ರೆಕ್ಕೆ ಕತ್ತರಿಸಿಕೊಂಡ ಈಮ್ಯೂ ದೈನೆವಾನ್‌, ಮಕ್ಕಳನ್ನು ಕೊಂದ ಗುಂಬ್ಲೆಗಬ್ಬನ್‌

ಆಸ್ಟ್ರೇಲಿಯಾದ ನೂಂಗಾಬುರಾ ಜನರ ಜಾನಪದ ಕತೆ

Team Udayavani, Nov 14, 2020, 8:44 AM IST

9

ಈಮ್ಯೂ (emu) ಗುಂಪಿಗೆ ಸೇರಿದ ದೈನೆವಾನ್‌ (Dainewan) ಅಲ್ಲಿಯ ನಿವಾಸಿಗಳಿಗೆ ಗೊತ್ತಿದ್ದ ಅತಿದೊಡ್ಡ ಪಕ್ಷಿಯಾಗಿತ್ತು. ಅದನ್ನು ರಾಜ ಎಂದೇ ಕರೆಯುತ್ತಿದ್ದರು. ಬಯಲು ಸೀಮೆಯ ಬಸ್ಟರ್ಡ್‌ ಎಂಬ (Bustard) ಚಿಕ್ಕ ಹಕ್ಕಿ ಗುಂಪಿಗೆ ಸೇರಿದ ಗುಂಬ್ಲೆ ಗಬ್ಬನ್ನರಿಗೆ (Goomblegubbon) ದೈನೆವಾನ್‌ರನ್ನು ಕಂಡರೆ ಅಸೂಯೆ. ಅದರಲ್ಲೂ ತಾಯಿ ಗುಂಬ್ಲೆಗಬ್ಬನ್ನಳಿಗೆ ತಾಯಿ ದೈನೆವಾನಳನ್ನು ಕಂಡರೆ ಎಲ್ಲಿಲ್ಲದ ಮಾತ್ಸರ್ಯ.

ದೈನೆವಾನ್‌ ಗುಂಪು ಆಕಾಶದಲ್ಲಿ ಹಾರಿ ಬರುವುದನ್ನು ಮತ್ತು ಅವು ಭೂಮಿಯ ಮೇಲೆ ತ್ವರಿತವಾಗಿ ಚಲಿಸುವುದನ್ನು ನೋಡಿ ಗುಂಬ್ಲೆಗಬ್ಬನ್‌ ಕರುಬುತ್ತಿದ್ದಳು. ಅವಳು ನೋಡುತ್ತಿದ್ದಂತೆ ತಾಯಿ ದೈನೆವಾನ್‌ ಮುಖದಲ್ಲಿಯೇ ತನ್ನ ಪ್ರಭುತ್ವವನ್ನು ಮೆರೆಸುತ್ತಿದ್ದದ್ದು ಅವಳಿಗೆ ಸಹಿಸಲಾಗುತ್ತಿರಲಿಲ್ಲ. ಅವಳ ಬಳಿ ಹಾರಿ, ತನ್ನ ದೊಡª ರೆಕ್ಕೆಗಳನ್ನು ಬಡಿದು ಪ್ರದರ್ಶಿಸುತ್ತಿದ್ದಳು. ಅಲ್ಲದೇ ತಾನು ಏನೋ ಗೆದ್ದು ಬಂದವಳಂತೆ ವಿಶಿಷ್ಟ ಧ್ವನಿಯಲ್ಲಿ ಕೇಕೆ ಹಾಕಿ ಬೀಗುತ್ತಿದ್ದಳು. ಇದನ್ನು ನೋಡಿ ಗುಂಬ್ಲೆಗಬ್ಬನ್‌ ಕಿಡಿ ಕಾರುತ್ತಿದ್ದಳು.

ಅವಳ ಪ್ರಭುತ್ವವನ್ನು ಕಡೆಗಾಣಿಸಬೇಕೆಂಬುದು ಗುಂಬ್ಲೆ ಗಬ್ಬನಳ ಹಂಬಲ. ಒಮ್ಮೆ ಅವಳು, ಏನಾದರೂ ಮಾಡಿ ಅವಳ ರೆಕ್ಕೆಗಳಿಗೆ ಗಾಯ ಮಾಡಿದರೆ ಅಷ್ಟು ವೇಗವಾಗಿ ಹಾರಲಾರಳು ಎಂದುಕೊಂಡಳು. ಆದರೆ ಗಾಯ ಮಾಡಬೇಕಾದರೆ ತಾನು ಅವಳ ಜತೆ ಜಗಳಕ್ಕೆ ಇಳಿಯಬೇಕು, ಮೊದಲೇ ತಾನು ಚಿಕ್ಕ ಪಕ್ಷಿ. ದೈನೆವಾನ್‌ ಅಂಥ ದೊಡ್ಡ ಹಕ್ಕಿಯನ್ನು ಎದುರು ಹಾಕಿಕೊಳ್ಳುವುದೇ? ಜಗಳ ದಿಂದ ಏನನ್ನೂ ಗಿಟ್ಟಿಸಲಾಗದು. ಹೀಗಾಗಿ ಕುತಂತ್ರವೊಂದೇ ದಾರಿ ಎನಿಸಿತು.

ಒಂದು ಉಪಾಯ ಹೊಳೆಯಿತು. ಒಮ್ಮೆ ದೈನೆವಾನ್‌ ದೂರದಿಂದ ತನ್ನೆಡೆಗೆ ಬರುತ್ತಿದುದನ್ನು ಗುಂಬ್ಲೆ ಗಬ್ಬನ್‌ ನೋಡಿದಳು. ತತ್‌ಕ್ಷಣ ತನ್ನ ರೆಕ್ಕೆಗಳು ಕಾಣದಂತೆ ಮುಚ್ಚಿ ಕೆಳಗೆ ಕುಳಿತಳು. ದೈನೆವಾನ್‌ ನೆಲಕ್ಕೆ ಇಳಿದಳು. ಇಬ್ಬರೂ ಕೆಲ ಕಾಲ ಕ್ಷೇಮ ಸಮಾಚಾರ
ಮಾತನಾಡಿದರು. ಆಗ ಗುಂಬ್ಲೆ ಗಬ್ಬನ್‌ ಕೇಳಿದಳು.

ನೀನು ನನ್ನ ತರಹವೇ ಇದ್ದು ರೆಕ್ಕೆಗಳನ್ನು ಉಪಯೋಗಿಸದೇ ಏಕೆ ಜೀವಿಸಬಾರದು? ಪ್ರತಿಯೊಂದು ಹಕ್ಕಿಯೂ ಹಾರುತ್ತದೆ. ನೀವು ದೈನೆವಾನ್‌ಗಳು. ಹಕ್ಕಿಗಳ ರಾಜರು. ನಿಜವಾಗಿ ನೀವು ರೆಕ್ಕೆಯಿಲ್ಲದೇ ವಾಸಿಸಬೇಕು. ರೆಕ್ಕೆಗಳನ್ನು ಉಪಯೋಗಿಸಿ ಹಾರುವುದರಲ್ಲಿ ಏನು ಹೆಚ್ಚುಗಾರಿಕೆ ಇದೆ? ನೋಡು, ಮಿಕ್ಕ ಹಕ್ಕಿಗಳು, ನಾನು ಸಹಿತ ರೆಕ್ಕೆಯಿಲ್ಲದೇ ವಾಸಿಸುವುದನ್ನು ನೋಡಿದರೆ, ಅಹಾ ಎಂತಹ ಜಾಣ ಹಕ್ಕಿ ಇದು ಎನ್ನುತ್ತಾ ನನ್ನನ್ನೇ ರಾಜ ಎನ್ನುತ್ತಾರೆ. ಆದರೆ, ನಿನಗೆ ರೆಕ್ಕೆ ಇವೆ, ನನಗೆ ರೆಕ್ಕೆಗಳಿಲ್ಲ ಎಂದಿತು.

ದೈನವಾನ್‌ ದಿಟ್ಟಿಸಿ ನೋಡಿತು. ಹುಲ್ಲಿನಲ್ಲಿ ಗುಂಬ್ಲೆಗಬ್ಬನ್‌ ಕುಳಿತ ಪರಿಯಲ್ಲಿ ಅದರ ರೆಕ್ಕೆ ಕಾಣುತ್ತಿರಲಿಲ್ಲ. ದೈನೆವಾನ್‌ ತನ್ನ ಗೂಡಿನತ್ತ ಹೊರಟಿತು. ದಾರಿಯಲ್ಲಿ ಗುಂಬ್ಲೆಗಬ್ಬನ್‌ ಹೇಳಿದ ಮಾತುಗಳೇ ಮನಸ್ಸಿಗೆ ಬರುತ್ತಿದ್ದವು. ತನ್ನ ಗಂಡನಿಗೆ ಆದುದನೆಲ್ಲ ವಿವರಿಸಿತು. ಇಬ್ಬರೂ ಚಿಂತಾಕ್ರಾಂತ ರಾದರು. ಹಾಗಾ ದರೆ ನಮ್ಮ ರಾಜತನ ಇಲ್ಲಿಗೇ ಕೊನೆ ಆಗು ವುದೇ? ಅವರು ರೆಕ್ಕೆ ಇಲ್ಲದೇ ಹಾರಿದರೆ ಹಾಗಾಗುವುದು ಖಂಡಿತ.

ಏನೇ ಆದರೂ ಅವರು ರಾಜರಾಗುವುದನ್ನು ತಡೆಯಬೇಕು. ನಮ್ಮ ರೆಕ್ಕೆಗಳನ್ನು ನಾವೇ ಕತ್ತರಿಸಿಕೊಂಡರೂ ಸರಿಯೇ ನಾವೇ ರಾಜರು ಎನ್ನಿಸಿ ಕೊಳ್ಳಬೇಕು ಎಂದು ಇಬ್ಬರೂ ಶಪಥ ಮಾಡಿದರು.

ರೆಕ್ಕೆಗಳನ್ನು ತೆಗೆದು ಹಾಕಲು ನಿರ್ಧರಿಸಿದರು. ಕೂಡಲೇ ತಾಯಿ ದೈನೆವಾನ್‌ ತನ್ನ ಕಲ್ಲಿನ ಕೊಡಲಿ (Combo, Tomahawk) ಯನ್ನು ಗಂಡನಿಗೆ ಕೊಟ್ಟು ತನ್ನ ರೆಕ್ಕೆಗಳನ್ನು ಕತ್ತರಿಸುವಂತೆ ಹೇಳಿದಳು. ಅವನು ಹಾಗೆ ಮಾಡಿದ ಮೇಲೆ, ಅವಳು ಅವನ ರೆಕ್ಕೆಗಳನ್ನು ಕತ್ತರಿಸಿದಳು. ಇಬ್ಬರೂ ರೆಕ್ಕೆ ಹೀನರಾದ ತತ್‌ಕ್ಷಣ ದೈನೆವಾನ್‌ ವಿಷಯ ತಿಳಿಸಲು ಗುಂಬ್ಲೆಗಬ್ಬನ್‌ ಮುಂದೆ ಬಂದು ನಿಂತಳು.

ನೋಡು, ನಿನ್ನ ದಾರಿಯನ್ನೇ ನಾವೂ ಹಿಡಿದಿ ದ್ದೇವೆ. ನನಗೀಗ ರೆಕ್ಕೆಗಳಿಲ್ಲ. ಕಡಿದುಹಾಕಿದ್ದೇವೆ ಎಂದಾಗ ಹØ ಹØ ಹಾ ಎಂದು ನಗುತ್ತಾ ಗುಂಬ್ಲೆಗಬ್ಬನ್‌ ಕುಣಿಯಲಾರಂಭಿಸಿದಳು. ಅವಳ ಕುತಂತ್ರ ಫ‌ಲಿಸಿತ್ತು! ಕುಣಿಯುತ್ತಲೇ ತನ್ನ ರೆಕ್ಕೆಗಳನ್ನು ಬಿಚ್ಚಿ ದೈನೆವಾನ್‌ ಎದುರು ನಾಟ್ಯವಾಡಿದಳು. ನಿಮಗೆ ಸರಿಯಾಗಿ ಆಯಿತು. ನೀವು ಪಕ್ಷಿಗಳ ರಾಜರು ನನ್ನ ಬಲೆಗೆ ಎಷ್ಟು ಸುಲಭವಾಗಿ ಬಿದ್ದಿರಿ. ಹ್ಹಾ ಹ್ಹಾ ಹ್ಹಾ..

ಇದನ್ನು ನೋಡಲಾರದೇ ದೈನೆವಾನ್‌ ಗುಂಬ್ಲೆಗಬ್ಬನ್ನಳಿಗೆ ಏಟು ಕೊಡಲು ಮುಂದಾದಳು. ಆದರೆ ಅವಳು ಒಮ್ಮೆಗೇ ಹಾರಿ ಹೋದಳು. ರೆಕ್ಕೆಯಿಲ್ಲದ ದೈನೆವಾನ್‌ಗೆ ಅವಳನ್ನು ಹಿಂಬಾಲಿಸಲು ಆಗಲಿಲ್ಲ. ಅಪಾರ ಅಪಮಾನವಾಗಿತ್ತು ದೈನೆವಾನಳಿಗೆ. ಅದಕ್ಕೆ ತಕ್ಕ ಶಿಕ್ಷೆಯನ್ನು ಗುಂಬ್ಲೆಗಬ್ಬನ್ನಳಿಗೆ ನೀಡಬೇಕಿತ್ತು. ತನ್ನ ಹೋದ ರೆಕ್ಕೆಗಳ ಬಗ್ಗೆಯೇ ಚಿಂತಿಸುತ್ತಾ ಅವಳು ತನ್ನ ಗೂಡಿನತ್ತ ಹೊರಟಳು.

ಸೇಡು ತೀರಿಸಿಕೊಳ್ಳು ವುದು ಹೇಗೆ? ಆದದ್ದನ್ನು ಅರಿತ ಗಂಡನಿಗೂ ಅದೇ ಯೋಚನೆ ಯಾಯಿತು. ಕಾಲ ಕ್ರಮೇಣ ಒಂದು ಉಪಾಯ ಹೊಳೆ ಯಿತು, ಕೂಡಲೇ ಆ ಪ್ರಯತ್ನಕ್ಕೆ ದೈನೆವಾನ್‌ ಮುಂದಾದಳು. ಅವಳಿಗೆ ಹನ್ನೆರಡು ಮಕ್ಕಳು. ಅವರಲ್ಲಿ ಹತ್ತು ಜನರನ್ನು ದೊಡª ಪೊದೆಯಲ್ಲಿ ಬಚ್ಚಿಟ್ಟು, ಉಳಿದ ಇಬ್ಬರನ್ನು ತನ್ನೊ ಡನೆ ಗುಂಬ್ಲೆಗಬ್ಬನ್ನಳ ಬೀಡಿಗೆ ಕರೆದೊಯ್ದಳು. ಅವಳು ವಾಸವಿದ್ದ ಮೊರಿಲ್ಲಾ ರಿಡ್ಜ್( Morilla Ridge) ದಾಟಿ ಬಯಲು ಪ್ರದೇಶಕ್ಕೆ ಬಂದಳು. ಅಲ್ಲಿ ಗುಂಬ್ಲೆಗಬ್ಬನ್‌ ತನ್ನ ಹನ್ನೆರಡು ಮರಿಗಳಿಗೆ ಆಹಾರ ಕೊಡುತ್ತಿದ್ದಳು. ಇಬ್ಬರೂ ಅದೂ ಇದೂ
ಮಾತನಾಡಿದರು. ಅನಂತರ ದೈನೆವಾನ್‌ ಕೇಳಿದಳು, ನೀನೂ ನನ್ನ ತರಹ ಎರಡೇ ಮಕ್ಕಳನ್ನು ಏಕೆ ಹೆರಬಾರದು? ಅಹಾರ ಒದಗಿಸಲು 12 ಮಂದಿ ತೀರಾ ಹೆಚ್ಚು ಅಲ್ಲವೇ? ಅಷ್ಟು ಮಕ್ಕಳಿದ್ದರೆ ನೀನು ತರುವ ಆಹಾರ ಏನೇನೂ ಸಾಲದು. ನೋಡು ನಿನ್ನ ಮಕ್ಕಳು ಹೇಗೆ ಪೀಚು ಪೀಚಾಗಿವೆ. ಅವು ದೈನವಾನುಗಳಂತೆ ಬಲಿಷ್ಠವಾಗಿ ಬೆಳೆಯ ಲಾರವು. ಅವು ಉಪವಾಸ ಬೀಳುವುದು ಸಹಜ ಎಂದಳು.

ಗುಂಬ್ಲೆಗಬ್ಬನ್‌ ಕೂಡಲೇ ಏನನ್ನೂ ಹೇಳಲಿಲ್ಲ. ಆದರೆ ದೈನೆವಾನ್‌ ಹೇಳಿದ್ದು ನಿಜ ಎನಿಸಿತು. ದೈನೆವಾನ್‌ ಮರಿಗಳು ದೊಡ್ಡದಾಗಿ ಬೆಳೆದಿದ್ದವು ಎನ್ನುವುದೇನೋ ನಿಜ. ಅವಳಿಗೆ ಅನ್ನಿಸಿತು ನನ್ನ ಮಕ್ಕಳು ಕೃಷವಾಗಿರಲು ಇದೇ ಕಾರಣ ಇರಬೇಕು. ನಾನು ತರುವ ಆಹಾರ ಸಾಲದು. ದೈನೆವಾನ್‌ ಮಕ್ಕಳಂತೆ ನನ್ನ ಮಕ್ಕಳೂ ಬೆಳೆದರೆ ನೋಡುವುದಕ್ಕೆ ಎಷ್ಟು ಚೆನ್ನಾಗಿರುತ್ತದೆ. ಒಮ್ಮೊಮ್ಮೆ ಅವಳಿಗೆ ಅನ್ನಿಸಿತು, ನಾನು ಅವಳಿಗೆ ಮಾಡಿದ ಉಪಾಯಕ್ಕೆ ಈಗ ಅವಳು ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆಯೇ? ಆದರೂ ಮರು ಕ್ಷಣದಲ್ಲಿ ಅವಳಿಗೆ ದೈನೆವಾನ್‌ ಮಕ್ಕಳ ಚಿತ್ರಣ ಕಣ್ಣಿಗೆ ಬಂದಿತು. ಇಲ್ಲ, ನನ್ನ ಮಕ್ಕಳು ಅವಳ ಮಕ್ಕಳಂತೆಯೇ ಆಗಬೇಕು ಎಂದುಕೊಂಡಿತು.

ಕೂಡಲೇ ಎರಡು ಮರಿಗಳನ್ನು ಮಾತ್ರ ಉಳಿಸಿಕೊಂಡು ಮಿಕ್ಕ ಹತ್ತನ್ನು ಕೊಲ್ಲಲು ನಿರ್ಧರಿಸಿದಳು. ಇನ್ನು ಮುಂದೆ ದೈನೆವಾನರು ರಾಜರಾಗುವುದು ಸಾಧ್ಯವಿಲ್ಲ. ಅವರಿಗೆ ರೆಕ್ಕೆಯೇ ಇಲ್ಲ. ಆದರೆ ಗುಂಬ್ಲೆಗಬ್ಬನ್‌ ಮಕ್ಕಳಿಗೆ ರೆಕ್ಕೆಗಳಿವೆ. ಅವರು ಹಾರುತ್ತಾರೆ. ಅದಲ್ಲದೇ ಇನ್ನು ಮುಂದೆ ಇವರೂ ಗಟ್ಟಿಮುಟ್ಟಿಯಾಗಿ ಬೆಳೆಯುತ್ತಾರೆ.

ಕೂಡಲೇ ಗುಂಬ್ಲೆಗಬ್ಬನ್‌ ತಾನು ಅಂದುಕೊಂಡದ್ದನ್ನು ಮಾಡಿದಳು. ಆ ಬಳಿಕ ಬಲು ಠೀವಿಯಲ್ಲಿ ದೈನೆವಾನಳತ್ತ ನಡೆದಳು. ಜತೆಗೆ ಇಬ್ಬರು ಮಕ್ಕಳು. ದೈನೆವಾನ್‌ ಇವಳತ್ತ ನೋಡಿದ ತತ್‌ಕ್ಷಣ ಕೇಳಿದಳು, ಏನು ಬರೀ ಇಬ್ಬರೇ? ಮಿಕ್ಕವರು ಎಲ್ಲಿ? ಮಿಕ್ಕವರನ್ನು ಕೊಂದುಬಿಟ್ಟೆ. ಈ ಇಬ್ಬರಿಗೇ ತಿನ್ನಲು ಯಥೇತ್ಛ ಆಹಾರ ಕೊಡುವೆ. ಇವರನ್ನೂ ನಿನ್ನ ಮಕ್ಕಳಂತೆಯೇ ಬಲಿಷ್ಠವಾಗಿ ಬೆಳೆಸುವೆ ಎಂದಿತು. ಥೂ, ಎಂತಹ ಕ್ರೂರ ರಾಕ್ಷಸಿ ನೀನು! ಮಕ್ಕಳನ್ನೇ ಕೊಂದಿದ್ದೀಯ! ಬಲು ದುರಾಸೆ ನಿನಗೆ. ನನ್ನ ಬಳಿ ನೋಡು. ನನ್ನ ಹನ್ನೆರಡೂ ಮಕ್ಕಳಿಗೂ ಸಾಕಷ್ಟು ಅಹಾರ ಒದಗಿಸುತ್ತೇನೆ. ಯಾರನ್ನೂ ಕೊಲ್ಲುವುದಿಲ್ಲ. ನನಗೆ ಮತ್ತೆ ರೆಕ್ಕೆ ಬರುವುದಾದರೂ ಕೂಡ. ಎಲ್ಲರಿಗೂ ಬೇಕಾದಷ್ಟು ಆಹಾರ ಇದೆ ಇಲ್ಲಿ. ಆ ಪೊದೆಯತ್ತ ನೋಡು. ಅಲ್ಲಿರುವ ಹಣ್ಣುಗಳು ಸಾಲದೇ ನನ್ನ ಸಂಸಾರಕ್ಕೆ? ಅಲ್ಲಿಗೆ ಬರುವ ಮಿಡತೆ ಹಿಂಡನ್ನು ನೋಡು. ನಾವು ಅವನ್ನು ಹಿಡಿದು ತಿಂದು ಖುಷಿಯಾಗಿರಬಹುದು ಎಂದಿತು.

ದೈನೆವಾನ್‌ ತನ್ನ ಮಕ್ಕಳನ್ನು ಅವಿತಿಟ್ಟಿದ್ದ ಪೊದೆಯತ್ತ ಹೋಗಿ ವಾಪಸ್‌ ಬಂದಳು. ಅವಳು ಧಾವಿಸುತ್ತಿದ್ದಂತೆ ಅವಳ ಹಿಂಭಾಗದ ಗರಿಗಳೆಲ್ಲ (Boobootella) ಅಲ್ಲಾಡುತ್ತಿದ್ದವು. ಅವಳ ಬಾಯಿ ದೈನೆವಾನರ ಸಂತಸದ ಸಂಗೀತವನ್ನು ಗುನುಗುತ್ತಿತ್ತು. ಅವಳ ಪುಟಾಣಿಗಳು ತಮ್ಮ ಮೈಮೇಲಿನ ಪಟ್ಟೆಗಳನ್ನು ಪ್ರದರ್ಶಿಸುತ್ತಾ ಶಿಶುಗೀತೆಯನ್ನು ಹಾಡುತ್ತಾ ಗುಂಬ್ಲೆಗಬ್ಬನ್‌ ಬಳಿ ಬಂದು ನಿಂತವು. ಆಗ ದೈನೆವಾನ್‌ ತನ್ನ ಸಂಗೀತ ವನ್ನು ನಿಲ್ಲಿಸಿ ಹೇಳಿದಳು, ನೋಡಿಲ್ಲಿ. ನನ್ನ ಮುದ್ದುಮಕ್ಕಳನ್ನು ನೋಡುತ್ತಾ ನೀನು ನೀನಾಗಿಯೇ ಕೊಂದ ನಿನ್ನ ಮಕ್ಕಳನ್ನು ಜ್ಞಾಪಿಸಿಕೊಳ್ಳಬಹುದು. ನೀನು ಜ್ಞಾಪಿಸಿಕೊಳ್ಳುತ್ತಿರುವ ಹಾಗೆ ನಾನು ನಿನ್ನ ಸಂತತಿಯ ಭವಿಷ್ಯದ ಬಗ್ಗೆ ಹೇಳುತ್ತೇನೆ ಕೇಳು.

ಕುತಂತ್ರ ಮತ್ತು ಉಪಾಯಗಳಿಂದ ನೀನು ನನ್ನ ಮನೆತನವಾದ ದೈನೆವಾನರುಗಳಿಗೆ ರೆಕ್ಕೆ ಇಲ್ಲದ ಹಾಗೆ ಮಾಡಿದ್ದೀಯ. ನಾವಿನ್ನು ಹಾರುವಂತಿಲ್ಲ. ದೈನೆವಾನರಿಗೆ ರೆಕ್ಕೆ ಇಲ್ಲದಿರುವಷ್ಟು ದಿವಸವೂ ಗುಂಬ್ಲೆಗಬ್ಬನ್‌ಗಳು ಕೇವಲ ಎರಡೇ ಮೊಟ್ಟೆಗಳನ್ನಿಟ್ಟು, ಎರಡೇ ಮರಿಗಳನ್ನು ಹೊಂದುತ್ತವೆ. ನಾವಿಬ್ಬರೂ ಸಮ ಈಗ. ನಿನಗೆ ನಿನ್ನ ರೆಕ್ಕೆಗಳಿವೆ, ನನಗೆ ನನ್ನ ಮಕ್ಕಳಿವೆ.
ಅಂದಿನಿಂದ ಇಂದಿನವರೆಗೂ ದೈನೆವಾನ್‌ ಅಥವಾ ಈಮ್ಯೂ ಹಕ್ಕಿಗಳಿಗೆ ರೆಕ್ಕೆಗಳು ಬಂದಿಲ್ಲ. ಗುಂಬ್ಲೆಗಬ್ಬನ್‌ ಅಥವಾ ಬಯಲು ಸೀಮೆಯ ಬಸ್ಟರ್ಡ್‌ ಹಕ್ಕಿಗಳು ಒಮ್ಮೆಗೆ ಎರಡೇ ಮೊಟ್ಟೆಗಳನ್ನಿಡುತ್ತವೆ.

ಈಮ್ಯೂ
ಆಸ್ಟ್ರೇಲಿಯಾದ ಪಕ್ಷಿ. ಇವಕ್ಕೆ ರೆಕ್ಕೆಗಳಿಲ್ಲ, ಹಾರಲಾರವು. ಸುಮಾರು 1.5 ಮೀಟರ್‌ ಉದ್ದ ಇರುವ ಇವು 2 ಮೀಟರ್‌ ಎತ್ತರಕ್ಕೆ ಬೆಳೆಯುತ್ತವೆ. ಇವು ಗಂಟೆಗೆ 50 ಕಿಲೋ ಮೀಟರ್‌ ವೇಗದಲ್ಲಿ ಚಲಿಸಬಲ್ಲವು. ಸರಾಸರಿ ತೂಕ 30 – 45 ಕೆ.ಜಿಗಳು. ಹೆಣ್ಣು ಒಮ್ಮೆಗೆ 12 ಮೊಟ್ಟೆಗಳನ್ನಿಡುತ್ತದೆ.

ಬಸ್ಟರ್ಡ್‌ ಹಕ್ಕಿ
ಆಸ್ಟ್ರೇಲಿಯಾದಲ್ಲಿರುವ ದೊಡ್ಡ ಹಕ್ಕಿ. ಸುಮಾರು ಒಂದು ಮೀಟರ್‌ ಉದ್ದ, ಒಂದು ರೆಕ್ಕೆಯ ತುದಿಯಿಂದ ಮತ್ತೂಂದು ರೆಕ್ಕೆಯ ತುದಿಗೆ ಎರಡು ಮೀಟರ್‌ನಷ್ಟು ಅಗಲ. ಸುಮಾರು 1.2 ಮೀಟರ್‌ ಎತ್ತರ, ಗಂಡಿನ ತೂಕ ಸರಾಸರಿ 6.5 ಕೆ.ಜಿ, ಹೆಣ್ಣಿನದು 3.2 ಕೆ.ಜಿ. ಹೆಣ್ಣು ಒಮ್ಮೆಗೆ ಎರಡು ಅಥವಾ ಮೂರು ಮೊಟ್ಟೆಗಳನ್ನಿಡುತ್ತದೆ.

ಸಿಡ್ನಿ ಶ್ರೀನಿವಾಸ್‌
(ಆಧಾರ: K, Langloh Parker, Australian Legendary Tales, David Nutt, 270&271 Strand, Melbourne, Melville, Mullen Slade, 1896 .)

 

-ಸಿಡ್ನಿ ಶ್ರೀನಿವಾಸ್‌

ಟಾಪ್ ನ್ಯೂಸ್

Bigg Boss: ನೇರವಾಗಿ ಫಿನಾಲೆ ತಲುಪಿದ ಬಿಗ್‌ ಬಾಸ್‌ ಮನೆಯ ಪ್ರಬಲ ಸ್ಪರ್ಧಿ

Bigg Boss: ನೇರವಾಗಿ ಫಿನಾಲೆ ತಲುಪಿದ ಬಿಗ್‌ ಬಾಸ್‌ ಮನೆಯ ಪ್ರಬಲ ಸ್ಪರ್ಧಿ

Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್‌ 1,000ಕ್ಕೂ ಅಧಿಕ ಅಂಕ ಕುಸಿತ!

Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್‌ 1,000ಕ್ಕೂ ಅಧಿಕ ಅಂಕ ಕುಸಿತ!

Kottigehara: ಮೇಯಲು ಬಿಟ್ಟ ಹಸುವಿನ ಮೇಲೆ ಹುಲಿ ದಾಳಿ… ಅನಾಥವಾದ ಕರು

Kottigehara: ಮೇಯಲು ಬಿಟ್ಟ ಹಸುವಿನ ಮೇಲೆ ಹುಲಿ ದಾಳಿ… ಅನಾಥವಾದ ಕರು

ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್..‌ ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ

ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್..‌ ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ

ಮುಂದಿನ ಅವಧಿಗೆ ನಾನೇ ಸಿಎಂ ಅಭ್ಯರ್ಥಿ: ಸತೀಶ್ ಜಾರಕಿಹೊಳಿ

Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ

Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್‌; ದಶಕದ ಬಳಿಕ ಕನ್ನಡಕ್ಕೆ

Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್‌; ದಶಕದ ಬಳಿಕ ಕನ್ನಡಕ್ಕೆ

Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…

Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

9

ಕಾರ್ಕಳ ನಗರದಲ್ಲೂ ನೆಟ್‌ ಕಿರಿಕಿರಿ!

8

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

7

Mulki: ರಾಷ್ಟ್ರೀಯ ಹೆದ್ದಾರಿ; ಶೀಘ್ರ ಸರ್ವಿಸ್‌ ರಸ್ತೆ ಕಾಮಗಾರಿ

Bigg Boss: ನೇರವಾಗಿ ಫಿನಾಲೆ ತಲುಪಿದ ಬಿಗ್‌ ಬಾಸ್‌ ಮನೆಯ ಪ್ರಬಲ ಸ್ಪರ್ಧಿ

Bigg Boss: ನೇರವಾಗಿ ಫಿನಾಲೆ ತಲುಪಿದ ಬಿಗ್‌ ಬಾಸ್‌ ಮನೆಯ ಪ್ರಬಲ ಸ್ಪರ್ಧಿ

6

Editorial: ಸಂಚಾರ, ಪಾರ್ಕಿಂಗ್‌; ಸಮನ್ವಯದ ಕ್ರಮ ಆಗಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.