿಡಿಯುತ್ತವೆ ಎನ್ನುವುದಕ್ಕೆ ಹುರಳಿ ಬೆಳೆ ನಿದರ್ಶನವಾಗಿದೆ.

ಪ್ರತಿ ವರ್ಷ ಶೇಂಗಾ ಬೆಳೆದು ಸಾಲ ಮಾಡಿ, ಸಾಕಾಗೈತ್ರೀ. ಇನ್ನೇನು ಭೂಮಿ ಹಂಗ ಬಿಟ್ರ ಕಸ ಬೆಳೆದ ಭೂಮಿ ಹಾಳಾಕೈತಿ. ಬೆಳದ್ರ ಎತ್ತಿಗೆ ಹೊಟ್ಟು ಆಗತೈತಿ ಅಂತ ಹುಳ್ಳಿ ಬಿತ್ತೀವ್ರಿ. ಆದ್ರ ಈಗ ಬಜಾರದಾಗ ಹುಳ್ಳಿಗೆ ಚಲೋ ರೇಟ್‌ ಐತ್ರಿ. ಬಿತ್ತಿದ ಹುಳ್ಳಿ ಭಾರೀ ಚೋಲೋ ಐತ್ರಿ. ಭೂಮಿ ತಾಯಿ ಈ ಬೆಳ್ಯಾಗರ ಲಾಭ ಕೊಡ್ತಾಳ ಅನ್ನೋ ಆಸೆ ಹುಟೈತ್ರಿ.  ಅಮರಪ್ಪ ಬೆನಹಾಳ, ಹುರಳಿ ಬೆಳದ ರೈತ

 

ಡಿ.ಜಿ ಮೋಮಿನ್‌

ಟಾಪ್ ನ್ಯೂಸ್

1-chenna

ಕನ್ನಡದ ಅಸ್ಮಿತೆಗೆ ಗೊ.ರು.ಚನ್ನಬಸಪ್ಪ 21 ಸೂತ್ರಗಳು

Tulu Cinema: ತುಳುನಾಡಿನ ಗ್ರಾಮೀಣ ಕಥಾನಕ ತೆರೆದಿಟ್ಟ “ದಸ್ಕತ್‌’

Tulu Cinema: ತುಳುನಾಡಿನ ಗ್ರಾಮೀಣ ಕಥಾನಕ ತೆರೆದಿಟ್ಟ “ದಸ್ಕತ್‌’

1-weewewe

ODI; ವಿಜಯ್‌ ಹಜಾರೆ ಟ್ರೋಫಿ ಇಂದಿನಿಂದ:ಕರ್ನಾಟಕಕ್ಕೆ ಮುಂಬಯಿ ಸವಾಲು

1-knna

87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ :ಹಿಂದಿ ಹೇರಿಕೆಯ ವಿರುದ್ಧ ಕಹಳೆ

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadag-CM-Dcm

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

8

CM Siddaramaiah: ಗ್ಯಾರಂಟಿಗಳನ್ನು‌ ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮ‌‌ದು

7

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

24-

Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-chenna

ಕನ್ನಡದ ಅಸ್ಮಿತೆಗೆ ಗೊ.ರು.ಚನ್ನಬಸಪ್ಪ 21 ಸೂತ್ರಗಳು

Tulu Cinema: ತುಳುನಾಡಿನ ಗ್ರಾಮೀಣ ಕಥಾನಕ ತೆರೆದಿಟ್ಟ “ದಸ್ಕತ್‌’

Tulu Cinema: ತುಳುನಾಡಿನ ಗ್ರಾಮೀಣ ಕಥಾನಕ ತೆರೆದಿಟ್ಟ “ದಸ್ಕತ್‌’

1-weewewe

ODI; ವಿಜಯ್‌ ಹಜಾರೆ ಟ್ರೋಫಿ ಇಂದಿನಿಂದ:ಕರ್ನಾಟಕಕ್ಕೆ ಮುಂಬಯಿ ಸವಾಲು

1-knna

87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ :ಹಿಂದಿ ಹೇರಿಕೆಯ ವಿರುದ್ಧ ಕಹಳೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.