ಚಾರ್ಮಾಡಿಗೆ ಹೋದವರು ಕೊಡೆಕಲ್ಲು ಕಂಡಿದ್ದೀರಾ!
Team Udayavani, Nov 13, 2020, 3:23 PM IST
ಎತ್ತ ನೋಡಿದರತ್ತ ಪರ್ವತಗಳ ಸಾಲು, ಸುತ್ತಲೂ ತುಂಬಿರುವ ಹಚ್ಚ ಹಸಿರು, ನೂರಾರು ವರ್ಷಗಳಿಂದ ಹತ್ತಾರು ತಲೆಮಾರುಗಳನ್ನು ಕಂಡ ಬೃಹದಾಕಾರದ ಮರಗಳು. ಈ ಮರಗಳ ನಡು ನಡುವು ಸ್ವಚ್ಚಂದವಾಗಿ ಸುತ್ತಾಡಿಕೊಂಡಿರುವ ಪ್ರಾಣಿ ಸಂಕುಲ ವಾವ್ ಎಷ್ಟು ಚಂದ ಅಲ್ವಾ. ಕಲ್ಪಿಸಿಕೊಂಡಾಗಲೇ ಮನಸ್ಸಿಗೆ ಇಷ್ಟು ಮುದನೀಡುವ ಈ ಜಾಗವನ್ನು ಅಲ್ಲೇ ಹೋಗಿ ನೋಡಿದರೆ ಇನ್ನೆಷ್ಟು ರಮಣೀಯ. ಹಾಗಾದರೆ ಆ ಜಾಗ ಯಾವುದು ಅಂತೀರ ಅದೇ ಕೊಡೆಕಲ್ಲು ಪ್ರದೇಶ.
ಕೊಡೆಕಲ್ಲು ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿದೆ. ಚಿಕ್ಕ ಮಂಗಳೂರು ಎಂದಾಗಲೇ ಕೊಡೆಕಲ್ಲು ಎಷ್ಟು ಸುಂದರವಾಗಿರಬಹುದು ಎಂಬುದು ನಿಮ್ಮ ಸ್ಮತಿಪಟದಲ್ಲಿ ಅಚ್ಚಾಗಿರಬಹುದಲ್ವಾ. ಚಿಕ್ಕ ಮಂಗಳೂರಿನಿಂದ 60 ಕಿ.ಮೀ ದೂರದಲ್ಲಿದೆ ಇದು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಾಣಸಿಗುವ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಬರುವ ಬಾಳೆ ಗುಡ್ಡ ಎಂಬ ಬೆಟ್ಟದಲ್ಲಿ ಈ ಕಲ್ಲು ಕಾಣಸಿಗುತ್ತದೆ. ಚಾರ್ಮಾಡಿ ಘಾಟಿಯಲ್ಲಿ ಸಿಗುವ ಬಿದುರು ತಳ ಎಂಬ ಊರಿನಿಂದ ಎರಡು ಕಿಲೋಮೀಟರ್ ಸಾಗಿದರೆ ಕೊಡೆಕಲ್ಲು ತಲುಪಬಹುದು.
ಪರಿಚಯ
ಈ ಪ್ರದೇಶಕ್ಕೆ ಕೊಡೆಕಲ್ಲು ಎಂಬ ಹೆಸರು ಹೇಗೆ ಬಂದಿರಬಹುದೆಂಬ ಕುತೂಹಲ ಇದೆಯೇ? ಹಾಗಾದ್ರೆ ಇಲ್ಲಿ ಓದಿ. ಕಲ್ಲು ಕೊಡೆ (ಛತ್ರಿ)ಯ ಆಕಾರದಲ್ಲಿರುವುದರಿಂದ ಇದಕ್ಕೆ ಕೊಡೆಕಲ್ಲು ಎಂಬ ಹೆಸರು ಬಂತು. ಇದು ದೂರದಿಂದ ನೋಡಲು ಛತ್ರಿಯ ಆಕಾರದಲ್ಲಿದ್ದು, ತನ್ನ ಪಾದದ ಕೆಳಗೆ ಐವತ್ತರಿಂದ ನೂರು ಜನ ವಿಶ್ರಾಂತಿ ಪಡೆಯಬಹುದಾದಷ್ಟು ಸ್ಥಳಾವಕಾಶವಿದೆ. ಇದು ಚಾರ್ಮಾಡಿ ಘಾಟಿಯ ಹಚ್ಚಹಸುರಿನ ತಪ್ಪಲಿನಲ್ಲಿದ್ದು, ಈ ಬೆಟ್ಟದ ಸುತ್ತ ದೊಡ್ಡ ಪ್ರಪಾತಗಳಿದೆ. ಈ ಬೆಟ್ಟದ ಮೇಲೆ 25-30 ಅಡಿಗಳಷ್ಟು ಬೃಹತಾಕಾರದ ಕೊಡೆಕಲ್ಲನ್ನು ಕಾಣಬಹುದಾಗಿದೆ. ಇದು ವಿಶ್ರಾಂತಿ ಪಡೆಯಲು ಬಹಳ ಅಚ್ಚುಕಟ್ಟಿನ ಸ್ಥಳವಾಗಿದೆ. ಅಲ್ಲೇ ಪಕ್ಕದಲ್ಲಿ ನೀರಿನ ವ್ಯವಸ್ಥೆ ಕೂಡ ಇದ್ದು, ಹಿಂದೆ ಬೇಟೆ ಆಡಲು ಬರುತ್ತಿದ್ದವರು ಇಲ್ಲಿ ಒಂದೆರಡು ದಿನ ಇದ್ದು ವಿಶ್ರಾಂತಿ ಪಡೆದು ಇಲ್ಲಿಂದ ತೆರಳುತ್ತಿದ್ದರು ಎನ್ನಲಾಗುತ್ತದೆ. ಅಷ್ಟೇ ಅಲ್ಲದೆ ಹಳ್ಳಿಯ ಜನರು ಕಾಡಿನಲ್ಲಿ ಸಿಗುವ ಸೀಗೆ, ರಾಮಪತ್ರೆ, ಮುರುಗನ ಹುಳಿ ಮುಂತಾದ ಕಾಡು ಪದಾರ್ಥಗಳನ್ನು ಇಲ್ಲಿ ತಂದು ಒಣಗಿಸಿ ಕೊಂಡೊಯ್ಯುತ್ತಿದ್ದರು.
ಸ್ಥಳಗಳು
ಕೊಡೆಕಲ್ಲು ಎತ್ತರದ ಪ್ರದೇಶದಲ್ಲಿದ್ದು ಅಲ್ಲಿಂದ ನೋಡಿದರೆ ಸುಪ್ರಸಿದ್ಧ ಸ್ಥಳಗಳಾದ ಬಲ್ಲಾಳರಾಯನ ದುರ್ಗ, ಹುಲಿಕಲ್ಲು ಗುಡ್ಡ, ಬೆಳ್ತಂಗಡಿ, ಉಜಿರೆ, ಗಡಾಯಿಕಲ್ಲು ಕಾಣಸಿಗುತ್ತದೆ. ಕೊಡೆಕಲ್ಲು ಚಾರ್ಮಾಡಿ ಘಾಟಿಯ ಸಮೀಪವಿರುವುದರಿಂದ ಇಲ್ಲಿ ಅಣ್ಣಪ್ಪ ಸ್ವಾಮಿಯ ದೇವಸ್ಥಾನವಿದೆ. ಮಲಯಮಾರುತ ಗೆಸ್ಟ್ ಹೌಸ್. ಆಲೇಖಾನ್ ಫಾಲ್ಸ್ ಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ಪ್ರಾಣಿಗಳು
ಈ ಕೊಡೆಕಲ್ಲು ದಟ್ಟ ಅರಣ್ಯದ ನಡುವೆ ಇರುವುದರಿಂದ ಇಲ್ಲಿ ಪ್ರಾಣಿ ಸಂಕುಲಕ್ಕೇನೂ ಕೊರತೆ ಇಲ್ಲ. ಇಲ್ಲಿ ಅನೇಕ ಜಾತಿಯ ಪ್ರಾಣಿಗಳು, ಸರಿಸೃಪಗಳು, ಕೀಟಗಳು ಕಾಣಸಿಗುತ್ತದೆ. ಆನೆ, ಹುಲಿ, ಕರಡಿ, ಕಾಡುಕುರಿ, ಕಾಡುಕೋಣ, ಜಿಂಕೆ, ಹೆಬ್ಬಾವು, ಕಾಳಿಂಗಸರ್ಪ, ನಾಗರಹಾವು, ಸಿಂಗಳಿಕಗಳು ಬಹಳ ಹೇರಳವಾಗಿ ಕಂಡುಬರುತ್ತವೆ.
ಹವಾಮಾನ
ಮಳೆಗಾಲದಲ್ಲಿ ಸದಾ ಕಾಲ ಮೋಡಗಳಿಂದ ಕೊಡೆಕಲ್ಲು ಮುಚ್ಚಿಕೊಂಡಿರುತ್ತದೆ. ಮಳೆಗಾಲದಲ್ಲಿ ಕೊಡೆಕಲ್ಲಿಗೆ ಹೋಗಲು ಬಹಳ ಕಷ್ಟ ಏಕೆಂದರೆ, ಚಾರ್ಮಾಡಿ ಘಾಟಿಯಲ್ಲಿ ಮಳೆಯ ಪ್ರಮಾಣ ಹೆಚ್ಚಿರುತ್ತದೆ. ಅಲ್ಲಿ ಜಿಗಣೆ (ಇಂಬಳ) ಹೇರಳವಾಗಿರುತ್ತದೆ. ಹಾಗೂ ಮಳೆಯ ಪ್ರಮಾಣ ಹೆಚ್ಚಿರುವುದರಿಂದ ಎಲ್ಲಾ ಕಡೆಯೂ ಜಾರುತ್ತದೆ.
ಹಳ್ಳಿಗಳು
ಕೋಡೆ ಕಲ್ಲಿನ ಸಮೀಪ ಸಣ್ಣ ಪುಟ್ಟ ಹಳ್ಳಿಗಳನ್ನು ಕಾಣಬಹುದಾಗಿದೆ. ಕೋಡೆ ಕಲ್ಲಿನಿಂದ ಎರಡು ಕಿಲೋಮೀಟರ್ ಅಂತರದಲ್ಲಿರುವ ಬಿದಿರುತಳ, ಈ ಹಳ್ಳಿಯಲ್ಲಿ ಆರು ಮನೆಗಳಿದ್ದು ಹಳ್ಳಿಯಲ್ಲಿ ನೀರು, ವಿದ್ಯುತ್, ನೆಟ್ ವರ್ಕ್, ಟಿವಿ, ರಸ್ತೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಸೋಲಾರ್ ಬೆಳಕಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪ್ರಕೃತಿಯಲ್ಲಿ ಸಿಗುವ ಪರಿಶುದ್ಧವಾದ ನೀರನ್ನು ಕುಡಿಯಲು ಹಾಗೂ ಕೃಷಿಗೆ ಬಳಸುತ್ತಿದ್ದಾರೆ. ಈ ಹಳ್ಳಿಯವರು ಪೇಟೆಗಿಂತ ಹೆಚ್ಚು ಕಾಡನ್ನೇ ಅವಲಂಬಿಸಿದ್ದಾರೆ. ಇಲ್ಲಿ ಭತ್ತ, ಕಾಫಿ, ಏಲಕ್ಕಿ, ಮೆಣಸನ್ನು ಬೆಳೆಯುತ್ತಾರೆ.
ಆಲೇಖಾನ್ ಹೊರಟ್ಟಿ ಇದು ಕೊಡೆಕಲ್ಲಿನಿಂದ ಐದು ಆರು ಗುಡ್ಡಗಳನ್ನು ದಾಟಿದರೆ ಸಿಗುವ ಹಳ್ಳಿ. ಇಲ್ಲಿ 36 ಮನೆಗಳಿದ್ದು ಗೌಡ ಹಾಗೂ ಮಲೆಕುಡಿಯ ಎಂಬ ಎರಡು ಜನಾಂಗದವರು ವಾಸವಿದ್ದಾರೆ. ಇಲ್ಲಿ ಭತ್ತ, ಏಲಕ್ಕಿ, ಕಾಫಿ, ಬೆಳೆಗಳನ್ನು ಬೆಳೆಯುತ್ತಾರೆ. ಈ ಹಳ್ಳಿಯಲ್ಲೂ ಕಾಡು ಪದಾರ್ಥಗಳು ಬಹಳಷ್ಟು ಮಹತ್ವದ ಪಾತ್ರವನ್ನು ವಹಿಸಿಕೊಂಡಿದೆ. ಹಳ್ಳಿಯಲ್ಲಿ ದಕ್ಷಿಣ ಕನ್ನಡದಲ್ಲಿ ಕಾಣಬಹುದಾದ ಅನೇಕ ಸಂಸ್ಕೃತಿಗಳು ಆಚರಣೆಗಳನ್ನು ಇಲ್ಲಿ ಪಾಲಿಸುತ್ತಾರೆ. ಹಿಂದೆ ಈ ಹಳ್ಳಿಯ ಮುಖಾಂತರ ಟಿಪ್ಪುಸುಲ್ತಾನ್ ಬಲ್ಲಾಳ ರಾಯನ ದುರ್ಗಕ್ಕೆ ತೆರಳುತ್ತಿದ್ದರಂತೆ. ಇಂದಿಗೂ ಅಲ್ಲಿ ಕುದುರೆಯ ದಾರಿಯನ್ನು ಕಾಣಬಹುದಾಗಿದೆ.
ಮಾರ್ಗಸೂಚಿ
ಚಿಕ್ಕಮಂಗಳೂರಿನಿಂದ ಕೊಟ್ಟಿಗೆಹಾರಕ್ಕೆ ಬಂದು ಚಾರ್ಮಾಡಿ ಘಾಟಿಯ ಮುಖಾಂತರ ಬಿದಿರು ತಳ ರಸ್ತೆಯ ಮುಖಾಂತರ ತೆರಳಬಹುದು. ಮಂಗಳೂರಿನಿಂದ ಉಜಿರೆ ಕಕ್ಕಿಂಜೆಯಿಂದ ಚಾರ್ಮಾಡಿ ಘಾಟಿಯ ಮುಖಾಂತರ ಬಿದಿರುತಳ ರಸ್ತೆಯಿಂದ ಕೊಡೆಕಲ್ಲಿಗೆ ತೆರಳಬಹುದು. ಹಾಗೂ ಹೊರನಾಡಿನಿಂದ ಕೊಟ್ಟಿಗೆಹಾರಕ್ಕೆ ಬಂದು ಚಾರ್ಮಾಡಿ ಘಾಟ್ ಮುಖಾಂತರ ಕೋಡೆ ಕಲ್ಲಿಗೆ ತೆರಳಬಹುದು.
ಸ್ವಚ್ಛತೆ
ಪ್ರವಾಸಿಗರು, ಚಾರಣಿಗರು ಇಲ್ಲಿಗೆ ಹೆಚ್ಚು ಭೇಟಿ ಕೊಡುತ್ತಾರೆ. ಅಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಬಹಳ ಮುಖ್ಯವಾಗಿದೆ. ಈ ಸ್ಥಳಕ್ಕೆ ಭೇಟಿ ನೀಡಿದಾಗ ಪ್ಲಾಸ್ಟಿಕ್ ವಸ್ತುಗಳನ್ನು ಆದಷ್ಟು ಕಡಿಮೆ ಮಾಡಿ ಏಕೆಂದರೆ ಇಲ್ಲಿ ಅನೇಕ ವನ್ಯ ಜೀವಿಗಳು ಇರುವುದರಿಂದ ಪ್ಲಾಸ್ಟಿಕ್ ತಿಂದು ಅದರ ಪ್ರಾಣಕ್ಕೆ ಹಾನಿ ಆಗುತ್ತದೆ. ಈ ಕುರಿತು ಅರಣ್ಯ ಇಲಾಖೆಯವರು ಅನೇಕ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.