ಪುತ್ತೂರು: ಮೆಡಿಕಲ್‌ ಕಾಲೇಜಿನ ಜಾಗ ವರ್ಗ ವಿಚಾರ; ಪರ-ವಿರೋಧ ಚರ್ಚೆ


Team Udayavani, Nov 14, 2020, 4:30 AM IST

ಪುತ್ತೂರು: ಮೆಡಿಕಲ್‌ ಕಾಲೇಜಿನ ಜಾಗ ವರ್ಗ ವಿಚಾರ; ಪರ-ವಿರೋಧ ಚರ್ಚೆಪುತ್ತೂರು: ಮೆಡಿಕಲ್‌ ಕಾಲೇಜಿನ ಜಾಗ ವರ್ಗ ವಿಚಾರ; ಪರ-ವಿರೋಧ ಚರ್ಚೆ

ಸಾಂದರ್ಭಿಕ ಚಿತ್ರ

ಪುತ್ತೂರು: ಸರಕಾರಿ ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಬನ್ನೂರಿನ ಸೇಡಿಯಾಪಿನಲ್ಲಿ ಕಾದಿರಿಸಲಾದ 40 ಎಕರೆ ಜಾಗವನ್ನು ರದ್ದುಪಡಿಸಿ ಆ ಸ್ಥಳವನ್ನು ಉದ್ದೇಶಿತ ಸಿ-ಫುಡ್‌ ಪಾರ್ಕ್‌ ನಿರ್ಮಾಣಕ್ಕೆ ಬಳಸಲು ತೀರ್ಮಾನಿಸಿರುವ ವಿಚಾರವೀಗ ಪರ-ವಿರೋಧದ ಚರ್ಚೆಗೆ ಗ್ರಾಸವೆನಿಸಿದೆ!

ದ.ಕ. ಜಿಲ್ಲೆಗೆ ಸರಕಾರಿ ಮೆಡಿಕಲ್‌ ಕಾಲೇಜು ಮಂಜೂರಾತಿಗೆ ಪೂರಕವಾಗಿ 2013ರಲ್ಲಿ ಅಂದಿನ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮೆಡಿಕಲ್‌ ಕಾಲೇಜು ನಿರ್ಮಾಣದ ಕುರಿತು ಸರಕಾರದ ಹಂತದಲ್ಲಿ ಬೇಡಿಕೆ ಇರಿಸಿದ್ದರು. ಅದಕ್ಕಾಗಿ ಬನ್ನೂರು ಸೇಡಿಯಾಪು ಬಳಿ 40 ಎಕರೆಯನ್ನು ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಕಾದಿರಿಸಿ ಅದರ ಪಹಣಿ ಪತ್ರವು ಆಗಿತ್ತು.

ಆಕ್ಷೇಪಣೆ ಇದ್ದಲ್ಲಿ ಸಲ್ಲಿಕೆಗೆ ಆಹ್ವಾನ
ಮೆಡಿಕಲ್‌ ಕಾಲೇಜಿಗೆ ಕಾದಿರಿಸಿದ ಸ.ನ.84 ರಲ್ಲಿನ 40 ಎಕ್ರೆ ಜಮೀನನ್ನು ರದ್ದುಪಡಿಸಿ ಸೀ-ಫ‌ುಡ್‌ ಪಾರ್ಕ್‌ ನಿರ್ಮಾಣಕ್ಕೆ ಪಹಣಿ ಮಾಡಲು ಕಂದಾಯ ಇಲಾಖೆ ಮುಂದಾಗಿದೆ. ಈ ಬಗ್ಗೆ ಆಕ್ಷೇಪಣೆಗಳಿದ್ದರೆ 7 ದಿವಸದೊಳಗೆ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಬನ್ನೂರಿನ ಗ್ರಾಮಕರಣಿಕರು ಪ್ರಕಟನೆ ಹೊರಡಿಸಿದ್ದಾರೆ. ಈ ಪರಭಾರೆ ವಿಚಾರ ಈಗ ಅನೇಕರ ವಿರೋಧಕ್ಕೂ ಕಾರಣವಾಗಿದೆ.

50 ಕೋ.ರೂ. ವೆಚ್ಚದಲ್ಲಿ ಸಿ-ಫುಡ್‌ ಪಾರ್ಕ್‌
ದ.ಕ. ಜಿಲ್ಲೆಯ ಮೂಡುಬಿದಿರೆ ಮತ್ತು ಪುತ್ತೂರಿನಲ್ಲಿ ತಲಾ 50 ಕೋಟಿ ರೂ. ವೆಚ್ಚದಲ್ಲಿ ಸೀ ಫುಡ್‌ ಪಾರ್ಕ್‌ ನಿರ್ಮಾಣದ ಮೂಲಸೌಕರ್ಯ ರಚನೆ ಸಿದ್ಧಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಆ ಜಾಗದಲ್ಲಿ ಕೇಂದ್ರ ಸರಕಾರ ಪ್ರಾಯೋಜಿತ ಸಾಗರೋತ್ಪನ್ನಕ್ಕೆ ಸಂಬಂಧಿಸಿದ ಕಾರ್ಖಾನೆಗಳು ಸ್ಥಾಪನೆಯಾಗಿ ಉದ್ಯೋಗ ಸೃಷ್ಟಿಸುವುದು ಇದರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಶಾಸಕ ಸಂಜೀವ ಮಠಂದೂರು ಅವರ ಪ್ರಸ್ತಾವನೆಯಂತೆ ಜಿಲ್ಲಾ ಉಸ್ತುವಾರಿ ಸಚಿವರು ಬನ್ನೂರು ಗ್ರಾಮದ ಸರ್ವೇ ನಂಬರ್‌ 84ರಲ್ಲಿ 40 ಎಕರೆ ಜಮೀನನ್ನು ಮೆಡಿಕಲ್‌ ಕಾಲೇಜು ಯೋಜನೆಯಿಂದ ರದ್ದುಪಡಿಸಿ ಮೆಗಾ ಸೀ-ಫ‌ುಡ್‌ ಯೋಜನೆಗಾಗಿ ಬಳಸಿಕೊಳ್ಳಲು ಸೂಚನೆ ನೀಡಿದ್ದರು.

ಬೇರೆ ಜಾಗ ನೋಡಲಿ
ಸಿ-ಫುಡ್‌ ಪಾರ್ಕ್‌ ಯೋಜನೆ ಪುತ್ತೂರಿನಲ್ಲಿ ಅನುಷ್ಠಾನಗೊಳಿಸುವುದಕ್ಕೆ ಆಕ್ಷೇಪ ಇಲ್ಲ. ಆದರೆ ಅದಕ್ಕೆ ಸರಕಾರಿ ಮೆಡಿಕಲ್‌ ಕಾಲೇಜಿಗೆ ಕಾದಿರಿಸಿದ ಜಾಗ ಬಳಸುವುದಕ್ಕೆ ವಿರೋಧ ಇದೆ. ಈಗಿನ ಶಾಸಕರು ಬೇರೆ ಜಾಗ ಗುರುತಿಸಲಿ. ಅದು ಬಿಟ್ಟು ಮೆಡಿಕಲ್‌ ಕಾಲೇಜಿಗೆ ಕಾದಿರಿಸಿದ ಜಾಗ ಬಳಸುವುದು ಸರಿ ಅಲ್ಲ. ಮೆಡಿಕಲ್‌ ಕಾಲೇಜು ಮಂಜೂರು ಆಗಬೇಕಾದರೆ ಅದಕ್ಕೆ ಮೊದಲೇ ಜಾಗ ಕಾದಿರಿಸಬೇಕು. ಆ ಕೆಲಸವನ್ನು ನನ್ನ ಅವಧಿಯಲ್ಲಿ ಮಾಡಿದ್ದೆ. ಈಗಿನ ಶಾಸಕರಿಗೆ ಮೆಡಿಕಲ್‌ ಕಾಲೇಜು ಮಾಡಲು ಆಸಕ್ತಿ ಇಲ್ಲ ಎಂದಾದರೆ ಮುಂದೆ ಬರುವ ಆಸಕ್ತ ಶಾಸಕರಿಗಾದರೂ ಕೆಲಸ ಮಾಡಲು ಜಾಗ ಇರಲಿ.
-ಟಿ.ಶಕುಂತಳಾ ಶೆಟ್ಟಿ, ಮಾಜಿ ಶಾಸಕಿ

ಜಮೀನು ಬೇಕಾಗಿದೆ
ಮೆಡಿಕಲ್‌ ಕಾಲೇಜ್‌ ಜಾಗವನ್ನು ಸಿ-ಫ‌ುಡ್‌ಗೆ ಕಾದಿರಿಸುವ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಮೆಡಿಕಲ್‌ ಕಾಲೇಜು ಯಾವಾಗ ಮಂಜೂರಾಗುತ್ತದೆ ಎಂಬುದರ ಸ್ಪಷ್ಟತೆ ಇಲ್ಲ. ಈಗ ಸದ್ಯಕ್ಕೆ ನಮಗೆ ಸಿ- ಫ‌ುಡ್‌ ಪಾರ್ಕ್‌ ನಿರ್ಮಾಣಕ್ಕೆ ಜಮೀನು ಬೇಕಾಗಿದೆ. ಬೇರೆ ಯಾವುದಾದರೂ ಕಡೆ ಜಾಗ ಸಿಗಬಹುದೇ ಎಂದು ಪರಿಶೀಲನೆ ನಡೆಸಲಾಗುವುದು. ಸೂಕ್ತ ಜಾಗ ಸಿಕ್ಕಿದರೆ ಅದನ್ನೇ ಬಳಸಿಕೊಳ್ಳಲಾಗುವುದು. ಇಲ್ಲದಿದ್ದರೆ ಮೆಡಿಕಲ್‌ ಕಾಲೇಜಿಗೆ ಕಾದಿರಿಸಿದ ಜಾಗ ಬಳಸಲು ಉದ್ದೇಶಿಸಲಾಗಿದೆ.
-ಡಾ| ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ, ದ.ಕ.

ಟಾಪ್ ನ್ಯೂಸ್

Dinesh-Meeting

Bengaluru: ನಿಫಾಗೆ ಬಲಿಯಾದ ವಿದ್ಯಾರ್ಥಿಯ ಸಂಪರ್ಕದಲ್ಲಿದ್ದ 25 ಮಂದಿ ಪತ್ತೆ

PUNJALAKATTE

Punjalkatte: ಆರ್‌ಎಎಫ್ ಪೊಲೀಸರಿದ್ದ ಲಾರಿ ಪಲ್ಟಿ , ಇಬ್ಬರಿಗೆ ಗಾಯ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Bantwala: ಶರಣ್ ಪಂಪುವೆಲ್ ಗೆ ಸವಾಲು ಹಾಕಿದ ಶರೀಫ್: ಬಂಟ್ವಾಳದಲ್ಲಿ ಬಿಗುವಿನ ವಾತಾವರಣ

Bantwala: ಶರಣ್ ಪಂಪ್ ವೆಲ್ ಗೆ ಸವಾಲು ಹಾಕಿದ ಶರೀಫ್… ಬಂಟ್ವಾಳದಲ್ಲಿ ಬಿಗುವಿನ ವಾತಾವರಣ

police

Eid Milad: ರ್‍ಯಾಲಿ ವಿಚಾರ ಪ್ರಚೋದನಕಾರಿ ಹೇಳಿಕೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

Cocoa; ವ್ಯಾಪಕವಾಗಿ ಕರಟಿದ ಕೊಕ್ಕೋ; ವಿಪರೀತ ಮಳೆ ತಂದೊಡ್ಡಿದೆ ಬೆಳೆಗಾರರಿಗೆ ಭಾರೀ ನಷ್ಟ

Cocoa; ವ್ಯಾಪಕವಾಗಿ ಕರಟಿದ ಕೊಕ್ಕೋ; ವಿಪರೀತ ಮಳೆ ತಂದೊಡ್ಡಿದೆ ಬೆಳೆಗಾರರಿಗೆ ಭಾರೀ ನಷ್ಟ

ಸುಳ್ಯ: ಬೈಕ್‌ ಗಳ ನಡುವೆ ಅಪಘಾತ

Sullia: ಬೈಕ್‌ ಗಳ ನಡುವೆ ಅಪಘಾತ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Dinesh-Meeting

Bengaluru: ನಿಫಾಗೆ ಬಲಿಯಾದ ವಿದ್ಯಾರ್ಥಿಯ ಸಂಪರ್ಕದಲ್ಲಿದ್ದ 25 ಮಂದಿ ಪತ್ತೆ

PUNJALAKATTE

Punjalkatte: ಆರ್‌ಎಎಫ್ ಪೊಲೀಸರಿದ್ದ ಲಾರಿ ಪಲ್ಟಿ , ಇಬ್ಬರಿಗೆ ಗಾಯ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು

1-asdadasd

Cricketer of the Month :ಎರಡೂ ಪ್ರಶಸ್ತಿ ಶ್ರೀಲಂಕಾ ಪಾಲು

1-HB

Harry Brook ಹೆಗಲಿಗೆ ಇಂಗ್ಲೆಂಡ್‌ ನಾಯಕತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.