ಗಗನಚುಕ್ಕಿ ಪ್ರಗತಿಗೆ 3.54 ಕೋಟಿ ಬಿಡುಗಡೆ
ಜಲಪಾತದ ಸೌಂದರ್ಯ ಹೆಚ್ಚಿಸಲುಕ್ರಮ, ಅರಣ್ಯ, ಲೋಕೋಪಯೋಗಿ ಅಧಿಕಾರಿಗಳಿಂದ ಪರಿಶೀಲನೆ
Team Udayavani, Nov 10, 2020, 4:40 PM IST
ಗಗನಚುಕ್ಕಿ ಜಲಪಾತವನ್ನು ಅಧಿಕಾರಿಗಳು ಪರಿಶೀಲನೆ ಮಾಡಿದರು.
ಮಂಡ್ಯ: ಜಿಲ್ಲೆಯ ಗಗನಚುಕ್ಕಿ ಜಲಪಾತದ ಅಭಿವೃದ್ಧಿಗೆ ಸರ್ಕಾರ 3.54 ಕೋಟಿರೂ. ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಅರಣ್ಯಾಧಿಕಾರಿ, ಪ್ರವಾಸೋದ್ಯಮ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
2007ರಿಂದ ಪ್ರತಿ ವರ್ಷ ಗಗನಚುಕ್ಕಿ ಜಲಪಾತೋತ್ಸವ ನಡೆಯುತ್ತದೆ. ವಿವಿಧ ಮನರಂಜನಾತ್ಮಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ಅಭಿವೃದ್ಧಿಬಗ್ಗೆ ಮಾತುಕತೆಗೆ ಮಾತ್ರ ಸೀಮಿತವಾಗುತ್ತಿತ್ತು. ಜಲಪಾತೋತ್ಸವ ಪ್ರಾರಂಭವಾಗಿ ಇಲ್ಲಿಗೆ 13 ವರ್ಷಗಳು ಕಳೆದಿವೆ. ಆದರೂ, ಗಗನಚುಕ್ಕಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಹೊಂದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಅದು ಈಗ ಸಾಕಾರಗೊಳ್ಳುವ ಎಲ್ಲ ಲಕ್ಷಣಗಳುಕಂಡು ಬರುತ್ತಿದೆ.
ಹೇಗಿರಲಿದೆ ಅಭಿವೃದ್ಧಿ?: ಪ್ರವಾಸೋದ್ಯಮ ಇಲಾಖೆಯು ಅಭಿವೃದ್ಧಿಯ ಬಗ್ಗೆ ನೀಲಿನಕ್ಷೆ ಬಿಡುಗಡೆಗೊಂಡಿದ್ದು, ಜಲಪಾತ ಸೌಂದರ್ಯ ಹೆಚ್ಚಿಸಲು ಹಲವು ಯೋಜನೆಗಳನ್ನು ರೂಪುಗೊಳಿಸಿದೆ. ಪ್ರವಾಸಿಗರ ಜಲಪಾತ ವೀಕ್ಷಣೆಗೆ ತೊಂದರೆಯಾಗದಂತೆ ವಿಶಾಲವಾದ ಹೋಗುವ ಹಾಗೂ ಬರುವ ಮಾರ್ಗದ ಎರಡೂ ಕಡೆ ಮೆಟ್ಟಿಲುಗಳು ನಿರ್ಮಾಣವಾಗಲಿದೆ. ಸುಮಾರು 200 ಮಂದಿ ಪ್ರವಾಸಿಗರು ಕುಳಿತುಕೊಂಡು ವೀಕ್ಷಿಸಲು ಗ್ಯಾಲರಿ, ಅಲ್ಲಲ್ಲಿ ಪ್ರೇಕ್ಷಕರ ವಿಶ್ರಾಂತಿಗೆ ಕುಟೀರ ಗಳು, ಪ್ರಾಣಿಗಳ ಮಾದರಿಗಳು, ವನ್ಯ ಪ್ಲಾಂಟ್ ನಿರ್ಮಾಣವಾಗಲಿವೆ. ಅಲ್ಲದೆ, ಗಗನಚುಕ್ಕಿಯ ಸೌಂದರ್ಯ ಹೆಚ್ಚಿಸಲು ಮೆಟ್ಟಿಲುಗಳ ಪಕ್ಕ ಹುಲ್ಲು ಹಾಸು, ಮರಗಳನ್ನು ಬೆಳೆಸಲು ಯೋಜನೆ ರೂಪಿಸಲಾಗಿದೆ.
ಸೌಂದರ್ಯ ವೀಕ್ಷಣೆಗೂ ಯೋಜನೆ: ಜಲ ಪಾತದಲ್ಲಿ ಬಿದ್ದ ನೀರು ನದಿಯ ಮೂಲಕ ಸಾಗಲಿದೆ. ಹರಿಯುವ ನದಿ ಕಣಿವೆಯ ಸೌಂದರ್ಯ ಹಾಗೂ ಪ್ರಕೃತಿಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ವ್ಯವಸ್ಥೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದ್ದು, ಮುಂದಿನ ವರ್ಷದ ಅಂತ್ಯದೊಳಗೆ ಕಾಮಗಾರಿ ಮುಗಿ ಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.ಈಗಾಗಲೇ ಜಾಗ ವನ್ನುಗುರುತಿಸಲಾ ಗಿದ್ದು, ಸದ್ಯದ ಲ್ಲಿಯೇ ಶಾಸಕರು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಹರೀಶ್ ಹೇಳಿದರು.
ವಿದ್ಯುತ್ ದೀಪಾಲಂಕಾರ : ರಾತ್ರಿ ವೇಳೆ ಪ್ರವಾಸಿಗರು ಬಣ್ಣದ ಜಲಪಾತ ಕಣ್ತುಂಬಿಕೊಳ್ಳಲು ಗಗನಚುಕ್ಕಿ ಜಲಪಾತಕ್ಕೆ ವಿದ್ಯುತ್ ದೀಪಾಲಂಕಾರ ಮಾಡುವ ಮೂಲಕ ಮೆರಗು ನೀಡಲಿದೆ.ಅಲ್ಲದೆ,ನಿರ್ಮಾಣವಾಗುವಪ್ರವಾಸಿಗರ ಗ್ಯಾಲರಿಯಲ್ಲೂವಿದ್ಯುತ್ ಅಳವಡಿಸಲುಚಿಂತನೆ ನಡೆಸಲಾಗಿದೆ.
ಪ್ರವಾಸಿಗರ ಸುರಕ್ಷತೆಗೆ ಆದ್ಯತೆ : ಗಗನಚುಕ್ಕಿ ಅಭಿವೃದ್ಧಿ ಯೋಜನೆಯಲ್ಲಿ ಪ್ರವಾಸಿಗರ ಸುರಕ್ಷತೆ ಹೆಚ್ಚು ಒತ್ತು ನೀಡಲಾಗಿದೆ. ಬರುವ ಪ್ರವಾಸಿಗರು ಯಾವುದೇ ತೊಂದರೆ ಇಲ್ಲದಂತೆ ಜಲಪಾತ ವೀಕ್ಷಿಸಿ ಸುರಕ್ಷಿತವಾಗಿ ತೆರಳಲು ಎಲ್ಲ ರೀತಿಯಕ್ರಮಗಳನ್ನುಕೈಗೊಳ್ಳಲಾಗುವುದು. ಇದೊಂದು ಬಹುದಿನಗಳಕನಸಾಗಿದ್ದು, ಅದು ಶೀಘ್ರದಲ್ಲಿಯೇ ಸಾಕಾರಗೊಳ್ಳಲಿದೆ. ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಈಗಾಗಲೇ ಕಾಮಗಾರಿಗೆ ಬೇಕಾದ ಸಾಮಗ್ರಿಗಳನ್ನು ಸಾಗಿಸಲು ಶಿಂಷಾ ಚಾನಲ್ ಬಳಿಯ ಚಿಕ್ಕಮುತ್ತತ್ತಿಯ ರಸ್ತೆಯುದ್ದಕ್ಕೂಕಬ್ಬಿಣದ ತಡೆಗೋಡೆ ನಿರ್ಮಿಸಲಾಗಿದೆ ಎಂದು ಮಂಡ್ಯ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಹರೀಶ್ ತಿಳಿಸಿದ್ದಾರೆ.
ಅಧಿಕಾರಿಗಳಿಂದ ಸ್ಥಳ ಪರಿಶೀಲನೆ : ಯೋಜನೆ ಕಾಮಗಾರಿ ಕೈಗೊಳ್ಳಲು ಅರಣ್ಯಾಧಿಕಾರಿ ರವಿಶಂಕರ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಹರೀಶ್ ಹಾಗೂಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿಭೇಟಿನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ, ಈ ಯೋಜನೆ ಮುಗಿಯುವುದರೊಳಗೆ ಬರುವ ಪ್ರವಾಸಿಗರು ಉಳಿದುಕೊಳ್ಳಲು ಕೊಠಡಿಗಳ ನಿರ್ಮಾಣ, ಹೈಟೆಕ್ ಶೌಚಾಲಯ, ಉತ್ತಮ ರಸ್ತೆ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲು ಯೋಜನೆ ರೂಪಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ.
–ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.