ಕನ್ನಡದ ಮೊದಲ ಸಾಮಾಜಿಕ ಕಾದಂಬರಿಯ ಕರ್ತೃ ಗುಲ್ವಾಡಿ ವೆಂಕಟ ರಾವ್
Team Udayavani, Nov 10, 2020, 5:12 AM IST
ಗುಲ್ವಾಡಿ ವೆಂಕಟ ರಾವ್
ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯ ವೆಂಕಟ ರಾವ್ ಅವರ ಮೊದಲ ಕಾದಂಬರಿ (1899). ಅನಂತರ ಭಾಗೀರಥಿ (1900), ಸೀಮಂತಿನೀ (1907) ಕಾದಂಬರಿಗಳನ್ನು ಬರೆದರು.
ಕುಂದಾಪುರ: 121 ವರ್ಷಗಳ ಹಿಂದೆ 1899ರಲ್ಲಿ ಮಂಗಳೂರಿನ ಬಾಸೆಲ್ ಮಿಷನ್‌ನಿಂದ ಮುದ್ರಿತವಾದ ಕನ್ನಡದ ಮೊತ್ತಮೊದಲ ಸಾಮಾಜಿಕ ಕಾದಂಬರಿ “ಇಂದಿರಾಬಾಯಿ’ಯ ಕರ್ತ್ಯು ಗುಲ್ವಾಡಿ ವೆಂಕಟ ರಾವ್. 1844ರಲ್ಲಿ ಕುಂದಾಪುರದ ಗುಲ್ವಾಡಿ ಯಲ್ಲಿ ಜನಿಸಿದ ಅವರು ಬಿಎ ಪದವೀಧರ ರಾಗಿ ಪೊಲೀಸ್ ಇಲಾಖೆ ಯಲ್ಲಿ ವಿವಿಧೆಡೆ ಸೇವೆ ಸಲ್ಲಿಸಿದರು. ವೃತ್ತಿಗೆ ತಕ್ಕ ಭೀಮಕಾಯ, ಗಂಭೀರ ಮುಖಮುದ್ರೆ ಇವರ ದಾಗಿತ್ತು. ನಿವೃತ್ತರಾದ ಬಳಿಕ ಸಾಹಿತ್ಯ ರಚನೆ ಯಲ್ಲಿ ತೊಡಗಿದರು. ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯ ಮೊದಲ ಕಾದಂಬರಿ (1899). ಅನಂತರ ಭಾಗೀರಥಿ (1900), ಸೀಮಂತಿನೀ (1907) ಕಾದಂಬರಿಗಳನ್ನು ಬರೆದರು. ಲಾಡುಪ್ರಿಯಾಚಾರ್ಯ ಎಂಬುದು ವಿಡಂಬನಾತ್ಮಕ ಬರೆಹ. ಮಿತ್ರೋದಯವೆಂಬ ಪತ್ರಿಕೆಯನ್ನೂ ನಡೆಸುತ್ತಿದ್ದರು.
ಮೊದಲ ಕಾದಂಬರಿ
ಅವರ “ಇಂದಿರಾಬಾಯಿ’ ಕಾದಂಬರಿಯು ಮಹಿಳೆಯನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ಸಾಮಾಜಿಕ ಸುಧಾರಣೆಗಳನ್ನು ಪ್ರತಿಪಾದಿಸುವ ಕನ್ನಡದ ಮೊದಲ ಸಾಮಾಜಿಕ ಕಾದಂಬರಿ. (ಮೈಲಾಪುರದಲ್ಲಿ ಹೈಕೋರ್ಟಿನ ವಕೀಲರಾಗಿದ್ದ ರೆಂಟ್ಲ ವೆಂಕಟಸುಬ್ಬರಾವ್ ಅವರಿಂದ ರಚಿತವಾಗಿ ಮದರಾಸಿನಲ್ಲಿ ಪ್ರಕಟವಾದ ಕೇಸರಿವಿಲಾಸ (1895) ಕಾದಂಬರಿ ಕನ್ನಡದ ಪ್ರಥಮ ಸ್ವತಂತ್ರ ಕಾದಂಬರಿ ಎನ್ನುವುದು ಗೋವಿಂದ ಪೈಗಳ ಅಭಿಪ್ರಾಯ.) ಇದು ವ್ಯಕ್ತಿಯೊಬ್ಬರ ಆತ್ಮಕಥೆ ಎಂದು ಲೇಖಕರೇ ಹೇಳಿಕೊಂಡಿದ್ದು, ಹಳತು ಹೊಸತರ ಸಂಘರ್ಷ ಕಾದಂಬರಿಯಲ್ಲಿ ಚಿತ್ರಿತವಾಗಿದೆ. ಪೊಲೀಸ್ ಇಲಾಖೆಯಲ್ಲಿದ್ದಾಗಿನ ಲೋಕಾನುಭವ ಇಲ್ಲಿ ಸಾಹಿತ್ಯವಾಗಿ ರೂಪುಗೊಂಡಿದೆ. ಕಥೆಯಲ್ಲಿನ ಘಟನೆಗಳು ವಾಸ್ತವಾಂಶದಿಂದ ಕೂಡಿದವಾಗಿದ್ದು ಯಾವ ದೃಷ್ಟಿಯಿಂದ ನೋಡಿ ದರೂ ಕಾದಂಬರಿ ಆಧುನಿಕ ಸಮಾಜದ ಕಥನವೆನಿಸಿ ಕೊಳ್ಳುತ್ತದೆ. ಈ ಕಾದಂಬರಿಯ ಗುಣವನ್ನು ಮೆಚ್ಚಿ, ದ.ಕ.ದಲ್ಲಿ ಡಿಸಿಯಾಗಿದ್ದ ಕೌಚನ್ ಎಂಬವರು ಇದನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಪ್ರಕಟಿಸಿದ್ದರು. ಅದಾದ ಬಳಿಕವೂ ಇಂಗ್ಲಿಷ್‌ಗೆ ಭಾಷಾಂತರ ಗೊಂಡಿದ್ದು ಇಂದಿಗೂ ಮಾರುಕಟ್ಟೆಯಲ್ಲಿ ಲಭ್ಯ ಇರುವ ಪುರಾತನ ಕೃತಿಯಾಗಿದೆ. ಈ ಕೃತಿಯು ಸಾಕಷ್ಟು ಅಧ್ಯಯನಕ್ಕೆ ಒಳಗಾಗಿದೆ. ತರಗತಿಗಳಲ್ಲಿ ಪಾಠವಾಗಿ ವಿದ್ಯಾರ್ಥಿಗಳು ಓದಿದ್ದಾರೆ. ವಿಮರ್ಶಕರು ಅದರ ವೈಶಿಷ್ಟéಗಳನ್ನು ಚರ್ಚಿಸಿದ್ದಾರೆ. ವೆಂಕಟರಾಯರು ತಮ್ಮ “ಭಾಗೀರಥಿ’ ಕಾದಂಬರಿಗೆ “ಮೂರ್ಖತ್ವದ ಯಾತನೆಗಳು’ ಎಂಬ ಬದಲಿ ಉಪಶೀರ್ಷಿಕೆಯನ್ನು ಕೊಡುವುದರ ಮೂಲಕ ಕೃತಿಯ ವಿಡಂಬನೆಯ ಧಾಟಿಯನ್ನು ಸೂಚಿಸಿದ್ದರು.
ಪ್ರಶಸ್ತಿ
1990ರ ದಶಕದಲ್ಲಿ ರಾಜ್ಯ ಸರಕಾರ ಈ ಕಾದಂಬರಿಯನ್ನು ಪ್ರಕಟಿಸಿ ಗೌರವಧನವನ್ನು ವೆಂಕಟರಾಯರ ಕೌಟುಂಬಿಕ ಬಂಧು, ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿ ಅವರಿಗೆ ನೀಡಿದಾಗ, ಆ ಗೌರವ ಧನದ ಜತೆಗೆ “ತರಂಗ’ದ ಓದುಗರು ಪ್ರೀತಿಯಿಂದ ಸಂಗ್ರಹಿಸಿ ಕೊಟ್ಟ ದೇಣಿಗೆಯ ಹಣವನ್ನೂ ಸೇರಿಸಿ “ಗುಲ್ವಾಡಿ ವೆಂಕಟ ರಾವ್ ಪ್ರಶಸ್ತಿ’ಯನ್ನು ಸ್ಥಾಪಿಸಿ, ಕನ್ನಡದ ಕೆಲವು ಸಮರ್ಥ ಲೇಖಕರಿಗೆ ನೀಡಿದ್ದರು. ವೆಂಕಟ ರಾಯರು ಜನಿಸಿದ ಮನೆಯ ಕುರುಹು ಕೂಡ ಇಲ್ಲ. ಸ್ಮಾರಕ ಇತ್ಯಾದಿಗಳ ರಚನೆಗೆ ಯಾರೂ ಆಸ್ಥೆ ವಹಿಸಲಿಲ್ಲ. ಕಳಕಳಿ ಗುಲ್ವಾಡಿ ಅವರು ಬಾಳಿದ ಕಾಲದಲ್ಲಿ ಭಾರತೀಯ ಸಮಾಜ ಸನಾತನ ಆವರಣದಿಂದ ಹೊರಬಿದ್ದು, ಬ್ರಿಟಿಷ್ ಆಳ್ವಿಕೆಯಲ್ಲಿ ಪಾಶ್ಚಾತ್ಯ ನಾಗರಿಕತೆಯತ್ತ ಸಾಗುತ್ತಿತ್ತು. ಸನಾತನ ಧರ್ಮದಲ್ಲಿ, ಗುರುಪೀಠಗಳಲ್ಲಿ ಇವರಿಗೆ ಅಚಲ ನಿಷ್ಠೆಯಿದ್ದು ಆ ಮನೋಭಾವ ದಿಂದಲೇ ಅಂದಿನ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡದ್ದಿದೆ. ಪ್ರಾಮಾಣಿಕತೆಯೇ ಜೀವನದ ಉಸಿರಾಗಿತ್ತು. ಹೊಸ ಶಿಕ್ಷಣ ಪಡೆದಿದ್ದರಿಂದ ಹಲವು ಶಿಕ್ಷಣ ಮಂದಿರಗಳನ್ನು ಪುನರುಜ್ಜೀವನ ಗೊಳಿಸಿದರು. ಸ್ತ್ರೀಯರ ಏಳ್ಗೆ ಮುಂತಾದ ವಿಷಯಗಳಲ್ಲಿ ಸಹಜವಾದ ಕಳಕಳಿ ಇತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.