ಇತಿಹಾಸವನ್ನು ಸಾರುವ ದುರ್ಗಾಸ್ತಮಾನ
Team Udayavani, Nov 12, 2020, 5:15 AM IST
ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.
“ಚಿತ್ರದುರ್ಗದ ಕಲ್ಲಿನ ಕೋಟೆ, ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ’ ಎಂಬುದು ಖ್ಯಾತಿವೆತ್ತ ಮಾತು. ಇದನ್ನು ತ.ರಾ.ಸು. ಅವರ “ದುರ್ಗಾ ಸ್ತಮಾನ’ ಕಾದಂಬರಿ ನಮಗೆ ಮತ್ತಷ್ಟು ಸ್ಪಷ್ಟವಾಗಿ ಮನದಟ್ಟು ಮಾಡಿಕೊಡುತ್ತದೆ.
ಚಿತ್ರದುರ್ಗ ಸಂಸ್ಥಾನದ ಕೊನೆಯ ದೊರೆ “ಮದಕರಿ ನಾಯಕ’ನ ಸುತ್ತ ಹೆಣೆದಿರುವ ಈ ಕಾದಂಬರಿಯ ಪ್ರತಿಯೊಂದು ಅಧ್ಯಾಯವೂ ರೋಮಾಂಚನ ಉಂಟು ಮಾಡುತ್ತದೆ. ದುರ್ಗದ ಆಗಿನ ದೊರೆಯಾಗಿದ್ದ ಕಸ್ತೂರಿ ರಂಗಪ್ಪನವರು ಮರಣ ಹೊಂದಿ ದುರ್ಗವು ತಬ್ಬಲಿಯಾಗುವುದರಿಂದ ಕಥೆ ಆರಂಭವಾಗುತ್ತದೆ. ಒಳಗಿನ ಹಾಗೂ ಹೊರಗಿನ ಶತ್ರುಗಳಿಂದ ದುರ್ಗವನ್ನು ರಕ್ಷಿಸಲು ಕಸ್ತೂರಿ ರಂಗಪ್ಪನವರ ತಾಯಿ ಓಬವ್ವನಾಗತಿ ಬಾಲಕ ಮದಕರಿಯನ್ನು ನಾಯಕನನ್ನಾಗಿ ಮಾಡುತ್ತಾರೆ.
ತನ್ನ ಊರಾದ ಜಾನಕಲ್ಲು ದುರ್ಗ, ಹೆತ್ತವರು, ಸಹೋದರ, ತನ್ನ ಮನೆ, ಗರಡಿಮನೆ ಎಲ್ಲವನ್ನು ಬಿಟ್ಟು ದುರ್ಗದ ನಾಯಕನಾಗಿ ಮದಕರಿ ನಾಯಕ ಹೊರಟಾಗ ಅವನಿಗೆ ಕೇವಲ ಹನ್ನೆರಡು ವರ್ಷ. ರಕ್ತವೆಂದರೆ ಹೆದರಿ ಓಡುವ ವಯಸ್ಸಿನಲ್ಲಿ ಆತನಿಗೆ ರಕ್ತ ಸ್ನಾನ ಮಾಡಬೇಕಾಗಿ ಬರುತ್ತದೆ, ಆಡುವ ಸಮಯದಲ್ಲಿ ಯುದ್ಧ ಮಾಡಬೇಕಾಗಿ ಬರುತ್ತದೆ. ಮುಂದೆ ಮದಕ ರಿಯು ದುರ್ಗ ಈ ಹಿಂದೆಂದೂ ಕಂಡು ಕೇಳರಿಯದ ದೊರೆಯಾಗಿ, ಜನಮೆಚ್ಚಿದ ನಾಯಕನಾಗಿ ರೂಪುಗೊಳ್ಳುತ್ತಾನೆ.
ಮದಕರಿನಾಯಕನ ಜತೆಗೆ “ದುರ್ಗ’ಕ್ಕಾಗಿ ಪ್ರಾಣ ಕೊಡಲು ಸಿದ್ಧರಾಗುವ ಹಲವು ಪಾತ್ರ ಗಳು ಈ ಕೃತಿಯಲ್ಲಿ ಕಳ್ಳಿ ನರಸಪ್ಪ ಯ್ಯನವರೂ ಒಬ್ಬರು. ದುರ್ಗದ ಪ್ರಧಾನ ಮಂತ್ರಿಯಾಗಿ ಮೂರು ತಲೆಮಾರಿನವರೆಗೂ ಸೇವೆ ಸಲ್ಲಿಸಿದ್ದರೂ ಕೊನೆಗೆ ವಿನಾಕಾರಣ ನಿಂದನೆಗೆ ಗುರಿಯಾಗುವ ಅವರ ಪಾತ್ರ ಮನ ಮುಟ್ಟುತ್ತದೆ. ಅವರ ಜತೆಗೇ ಮದಕರಿ ನಾಯ ಕನ ತಮ್ಮ ಪರಶುರಾಮ ನಾಯಕ, ತಳವಾರ ಚಾವಡಿಯ ಕಾಟ ನಾಯಕ, ಕಾಶಣ್ಣ ನಾಯಕ, ದೇಶವಾಗ್ ಪಡೆ, ಗುದಗತ್ತಿ, ಮದಕರಿ ನಾಯಕನ ಖಾಸಾ ಬೇಡಪಡೆ, ಒನಕೆ ಓಬವ್ವ ಮುಂತಾದ ಪಾತ್ರಗಳು ಓದುಗರನ್ನು ಚಿತ್ರದುರ್ಗದ ಇತಿಹಾಸದೆಡೆಗೆ ಕರೆದೊಯ್ಯುತ್ತವೆ.
ಮದಕರಿ ನಾಯಕನ ಆಳ್ವಿಕೆ ದುರ್ಗದ ಇತಿಹಾಸದಲ್ಲಿ ಮೇಲೇರುತ್ತಾ ಸಾಗುತ್ತದೆ. “ರಾಜ’ ಎಂಬ ಹಣೆಪಟ್ಟಿಯ ರೂಪುರೇಷೆಗಳನ್ನು ಬದಲಾಯಿಸಲು ಬಹಳ ಶ್ರಮ ಪಡುತ್ತಾ ಜನರೊಂದಿಗೆ ಬೆರೆಯುವ ಆತ ಎಲ್ಲರ ಮೆಚ್ಚಿನ ನಾಯಕನಾಗುತ್ತಾನೆ. ಆದರೆ ಹಿತೈಷಿಗಳು ಇದ್ದಲ್ಲಿ ಹಿತ ಶತ್ರುಗಳೂ ಇರು ತ್ತಾರೆ. ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಸಾಗಿದ್ದ ಹೈದರ ಲಿಗೆ ಚಿತ್ರದುರ್ಗ ಕಲ್ಲಿನ ಕಡಲೆಯಾಗುತ್ತದೆ.
ಹೈದರಾಲಿ ಮೊದಲು ಬಂಟ ನಾಗಿ ಬಂದು ಬಳಿಕ ಶತ್ರು ವಾಗಿ ಬದಲಾಗಿ ದುರ್ಗ ದೊಳಗೆ ಗೂಢಚಾರರನ್ನು ಕಳಿಸಿ ಉಪಾಯದಿಂದ ದುರ್ಗ ವನ್ನು ಒಡೆಯುತ್ತಾನೆ. ಅದಕ್ಕಾಗಿ ಕಳ್ಳಿ ನರಸ ಪ್ಪನವರ ಹೆಸರನ್ನೂ ಬಳಸುತ್ತಾನೆ. ಹೈದರಾ ಲಿಯ ಒಳತಂತ್ರದ ವಿರುದ್ಧ ಗೆಲ್ಲಲಾಗದೆ ಮದಕರಿಯು ಯುದ್ಧವನ್ನು ಸೋಲುವ ಮೂಲಕ ಚರಿತ್ರೆಯ ಪುಟದಲ್ಲಿ ಚಿತ್ರದುರ್ಗದ ವೈಭವದ ಅಧ್ಯಾಯ ಮುಗಿಯುತ್ತದೆ.
“ದುರ್ಗಾಸ್ತಮಾನ’ವು ದುರ್ಗದ ನಾಯಕರ ಕೊನೆಯ ದಿನಗಳ ಬಗೆಗಿರುವ ಕಾದಂಬರಿ ಯಾದರೂ ಅದು ದುರ್ಗದ ಮೇಲಿನ ಹೆಮ್ಮೆ ಯನ್ನು ಮೊದಲಿಗಿಂತ ಇನ್ನಷ್ಟು ಹೆಚ್ಚಿಸುತ್ತದೆ. ಮದಕರಿನಾಯಕ ಯುದ್ಧದಲ್ಲಿ ಹೋರಾಡಿ ವೀರ ಮರಣ ಹೊಂದಿದಾಗ ಎಲ್ಲೋ ಒಂದು ಕ್ಷಣ ನಮ್ಮ ಹೃದಯವೂ ಕಂಪಿಸುತ್ತದೆ. ಅವನ ಈಡೇರದ ಕನಸು, “ಹೈದರಾಲಿಯ ಪಂಜರ’ದ ಕುರಿತಾಗಿ ಓದಿದಾಗ ಕಣ್ಣಾಲಿಗಳು ಒ¨ªೆ ಯಾಗುತ್ತವೆ. ಇತಿಹಾಸ ಪ್ರಧಾನವಾದ ಈ ಕೃತಿಯಲ್ಲಿ ರಾಜರ ಕಾಲದ ಒಳಸುಳಿಗಳು, ತಂತ್ರಗಳನ್ನು ಕಾದಂಬರಿಕಾರರು ಕಟ್ಟಿಕೊಟ್ಟಿದ್ದು, ಪ್ರತೀ ಪುಟವೂ ಕುತೂಹಲಕಾರಿಯಾಗಿ ದೇಶ ಪ್ರೇಮದ ಕಿಚ್ಚನ್ನು ನಮ್ಮಲ್ಲಿ ಹೊತ್ತಿಸುತ್ತದೆ.
-ರಂಜಿತಾ ವಿ. ಎಲ್., ಚಿಕ್ಕಮಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.