85 ಅಂಗನವಾಡಿ ಕೇಂದ್ರ ಅಭಿವೃದ್ಧಿ
ಕೈ ಬೀಸಿ ಮಕ್ಕಳ ಕರೆಯುತ್ತಿರುವ ಆಕರ್ಷಕ ಬಣ್ಣ ಬಣ್ಣದ ಚಿತ್ರ- ಬರಹಗಳು
Team Udayavani, Nov 12, 2020, 6:36 PM IST
ಮಾಗಡಿ: ತಾಲೂಕಿನಲ್ಲಿ 85 ಅಂಗನವಾಡಿ ಕೇಂದ್ರಗಳು ಮಾದರಿ ಕೇಂದ್ರಗಳನ್ನಾಗಿ ಪರಿವರ್ತನೆಗೊಳ್ಳುತ್ತಿವೆ. ಈ ಕೇಂದ್ರಗಳ ಗೋಡೆಗಳು ರಂಗು ರಂಗಿನಿಂದ ಕೂಡಿದ್ದು, ವರ್ಣರಂಜಿತ ಕೇಂದ್ರಗಳಾಗಿ ಕಂಗೊಳಿಸಲಿವೆ.
ಇವು ಮಗುವಿನ ಜ್ಞಾನವಿಕಾಸಕ್ಕೆ ಹೆಚ್ಚು ಸಹಕಾರಿಯಾಗಲಿದೆ. ಮಾಗಡಿ ತಾಲೂಕಿನಲ್ಲಿ ಒಟ್ಟು 369 ಅಂಗನವಾಡಿ ಕೇಂದ್ರಗಳಿವೆ. ಇವುಗಳ ಪೈಕಿ 256 ಸ್ವಂತ ಕಟ್ಟಡ ಹೊಂದಿವೆ.56 ಕೇಂದ್ರಗಳು ಸರ್ಕಾರಿ ಶಾಲಾ ಕೊಠಡಿಗಳಲ್ಲಿ ನಡೆಯುತ್ತಿದ್ದರೆ, ಗ್ರಾಮ ಪಂಚಾಯ್ತಿ ಕಟ್ಟಡದಲ್ಲಿ ನಾಲ್ಕು, ಸಮುದಾಯ ಭವನಗಳಲ್ಲಿ 36, ಬಾಡಿಗೆ ಕಟ್ಟಡದಲ್ಲಿ 28 ಕೇಂದ್ರಗಳು ನಡೆಯುತ್ತಿವೆ.111ಕೇಂದ್ರಗಳಿಗೆಕಾಂಪೌಂಡ್ ಇದ್ದು, ಉಳಿದಂತೆ ಬಹುತೇಕ ಅಂಗನವಾಡಿ ಕಟ್ಟಡಗಳಲ್ಲಿ ಕಾಂಪೌಂಡ್ ಇಲ್ಲದಿರುವುದಿಲ್ಲ. ಪ್ರಸ್ತುತ 85 ಅಂಗನವಾಡಿಕೇಂದ್ರಗಳಿಗೆ ಸುಣ್ಣ,ಬಣ್ಣ, ಮಕ್ಕಳ ಸ್ನೇಹಿ ಚಿತ್ರ ಬರಹಗಳು, ಕೈತೋಟ ಸೇರಿದಂತೆ ಕಾಂಪೌಂಡ್ ಕಾಮಗಾರಿಗಳು ಭರದಿಂದ ನಡೆಯುತ್ತಿದೆ. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಅವರ ಚಿಂತನೆ, ಅವರ ಮಾರ್ಗದರ್ಶನದಲ್ಲಿ ಅಂಗನವಾಡಿ ಕೇಂದ್ರಗಳು ಮಾದರಿ ಕೇಂದ್ರಗಳಾಗಿ ಕಂಗೊಳಿಸಲಿವೆ.
ಕೇಂದ್ರಗಳಲ್ಲಿ ಕೈತೋಟ: ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಕೈತೋಟ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಸಸಿಗಳನ್ನು ಪೂರೈಕೆ ಮಾಡಲು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಕಾಧಿಕಾರಿಗೆ ಪತ್ರ ಬರೆಯಲಾಗಿದೆ. ತಲಾ
ಕೇಂದ್ರಕ್ಕೆ ಕೈತೋಟ ನಿರ್ಮಿಸಲು ಅಗತ್ಯ ಗಿಡಗಳನ್ನು 500 ರೂ.ಗೆ ಖರೀದಿಸಿದ್ದು, ಕಾಂಪೌಂಡ್ ಇರುವ ಕೇಂದ್ರಗಳಲ್ಲಿ ಈ ಗಿಡ ನೆಡುವ ಕೆಲಸ ನಡೆಯುತ್ತಿದೆ. ಕೆಲವೆಡೆಕಾಂಪೌಂಡ್ ನಿರ್ಮಿಸಲು ಸ್ಥಳೀಯರ ಹಾಗೂ ಜನಪ್ರತಿ ನಿಧಿಗಳ ಸಹಕಾರ ಪಡೆಯಲಾಗುತ್ತಿದೆ. ಕೇಂದ್ರಗಳಿಗೆ ಮಳೆ ನೀರು ಕೊಯ್ಲು, ಬಾಲ ಗ್ರಂಥಾಲಯ, ಗಡಿಯಾರ,ಆಕರ್ಷಕ ವಿದ್ಯುತ್ ದೀಪಗಳು, ಕೈತೋಟ, ಒಳಾಂಗಣಮತ್ತು ಹೊರಾಂಗಣ ನೆಲ,ಕಲಾಕೃತಿಗಳು ಆಕರ್ಷಕ ಬಣ್ಣದ ಶೌಚಾಲಯ, ಮಕ್ಕಳಅಟಿಕೆ ಸಾಮಾಗ್ರಿಗಳು ಒಳಗೊಂಡಂತೆಮೂಲಸೌಕರ್ಯ ಒದಗಿಸಲಾಗುತ್ತಿದೆ.
ಮಾದರಿ ಅಂಗನವಾಡಿ ಕೇಂದ್ರಗಳ ವೈಶಿಷ್ಟ: ಅಜ್ಜನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೀರ ಹಿಂದುಳಿದ ಗವಿನಾಗಮಂಗಲ, ಅತ್ತಿಂಗೆರೆ, ಮೋಟಗೊಂಡನಹಳ್ಳಿಮ ಕುದೂರು, ಅರಳುಕುಪ್ಪೆ, ಸೇರಿದಂತೆ ಒಟ್ಟಾರೆ 85 ಗ್ರಾಮದಲ್ಲಿ ಮಾದರಿ ಅಂಗನವಾಡಿ ಕೇಂದ್ರದ ಗೋಡೆಗಳಮೇಲೆ ಸುಣ್ಣ, ಬಣ್ಣ, ಆಕರ್ಷಕ ಮಕ್ಕಳ ಸ್ನೇಹಿ ಚಿತ್ರಬರಹಗಳು, ಬರೆಯಲಾಗುತ್ತಿದೆ. ಇದು ಮಕ್ಕಳನ್ನು ಕೇಂದ್ರಗಳತ್ತ ಕೈಬೀಸಿ ಕರೆಯುವಂತೆ ಮಾಡಿದೆ. ಜೊತೆಗೆಕೇಂದ್ರಗಳಿಗೆ ವಿಶೇಷವಾಗಿ ಕಾಂಪೌಂಡ್ ನಿರ್ಮಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಸಿಸ್ಟನ್, ಪಂಪ್, ವಾಟರ್‌ಪಿಲ್ಟರ್ ಪ್ಲಾಂಟ್ ಕಾಮಗಾರಿ ನಡೆಯುತ್ತಿದೆ.ನಗರ ಪ್ರದೇಶಗಳಲ್ಲಿ ಪ್ಲೇ ಹೋಂಗಳು ತಲೆ ಎತ್ತಿರುವುದರಿಂದ ಗ್ರಾಮೀಣ ಪ್ರದೇಶದ ಸರ್ಕಾರಿ ಅಂಗನವಾಡಿ ಕೇಂದ್ರಗಳು ಪ್ಲೇ ಹೋಂಗಿಂತಲೂಕಡಿಮೆಯಿಲ್ಲ ಎಂಬಂತೆ ಅತ್ಯಾಕರ್ಷಕವಾಗಿ ಸಿದ್ಧಗೊಳ್ಳುತ್ತಿದ್ದು, ಅವುಗಳಿಗೆ ಸಡ್ಡು ಹೊಡೆದು ನಿಲ್ಲಲಿವೆ.
ಅಗತ್ಯ ಮೂಲ ಸೌಕರ್ಯ : ಮಾದರಿ ಕೇಂದ್ರಗಳಿಗೆ ಮಳೆ ನೀರುಕೊಯ್ಲು, ಬಾಲ ಗ್ರಂಥಾಲಯ, ಗಡಿಯಾರ, ಆಕರ್ಷಕ ವಿದ್ಯುತ್ ದೀಪಗಳು,ಕೈತೋಟ, ಒಳಾಂಗಣ ಮತ್ತು ಹೊರಾಂಗಣ ನೆಲ,ಕಲಾಕೃತಿಗಳು ಆಕರ್ಷಕ ಬಣ್ಣದ ಶೌಚಾಲಯ, ಮಕ್ಕಳ ಆಟಿಕೆ ಸಾಮಾಗ್ರಿಗಳು ಒಳಗೊಂಡಂತೆ ಮೂಲಸೌಕರ್ಯ ಒದಗಿಸಲಾಗುತ್ತಿದೆ.
ಜಿಪಂ ಸಿಇಒಇಕ್ರಂಅವರ ಕಲ್ಪನೆ, ಅವರಮಾರ್ಗದರ್ಶನದಲ್ಲಿ ಅಂಗನವಾಡಿಕೇಂದ್ರಗಳನ್ನುಮಾದರಿ ಕೇಂದ್ರಗಳಾಗಿ ಪರಿವರ್ತಿ ಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ತಾಲೂಕಿನಲ್ಲಿ85 ಅಂಗನವಾಡಿ ಕೇಂದ್ರಗಳಿಗೆಸುಣ್ಣ,ಬಣ್ಣ ಬಳಿಯಲಾಗಿದೆ. ಅಲ್ಲಿನ ಗೋಡೆಗಳ ಮೇಲೆ ಆಕರ್ಷಕ ಮಕ್ಕಳ ಸ್ನೇಹಿ ಚಿತ್ರ ಬರಹ ಬರೆಸಲಾಗುತ್ತಿದೆ. –ಬಿ.ಎಲ್.ಸುರೇಂದ್ರ, ಮಹಿಳಾಮತ್ತು ಮಕ್ಕಳ ಕಲ್ಯಾಣಾಧಿಕಾರಿ ಮಾಗಡಿ
ಪೋಷಕರ ಆಕರ್ಷಣೆಗಾಗಿ ನಗರ ಪ್ರದೇಶದಲ್ಲಿ ಪ್ಲೇ ಹೋಂ ತಲೆ ಎತ್ತಿವೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಲು ಮತ್ತುಕೇಂದ್ರಗಳತ್ತ ಮಕ್ಕಳನ್ನು ಆಕರ್ಷಿಸಲು ಮಾದರಿಅಂಗನವಾಡಿಗಳನ್ನಾಗಿ ಪರಿವರ್ತಿಸಿ, ಕೇಂದ್ರಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುವುದು. – ಎಚ್.ಎನ್.ಅಶೋಕ್, ಅಧ್ಯಕ್ಷ ಜಿಲ್ಲಾ ಪಂಚಾಯ್ತಿ ರಾಮನಗರ
ತಿರುಮಲೆ ಶ್ರೀನಿವಾಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಬಸ್-ಕಾರು ನಡುವೆ ಡಿಕ್ಕಿ; ಮೂವರ ಸಾವು
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.