ಬೆಳಗೆರೆಯವರ ಬಾಲ್ಯದ ದಿನಗಳ ಮೆಲುಕು ಹಾಕುವ “ಅಮ್ಮ ಸಿಕ್ಕಿದ್ಲು’


Team Udayavani, Nov 14, 2020, 5:45 AM IST

ಬೆಳಗೆರೆಯವರ ಬಾಲ್ಯದ ದಿನಗಳ ಮೆಲುಕು ಹಾಕುವ “ಅಮ್ಮ ಸಿಕ್ಕಿದ್ಲು’

ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.

“ಅಕ್ಷರಗಳ ಮಾಂತ್ರಿಕ’ ಖ್ಯಾತಿಯ ರವಿ ಬೆಳಗೆರೆಯವರ ಕೃತಿಯನ್ನು ಓದುವುದರ ಲ್ಲಿರುವ ಖುಷಿಯೇ ಬೇರೆ. ಇವರ “ಅಮ್ಮ ಸಿಕ್ಕಿದ್ಲು’ ಕೃತಿಯು ಮತ್ತೆ ಮತ್ತೆ ಓದಿಸುವಂಥ ಶಕ್ತಿ ಹೊಂದಿದೆ.

ಈ ಕೃತಿಯು ವಿಚ್‌ ಅಲ್ಬೊಮ್‌ ಅವರ “ಫಾರ್‌ ಒನ್‌ ಲಾಸ್ಟ್‌ ಟೈಮ…’ ಕೃತಿಯನ್ನು ಹೋಲುತ್ತದೆ. ಆದರೆ ಇದು ಯಾವುದೇ ಸಾಹಿತ್ಯದ ಅನುಕರಣೆ ಅಥವಾ ಅನುವಾದವಲ್ಲ. ಬೆಳಗೆ ರೆಯವರು ಬರವ ಣಿಗೆಯಲ್ಲಿ ವಿಶಿಷ್ಟ ವಾದ ಸ್ವಂತಿಕೆ ಹಾಗೂ ಶೈಲಿಯನ್ನು ಹೊಂದಿದ್ದರು.

“ಅಮ್ಮ ಸಿಕ್ಕಿದ್ಲು’ ಕೃತಿಯಲ್ಲಿ ಲೇಖಕರು ತನ್ನ ಹೆಂಡತಿ – ಮಕ್ಕಳನ್ನು ಬಿಟ್ಟು ಬರು ವಲ್ಲಿಂದ ಕಥೆಯನ್ನು ಆರಂಭಿ ಸುತ್ತಾರೆ. ಪತ್ನಿ ಲಲಿತಾರೊಂದಿಗೆ ಆದ ಮನ ಸ್ತಾಪದ ಕಾರಣದಿಂದ ಮನೆಯಿಂದ ದೂರ ವಿರಲು ನಿರ್ಧರಿಸಿದ ಬೆಳಗಳೆಯವರು ತಾಯಿ ಇದ್ದಲ್ಲಿಗೆ ಹೋಗಬೇಕೆಂದು ಊರಿನತ್ತ ಪ್ರಯಾಣ ಬೆಳೆಸುತ್ತಾರೆ. ಈ ಪ್ರಯಾಣದ ಮಾರ್ಗದಲ್ಲಿ ತನ್ನ ಜೀವನ ಶೈಲಿ, ಅಭ್ಯಾಸಗಳು, ಚಟಗಳು, ವೃತ್ತಿ ಮತ್ತು ವೈಯಕ್ತಿಕ ಜೀವನದ ಬಗ್ಗೆ ಓದುಗರೊಂದಿಗೆ ಸಂಭಾಷಣೆ ನಡೆಸುವ ರೀತಿಯಲ್ಲಿ ಕಥೆಯನ್ನು ನಿರೂಪಿಸುತ್ತಾರೆ. ಮಾರ್ಗ ಮಧ್ಯದಲ್ಲಿ ಕಂಡುಬರುವ ಎಷ್ಟೋ ವಿಷಯಗಳನ್ನು ತನ್ನ ಬದುಕಿನಲ್ಲಿ ಆಗಿ ಹೋದಂತಹ ಘಟನೆಗಳೊಂದಿಗೆ ತಳಕು ಹಾಕುತ್ತಾರೆ.

ಮನುಷ್ಯರ ಅಸಹಾಯಕತೆ ಪರಿಸ್ಥಿತಿಗಳ ವಿವರ ಣೆಗಾಗಿ ಅವರು ಬಳಸಿರುವ ಪದಪುಂಜ­ಗಳು ನಮ್ಮನ್ನು ಭಾಷೆ ಮತ್ತು ಸಾಹಿತ್ಯದ ಅದ್ಭುತ ಲೋಕಕ್ಕ ಕರೆದೊಯ್ಯುತ್ತವೆ.

ಹುಟ್ಟೂರು ಬಳ್ಳಾರಿಯಲ್ಲಿ ತಾಯಿ­ಯೊಂದಿಗೆ ಕಳೆದ ಬಾಲ್ಯ ಹಾಗೂ ಹದಿಹರೆ ಯದ ದಿನಗಳನ್ನು ಲೇಖಕರು ಕೃತಿಯಲ್ಲಿ ಮೆಲುಕು ಹಾಕಿದ್ದಾರೆ. ಮನುಷ್ಯನಿಗೆ ಗಂಟು ಬೀಳುವ ಚಟಗಳು ಹೂದೋಟದಂತಹ ಜೀವನವನ್ನು ಹೇಗೆ ನಾಶ ಮಾಡುತ್ತವೆ ಎಂಬು ದನ್ನು ತನ್ನದೇ ಅನುಭವಗಳೊಂದಿಗೆ ಹಂಚಿ ಕೊಳ್ಳುತ್ತಾರೆ. ಈ ಕೃತಿಯ ಮೂಲಕ ತನ್ನ ಬದುಕಿನ ಎಷ್ಟೋ ವಿಷಯಗಳನ್ನು ಎಳೆಎಳೆ ಯಾಗಿ ಓದುಗರ ಮುಂದಿರಿಸಿದ್ದಾರೆ. ಬಾಲ್ಯ ದಲ್ಲಿ ಆದಂಥ ನೋವುಗಳು, ಚಿಕ್ಕವನಿ­ದ್ದಾಗ ತಂದೆಯ ಕುರಿತಾಗಿ ಇದ್ದಂಥ ಪ್ರಶ್ನೆಗಳು ಸಹಿತ ಹಲವಾರು ರಹಸ್ಯಗಳು, ಕುತೂಹಲ­ಗಳು ಹಾಗೂ ಇನ್ನಿತರ ಗಂಭೀರ ವಿಷಯಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

ತಾಯಿಯೊಡನೆ ಸಾಕಷ್ಟು ಸಮಯವನ್ನು ಕಳೆಯಲಿಲ್ಲವಲ್ಲ ಎಂಬ ಕೊರಗು ಈ ಕೃತಿ ಯಲ್ಲಿ ಪಡಿಮೂಡಿದೆ. ಗೆಲುವಿನ ಉತ್ತುಂಗದ ಲ್ಲಿದ್ದಾಗ, ಅದಕ್ಕೆ ಕಾರಣವಾ ದಂಥ ತಾಯಿ ಯನ್ನು, ನೋಡುವ ಭಾಗ್ಯ ತನಗಿ ಲ್ಲವಲ್ಲ ಎಂಬ ನೋವು ಕೃತಿಯಲ್ಲಿ ಎದ್ದು ಕಾಣುತ್ತದೆ.

“ಒಂದೇ ಒಂದು ಸಲ ಈಗ ಆಕೆ ಬಂದು, ಒಂದು ದಿನ ನನ್ನೊಂದಿಗೆ ಇದ್ದುಬಿಟ್ಟರೆ… ಅಂದು ಕೊಳ್ಳುತ್ತೇನೆ. ಅದೆಲ್ಲ ಆಗುವ ಮಾತೇ?’ ಎಂದು ಬೆನ್ನುಡಿಯಲ್ಲಿ ಲೇಖಕರು ತನ್ನನ್ನು ತಾನೇ ಪ್ರಶ್ನಿಸಿಕೊಂಡಿದ್ದಾರೆ.

ಬೆಳಗಳೆಯವರ ಸಾಂಪ್ರದಾಯಿಕ ಶೈಲಿ ಯಲ್ಲಿ ಮೂಡಿಬಂದ “ಅಮ್ಮ ಸಿಕ್ಕಿದ್ಲು’ ಕೃತಿ ಪ್ರತಿಯೊಬ್ಬರ ಜೀವನದಲ್ಲೂ ತಾಯಿಯ ಪ್ರಾಮುಖ್ಯವನ್ನು ಸಾರಿ ಹೇಳಿದೆ. ತಾಯಿಯ ಕುರಿತು ಆರಾಧ್ಯ ಭಾವ ಹೆಚ್ಚಾಗುತ್ತದೆ. ತಾಯಿಯ ಜತೆಗಿನ ಒಡನಾಟವನ್ನು ಅನು ಭವಿಸಿ ನೋಡಿ ಎಂಬ ಸಲಹೆಯನ್ನೂ ಈ ಕೃತಿಯನ್ನು ಲೇಖಕರು ನೀಡಿದ್ದಾರೆ. “ಒಂದು ದಿನ ಸುಮ್ಮನೆ ನಿಮ್ಮ ಅಮ್ಮನೊಂದಿಗೆ ಇಡೀ ದಿನವನ್ನು ಕಳೆಯಿರಿ. ಆಗ ತಾನೇಕೆ ಈ ಕೃತಿಯನ್ನು ಬರೆದಿರುವೆನೆಂದು ನಿಮಗೆ ತಿಳಿ ಯಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದ್ದಾರೆ. ಅಂತೂ ಸ್ವಗತದೊಂದಿಗೆ ತನ್ನದೇ ಕಥೆ­ಯನ್ನು ನಿರೂಪಿಸಿರುವ ಈ ಕೃತಿಯಲ್ಲಿ ಲೇಖಕರು ತಾಯಿಯ ಮಹತ್ವವನ್ನು ನಾವಂದು ಕೊಂಡದ್ದಕ್ಕಿಂತ ವಿಶೇಷವಾಗಿ ನಮಗೆ ಕಟ್ಟಿಕೊಡುವಲ್ಲಿ ಸಫ‌ಲರಾಗಿದ್ದಾರೆ.

-ಸಂಹಿತಾ ಎಸ್‌. ಮೈಸೂರೆ, ಬೆಂಗಳೂರು

ಟಾಪ್ ನ್ಯೂಸ್

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

10-uv-fusion

Nature: ಪ್ರಕೃತಿ ಮಡಿಲಲ್ಲಿ ಒಂದು ಕ್ಷಣ

9-uv-fusion

Grandfather: ಬಡ ತಾತನ ಹೃದಯ ಶ್ರೀಮಂತಿಕೆ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.