ಜಲ ವಾರಿಯರ್ಸ್ ಸೇವೆಗೆ ಜನ ಫಿದಾ!
ಧರ್ಮಸ್ಥಳ ಸಂಸ್ಥೆಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ
Team Udayavani, Nov 12, 2020, 4:38 PM IST
ದಾವಣಗೆರೆ: ಕೋವಿಡ್ ಸಂಕಷ್ಟ ಕಾಲದಲ್ಲಿ ಕೋವಿಡ್ ಪೀಡಿತರಿಗೆ, ಕಂಟೈನ್‌ಮೆಂಟ್ ಹಾಗೂ ಸೀಲ್ ಡೌನ್ ಪ್ರದೇಶದವರಿಗೆ ಸೇರಿದಂತೆ ಎಲ್ಲರಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನೌಕರರು, ಸಿಬ್ಬಂದಿ “ಜಲ ವಾರಿಯರ್’ ಆಗಿ ಸೇವೆ ಸಲ್ಲಿಸಿರುವುದು ಪ್ರಶಂಸೆಗೆ ಪಾತ್ರವಾಗಿದೆ.
ಕೋವಿಡ್ ಲಾಕ್‌ಡೌನ್‌ನಿಂದ ಹಿಡಿದು ಈವರೆಗಿನ ಅನ್‌ಲಾಕ್ ಅವಧಿಯವರೆಗೂಆರೋಗ್ಯ ಕಾರ್ಯಕರ್ತರು ಜನರಿಗೆ ಆರೋಗ್ಯ ಸೇವೆ ನೀಡಿದರೆ, ಪೌರ ಕಾರ್ಮಿಕರು ಸುತ್ತಲಿನ ಪರಿಸರ ಸ್ವಚ್ಛಗೊಳಿಸುವ ಕಾರ್ಯ ಮಾಡಿ ಕೋವಿಡ್ ವಾರಿಯರ್ಸ್ ಎನ್ನಿಸಿಕೊಂಡಿದ್ದಾರೆ. ಇದೇ ರೀತಿ ಜನರಿಗೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಪೂರೈಸುವಲ್ಲಿ ಹಾಗೂ ಶುದ್ಧ ಕುಡಿಯುವ ನೀರಿನ ಬಗ್ಗೆಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಘಟಕ ಗುರುತರ ಕಾರ್ಯ ಮಾಡಿದೆ.
ಕೋವಿಡ್ ಆರಂಭ ಕಾಲದಲ್ಲಿ ವಿಧಿಸಿದ ಲಾಕ್ ಡೌನ್ ವೇಳೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೌಕರರು, ಸಿಬ್ಬಂದಿ ಪಾಲಿಕೆಯಿಂದ ವಿಶೇಷ ಪಾಸ್ ಪಡೆದು ಹೊರಗಡೆ ಓಡಾಡಿ ಜನರಲ್ಲಿ ಶುದ್ಧ ಕುಡಿಯುವ ನೀರಿನ ಬಳಕೆ ಕುರಿತು ಜಾಗೃತಿ ಮೂಡಿಸಿದರು. ಕೊರೊನಾ ಸಂಕಷ್ಟ ಕಾಲದಲ್ಲಿಆರೋಗ್ಯ ಕಾಪಾಡಿಕೊಳ್ಳುವಲ್ಲಿ ಶುದ್ಧ ನೀರಿನ ಮಹತ್ವ ವನ್ನು ತಿಳಿಸಿಕೊಟ್ಟರು. ಕೋವಿಡ್-19 ಸುರಕ್ಷತಾ ಕ್ರಮಗಳೊಂದಿಗೆ ಶುದ್ಧ ನೀರು ಕುಡಿಯಲು ಜನರನ್ನು ಪ್ರೇರೇಪಿಸಿದರು. ಈ ಸಂದರ್ಭದಲ್ಲಿ ಯೋಜನೆಯಿಂದ ಜಿಲ್ಲೆಯಲ್ಲಿ ನಿರ್ವಹಿಸುತ್ತಿರುವ 40 ಶುದ್ಧ ನೀರಿನ ಘಟಕಗಳ ಮೂಲಕ ಜನರಿಗೆ ನಿರಂತರವಾಗಿ ಶುದ್ಧ ಕುಡಿಯುವ ನೀರು ಸಿಗುವಂತೆ ನೋಡಿಕೊಂಡರು.ತನ್ಮೂಲಕ ಜನರ ಆರೋಗ್ಯ ಕಾಪಾಡುವಲ್ಲಿ ಕೈಜೋಡಿಸಿದರು.
ನಿರಂತರ ಶುದ್ಧ ನೀರು: ಕೋವಿಡ್ ಆರ್ಭಟ ಹೆಚ್ಚಾಗಿರುವ ಅವಧಿಯಿಂದ ಇಲ್ಲಿಯವರೆಗೂ ಶುದ್ಧ ನೀರಿನ ಘಟಕಗಳಲ್ಲಿ ಸಾಮಾಜಿಕ ಅಂತರದ ಗುರುತು ಹಾಕಿ ಮಾಸ್ಕ್ ಕಡ್ಡಾಯಗೊಳಿಸಿ ಜನರಿಗೆನಿರಂತರವಾಗಿ ಒಂದು ದಿನವೂ ತೊಡಕಾಗದಂತೆ ನೀರೊದಗಿಸುವ ಹೊಣೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದು ವಿಶೇಷ. ಇನ್ನು ಕೋವಿಡ್ ಬಾಧಿತರು ಇರುವ ಮನೆ, ಸೀಲ್‌ಡೌನ್ ಪ್ರದೇಶ, ಕಂಟೈನ್‌ಮೆಂಟ್‌ಪ್ರದೇಶ ಸೇರಿದಂತೆ ಎಲ್ಲ ಜನರಿಗೂ ಮಹಾನಗರಪಾಲಿಕೆಯ ವಾಹನಗಳಲ್ಲಿ ಶುದ್ಧ ಕುಡಿಯುವ ನೀರು ತಲುಪಿಸುವಲ್ಲಿ ಯೋಜನೆಯ 40 ಪ್ರೇರಕರು, ಮೂವರು ಮೇಲ್ವಿಚಾರಕರು ಸೇರಿ ಒಟ್ಟು 43 ನೌಕರರುಹಾಗೂ ಘಟಕದ ಸಿಬ್ಬಂದಿ ಪರಿಶ್ರಮ ವಹಿಸಿದ್ದಾರೆ. ಒಟ್ಟಾರೆ ಆರೋಗ್ಯ ಸುರಕ್ಷತಾ ಕ್ರಮಗಳಲ್ಲಿ ಶುದ್ಧ ಕುಡಿಯುವ ನೀರಿನ ಬಳಕೆ ಸಹ ಪ್ರಮುಖವಾದುದು ಎಂಬ ಜಾಗೃತಿ ಮೂಡಿದೆ. ಇದಕ್ಕೆ ಪ್ರೇರಕ ಶಕ್ತಿಯಾದಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವನ್ನೂ ಮರೆಯಲಾಗದು.
ಶುದ್ಧ ನೀರು ಬಳಕೆ ಪ್ರಮಾಣ ದುಪ್ಪಟ್ಟು : ಕೋವಿಡ್ ವೈರಸ್ ದಾಳಿಯಿಂದಾಗಿ ಜನರಲ್ಲಿ ಶುದ್ಧ ನೀರಿನ ಅರಿವು ಹೆಚ್ಚಾಗಿದ್ದು, ಶುದ್ಧ ನೀರು ಬಳಸುವವರ ಸಂಖ್ಯೆ ದುಪ್ಪಟ್ಟಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವ್ಯಾಪ್ತಿಯ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದಾಹರಣೆಯಾಗಿ ನೋಡಿದರೆ ಮಾರ್ಚ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಅಂದಾಜು 50,000 ಜನರು ಶುದ್ಧ ಕುಡಿಯುವ ನೀರು ಬಳಸುತ್ತಿದ್ದು, ಪ್ರತಿ ದಿನ ಅಂದಾಜು ಎರಡು ಲಕ್ಷ ಲೀಟರ್ ನೀರು ಖರ್ಚಾಗುತ್ತಿತ್ತು. ಕೋವಿಡ್ ದಿಂದ ಶುದ್ಧ ನೀರಿನ ಅರಿವು ಹೆಚ್ಚಾಗಿ ಈಗ ಶುದ್ಧ ನೀರು ಬಳಸುವವರ ಸಂಖ್ಯೆ ದುಪ್ಪಟ್ಟಾಗಿದೆ. ದಿನಕ್ಕೆ ಮೂರು ಲಕ್ಷ ಲೀಟರ್‌ವರೆಗೂ ನೀರು ಖರ್ಚಾಗುತ್ತಿದೆ. ಇದೇ ರೀತಿ ಸ್ಥಳೀಯ ಸಂಸ್ಥೆಗಳು,ಸಂಘ-ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ಶುದ್ಧ ನೀರಿನ ಘಟಕಗಳಲ್ಲಿಯೂ ನೀರಿನ ಬಳಕೆ ಹೆಚ್ಚಾಗಿದೆ. ಶುದ್ಧ ನೀರಿನ ಬಳಕೆ ಹೆಚ್ಚಾಗುತ್ತಿರುವುದರಿಂದ ಕೆಲವು ಪ್ರದೇಶಗಳಲ್ಲಿ ಶುದ್ಧ ನೀರಿನ ಘಟಕದಸಾಮರ್ಥ್ಯ ಹೆಚ್ಚಿಸುವ ಕಾರ್ಯವೂ ನಡೆದಿದ್ದು ಇದು ಜನರಲ್ಲಿ ಶುದ್ಧ ಜಲದ ಬಗ್ಗೆ ಜಾಗೃತಿ ಮೂಡಿರುವುದಕ್ಕೆ ಸಾಕ್ಷಿ.
ಕೋವಿಡ್ ಆರ್ಭಟ ಕಾಲದಲ್ಲಿ ನಾವು ಕೈಗೊಂಡ ಆರೋಗ್ಯ ಸುರಕ್ಷತಾಕ್ರಮಗಳಲ್ಲಿ ಶುದ್ಧ ಕುಡಿಯುವ ನೀರಿನ ಬಳಕೆಯೂ ಒಂದು. ಮನೆಯವರೆಲ್ಲರೂ ಶುದ್ಧ ಕುಡಿಯುವ ನೀರು ಬಳಕೆಮಾಡುತ್ತಿರುವುದರಿಂದ ಆಗಾಗ ಅನಾರೋಗ್ಯಕ್ಕೊಳಗಾಗುವುದು ತಪ್ಪಿದೆ. ನಮ್ಮ ಸುತ್ತಲಿನ ಪ್ರದೇಶದಲ್ಲಿ ಬಹುತೇಕ ಎಲ್ಲರೂ ಶುದ್ಧ ನೀರಿನ ಘಟಕದ ನೀರನ್ನೇ ಕುಡಿಯುತ್ತಿದ್ದಾರೆ. -ಗುರುರಾಜ್, ವಿನೋಬನಗರ ನಿವಾಸಿ
ಕೋವಿಡ್ ಸಂಕಷ್ಟ ಕಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಎಲ್ಲರಿಗೂ ದೊಡ್ಡ ಸವಾಲಾಗಿತ್ತು. ಈ ಸಂದರ್ಭದಲ್ಲಿ ಯೋಜನೆಯ ಪ್ರೇರಕರು, ಮೇಲ್ವಿಚಾರಕರು ಒಂದು ದಿನವೂ ತೊಡಕಾಗದಂತೆ ಸ್ವತಃ ಸುರಕ್ಷತಾ ಕ್ರಮಗಳೊಂದಿಗೆ ಜನರಿಗೆ ಶುದ್ಧ ನೀರು ಪೂರೈಸುವ ಸೇವೆ ಮಾಡಿದ್ದಾರೆ.ಆರೋಗ್ಯ ರಕ್ಷಣೆಯಲ್ಲಿ ಶುದ್ಧ ನೀರು ಪ್ರಮುಖವಾಗಿದ್ದು ಶುದ್ಧ ಕುಡಿಯುವ ನೀರಿನ ಬಗ್ಗೆ ಜನರಲ್ಲಿ ಈಗ ಜಾಗೃತಿಯೂ ಹೆಚ್ಚಾಗಿದೆ. -ಜಯಂತ್ ಪೂಜಾರಿ, ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕರು.
-ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.