ಬೇರು ಭದ್ರಪಡಿಸುವ ಸವಾಲು

Team Udayavani, Nov 11, 2020, 1:56 PM IST

ಬೇರು ಭದ್ರಪಡಿಸುವ ಸವಾಲು

ಬೆಂಗಳೂರು: ಉಪ ಚುನಾವಣೆ ಫ‌ಲಿತಾಂಶ ಜೆಡಿಎಸ್‌ಗೆ “ಶಾಕ್‌’ ನೀಡಿದ್ದು, ಭವಿಷ್ಯದಲ್ಲಿ ಪಕ್ಷ ಸಂಘಟನೆಯ ಸವಾಲಿನ ಜತೆಗೆ ತಳಮಟ್ಟದಲ್ಲಿ ಪಕ್ಷದ ಬೇರು ಭದ್ರಪಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ಜೆಡಿಎಸ್‌ವಶದಲ್ಲಿದ್ದ ಶಿರಾಕ್ಷೇತ್ರಬಿಜೆಪಿಮಡಿಲಿಗೆ ಹೋಗುವುದರ ಜತೆಗೆ ರಾಜರಾಜೇಶ್ವರಿ ನಗರದಲ್ಲಿ ಠೇವಣಿ ನಷ್ಟಗೊಂಡಿರುವುದು ಪಕ್ಷಕ್ಕೆ ಮರ್ಮಾಘಾತವಾಗಿದೆ. ಎರಡೂ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯ ನಿರ್ಣಾಯಕರಾಗಿದ್ದರೂ ಜೆಡಿಎಸ್‌ ನಿರೀಕ್ಷಿತ ಯಶಸ್ಸು ಕಾಣದಿರುವುದು ಮತ್ತೂಂದು ರೀತಿಯ ಆತಂಕಕ್ಕೂಕಾರಣವಾಗಿದೆ.

ಎಚ್‌.ಡಿ.ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ ನಿಖೀಲ್‌-ಪ್ರಜ್ವಲ್‌ ಸಹಿತ ಪ್ರಚಾರದ ಅಖಾಡಕ್ಕಿಳಿದರೂ ಯಾವುದೇ ರೀತಿಯ ಮ್ಯಾಜಿಕ್‌ ನಡೆದಿಲ್ಲ. ಮುಂದಿನ ದಿನಗಳಲ್ಲಿ ಕಾರ್ಯತಂತ್ರ ಬದಲಿಸಿ ಕೊಂಡು ಪಕ್ಷಕಟ್ಟಬೇಕಿದೆ. ಪ್ರಾರಂಭದಲ್ಲೇ ಕಾಂಗ್ರೆಸ್‌ ಬಿಟ್ಟ “ಒಳ ಒಪ್ಪಂದ’ ಆರೋಪದ ಬಾಣ ಎರಡೂ ಕ್ಷೇತ್ರಗಳಲ್ಲಿ ಸಾಕಷ್ಟು ಡ್ಯಾಮೇಜ್‌ ಮಾಡಿತು. ಆದರೆ, ಬಿಜೆಪಿ , ಜೆಡಿಎಸ್‌ ಬಗ್ಗೆ “ಸಾಫ್ಟ್’ ಧೋರಣೆ ತಾಳುತ್ತಲೇ ರಾಜಕೀಯ ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಬಿಜೆಪಿ ನಾಯಕರು ಅಪ್ಪಿ ತಪ್ಪಿಯೂ ಜೆಡಿಎಸ್‌ ಅಥವಾ ಎಚ್‌.ಡಿ.ದೇವೇಗೌಡರ ಕುಟುಂಬದ ಬಗ್ಗೆ ಟೀಕೆ ಮಾಡದೆ ಜಾಣ್ಮೆ ಪ್ರದರ್ಶಿಸಿದ್ದು ವಿಶೇಷ.ಶಿರಾದಲ್ಲಿ ಬಿಜೆಪಿಯಿಂದ ಗೆದ್ದಿರುವ ರಾಜೇಶ್‌ ಗೌಡ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಅನುಕಂಪ ಕೈ ಹಿಡಿಯಬಹುದೆಂಬ ನಂಬಿಕೆಯಿಂದ ಸ್ಥಳೀಯ ಮುಖಂಡರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಅಮ್ಮಾಜಮ್ಮ ಅವರಿಗೆ ಟಿಕೆಟ್‌ ಕೊಡಲಾಯಿತು. ಆದರೆ, ಬಿಜೆಪಿ ಹಾಗೂ ಕಾಂಗ್ರೆಸ್‌ ನ ರಣತಂತ್ರಗಳ ಬಗ್ಗೆ ಮಾಹಿತಿ ಇದ್ದರೂ ಪ್ರತಿತಂತ್ರ ರೂಪಿಸುವಲ್ಲಿ ಪಕ್ಷದ ನಾಯಕರು ವಿಫ‌ಲರಾದರು ಎಂಬ ಮಾತುಗಳು ಕೇಳಿಬರುತ್ತಿವೆ.

ಕ್ಷೇತ್ರದಲ್ಲಿ ನಿರ್ಣಾಯಕರಾಗಿದ್ದ ಇತರೆ ಸಮುದಾಯಗಳನ್ನು ಸೆಳೆಯುವ ಸಂಘಟಿತ ಪ್ರಯತ್ನ ನಡೆಯಲಿಲ್ಲ. ಪಕ್ಷದ ನಾಯಕರು ಬಿಜೆಪಿ ಹಾಗೂ ಕಾಂಗ್ರೆಸ್‌ನತ್ತ ವಲಸೆ ಹೋಗುವುದು ತಡೆಯಲಿಲ್ಲ. ಇದು ಸಹ ಫ‌ಲಿತಾಂಶದ ಮೇಲ ಪರಿಣಾಮ ಬೀರಿತು ಎಂದು ಹೇಳಲಾಗುತ್ತಿದೆ.  ರಾಜರಾಜೇಶ್ವರಿ ನಗರದಲ್ಲಿ 2018 ರಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ರಾಮಚಂದ್ರ 60360 ಮತ ಪಡೆದಿದ್ದರು. ಆದರೆ, ಇದೀಗ 10251 ಮತಕ್ಕೆ ಸೀಮಿತವಾಗುವಂತಾಗಿದೆ.

ಅದೇ ರೀತಿ 2018 ರಲ್ಲಿ ಶಿರಾದಲ್ಲಿ ಸತ್ಯನಾರಾಯಣ ಅವರು ಜೆಡಿಎಸ್‌ ಅಭ್ಯರ್ಥಿಯಾಗಿ 74,338 ಮತ ಪಡೆದು ಜಯಗಳಿಸಿದ್ದರು. ಆದರೆ, ಇದೀಗ 35,982 ಮತಗಳ ಮೂಲಕ ಮೂರನೇ ಸ್ಥಾನ ಪಡೆಯುವಂತಾಗಿದೆ. ಇದು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ತೀರಾ ನಿರಾಸೆ ಮೂಡಿಸಿದೆ ಎನ್ನಲಾಗಿದೆ. ಚುನಾವಣೆ ಸಂದರ್ಭದಲ್ಲಿ ಪಕ್ಷ ಸಂಘಟನೆ ಹಾಗೂ ಅಭ್ಯರ್ಥಿ ಹುಡುಕಾಟ ನಡೆಸುವುದು. ಸ್ಥಳೀಯವಾಗಿ ಪಕ್ಷದ ನಾಯಕರು ವಲಸೆಹೋಗುವುದು ನಮ್ಮ ಹಿನ್ನೆಡೆಗೆ ಕಾರಣ. ಈ ಬಗ್ಗೆ ಪಕ್ಷದ ನಾಯಕರು ಗಮನಹರಿಸಿ ನಿರಂತರವಾಗಿ ಪಕ್ಷ ಸಂಘಟನೆಗೆ ಮುಂದಾಗಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿಕಷ್ಟ ಎಂದು ಮುಖಂಡರು ಹೇಳುತ್ತಾರೆ.

ಬೇಕಿದೆ ಚೈತನ್ಯ :  ಶಿರಾ ಕ್ಷೇತ್ರದಲ್ಲಿ ಸೋಲುವ ಮೂಲಕಇದ್ದೊಂದು ಕ್ಷೇತ್ರವನ್ನು ಜೆಡಿಎಸ್‌ಕಳೆದುಕೊಂಡಂತಾಗಿದೆ. ರಾಜರಾಜೇಶ್ವರಿ ನಗರದಲ್ಲಿ ಮತ ಗಳಿಕೆಪ್ರಮಾಣವೂ ತೀರಾ ನಿರಾಶಾದಾಯಕ. ಮುಂದಿನ ಪಂಚಾಯಿತಿಹಾಗೂಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಪಕ್ಷವನ್ನು ಮತ್ತೆ ತಳಮಟ್ಟದಿಂದಕಟ್ಟುವಅಗತ್ಯತೆಯಿದೆ. ವಿನೂತನಕಾರ್ಯಕ್ರಮಗಳ ಮೂಲಕಹೊಸ ನಾಯಕತ್ವ ಹುಟ್ಟುಹಾಕಬೇಕಾಗಿದೆ.ಈ ಮೂಲಕ ಕಾರ್ಯಕರ್ತರಲ್ಲಿಚೈತನ್ಯ ತುಂಬಬೇಕಿದೆ

ಟಾಪ್ ನ್ಯೂಸ್

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

yadiyurappa

40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ

ಮುಂದಿನ ವಿಮಾನದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ತೆರಳಲಿ: ಗಂಗೂಲಿ

Sourav Ganguly: ಮುಂದಿನ ವಿಮಾನದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ತೆರಳಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಸವಕಲ್ಯಾಣ, ಮಸ್ಕಿಯತ್ತ ಬಿಜೆಪಿಯ ಯಶಸ್ವಿ “ಉಸ್ತುವಾರಿಗಳು”

ಬಸವಕಲ್ಯಾಣ, ಮಸ್ಕಿಯತ್ತ ಬಿಜೆಪಿಯ ಯಶಸ್ವಿ “ಉಸ್ತುವಾರಿಗಳು”

ಸೋಲಿನಿಂದ ಹೆದರಿ ಹಿಂದೆ ತಿರುಗಿ ನೋಡುವ ಪ್ರಶೆಯೇ ಇಲ್ಲ: ಕುಸುಮಾ

ಸೋಲಿನಿಂದ ಹೆದರಿ ಹಿಂದೆ ತಿರುಗಿ ನೋಡುವ ಪ್ರಶ್ನೆಯೇ ಇಲ್ಲ: ಕುಸುಮಾ

bng-tdy-1

ಮುನಿರತ್ನ ಮಾತು : ಸದಾ ಕ್ಷೇತ್ರದ ಜನರೊಂದಿಗೆ ಇರುವೆ

bng-tdy-5

ಜಾತಿ, ಅನುಕಂಪ ಮೀರಿ ಅಭಿವೃದ್ಧಿಗೆ ಜನ ಮತ

ನಾಯಕರ ಪ್ರತಿಷ್ಠೆ: ಎಚ್ಚರಿಕೆ ಗಂಟೆ

ನಾಯಕರ ಪ್ರತಿಷ್ಠೆ: ಎಚ್ಚರಿಕೆ ಗಂಟೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.