ಆರ್‌ಸಿಬಿ ವಿಫಲವಾಯಿತೇಕೆ?
Team Udayavani, Nov 11, 2020, 10:33 PM IST
ಬೆಂಗಳೂರು: ಪ್ರತೀ ಐಪಿಎಲ್ ಆರಂಭಕ್ಕೂ ಮೊದಲು ಆರ್‌ಸಿಬಿ ಅಭಿಮಾನಿಗಳು “ಕಪ್ ನಮ್ದೇ’ ಎಂದು ಹೇಳಿಕೊಂಡು ಕುಣಿಯುವುದು, ಟೂರ್ನಿ ಮುಗಿದ ಮೇಲೆ ಆರ್‌ಸಿಬಿ ವಿಫಲವಾಯಿತೇಕೆ ಎಂದು ಪ್ರಶ್ನಿಸಿಕೊಳ್ಳುವುದು ಮಾಮೂ ಲಾಗಿದೆ. 2020ರ ಕೂಟವೂ ಇದಕ್ಕೆ ಹೊರತಾಗಿಲ್ಲ. ಹಾಗೆಯೇ ತಂಡದ ಸಮಸ್ಯೆಗಳೂ ಬಗೆಹರಿದಿಲ್ಲ.
ಆರ್‌ಸಿಬಿ ಬೌಲಿಂಗ್ ಕೆಲವರ ಮೇಲಷ್ಟೇ ಅವಲಂಬಿತವಾಗಿದೆ. ಹಾಗೆಯೇ ಬ್ಯಾಟಿಂಗ್ ಕೂಡ! ಅದರಲ್ಲೂ ಬ್ಯಾಟಿಂಗ್ ವಿಭಾಗ ವಿರಾಟ್ ಕೊಹ್ಲಿ, ಎ ಬಿ ಡಿವಿಲಿಯರ್ ಅವರನ್ನು ಸಂಪೂರ್ಣವಾಗಿ ಅವಲಂಬಿಸಿದೆ. ಇವರಿಬ್ಬರು ಔಟಾದರೆ ಅಲ್ಲಿಗೆ ಮುಗಿಯಿತು. ಈ ಬಾರಿ ದೇವದತ್ತ ಪಡಿಕ್ಕಲ್ ಮಿಂಚಿ ಹೊಸ ಭರವಸೆಯಾಗಿ ಕಾಣಿಸಿಕೊಂಡರು. ಅವರು ಕೊಹ್ಲಿ, ಎಬಿಡಿ ಇಬ್ಬರನ್ನೂ ಮೀರಿಸಿದರು.
ಕೂಟದ ಆರಂಭದಲ್ಲೇ ವೇಗಿ ಕೇನ್ ರಿಚಡ್ಸನ್ ಆಡುವುದಿಲ್ಲ ಎಂದು ಘೋಷಿಸಿದರು. ಅದು ಆರ್‌ಸಿಬಿಗೆ ಎದುರಾದ ದೊಡ್ಡ ಹೊಡೆತ. ಕೆಲವು ಪಂದ್ಯಗಳ ಅನಂತರ ಆಲ್‌ರೌಂಡರ್ ಕ್ರಿಸ್ ಮಾರಿಸ್ ತಂಡ ಸೇರಿಕೊಂಡಿದ್ದರಿಂದ ಭಾರೀ ಅನುಕೂಲವಾಯಿತು. ಕಡೆಯಲ್ಲಿ ಅವರು ಗಾಯಾಳಾಗಿ ಹೊರಬಿದ್ದು ಹೊಡೆತ ನೀಡಿದರು.
ಡೇಲ್ ಸ್ಟೇನ್ ಬೌಲಿಂಗ್ ಯಾವುದೇ ಹಂತದಲ್ಲೂ ಪರಿಣಾಮ ಕಾರಿ ಆಗಿರಲಿಲ್ಲ. ಹಾಗಾಗಿ ನವದೀಪ್ ಸೈನಿ, ಮೊಹಮ್ಮದ್ ಸಿರಾಜ್ ಜತೆಗೆ ಇನ್ನೊಬ್ಬ ಪ್ರಮುಖ ವೇಗಿಯ ಕೊರತೆ ಎದುರಾಯಿತು. ಡ್ಯಾರಿಂಗ್ ಕ್ರಿಕೆಟರ್ ಪಾರ್ಥಿವ್ ಪಟೇಲ್‌ಗೆ ಒಂದೂ ಅವಕಾಶ ನೀಡಲಿಲ್ಲ. ಇಷ್ಟೆಲ್ಲದರ ಮಧ್ಯೆ ಆರ್‌ಸಿಬಿ ಪ್ಲೇ ಆಫ್ಗೆ ಏರಿದ್ದೇ ಹೆಚ್ಚು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.