ತುಳು ಭಾಷೆಗೆ ಪ್ರೋತ್ಸಾಹ; ದೇವಸ್ಥಾನಗಳ ಮುಖ್ಯದ್ವಾರದಲ್ಲಿ ತುಳು ಲಿಪಿ ಬರೆಹ
Team Udayavani, Nov 14, 2020, 6:00 AM IST
ಉರ್ವ ಮಾರಿಯಮ್ಮ ದೇಗುಲದ ಎದುರು ತುಳು ಲಿಪಿಯ ಬರೆಹ ಅಳವಡಿಸಿರುವುದು.
ಮಹಾನಗರ: ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಜನರು ಮಾತನಾಡುವ ತುಳು ಭಾಷೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕರಾವಳಿಯ ಕೆಲವು ದೇವಸ್ಥಾನಗಳ ಮುಖ್ಯದ್ವಾರಗಳಲ್ಲಿ ತುಳು ಲಿಪಿ ಬರೆಹ ಅಳವಡಿಸಲಾಗುತ್ತಿದೆ.
ನಗರದ ಉರ್ವ ಮಾರಿಯಮ್ಮ ದೇವಸ್ಥಾನ, ಒಡಿಯೂರು, ಕುಂಜೂರು ಕ್ಷೇತ್ರಗಳಲ್ಲಿ ಈಗಾಗಲೇ ತುಳು ಲಿಪಿಯಲ್ಲಿ ದೇವಸ್ಥಾನದ ನಾಮಫಲಕವನ್ನು ಅಳವಡಿಸಲಾಗಿದೆ. ನಾಮಫಲಕದ ಕುರಿತು ಭಕ್ತರಿಂದಲೂ ಉತ್ತಮ ಪ್ರತಿಕ್ರಿಯೆಗಳು ಬರುತ್ತಿದ್ದು, ಜನರಿಗೆ ತುಳು ಲಿಪಿ ಕಲಿಕೆಯ ಬಗ್ಗೆ ಆಸಕ್ತಿ ಹೆಚ್ಚಿಸುವುದು ಇದರ ಉದ್ದೇಶವಾಗಿದೆ.
ಮಂಗಳೂರು ಸಹಿತ ಕರಾವಳಿ ಭಾಗ ದಲ್ಲಿ ತುಳು ಲಿಪಿ ಬರೆಹ ಜನಪ್ರಿಯತೆ ಪಡೆಯುತ್ತಿದೆ. ಅದರಲ್ಲೂ ತುಳು ಚಲನಚಿತ್ರದ ಪೋಸ್ಟರ್ ಕೂಡ ತುಳು ಲಿಪಿಯಲ್ಲೇ ಬಿಡುಗಡೆಯಾಗುತ್ತಿದೆ. ನಗರದ ಕೆಲವೊಂದು ಅಂಗಡಿಗಳಲ್ಲಿ ತುಳು ಲಿಪಿಗಳಲ್ಲಿ ನಾಮಫಲಕ ಅಳವಡಿಸಲಾಗಿದೆ. ವಾಹನಗಳಲ್ಲಿ ಹೆಸರು, ವಿಸಿಟಿಂಗ್ ಕಾರ್ಡ್ ಗಳನ್ನು ತುಳು ಲಿಪಿಯಲ್ಲೇ ಬರೆಯುತ್ತಿದ್ದಾರೆ. ಇನ್ನು, ಹುಟ್ಟುಹಬ್ಬದ ಸಂಭ್ರಮದ ಕೇಕ್‌ನಲ್ಲಿ, ಮದುವೆ ಮಂಟಪದಲ್ಲಿಯೂ ತುಳು ಲಿಪಿ ಬರೆಹಗಳು ಕಾಣಸಿಗುತ್ತವೆ.
“ಜೈ ತುಳುನಾಡು’ ಸಂಘಟನೆಯು ತುಳು ಸಾಹಿತ್ಯ ಅಕಾಡೆಮಿಯ ಸಹಯೋಗ ದೊಂದಿಗೆ ದ.ಕ. ಮತ್ತು ಉಡುಪಿಯಲ್ಲಿ ತುಳು ಲಿಪಿ ಕಲಿಸುವ ಕಾರ್ಯಾಗಾರವನ್ನು ಹಮ್ಮಿಕೊಳ್ಳುತ್ತಿದೆ. ಈಗಾಗಲೇ ಆನ್‌ಲೈನ್, ಆಫ್‌ಲೈನ್ ಮುಖೇನ ತುಳು ಲಿಪಿ ಕಲಿಸ ಲಾಗುತ್ತಿದೆ. ಉಭಯ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಈಗಾಗಲೇ ತರಗತಿಗಳನ್ನು ಆಯೋಜಿಸಲಾಗಿದ್ದು, ಸುಮಾರು 400 ಮಂದಿ ಇದರ ಪ್ರಯೋಜನ ಪಡೆದಿದ್ದಾರೆ.
ವಾಟ್ಸ್‌ಆ್ಯಪ್ ಗ್ರೂಪ್
ವಾಟ್ಸ್‌ಆ್ಯಪ್ ಮೂಲಕವೂ ತುಳು ಕಲಿಸಲಾಗುತ್ತಿದೆ. ಇದಕ್ಕೆಂದು ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಗ್ರೂಪ್ ಮಾಡಲಾಗಿದೆ. ಪುರುಷರ, ಮಹಿಳೆಯರ ಪ್ರತ್ಯೇಕ 47 ಗ್ರೂಪ್‌ಮಾಡಲಾಗಿದೆ. ಒಂದು ಗ್ರೂಪ್‌ನಲ್ಲಿ ಸರಾಸರಿ 35 ಮಂದಿ ಇದ್ದಾರೆ. ತುಳು ಲಿಪಿಯಲ್ಲಿ 4 ಶಬ್ದಗಳನ್ನು ಕಲಿಸಲಾಗುತ್ತಿದೆ. ಅದಕ್ಕೆ ಸಂಬಂಧಪಟ್ಟ ವೀಡಿಯೋ, ಸಂದೇಶ ರವಾನಿಸಲಾಗುತ್ತಿದೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಸಾರ್ವಜನಿಕರು ಕೂಡ ಈ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಟ್ಟು ಆರು ವಾರಗಳ ಬಳಿಕ 100 ಅಂಕಗಳಿಗೆ ತುಳು ಲಿಪಿ ಪರೀಕ್ಷೆ ನಡೆಯುತ್ತದೆ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮಂದಿಗೆ ಬಹುಮಾನ ನೀಡಲಾಗುತ್ತಿದೆ. ಕಲಿಕೆ ಉಚಿತ ವಾಗಿದ್ದು, ಇದೇ ವೇಳೆ ತುಳು ಲಿಪಿಗೆ ಅಭ್ಯಾಸ ಪುಸ್ತಕಗಳನ್ನು ಸಂಘಟನೆ ನೀಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train: ಮುರುಡೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.