ಪಶ್ಚಿಮದಲ್ಲಿ ಮತ್ತೆ ಕಮಲ ಅರಳಿಸಿದ ಪದವೀಧರ; 2ನೇ ಬಾರಿ ಸಂಕನೂರ ಆಯ್ಕೆ

ಅಸಿಂಧು ಮತಗಳೇ ಅತ್ಯಧಿಕ : ಮತಪತ್ರದಲ್ಲಿ ಬೇಡಿಕೆಗಳ ಪಟ್ಟಿ ಬರೆದ ಪದವೀಧರರು

Team Udayavani, Nov 10, 2020, 8:41 PM IST

Dharwad

ಎಸ್.ವಿ.ಸಂಕನೂರ

ಧಾರವಾಡ : ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಸ್.ವಿ.ಸಂಕನೂರ ಎರಡನೇ ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಮಧ್ಯೆ ಏರ್ಪಟ್ಟಿದ್ದ ತ್ರಿಕೋನ ಸ್ಪರ್ಧೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿಯೇ ಅತ್ಯಧಿಕ ಮತಗಳನ್ನು ಪಡೆದುಕೊಳ್ಳುವ ಮೂಲಕ ಎಸ್.ವಿ.ಸಂಕನೂರ ಅವರು ಗೆಲುವಿನ ನಗೆ ಬೀರಿದರು.

ಸತತ ಸೋಲಿನಿಂದ ಕಂಗೆಟ್ಟು ಈ ಬಾರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕುಬೇರಪ್ಪ ಅವರು ಈ ಬಾರಿಯೂ ಸೋಲುಂಡಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಸಂಚಲನ ಸೃಷ್ಠಿಸಿದ್ದ ಬಸವರಾಜ ಗುರಿಕಾರ ಯಾರದೇ ಬೆಂಬಲ ಇಲ್ಲದೇ ಹೋದರೂ ಐದು ಸಾವಿರಕ್ಕೂ ಅಧಿಕ ಮತಗಳನ್ನು ಪಡೆದುಕೊಳ್ಳುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ.

ನಾಲ್ಕನೆ ಸುತ್ತಿನಲ್ಲಿ ಎಣಿಕೆಯಾದ ಒಟ್ಟು 52041ಮತಗಳ ಪೈಕಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಸ್.ವಿ.ಸಂಕನೂರ ಅವರು 23,857 ಮತಗಳನ್ನುಗಳನ್ನು ಪಡೆದುಕೊಳ್ಳುವ ಮೂಲಕ ಜಯಭೇರಿ ಬಾರಿಸಿದರು. ಇನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕುಬೇರಪ್ಪ 12,448 ಹಾಗೂ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ 6188 ಮತಗಳನ್ನು ಪಡೆದುಕೊಂಡರು.

ಜೆಡಿಎಸ್‌ನಿಂದ ಮೊದಲು ಕಣಕ್ಕೆ ಇಳಿದಿದ್ದ ಶಿವಶಂಕರ ಕಲ್ಲೂರ 102 ಮತಗಳು, ಕರ್ನಾಟಕ ರಾಷ್ಟ್ರ ಸಮತಿ ಬೆಂಬಲಿತ ಶಿವರಾಜ ಕಾಂಬಳೆ-66, ಶಿವಸೇನೆ ಬೆಂಬಲಿತ ಸೋಮಶೇಖರ ಉಮರಾಣಿ -133, ಪಕ್ಷೇತರರಾದ ದಶರಥ ರಂಗರಡ್ಡಿ-45, ಬಿ.ಡಿ.ಹಿರೇಗೌಡರ-153, ಬಸವರಾಜ ತೇರದಾಳ-71, ನಾಗರಕಟ್ಟಿ ಮಹಮದ ಶಫಿಉದ್ದಿನ್ ಎಸ್.-153, ಶಿವಕುಮಾರ ತಳವಾರ-53 ಮತಗಳನ್ನು ಪಡೆದುಕೊಂಡರು.

ಬಿಜೆಪಿ ಸತತ ಮುನ್ನಡೆ : ಬೆಳಗ್ಗೆ 8:00 ಗಂಟೆಗೆ ಮತಪೆಟ್ಟಿಗೆಗಳ ಕೊಠಡಿಯಿಂದ ಮತಪತ್ರಗಳು ಎಣಿಕೆ ಕೊಠಡಿ ಸೇರಿದವು. ಅಲ್ಲಿಂದ ಮಧ್ಯಾಹ್ನ 12:00 ಗಂಟೆ ವರೆಗೂ ಅವುಗಳ ಹೊಂದಿಸುವ ಕಾರ್ಯವಾಯಿತು. ಮೊದಲ ಸುತ್ತಿನ ಮತ ಎಣಿಕೆ ಕಾರ್ಯ ಮಧ್ಯಾಹ್ನ 2:30 ಕ್ಕೆ ಪೂರ್ಣಗೊಂಡಿತು. ಇಲ್ಲಿ ಒಟ್ಟು 14 ಸಾವಿರ ಮತಗಳ ಎಣಿಕೆಯಾದಾಗ 11552 ಮತಗಳು ಸಿಂಧುವಾದರೆ 2445 ಮತಗಳೂ ತಿರಸ್ಕೃತಗೊಂಡವು.

ಎಸ್.ವಿ.ಸಂಕನೂರ-6777, ಕುಬೇರಪ್ಪ-2928 ಹಾಗೂ ಬಸವರಾಜ ಗುರಿಕಾರ-1672 ಮತಗಳನ್ನು ಪಡೆದುಕೊಂಡರು. ಈ ಸುತ್ತಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಂಕನೂರ ಅವರು 3849 ಮತಗಳ ಅಂತರ ಕಾಯ್ದುಕೊಂಡರು.

2ನೇ ಸುತ್ತಿನ ಮತ ಎಣಿಕೆ ಕಾರ್ಯ ಸಂಜೆ 5:30 ಕ್ಕೆ ಮುಕ್ತಾಯವಾಯಿತು. ಈ ಸುತ್ತಿನಲ್ಲಿ ಒಟ್ಟು 27998 ಮತಗಳ ಎಣಿಕೆ ಪೂರ್ಣಗೊಂಡಾಗ ಎಸ್.ವಿ.ಸಂಕನೂರ-13293, ಕುಬೇರಪ್ಪ-6111, ಗುರಿಕಾರ-3540 ಮತಗಳನ್ನು ಪಡೆದುಕೊಂಡರು. ಇಲ್ಲಿ ಸಂಕನೂರ ಅವರು 7182 ಮತಗಳ ಭಾರಿ ಮುನ್ನಡೆ ಕಾಯ್ದುಕೊಂಡರು. ಇಲ್ಲಿ 4669 ಮತಗಳು ಅಸಿಂಧುವಾದರೆ 23,329 ಮತಗಳು ಸಿಂಧುವಾದವು.
3ನೇ ಸುತ್ತಿನ ಮತ ಎಣಿಕೆಯಲ್ಲಿ 41,998 ಮತಗಳ ಎಣಿಕೆ ಪೂರ್ಣಗೊಂಡಿದ್ದು ಸಂಜೆ 7:00 ಗಂಟೆಗೆ. ಇಲ್ಲಿ ಸಂಕನೂರ-19565, ಕುಬೇರಪ್ಪ-9449, ಗುರಿಕಾರ-5281 ಮತಗಳನ್ನು ಪಡೆದುಕೊಂಡರು. ಈ ಹಂತದಲ್ಲಿ 7045 ಮತಗಳು ಅಸಿಂಧುವಾಗಿದ್ದವು.

8772 ಮತ ಅಸಿಂಧು : ಪದವೀಧರ ಕ್ಷೇತ್ರದ ಈ ಚುನಾವಣೆಯಲ್ಲಿ ಶಿಕ್ಷಣ ಪಡೆದ ವಿದ್ಯಾವಂತರೇ ಮತದಾರರಿದ್ದರೂ, ಅಸಿಂಧುಗೊಂಡ ಮತಗಳನ್ನು ನೋಡಿದಾಗ ಬೇಸರವಾಗುತ್ತದೆ. ಕೆಲವಷ್ಟು ಜನರು ತಪ್ಪು ತಪ್ಪಾಗಿ ಅಂಕಿಗಳನ್ನು ಬರೆದು ಮತ ಅಸಿಂಧುವಾಗುವಂತೆ ಮಾಡಿದ್ದರೆ, ಇನ್ನಷ್ಟು ಮತದಾರರು ಬೇಕಾಬಿಟ್ಟಿ ಸಂಗತಿಗಳನ್ನೇ ಮತಪತ್ರದಲ್ಲಿ ಬರೆದು ಮತ ಚಲಾಯಿಸಿದ್ದಾರೆ. ಹೀಗಾಗಿ 8772 ಮತಗಳು ತಿರಸ್ಕೃತಗೊಂಡಿವೆ.

ಹಳೆ ಪಿಂಚಿಣಿ ಯೋಜನೆಯನ್ನೇ ಮುಂದುವರೆಸಿ, ಹೊಸ ಪಿಂಚಿಣಿ ಯೋಜನೆ ಬೇಡವೇ ಬೇಡ ಎನ್ನುವ ವಾಕ್ಯಗಳು ಮತ ಪತ್ರದಲ್ಲಿ ಬರೆಯಲಾಗಿದೆ. ಇನ್ನು ಕೆಲವರು ಸರಿ ತಪ್ಪು ಸಂಕೇತಗಳನ್ನು ಬಳಸಿದ್ದಾರೆ. ಕೆಲವಷ್ಟು ಜನರು ಎಲ್ಲ ಅಭ್ಯರ್ಥಿಗಳಿಗೂ ಒಂದೇ ಪ್ರಾಶಸ್ತ್ಯದ ಮತಗಳನ್ನು ನಮೂದು ಮಾಡಿದ್ದಾರೆ. ಕೆಲವರು ರಂಗೋಲಿ ಬಿಡಿಸಿದ್ದರೆ, ಇನ್ನಷ್ಟು ಮತಪತ್ರಗಳಲ್ಲಿ ಇಂಗ್ಲಿಷ ಅಕ್ಷರಗಳಲ್ಲಿ ಒನ್,ಟೂ ಎಂದು ನಮೂದು ಮಾಡಲಾಗಿದೆ. ಹೀಗಾಗಿ ಮತಪತ್ರಗಳಲ್ಲಿ ಮತದಾರರು ಮಾಡಿದ ಅವಾಂತರಗಳಿಂದಾಗಿ ಅತೀ ಹೆಚ್ಚು ಮತಗಳು ತಿರಸ್ಕೃತಗೊಂಡಿವೆ.

ಸರಳ ವಿಜಯೋತ್ಸವ : ಮತ ಎಣಿಕೆ ಕೇಂದ್ರ ಕೃಷಿ ವಿವಿಯಲ್ಲಿ ಯಾವುದೇ ಪಕ್ಷದ ಕಾರ್ಯಕರ್ತರ ಜಮಾವಣೆಯಾಗಿರಲಿಲ್ಲ. ಗೆಲುವಿನ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿ ಪಕ್ಷದ ಕಾರ್ಯಕರ್ತರು ಆವರಣದಲ್ಲಿ ಸುಳಿಯಲಿಲ್ಲ. ಆದರೆ ಬಿಹಾರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ನಗರದಲ್ಲಿರುವ ಬಿಜೆಪಿ ಕಚೇರಿಗೆ ಬಂದು ವಿಜಯೋತ್ಸವ ಆಚರಿಸಿದರು.

ಟಾಪ್ ನ್ಯೂಸ್

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Congress-Symbol

Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ

Yatindra

Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.