ಸವರಿನ್ ಗೋಲ್ಡ್ ಬಾಂಡ್ ಯೋಜನೆ
ದೀಪಾವಳಿ ಸಂದರ್ಭ ಚಿನ್ನದ ಮೇಲೆ ಹೂಡಿಕೆಗೆ ಮತ್ತೂಂದು ಅವಕಾಶ
Team Udayavani, Nov 10, 2020, 6:12 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಸವರಿನ್ ಗೋಲ್ಡ್ ಬಾಂಡ್(ಎಸ್‌ಜಿಬಿ) ಯೋಜನೆಯ 8ನೇ ಸರಣಿ ನ. 9ರಿಂದ 13ರ ವರೆಗೆ ಜಾರಿಯಲ್ಲಿರಲಿದೆ. ದೀಪಾವಳಿ ಹಿನ್ನೆಲೆಯಲ್ಲಿ ಆರ್‌ಬಿಐ ಈ ಯೋಜನೆಯಲ್ಲಿ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿದೆ. ಬಾಂಡ್ ಬೆಲೆಯನ್ನು ಪ್ರತೀ ಗ್ರಾಂ.ಗೆ 5,177 ರೂ. ಎಂದು ಆರ್‌ಬಿಐ ನಿಗದಿ ಮಾಡಿದೆ.
ಈ ಬಾರಿ ಆರ್‌ಬಿಐ ನಿಗದಿಗೊಳಿಸಿರುವ ಚಿನ್ನದ ಬಾಂಡ್ ಬೆಲೆ ಮಾರುಕಟ್ಟೆಯ ನೈಜ ಬೆಲೆಗಿಂತ ಕಡಿಮೆಯಾಗಿದೆ. ಇದಕ್ಕೆ ನಿರಂತರವಾಗಿ ಏರುತ್ತಿರುವ ಧಾರಣೆಯೇ ಕಾರಣವಾಗಿದೆ. ಆನ್‌ಲೈನ್ ಮೂಲಕ ಸವರಿನ್ ಗೋಲ್ಡ್ ಬಾಂಡ್‌ಗೆ ನೋಂದಾಯಿಸುವವರಿಗೆ ಹಾಗೂ ಡಿಜಿಟಲ್ ಪಾವತಿ ಮಾಡುವ ಗ್ರಾಹಕರಿಗೆ ಪ್ರತಿ ಗ್ರಾಂ.ಗೆ 50 ರೂ. ಗಳ ರಿಯಾಯಿತಿ ನೀಡಲಾಗುತ್ತದೆ. ಅಂಥ ಹೂಡಿಕೆದಾರರಿಗೆ ಪ್ರತಿ ಗ್ರಾಂ.ಗೆ 5,127 ರೂ. ದರದಲ್ಲಿ ಬಾಂಡ್ ಲಭಿಸಲಿದೆ. ಇಂಥ ಬಾಂಡ್‌ಗಳನ್ನು ಡಿಮ್ಯಾಟ್ ರೂಪಕ್ಕೆ ಪರಿವರ್ತಿಸಬಹುದಾಗಿದೆ.
ಎಲ್ಲಿ ದೊರೆಯುತ್ತದೆ?: ಪ್ರಮುಖ ಅಂಚೆ ಕಚೇರಿ, ವಾಣಿಜ್ಯ ಬ್ಯಾಂಕ್‌ಗಳು, ಬಿಎಸ್‌ಇ, ಎನ್‌ಎಸ್‌ಇ ಮತ್ತು ನ್ಯಾಶನಲ್ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಶನ್‌ನಲ್ಲಿ ಎಸ್‌ಜಿಬಿಗಳನ್ನು ಖರೀದಿಸಬಹುದು.
ಎಷ್ಟು ಚಿನ್ನವನ್ನು ಖರೀದಿಸಬಹುದು?: ಒಬ್ಬ ವ್ಯಕ್ತಿಯು ಆರ್ಥಿಕ ವರ್ಷದಲ್ಲಿ ಕನಿಷ್ಠ 1 ಗ್ರಾಂ.ನಿಂದ ಗರಿಷ್ಠ 4 ಕೆ.ಜಿ.ವರೆಗಿನ ಚಿನ್ನದ ಬಾಂಡ್‌ಗಳನ್ನು ಖರೀದಿ ಸಬಹುದು. 8 ವರ್ಷಗಳ ಮೆಚ್ಯುರಿಟಿ ಸಮಯ ಹೊಂದಿದ್ದು, ಬಯಸಿದರೆ 5 ವರ್ಷಕ್ಕೆ ಮುಕ್ತಾಯ ಗೊಳಿಸಬಹುದು.
ಏನೆಲ್ಲ ದಾಖಲೆಗಳು ಅಗತ್ಯ?: ಆಧಾರ್ ಕಾರ್ಡ್, ಪಾನ್, ಪಾಸ್‌ಪೋರ್ಟ್, ವೋಟರ್ ಐಡಿ ಪೈಕಿ ಯಾವುದಾದರೂ ಒಂದನ್ನು ನೀಡಬಹುದು. ಅರ್ಜಿ ಸಲ್ಲಿಸುವ ಸಂದರ್ಭ ಪಾನ್ ನಂಬರ್ ಕಡ್ಡಾಯ.
ಏನಿದು ಬಾಂಡ್?
ಎಸ್‌ಜಿಬಿ ಆರ್‌ಬಿಐನ ಬಾಂಡ್ ಆಗಿದೆ. ಬಾಂಡ್ ಮೌಲ್ಯವನ್ನು ಚಿನ್ನದ ಮಾರುಕಟ್ಟೆಯ ಮೂಲಕ ಅಳೆಯಲಾಗುತ್ತದೆ. ಬಾಂಡ್ 5 ಗ್ರಾಂ. ಚಿನ್ನದ್ದಾಗಿದ್ದರೆ, ಐದು ಗ್ರಾಂ ಚಿನ್ನದ ಬೆಲೆ ಬಾಂಡ್ ಬೆಲೆಗೆ ಸಮನಾಗಿರುತ್ತದೆ. ಮೆಚ್ಯುರಿಟಿ ಬಳಿಕ ಹಣವನ್ನು ಹೂಡಿಕೆದಾರರ ಖಾತೆಗೆ ಜಮಾ ಮಾಡಲಾಗುತ್ತದೆ. ಈ ವೇಳೆ ಕಡೆಯ 3 ಕೆಲಸದ ದಿನಗಳ ದರವನ್ನು ಮಾನ ದಂಡವನ್ನಾಗಿಟ್ಟುಕೊಂಡು ಅದರ ಸರಾಸರಿ ದರವನ್ನು ಅನ್ವಯಿಸಿ ಬಾಂಡ್‌ನ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಇದಕ್ಕೆ ವಾರ್ಷಿಕ ಶೇ. 2.50ರ ಬಡ್ಡಿ ದರವೂ ಇದ್ದು, ತೆರಿಗೆ ವಿನಾಯಿತಿಯನ್ನೂ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
MUST WATCH
ಹೊಸ ಸೇರ್ಪಡೆ
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.