ಯಕ್ಷಗಾನ ಕಲಾ ಪ್ರಕಾರದೊಳಗಿನ ಪ್ರಾದೇಶಿಕ ವೈವಿಧ್ಯತೆಗಳ ದಾಖಲೀಕರಣ ಆಗಲೇ ಬೇಕು : ಕೇನಾಜೆ


Team Udayavani, Nov 12, 2020, 11:29 PM IST

KSD

ಕಾಸರಗೋಡು: ಯಕ್ಷಗಾನ ಕಲಾ ಪ್ರಕಾರದೊಳಗಿನ ಪ್ರಾದೇಶಿಕ ವೈವಿಧ್ಯತೆಗಳ ದಾಖಲೀಕರಣ ಆಗಲೇ ಬೇಕಾದ ಕೆಲಸವಾಗಿದೆ. ಹೆಚ್ಚು ಅಧ್ಯಯನಕ್ಕೆ ಒಡ್ಡಿದಂತೆ ಸೃಜನಶೀಲತೆಗೆ ಧಕ್ಕೆಯಾಗುತ್ತಿರುವುದು ಹೌದಾದರೂ ಅಧ್ಯಯನದ ದೃಷ್ಟಿಯಿಂದ ಪರಂಪರೆ, ಸಂಪ್ರದಾಯಗಳ ದಾಖಲೀಕರಣ ಈಗಿನ ಅನಿವಾರ್ಯ ಎಂದು ಯುವ ಜಾನಪದ ವಿದ್ವಾಂಸ, ಪುತ್ತೂರಿನ ಡಾ| ಶಿವರಾಮ ಕಾರಂತರ ಬಾಲವನದ ವಿಶೇಷ ಕರ್ತವ್ಯಾಧಿಕಾರಿ ಡಾ| ಸುಂದರ ಕೇನಾಜೆ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಕೊಲ್ಲಂಗಾನದ ಶ್ರೀನಿಲಯ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ತೆಂಕುತಿಟ್ಟು ‘ಬಣ್ಣದ ವೇಷದ ಕಮ್ಮಟ’ ಹಾಗೂ ದಾಖಲೀಕರಣ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಅನಿವಾರ್ಯತೆಗಳು ಸೂಕ್ಷ್ಮತೆಯ ಕಡೆಗೆ ಸಾಗುತ್ತಿರುವುದು ಕುತೂಹಲಕರ. ವಿಷಯವೊಂದರ ಅಧ್ಯಯನದ ಸಂದರ್ಭ ಸೀಳುವ ಸ್ವಭಾವ ಅಕಾಡೆಮಿಕ್‌ ಆಗಿ ನ್ಯಾನೋ ಸ್ಟಡಿಯಾಗುತ್ತದೆ. ಆದರೆ ಏಕಮುಖ ವೈಭವೀರಣ ಅಧ್ಯಯನಕ್ಕೆ ಮಾತ್ರ ಸೀಮಿತವಾಗಿರಬೇಕೇ ಹೊರತು ಪ್ರದರ್ಶನಕ್ಕೆ ಇಳಿಸುವುದು ಅಪಾಯಕಾರಿ ಎಂದು ಅವರು ಕಳಕಳಿ ವ್ಯಕ್ತಪಡಿಸಿದರು. ಜಾನಪದ ಕಲೆಗೆ ಸಂಬಂಧಿಸಿದಂತೆ ಕರಾವಳಿಯಲ್ಲಿ ನಡೆದಷ್ಟು ಅಧ್ಯಯನ, ದಾಖಲೀಕರಣಗಳು ಬೇರೆಡೆ ಆಗಿಲ್ಲ. ಈ ನಿಟ್ಟಿನಲ್ಲಿ ಸಮಗ್ರವಾಗಿ ಇಂತಹ ಪ್ರಯತ್ನಗಳಾಗಬೇಕು ಎಂದು ಅವರು ತಿಳಿಸಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ|ಎಂ.ಎ.ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾಖಲೀಕರಣ ಇಲ್ಲದೆ ಇತಿಹಾಸ ರಚನೆ, ಅಧ್ಯಯನ ಸಾಧ್ಯವಾಗುವುದಿಲ್ಲ. ಪರಿಶೀಲನೆಗೆ ಒಳಪಟ್ಟು, ಪರಿಷ್ಕರಣೆ ಅಗತ್ಯವಿದ್ದಲ್ಲಿ ಇಂತಹ ದಾಖಲೀಕರಣ ನೆರವಾಗಲಿದೆ ಎಂದು ಅವರು ತಿಳಿಸಿದರು. ಜತೆಗೆ ಸೂಕ್ಷ್ಮ ಅಧ್ಯಯನಕ್ಕೆ ದಾಖಲೀಕರಣ ನೆರವಾಗುತ್ತದೆ. ತೆಂಕುತಿಟ್ಟಿನ ಬಣ್ಣದ ವೇಷಗಳ ವೈವಿಧ್ಯ ಅತ್ಯಪೂರ್ವ. ಈ ಹಿನ್ನೆಲೆಯಲ್ಲಿ ಪರಂಪರೆಯ ದಾಖಲೀಕರಣ ಅಧ್ಯಯನಕ್ಕೆ ಯೋಗ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್‌ ಎಸ್‌.ಎಚ್‌. ಶಿವರುದ್ರಪ್ಪ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ರಾಧಾಕೃಷ್ಣ ಕಲ್ಚಾರ್‌, ಯೋಗೀಶ ರಾವ್‌ ಚಿಗುರುಪಾದೆ, ನವನೀತ ಶೆಟ್ಟಿ ಕದ್ರಿ, ಸಹಸದಸ್ಯ ದಾಮೋದರ ಶೆಟ್ಟಿ ಮೂಡಂಬೈಲು, ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಉಪಸ್ಥಿತರಿದ್ದರು.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಗದೀಶ ಕೂಡ್ಲು ನಿರೂಪಿಸಿ, ವಂದಿಸಿದರು.

ಕಮ್ಮಟ
ಕಮ್ಮಟದಲ್ಲಿ ಸಹಸ್ರಾಕ್ಷ-ದೇವೇಂದ್ರ ಬಣ್ಣಗಾರಿಕೆ ಪ್ರಾತ್ಯಕ್ಷಿಕೆ, ಹಿರಣ್ಯಾಕ್ಷ- ವರಾಹ, ವೃತ್ರಜ್ವಾಲೆ(ಹೆಣ್ಣು ಬಣ್ಣ), ಅತಿಕಾಯ, ವಿದ್ಯುಜ್ವಹØ, ಪೂತನಿ, ಕಿಮ್ಮಿàರ, ರಾವಣ, ಭಗದತ್ತ, ಬಲರಾಮ, ತಾಮ್ರಧ್ವಜ, ಗರುಡ, ಯಮ-ಚಿತ್ರಗುಪ್ತ, ಕಾರ್ತವೀರ್ಯನ ಒಡ್ಡೋಲಗ, ದತ್ತಾತ್ರೇಯ, ಹನುಮಂತನ ಒಡ್ಡೋಲಗಗಳ ಬಣ್ಣಗಾರಿಕೆ, ರಂಗ ಸಾಕ್ಷಾತ್ಕಾರ ಪ್ರದರ್ಶನ, ದಾಖಲೀಕರಣ ಅವಲೋಕನಗಳು ನಡೆಯಿತು. ತೆಂಕುತಿಟ್ಟಿನ ದಶಾವತಾರಿ ಸೂರಿಕುಮೇರಿ ಕೆ.ಗೋವಿಂದ ಭಟ್‌ ಅವರು ಪೂರ್ತಿ ಕಮ್ಮಟದ ಅವಲೋಕನ ನಡೆಸಿದರು. ಖ್ಯಾತ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್‌ ನಿರ್ವಹಿಸಿದರು.

ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ಹಿಮ್ಮೇಳದಲ್ಲಿ ಪುಂಡಿಕೈ ಗೋಪಾಲಕೃಷ್ಣ ಭಟ್‌, ರಾಮಕೃಷ್ಣ ಮಯ್ಯ ಸಿರಿಬಾಗಿಲು, ಲಕ್ಷ್ಮೀನಾರಾಯಣ ರಾವ್‌ ಅಡೂರು, ಮುರಾರಿ ಕಡಂಬಳಿತ್ತಾಯ, ಲಕ್ಷ್ಮೀಶ ಬೆಂಗ್ರೋಡಿ, ಮುರಾರಿ ಭಟ್‌ ಪಂಜಿಗದ್ದೆ ಹಾಗೂ ಮುಮ್ಮೇಳದಲ್ಲಿ ಕೆ.ಗೋವಿಂದ ಭಟ್‌ ಸೂರಿಕುಮೇರಿ, ಸುಣ್ಣಂಬಳ ವಿಶ್ವೇಶ್ವರ ಭಟ್‌, ರಾಧಾಕೃಷ್ಣ ನಾವಡ ಮಧೂರು, ಸುಬ್ರಾಯ ಹೊಳ್ಳ ಕಾಸರಗೋಡು, ಉಬರಡ್ಕ ಉಮೇಶ ಶೆಟ್ಟಿ, ರಮೇಶ ಭಟ್‌ ಸರವು, ಸದಾಶಿವ ಶೆಟ್ಟಿಗಾರ್‌ ಸಿದ್ದಕಟ್ಟೆ, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಬಾಲಕೃಷ್ಣ ಮಣಿಯಾಣಿ ಮವ್ವಾರು, ಗಣಾಧಿರಾಜ ಉಪಾಧ್ಯಾಯ, ಹರಿನಾರಾಯಣ ಎಡನೀರು, ಶಂಭಯ್ಯ ಭಟ್‌ ಕಂಜರ್ಪಣೆ, ಮನೀಶ್‌ ಪಾಟಾಳಿ, ರವಿರಾಜ ಪನೆಯಾಲ, ಜಯರಾಮ ಪಾಟಾಳಿ ಪಡುಮಲೆ, ಮಾಧವ ಪಾಟಾಳಿ ನೀರ್ಚಾಲು, ಮನೀಶ್‌ ಪಾಟಾಳಿ ಎಡನೀರು, ಕಿಶನ್‌ ಅಗ್ಗಿತ್ತಾಯ, ಶ್ರೀಗಿರಿ, ಸ್ವಸ್ಥಿಕ್‌, ಉಪಾಸನಾ ಪಂಜರಿಕೆ, ಬಾಲಕೃಷ್ಣ ಸೀತಾಂಗೋಳಿ, ಪ್ರಕಾಶ್‌ ನಾಯಕ್‌, ಸುಬ್ರಹ್ಮಣ್ಯ ಭಟ್‌ ಬದಿಯಡ್ಕ, ಭಾಗವಹಿಸಿದ್ದರು.

ಸಮಾರೋಪ
ಸಮಾರೋಪದಲ್ಲಿ ಕೆ. ಗೋವಿಂದ ಭಟ್‌, ಸುಣ್ಣಂಬಳ ವಿಶ್ವೇಶ್ವರ ಭಟ್‌, ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಸದಸ್ಯ ಸತೀಶ ಅಡಪ ಸಂಕಬೈಲು, ಡಾ.ಶ್ರುತಕೀರ್ತಿರಾಜ್‌ ಉಜಿರೆ, ಅಕಾಡೆಮಿ ಸದಸ್ಯ ಯೋಗೀಶ್‌ ರಾವ್‌ ಚಿಗುರುಪಾದೆ, ಕಲಾಪೋಷಕ ಮಂಜುನಾಥ ಡಿ.ಮಾನ್ಯ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ

Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ

Mangaluru: ನ್ಯಾಯಾಂಗ ನಿಂದನೆ ಪ್ರಕರಣ: ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ

Mangaluru: ನ್ಯಾಯಾಂಗ ನಿಂದನೆ ಪ್ರಕರಣ: ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ

Opposition leader’ letter for debate on the Constitution in both houses

Parliament: ಎರಡೂ ಸದನಗಳಲ್ಲಿ ಸಂವಿಧಾನದ ಬಗ್ಗೆ ಚರ್ಚೆಗೆ ವಿಪಕ್ಷ ನಾಯಕರ ಪತ್ರ

Is Andhra Pradesh considering cancelling the agreement with Adani Group?

Andhra Pradesh: ಅದಾನಿ ಗ್ರೂಪ್‌ ಜತೆಗಿನ ಒಪ್ಪಂದ ರದ್ದತಿಗೆ ಆಂಧ್ರಪ್ರದೇಶ ಚಿಂತನೆ?

DK-Shivakumar

Congress Politics: ಡಿಸಿಎಂ ಡಿ.ಕೆ.ಶಿವಕುಮಾರ್‌ ದಿಲ್ಲಿಗೆ ಭೇಟಿ: ಹೈಕಮಾಂಡ್‌ ಜತೆ ಚರ್ಚೆ

BY-Vijayendara

By Election Result: ಮತ್ತೆ ಬಿಜೆಪಿ ಅಧಿಕಾರಕ್ಕೆ ತರೋಣ: ಬಿ.ವೈ.ವಿಜಯೇಂದ್ರ

Jodo model yatra demanding abolition of EVMs: AICC President Kharge

EVM ರದ್ದು ಆಗ್ರಹಿಸಿ ಜೋಡೋ ಮಾದರಿ ಯಾತ್ರೆ: ಎಐಸಿಸಿ ಅಧ್ಯಕ್ಷ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

car-parkala

ಕಾಸರಗೋಡು: ಬೈಕ್‌ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ

Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ

Mangaluru: ನ್ಯಾಯಾಂಗ ನಿಂದನೆ ಪ್ರಕರಣ: ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ

Mangaluru: ನ್ಯಾಯಾಂಗ ನಿಂದನೆ ಪ್ರಕರಣ: ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ

Opposition leader’ letter for debate on the Constitution in both houses

Parliament: ಎರಡೂ ಸದನಗಳಲ್ಲಿ ಸಂವಿಧಾನದ ಬಗ್ಗೆ ಚರ್ಚೆಗೆ ವಿಪಕ್ಷ ನಾಯಕರ ಪತ್ರ

DK-Shivakumar

Congress Politics: ಡಿಸಿಎಂ ಡಿ.ಕೆ.ಶಿವಕುಮಾರ್‌ ದಿಲ್ಲಿಗೆ ಭೇಟಿ: ಹೈಕಮಾಂಡ್‌ ಜತೆ ಚರ್ಚೆ

Is Andhra Pradesh considering cancelling the agreement with Adani Group?

Andhra Pradesh: ಅದಾನಿ ಗ್ರೂಪ್‌ ಜತೆಗಿನ ಒಪ್ಪಂದ ರದ್ದತಿಗೆ ಆಂಧ್ರಪ್ರದೇಶ ಚಿಂತನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.