![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 13, 2020, 3:52 PM IST
“ಸಲಗ’ ಚಿತ್ರದ ಮೂಲಕ ನಟ ದುನಿಯಾ ವಿಜಯ್, ಡೈರೆಕ್ಟರ್ ಕ್ಯಾಪ್ ತೊಟ್ಟಿರುವುದು ನಿಮಗೆ ಗೊತ್ತೇ ಇದೆ. ಸದ್ಯ “ಸಲಗ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇದರ ಬೆನ್ನಲ್ಲೇ ದುನಿಯಾ ವಿಜಯ್ ತಮ್ಮ ನಿರ್ದೇಶನದ ಎರಡನೇ ಚಿತ್ರವನ್ನು ಇತ್ತೀಚೆಗೆ ಅನೌನ್ಸ್ ಮಾಡಿದ್ದಾರೆ. ಈ ಚಿತ್ರದ ಮೂಲಕ ಲಕ್ಕಿ ಎಂಬ ನವ ಪ್ರತಿಭೆಯನ್ನು ನಾಯಕ ನಟನಾಗಿ ಬೆಳ್ಳಿ ತೆರೆಗೆ ಪರಿಚಯಿಸುತ್ತಿದ್ದಾರೆ.
ಈಗ ಈ ಚಿತ್ರಕ್ಕೆ ಮೋಕ್ಷಿತಾ ಪೈ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ ನಿರ್ದೇಶಕ ದುನಿಯಾ ವಿಜಯ್. ಹೌದು, ಈಗಾಗಲೇ ಕಿರುತೆರೆಯ “ಪಾರು’ ಧಾರಾವಾಹಿಯ ಮೂಲಕ ವೀಕ್ಷಕರ ಗಮನ ಸೆಳೆದಿರುವ ನಟಿ ಮೋಕ್ಷಿತಾ ಪೈ, ಈ ಚಿತ್ರದ ಮೂಲಕ ಹೀರೋಯಿನ್ ಆಗಿ ಹಿರಿತೆರೆಗೆ ಪರಿಚಯವಾಗುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರ ಇದೇ ವರ್ಷಾಂತ್ಯಕ್ಕೆ ಶುರುವಾಗುವ ಸಾಧ್ಯತೆ ಇದೆ.
You seem to have an Ad Blocker on.
To continue reading, please turn it off or whitelist Udayavani.