ಟಾರ್ಗೆಟ್ 270!
Team Udayavani, Nov 14, 2020, 8:04 AM IST
ಕೆಲವು ಅಮೆರಿಕನ್ನರು ಪುಟ್ಟ ಮಕ್ಕಳನ್ನು ತಮ್ಮ ಜತೆಯಲ್ಲಿ ಕರೆದೊಯ್ದು ಮತ ಚಲಾಯಿಸಿದ ರೀತಿ ಮತ್ತು ಅದರ ಬಗ್ಗೆ ಅವರ ಅಭಿಪ್ರಾಯ ಅರ್ಥಪೂರ್ಣವೆನಿಸಿತು. ಮಕ್ಕಳಿಗೆ ತಮ್ಮ ಹಕ್ಕಿನ ಪರಿಚಯ ಚಿಕ್ಕ ವಯಸ್ಸಿನಿಂದಲೇ ಆಗಬೇಕೆಂಬ ಉದ್ದೇಶದ ಬಗ್ಗೆ ತಿಳಿದಾಗ, ನಾವು ಭಾರತೀಯರು ಈ ನಿಟ್ಟಿನಲ್ಲಿ ಯೋಚಿಸುವುದಿಲ್ಲವಲ್ಲ ಎಂಬ ಪ್ರಶ್ನೆ ಮೂಡುವುದು ಸಹಜ. ಇಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳೂ ಸಹ ತಮ್ಮ ದೇಶದ ಅಧ್ಯಕ್ಷರ ಆಯ್ಕೆಯ ವಿಷಯವನ್ನು ಶಾಲೆಯಲ್ಲಿ, ಶಾಲಾ ಬಸ್ಸಿನಲ್ಲಿ ಚರ್ಚಿಸುವುದು, ಮಾಧ್ಯಮಿಕ ಶಾಲೆಯ ಮಕ್ಕಳಿಗೆ ಅಧ್ಯಕ್ಷೀಯ ಚುನಾವಣೆಯ ಮಾಹಿತಿ ಶೈಕ್ಷಣಿಕ ಚಟುವಟಿಕೆಗಳ ಭಾಗವಾಗುವುದನ್ನು ಕಂಡಾಗ, ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ತಮ್ಮ ಹಕ್ಕಿನ ಪರಿಚಯವಾಗಬೇಕೆಂಬ ಪೋಷಕರ ಅಭಿಪ್ರಾಯವನ್ನು ಒಪ್ಪುವಂತಾಗುತ್ತದೆ.
ಅಕ್ಟೋಬರ್ ತಿಂಗಳಿನ ಅಬ್ಬರದ ಪ್ರಚಾರ, ಕೊರೊನಾವನ್ನು ಲೆಕ್ಕಿಸದೆ ನಡೆದ ಬೃಹತ್ ಚುನಾವಣ ಸಭೆಗಳು, ಕಳಪೆ ಮಟ್ಟದ, ಕಳೆಗುಂದಿದ ಸಾಂಪ್ರದಾಯಿಕ ಅಧ್ಯಕ್ಷೀಯ ಚರ್ಚೆಗಳು, ಚುನಾವಣೆ ಸಂದರ್ಭದಲ್ಲಷ್ಟೇ ಹುಟ್ಟಿಕೊಳ್ಳುವ ಆರೋಪ- ಪ್ರತ್ಯಾರೋಪಗಳು, ಇವುಗಳ ಮಧ್ಯೆ ಕೊರೊನಾ ಸೋಂಕಿಗೆ ತುತ್ತಾದ ಅಧ್ಯಕ್ಷರು ಮತ್ತವರ ತಂಡ, ಎಲ್ಲದ್ದಕ್ಕೂ ಮಿಗಿಲಾಗಿ 4 ವರ್ಷಗಳಿಂದ ಅಧ್ಯಕ್ಷರಾಗಿದ್ದು ಹೆಚ್ಚು ಚರ್ಚೆಗೊಳಗಾದ ಅಭ್ಯರ್ಥಿ…
ಇವು ಈ ಸಲದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಂಡುಬಂದ ಮುಖ್ಯ ಅಂಶಗಳು! ವಿಶ್ವದ ಎಲ್ಲ ದೇಶಗಳ ಜನತೆಯಲ್ಲಿಯೂ ಹೆಚ್ಚಿನ ಕುತೂಹಲ ಸೃಷ್ಟಿಸಿದ ಚುನಾವಣೆ ಇದು. ಭಾರತದ ಮಾಧ್ಯಮಗಳು, ಭಾರತೀಯರೂ ಹೆಚ್ಚಿನ ಕುತೂಹಲ ತೋರಿಸಿದ್ದು ಎಲ್ಲೆಡೆ ಕಂಡುಬಂದಿತ್ತು. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವಿನ ಸ್ನೇಹವೂ ಇದಕ್ಕೆ ಕಾರಣವಾಗಿದ್ದಿರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ಟ್ರಂಪ್-ಬೈಡನ್ ಪರ-ವಿರೋಧ ಚರ್ಚೆಗಳು ವಿಶ್ವವೇ ತನ್ನ ಅಧ್ಯಕ್ಷರನ್ನು ಆರಿಸುವ ತವಕದಲ್ಲಿದೆ ಎನಿಸುವಂತಿ ದ್ದವು. ಇದನ್ನೆಲ್ಲ ನೋಡಿದಾಗ ಅಮೆರಿಕದ ಅಧ್ಯಕ್ಷರನ್ನು ಆಯ್ಕೆ ಮಾಡುವವರು ಅಮೆರಿಕನ್ನರೋ? ಇಲ್ಲ ಸಾಮಾಜಿಕ ಜಾಲತಾಣಗಳ ಬಿಸಿ ಚರ್ಚೆಗಳ್ಳೋ? ಎಂದೆನಿಸಿತ್ತು.
ಅದರಂತೆ ಇಲ್ಲಿನ ಭಾರತೀಯರಲ್ಲೂ, ಅಮೆರಿಕನ್ನಡಿಗರಲ್ಲೂ ಅಧ್ಯಕ್ಷೀಯ ಚುನಾವಣೆಯ ಬಿಸಿ ಜೋರಾಗಿಯೇ ಇತ್ತು. ನ್ಯೂ ಜೆರ್ಸಿಯ ಕನ್ನಡ ಬಳಗದಲ್ಲೂ ಚುನಾವಣೆ ಕಳೆಕಟ್ಟಿತ್ತು. ಇಂದಿನ ದಿನಗಳಲ್ಲಿ ಪರಸ್ಪರ ಭೇಟಿಯಾಗದೇ ಎಲ್ಲರೂ ತಮ್ಮ-ತಮ್ಮ ವಾಟ್ಸಾಪ್ ಗುಂಪುಗಳಲ್ಲಿಯೇ ಚರ್ಚೆ ನಡೆಸುವುದು ಸಾಮಾನ್ಯ. ಗುಂಪಿನಲ್ಲಿ ಕೆಲವು ಸದಸ್ಯರು ಟ್ರಂಪ್ ಬೆಂಬಲಿಗರಾದರೆ, ಮತ್ತೆ ಕೆಲವು ಸದಸ್ಯರು ಬೈಡನ್ ಪರವಾಗಿರುವವರು. ಉಳಿದವರು ತಟಸ್ಥರು. ಚರ್ಚೆಯ ಬಿಸಿಯನ್ನು ಸವಿಯುವವರು!
ಇಂದಿಗೂ ಭಾರತದ ಚುನಾವಣೆಗಳಲ್ಲಿ ಆಸಕ್ತಿ ತೋರಿಸುವ ನಾನು ಎಲ್ಲರಂತೆ ಎದುರು ನೋಡಿದ್ದು ಸಾಂಪ್ರದಾಯಿಕ ಅಧ್ಯಕ್ಷೀಯ ಚರ್ಚೆಗಳನ್ನು. ತಮ್ಮ ಚುನಾವಣ ಪ್ರಣಾಳಿಕೆಯನ್ನು ಮತದಾರರಿಗೆ ತಲುಪಿಸುವ ನಿಟ್ಟಿನಲ್ಲಿ ನಡೆಯಬೇಕಿದ್ದ ಮೊದಲ ಚರ್ಚೆ, ಆರೋಪ-ಪ್ರತ್ಯಾರೋಪಗಳ ತು..ತು…ಮೈಂ…ಮೈಂ ಆಗಿತ್ತು. ಚಕ್ಕುಲಿ, ಕೋಡುಬಳೆ, ಕುರುಕುಲು ತಿಂಡಿಗಳನ್ನು ಸವಿಯುತ್ತ ಚರ್ಚೆಯನ್ನು ನೋಡಬೇಕೆಂಬ ನಮ್ಮ ಸ್ನೇಹಿತರೊಬ್ಬರ ಉತ್ಸಾಹಕ್ಕೆ ಟ್ರಂಪ್-ಬೈಡನ್ನರ ಕೆಸರೆರಚಾಟ ನೀರೆರಚಿತ್ತು. ಒಬ್ಬ ಅಭ್ಯರ್ಥಿ ಮಾತನಾಡುವಾಗ ಮಧ್ಯ ಬಾಯಿಹಾಕಿ ಮಾತನಾಡುವ ರೀತಿ, ಚಿಕ್ಕಮಕ್ಕಳೂ ಸಹ ಆಕ್ಷೇಪಿಸುವಂತಿತ್ತು. ಇಲ್ಲಿ ಮಕ್ಕಳು ಗಚಜಿಠಿ fಟ್ಟ yಟur ಠಿurn ಎನ್ನುವ ಅಭ್ಯಾಸವನ್ನು ಕಿಂಡರ್ ಗಾರ್ಟನ್‌ನಿಂದಲೇ ಕಲಿಯುತ್ತಾರೆ. ಟ್ರಂಪ್ ಮತ್ತು ಬೈಡನ್ ಇಬ್ಬರೂ ಅದನ್ನು ಮರೆತು ಚರ್ಚೆಯಲ್ಲಿ ಪಾಲ್ಗೊಂಡ ರೀತಿ ಹಾಸ್ಯಾಸ್ಪದವಾಗಿ ಕಂಡಿತ್ತು. ಅಷ್ಟರಲ್ಲಿ ನವೆಂಬರ್ 3 ಬಂದೇ ಬಿಟ್ಟಿತ್ತು.
ಎಲ್ಲ ರಾಜ್ಯಗಳಲ್ಲಿ ಬೆಳಗಿನಿಂದಲೇ ಮತದಾನದ ಪ್ರಕ್ರಿಯೆ ಪ್ರಾರಂಭವಾಗಿದ್ದಲ್ಲದೇ, ಮೇಲ್-ಇನ್-ಬ್ಯಾಲೆಟ್ (ಅಂಚೆ ಮತಗಳು) ವ್ಯವಸ್ಥೆಯೂ ಮೊದಲೇ ಆಗಿದ್ದು, ಕೊರೊನಾ ಕಾಲದಲ್ಲಿ ಅನುಕೂಲಕರವಾಗಿತ್ತು. ಅಂಚೆ, ಡ್ರಾಪ್ ಬಾಕ್ಸ್ ಮೂಲಕ ಮತ ಚಲಾಯಿಸಿ ಐ Vಟಠಿಛಿಛ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ, ಅಮೆರಿಕದ ಪ್ರಭುತ್ವ ಪಡೆದು, ಮೊದಲ ಬಾರಿಗೆ ಮತ ಚಲಾಯಿಸುವ ಹಕ್ಕನ್ನು ಪಡೆದ ಅಮೆರಿಕನ್ನಡಿಗರ ಉತ್ಸಾಹ ಸಾಮಾಜಿಕ ಜಾಲತಾಣಗಳಲ್ಲಿ ಎದ್ದುಕಂಡಿತ್ತು.
ಮತ ಚಲಾವಣೆ ತನ್ನ ಪಾಡಿಗೆ ನಡೆದಿದ್ದರೂ, ಟ್ರಂಪ್ ಮತ್ತು ಬೈಡನ್ ಸಮರ್ಥಕರ ನಡುವಿನ ಸಮರಕ್ಕೆ ಕೊನೆಯಿರಲಿಲ್ಲ. 4 more years ಎನ್ನುವ ಕೂಗಿಗೆ, No more years ಎನ್ನುವ ಉತ್ತರ. ಒಬ್ಬರನ್ನೊಬ್ಬರು ನಿಂದಿಸಿ, ಜಗಳವಾಡಿಕೊಂಡು ಪೊಲೀಸರು ಮಧ್ಯೆ ಪ್ರವೇಶಿಸುವಂತಾಗಿದ್ದು, ಚುನಾವಣೆಯ ಇನ್ನೊಂದು ಮುಖವನ್ನು ಅನಾವರಣಗೊಳಿಸಿತು. ಆದರೆ ಎಲ್ಲರೂ ಎದುರು ನೋಡುತ್ತಿದ್ದ ಮತ ಎಣಿಕೆ ಸಂಜೆ ಎಂಟು ಗಂಟೆಗೆ ಪ್ರಾರಂಭವಾಗಿ, ಟಾರ್ಗೆಟ್ 270 ಎನ್ನುವ ವಿಷಯ ಇಲ್ಲಿನ ಎಲ್ಲರ ಚರ್ಚೆಯ ಕೇಂದ್ರವಾಯಿತು. ಕೆಲ ಸಮಯ ಫೋನನ್ನು ನೋಡದೆ ಕೆಲಸದಲ್ಲಿ ತೊಡಗಿಕೊಂಡಿದ್ದ ನನಗೆ, ನವೆಂಬರ್ 3 ರ ಸಂಜೆಯಿಂದ ರಾತ್ರಿ ಎಂಟರ ತನಕ ಚುನಾವಣೆಯ ಬಗ್ಗೆ ವಾಟ್ಸಾಪಿನಲ್ಲಿ ಬಂದ ಸಂದೇಶಗಳ ಸಂಖ್ಯೆ ಬರೋಬ್ಬರಿ 228! ಇದೆಂತಹ ಕುತೂಹಲ ಗುಂಪಿನಲ್ಲಿ? ಈ ಉತ್ಸಾಹ ಇವರೆಲ್ಲ ಭಾರತದಲ್ಲಿದ್ದಾಗ ನಡೆದಿದ್ದ ಚುನಾವಣೆಗಳಲ್ಲಿಯೂ ಇತ್ತೇ? ಅಥವಾ ಇಂದಿನ ದಿನಗಳಲ್ಲಿ “ಹರಟೆಕಟ್ಟೆ’ಯಾಗಿರುವ ವಾಟ್ಸಾ$ಪಿನ ಪ್ರಭಾವವೋ?
ರಾತ್ರಿ ಎಂಟರಿಂದ ಹನ್ನೆರಡರವರೆಗೆ ನಡೆದ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದ ಅಧ್ಯಕ್ಷ ಟ್ರಂಪ್ ತನ್ನ ಸಮರ್ಥಕರಲ್ಲಿ ಸಂತಸ ವನ್ನು ಮೂಡಿಸಿದ್ದರು. ನಮ್ಮ ಸ್ನೇಹಿತರೊಬ್ಬರು ಎಲ್ಲರಿಗೂ ಲಾಡು ಹಂಚುವ ಯೋಚನೆಯನ್ನೂ ಮಾಡಿದ್ದರು. ಇದಕ್ಕೆ ವಿರುದ್ಧವಾಗಿ ಬೈಡನ್ ಸಮರ್ಥಕರು, ಬೆಳಗಾಗುವಷ್ಟರಲ್ಲಿ ಏನಾದರೂ ಚಮತ್ಕಾರವಾಗುವುದೇನೋ ಎಂದು ಕಾಯುವಂತಾಯಿತು. ಮಧ್ಯರಾತ್ರಿಯಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ತನ್ನ ಗೆಲುವನ್ನು ಘೋಷಿಸಿಯೂ ಬಿಟ್ಟರು. ಆದರೆ ನವೆಂಬರ್ 4ರ ಬೆಳಗ್ಗೆ ಹತ್ತು ಗಂಟೆಯಷ್ಟರಲ್ಲಿ ಟ್ರಂಪ್ ಮುನ್ನಡೆ ಸಾಧಿಸಿದ್ದ ಮಿಶಿಗನ್ ಮತ್ತು ವಿಸ್ಕಾನ್ಸಿನ್ ರಾಜ್ಯಗಳಲ್ಲಿ ಬೈಡನ್ ಗೆಲುವು ಸಾಧಿಸಿ 264 ಇಲೆಕ್ಟೋರಲ್ ಮತ ಗಳಿಸಿದ್ದು ಇಡೀ ಅಮೆರಿಕೆಯನ್ನು ಆಶ್ಚರ್ಯದಲ್ಲಿ ಮುಳುಗಿಸಿತು. ಬೈಡನ್ ಸಿಕ್ಸರ್ ಬಾರಿಸಿ 270 ಮತಗಳಿಸಿ ಅಧ್ಯಕ್ಷರಾಗುವರೋ ಎನ್ನುವ ಕುತೂಹಲ ಮೂಡಿಸಿತ್ತು. ಟ್ರಂಪ್ ಹಿಡಿತದಲ್ಲಿದ್ದ ನೆವಾಡಾ ರಾಜ್ಯದಲ್ಲಿ ಮುನ್ನಡೆ ಸಾಧಿಸಿ, 6 ಇಲೆಕ್ಟೋರಲ್ ಮತ ಗಳಿಸಿ ಬೈಡನ್ ವಿಜಯಿಯಾಗುವರೋ? ಕ್ರಿಕೆಟ್ ಮ್ಯಾಚಿನ ಕೊನೆಯ ಬಾಲಿನಲ್ಲಿ ಬೈಡೆನ್ ಸಿಕ್ಸರ್ ಬಾರಿಸುವರೋ ಎಂಬುದು ಗೆಳೆಯರ ಬಳಗದ ಚರ್ಚೆಯ ವಿಷಯವಾಯಿತು.
ಆದರೆ ಇಂದಿನ ದಿನಗಳಲ್ಲಿನ ಚುನಾವಣೆಯಲ್ಲಿ ಕಂಡು ಬರುವ ಇ.ವಿ.ಎಂ.ಗಳಿಲ್ಲದೇ ಮತಪತ್ರವನ್ನು ಎಣಿಸುವ ಗತಕಾಲದ ರೂಢಿಯಲ್ಲಿರುವ ಅಮೆರಿಕೆಯಲ್ಲಿ ಇದು ಸಾಧ್ಯವೇ ಎನಿಸಿತ್ತು. ಬೈಡನ್ ಅವರು “ಲಗಾನ್’ ಚಿತ್ರದ ನಾಯಕ ಭುವನ್‌ನಾಗುವರೋ ಇಲ್ಲವೇ ಎಂಬತ್ತರ ದಶಕದಲ್ಲಿ ಚೇತನ್ ಶರ್ಮಾರ ಕೊನೆಯ ಬಾಲಿಗೆ ಸಿಕ್ಸರ್ ಬಾರಿಸಿ, ಪಂದ್ಯ ಗೆದ್ದ ಜಾವೇದ್ ಮಿಯಾಂದಾದಾರಂತೆ ಇತಿಹಾಸ ಸೃಷ್ಟಿಸುವರೋ ಎನ್ನುವ ಯೋಚನೆ ಮೂಡಿತು. ಇಷ್ಟೊಂದು ಕುತೂಹಲ ಮೂಡಿಸಿದ ಟಾರ್ಗೆಟ್ 270 ಪಂದ್ಯ ಸಮಯ ಕಳೆದಂತೆ ನೀರಸ ಟೆಸ್ಟ್ ಮ್ಯಾಚಿನಂತೆ ಬದಲಾಗಿದ್ದು ಎಲ್ಲರಲ್ಲಿಯೂ ನಿರಾಸೆ ಮೂಡಿಸಿತು. ಅಂಚೆ ಮತಗಳ (ಮೇಲ್-ಇನ್ ಬ್ಯಾಲೆಟ್)ಎಣಿಕೆ ತನ್ನ ಪಾಡಿಗೆ ತಾನು ಸಾಗಿತ್ತು. ಇಡೀ ವಿಶ್ವವೇ ದೊಡ್ಡಣ್ಣದ ಆಯ್ಕೆಯನ್ನು ಕಾಯುವಂತಾಯಿತು. ಅಂಚೆ ಮತಗಳ ಸಂಖ್ಯೆಯೇ ಬೈಡನ್ ಗೆಲುವಿಗೆ ಕಾರಣವಾಗುವಂತೆ ಕಂಡುಬಂದಾಗ, ಬೈಡನ್ ಗೆಲುವು ಸಾಧಿಸಿದ ರಾಜ್ಯಗಳಲ್ಲಿ ಮತ ಎಣಿಕೆಯಲ್ಲಿ ಮೋಸ ನಡೆಯುತ್ತಿದೆ ಎನ್ನುವ ಆರೋಪವೂ ಕೇಳಿಬಂತು. ಆ ರಾಜ್ಯಗಳಲ್ಲಿನ ಫಲಿತಾಂಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುವ ಬಗ್ಗೆ ಟ್ರಂಪ್ ತಂಡ ಆಲೋಚಿಸಿತು.
ಕನ್ನಡ ಬಳಗದ ಚರ್ಚೆಯೀಗ “ಅಧ್ಯಕ್ಷರ ಕುರ್ಚಿ ನಂದೇ’ ಎನ್ನುವ ಟ್ರಂಪ್-ಬೈಡನ್‌ರ ವಿಷಯದಿಂದ ಸರಿದು, “ಈ ಸಲ ಕಪ್ ನಮೆªà’ ಎನ್ನುತ್ತ 13 ವರ್ಷಗಳಿಂದ ಕ್ರಿಕೆಟ್ ಅಭಿಮಾನಿಗಳಲ್ಲಿ ಆಸೆ ಹುಟ್ಟಿಸಿರುವ ಆರ್‌ಸಿಬಿಯ ಪಂದ್ಯದತ್ತ ತಿರುಗಿತು. ಆರ್.ಸಿ.ಬಿ. ಪಂದ್ಯ ಗೆಲ್ಲದಿದ್ದರೂ, ಟ್ರಂಪ್ ಹಿಡಿತದಲ್ಲಿದ್ದ ಜಾರ್ಜಿಯಾ ಮತ್ತು ಫಿಲಡೆಲ್ಫಿಯಾ ರಾಜ್ಯಗಳಲ್ಲಿ ಹೆಚ್ಚಿನ ಮತ ಪಡೆದು ಟಾರ್ಗೆಟ್ 270 ತಲುಪಿದ ಬೈಡನ್ ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು. ಏಕದಿನದ ಕ್ರಿಕೆಟ್ ಪಂದ್ಯದಂತೆ ಪ್ರಾರಂಭವಾದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆಯ ಪ್ರಕ್ರಿಯೆ, ಐದು ದಿನಗಳವರೆಗೆ ಟೆಸ್ಟ್ ಪಂದ್ಯದಂತೆ ನಡೆಯಿತು. ಪುಣ್ಯಕ್ಕೆ ಪಂದ್ಯ ಡ್ರಾ ಆಗಲಿಲ್ಲ ಎನ್ನುವುದೇ ಸಮಾಧಾನ.
ಅಹೀಶ್ ಭಾರದ್ವಾಜ, ನ್ಯೂ ಜೆರ್ಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.