ಸ್ಥಳೀಯ ಕೀಟಗಳಿಗೆ ವಿಜ್ಞಾನಿಗಳ ಬಲೆ
ಬೆಂಗಳೂರು ಕೃಷಿ ವಿವಿಯಿಂದ ಹೊಸ ಆವಿಷ್ಕಾರ
Team Udayavani, Nov 13, 2020, 12:19 PM IST
ಬೆಂಗಳೂರು: ಜೇನುನೊಣಗಳಲ್ಲದೆ ಪರಾಗಸ್ಪರ್ಶದಿಂದಲೇ ಶೇ. 30ರಿಂದ 50ರಷ್ಟು ಹೆಚ್ಚು ಇಳುವರಿಗೆ ಕಾರಣವಾಗುವ “ಪರಾಗಸ್ಪರ್ಶಿ ಕೀಟ’ಗಳ ಆಕರ್ಷಣೆ ಮತ್ತು ಸಂಕ್ಷಣೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮುಂದಾಗಿದೆ.
ಭವಿಷ್ಯದಲ್ಲಿ ನಿರ್ದಿಷ್ಟ ಬೆಳೆ ಬೆಳೆಯುವ ಪ್ರದೇಶಗಳಲ್ಲಿ ಈ ದುಂಬಿಗಳನ್ನು ಶಿಫಾರಸು ಮಾಡಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪರಾಗಸ್ಪರ್ಶಿ ಕೀಟಗಳ ಸ್ವಾಭಾವಿಕ ವಾಸಸ್ಥಳಗಳನ್ನು ಕೃತಕವಾಗಿ ನಿರ್ಮಿಸಿ, ಸ್ಥಳೀಯ ದುಂಬಿಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಸದ್ಯಮೂರುಪ್ರಕಾರದ ಜೇನುನೊಣ ಗಳಲ್ಲದ ಕೀಟಗಳ ಆಕರ್ಷಣೆಗೆ “ಬಲೆ’ ಬೀಸಲಾಗಿದೆ. ತೊಗರಿ, ಅವರೆ, ತರಕಾರಿಗಳ ಇಳುವರಿಯಲ್ಲಿ ಪ್ರಮುಖ ಪಾತ್ರವಹಿಸುವ ನೋಮಿಯ, ಬಡಗಿ, ಎಲೆಕತ್ತರಿಸುವ ದುಂಬಿಗಳ ಗೂಡುಗಳನ್ನುಕೃತಕವಾಗಿ ನಿರ್ಮಿಸಿ, ಆಕರ್ಷಿ ಸುವ ಪ್ರಯತ್ನ ನಡೆದಿದೆ. ಉದಾಹರಣೆಗೆ ತೊಗರಿಯನ್ನು ಕಲಬುರಗಿ ಹಾಗೂ ಸುತ್ತಮುತ್ತ, ಟೊಮೆಟೊ ಅನ್ನು ಕೋಲಾರ ಮತ್ತಿತರ ಕಡೆಗಳಲ್ಲಿ ಅಧಿಕವಾಗಿ ಬೆಳೆಯಲಾಗುತ್ತದೆ.
ಅದೇ ರೀತಿ, ಅವರೆ, ಬದನೆಕಾಯಿ ಮತ್ತಿತರ ತರಕಾರಿಗಳನ್ನು ಬೆಳೆಯಲಾಗುತ್ತದೆ.ಈನಿರ್ದಿಷ್ಟ ಬೆಳೆಗಳ ಇಳುವರಿಯಲ್ಲಿ ಪ್ರಮುಖ ಪಾತ್ರ ವಹಿಸುವ ಸ್ಥಳೀಯ ಪರಾಗಸ್ಪರ್ಶಿ ಕೀಟಗಳನ್ನು ಪರಿಚಯಿಸಲಾಗುವುದು. ಇದರಿಂದ ಕೀಟಗಳ ಸಂರಕ್ಷಣೆ ಜತೆಗೆ ರೈತರೂ ಅಧಿಕ ಲಾಭ ಗಳಿಸಬಹುದು ಎಂಬುದು ವಿಜ್ಞಾನಿಗಳ ಲೆಕ್ಕಾಚಾರ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂತಹದ್ದೊಂದು ಪ್ರಯೋಗ ನಡೆಯುತ್ತಿದೆ.
ಆಕರ್ಷಣೆಗೆಕೃತಕ ಗೂಡು: ಈ ನಿಟ್ಟಿನಲ್ಲಿ ದುಂಬಿಗಳ ವರ್ತನೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ತರಕಾರಿ ಮತ್ತಿತರ ಬೆಳೆಗಳು ಇರುವ ಜಾಗಗಳಲ್ಲಿ ಅಲ್ಲಲ್ಲಿ ರಂಧ್ರಗಳನ್ನು ಕೊರೆದ ಬಿದಿರುಗಳನ್ನು ಹೊಂದಿಸಿಡುವುದು, ಐಪೊಮಿಯಾ ಕಾಂಡದ ಕಡ್ಡಿಗಳ ಕಟ್ಟುಮಾಡಿ ಇಡುವುದು, ಕೊಟ್ಟಿಗೆಗೊಬ್ಬರಮತ್ತು ಮಣ್ಣು ಮಿಶ್ರಿತ ಬ್ಯಾಗ್‌ಗಳನ್ನು ಹೊಂದಿಸಿಟ್ಟು ಆಕರ್ಷಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಆ ದುಂಬಿಗಳು ಕೂಡ ಗೂಡುಗಳನ್ನು ಮಾಡಿಕೊಳ್ಳುತ್ತಿವೆ. ಈ ಪ್ರಯೋಗದಿಂದ ಸ್ಥಳೀಯ ದುಂಬಿಗಳ ರಕ್ಷಣೆ ಮತ್ತು ಜೀವವೈವಿಧ್ಯತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದು ಯಶಸ್ವಿಯಾದರೆ, ಮುಂದಿನ
ದಿನಗಳಲ್ಲಿ ನಿರ್ದಿಷ್ಟ ಬೆಳೆಗಳನ್ನು ಬೆಳೆಯುವ ಪ್ರದೇಶಗಳಲ್ಲಿ ಈ ದುಂಬಿಗಳನ್ನು ಶಿಫಾರಸು ಮಾಡಲಾಗುವುದು ಎಂದು ಬೆಂಗಳೂರು ಕೃಷಿ ವಿವಿ ಜೇನುಕೃಷಿ ವಿಭಾಗದ ಪ್ರಧಾನ ಪರಿಶೋಧಕ ಹಾಗೂ ಅಖೀಲ ಭಾರತ ಸುಸಂಘಟಿತ ಜೇನುನೊಣ ಮತ್ತು ಪರಾಗಸ್ಪರ್ಶಿಗಳ ಸಂಶೋಧನಾ ಪ್ರಾಯೋಜನೆ ಮುಖ್ಯಸ್ಥ ಡಾ. ವಿಜಯಕುಮಾರ್ ತಿಳಿಸುತ್ತಾರೆ.
ರಾಸಾಯನಿಕ ಸಿಂಪಡಣೆ ಕಾರಣ : ಇತ್ತೀಚಿನ ದಿನಗಳಲ್ಲಿ ಬೆಳೆಗಳಿಗೆ ರಾಸಾಯನಿಕ ಸಿಂಪಡಣೆ ಹೆಚ್ಚಾಗಿದೆ. ಅಲ್ಲದೆ, ಏಕರೂಪದ ಬೆಳೆ ಪದ್ಧತಿ ಗೀಳು ಅಂಟಿಕೊಂಡಿದೆ. ಇದರಿಂದ ಇತರೆ ಪರಾಗಸ್ಪರ್ಶಿ ದುಂಬಿಗಳು ಕಾಣೆಯಾಗುತ್ತಿವೆ. ಇದು ರೈತರಿಗೆ ಅರಿವಿಲ್ಲದೆ, ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದಲ್ಲದೆ, ಇವುಗಳಿಂದ ಜೇನುತುಪ್ಪ ಸಿಗುವುದಿಲ್ಲ ಎಂಬ ಕಾರಣಕ್ಕೂ ನಿರ್ಲಕ್ಷ್ಯಕ್ಕೆ ಒಳಪಟ್ಟಿವೆ. ಸ್ವಾಭಾವಿಕ ಗೂಡುಗಳನ್ನು ನಾಶಮಾಡುವ ಪ್ರವೃತ್ತಿ ಕೂಡ ಸಂತತಿ ಕಡಿಮೆಯಾಗಲು ಕಾರಣವಾಗಿದೆ ಎಂದು ವಿಜ್ಞಾನಿಗಳು ತಿಳಿಸುತ್ತಾರೆ. ವಿಶ್ವದಾದ್ಯಂತ ಜೇನುನೊಣಗಳಲ್ಲದೆ, 20 ಸಾವಿರಕ್ಕೂ ಅಧಿಕ ಪರಾಗಸ್ಪರ್ಶಿ ಕೀಟಗಳ ಪ್ರಭೇದಗಳಿವೆ. ರಾಜ್ಯದಲ್ಲಿ ಇವುಗಳ ಪ್ರಮಾಣ ಸುಮಾರು 2,000ದಿಂದ 2,500 ಇರಬಹುದು ಎಂದು ಅಂದಾಜಿಸಲಾಗಿದೆ.
–ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.