ರೋಹಿತ್ ನಾಯಕತ್ವಕ್ಕೆ ಹೊಸ ಖದರು
Team Udayavani, Nov 11, 2020, 10:36 PM IST
ಮುಂಬಯಿ: ಮುಂಬೈ ಇಂಡಿಯನ್ಸ್ 5ನೇ ಸಲ ಐಪಿಎಲ್ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದ ಬಳಿಕ ರೋಹಿತ್ ನಾಯಕತ್ವಕ್ಕೆ ಹೊಸ ಖದರು ಬಂದಿದೆ. ಅವರನ್ನು ಭಾರತದ ಸೀಮಿತ ಓವರ್ ತಂಡಗಳ ನಾಯಕನನ್ನಾಗಿ ನೇಮಿಸಬೇಕು ಎಂಬ ಕೂಗು ಬಲವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, “ರೋಹಿತ್ ಅವರನ್ನು ಟಿ20 ತಂಡದ ನಾಯಕನ್ನಾಗಿ ನೇಮಿಸದೆ ಹೋದರೆ ಅದು ನಿಜಕ್ಕೂ ನಾಚಿಕೆಗೇಡು, ಇದರಿಂದ ಭಾರತಕ್ಕೆ ದೊಡ್ಡ ನಷ್ಟವೇ ಹೊರತು ರೋಹಿತ್‌ಗೆ ಅಲ್ಲ’ ಎಂದು ನೇರವಾಗಿ ಹೇಳಿದ್ದಾರೆ.
ಇದಕ್ಕೆ ಇಂಗ್ಲೆಂಡಿನ ಮಾಜಿ ನಾಯಕ ಮೈಕಲ್ ವಾನ್ ಕೂಡ ದನಿ ಗ ೂಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಇರ್ಫಾನ್ ಪಠಾಣ್ ಕೂಡ ಇದೇ ಸಲಹೆ ನೀಡಿದ್ದರು.
ಐಪಿಎಲ್ ಯಶಸ್ಸನ್ನೇ ಮಾನದಂಡವಾಗಿ ಪರಿಗಣಿಸುವುದಾದರೆ ರೋಹಿತ್ ಶರ್ಮ ಅತ್ಯಂತ ಯಶಸ್ವಿ ನಾಯಕ ಎಂಬುದನ್ನು ಒಪ್ಪಲೇಬೇಕು. ಮುಂಬೈ ತಂಡದ ಐದೂ ಜಯಭೇರಿಯ ವೇಳೆ ರೋಹಿತ್ ಅವರೇ ನಾಯಕರಾಗಿದ್ದರೆಂಬುದನ್ನು ಮರೆಯುವಂತಿಲ್ಲ.
ಕೊಹ್ಲಿ ವಿಫಲ ನಾಯಕ
ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ನಾಯಕನಾಗಿರುವ ವಿರಾಟ್ ಕೊಹ್ಲಿ ಅವರ ಐಪಿಎಲ್ ಸಾಧನೆಯನ್ನು ಪರಿ ಗಣಿ ಸುವುದಾದರೆ ಅಲ್ಲಿ ಆರ್‌ಸಿಬಿಯ ವೈಫಲ್ಯವೇ ಕಣ್ಣಿಗೆ ರಾಚುತ್ತದೆ. 3 ಸಲ ಫೈನಲ್ ಪ್ರವೇಶಿಸಿದರೂ ಆರ್‌ಸಿಬಿಗೆ ಇನ್ನೂ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ. ಈ ಲೆಕ್ಕಾಚಾರದಲ್ಲೂ ರೋಹಿತ್ ಕೊಹ್ಲಿಗಿಂತ ಎಷ್ಟೋ ಮುಂದಿದ್ದಾರೆ. ಇದೆಲ್ಲವನ್ನೂ ಉಲ್ಲೇಖೀಸಿ ಗಂಭೀರ್ ಹೇಳಿಕೆ ನೀಡಿದ್ದಾರೆ.
“ಭಾರತಕ್ಕೀಗ ಪ್ರತ್ಯೇಕ ನಾಯಕರ ಅಗತ್ಯ ವಿದೆ. ಅಂದಮಾತ್ರಕ್ಕೆ ಕೊಹ್ಲಿ ದುರ್ಬಲ ನಾಯಕ ಎಂದು ನಾನು ಹೇಳುವುದಿಲ್ಲ. ಆದರೆ ಐಪಿಎಲ್‌ನಲ್ಲಿ ರೋಹಿತ್‌ಗೆ
ಲಭಿಸಿದ್ದಕ್ಕಿಂತ ಹೆಚ್ಚಿನ ಅವಕಾಶ ಕೊಹ್ಲಿಗೆ ಸಿಕ್ಕಿದೆ. ಇಲ್ಲಿ ನಾಯಕರ ಯಶಸ್ಸನ್ನು ನೀವೇ ಅಳೆಯ ಬಹುದು…’ ಎಂದಿದ್ದಾರೆ ಗಂಭೀರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Darshan: ಜೈಲಿನಿಂದ ಹೊರಬರುತ್ತಿದ್ದಂತೆ ದರ್ಶನ್ ಕಾರು ಅಡ್ಡಗಟ್ಟಿ ಜೈಕಾರ ಕೂಗಿದ ಫ್ಯಾನ್ಸ್
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
ನಿರಾಶ್ರಿತ ರೋಹಿಂಗ್ಯಾ ಮಕ್ಕಳ ಶಾಲೆ ಪ್ರವೇಶಕ್ಕೆ ಅನುಮತಿ ಕೊಡಿ: PIL ವಜಾಗೊಳಿಸಿದ ಹೈಕೋರ್ಟ್
Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು
ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.